MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • Politics
  • ಬಿಜೆಪಿಗೆ ಸೇರಿ ಒಂದೇ ದಿನದಲ್ಲಿ ಟಿಕೆಟ್​ ಪಡೆದ 25 ವರ್ಷದ ಈ ಯುವತಿ ಯಾರು? ಇಡೀ ದೇಶದ ಕಣ್ಣು ಮೈಥಿಲಿಯತ್ತ

ಬಿಜೆಪಿಗೆ ಸೇರಿ ಒಂದೇ ದಿನದಲ್ಲಿ ಟಿಕೆಟ್​ ಪಡೆದ 25 ವರ್ಷದ ಈ ಯುವತಿ ಯಾರು? ಇಡೀ ದೇಶದ ಕಣ್ಣು ಮೈಥಿಲಿಯತ್ತ

ಖ್ಯಾತ ಯುವ ಗಾಯಕಿ ಮೈಥಿಲಿ ಠಾಕೂರ್ ಅವರು ಬಿಜೆಪಿ ಸೇರಿದ್ದು, ಬಿಹಾರದ ಅಲಿನಗರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಸಂಗೀತ ಲೋಕದಲ್ಲಿ ಹೆಸರುವಾಸಿಯಾಗಿರುವ ಇವರು, ಪ್ರಧಾನಿ ಮೋದಿಯವರಿಂದ ಸ್ಫೂರ್ತಿ ಪಡೆದು ರಾಜಕೀಯದ ಮೂಲಕ ಜನಸೇವೆ ಮಾಡಲು ಮುಂದಾಗಿದ್ದಾರೆ.

2 Min read
Suchethana D
Published : Oct 15 2025, 10:24 PM IST
Share this Photo Gallery
  • FB
  • TW
  • Linkdin
  • Whatsapp
18
ಎಲ್ಲರ ಕಣ್ಣು ಈ ಯುವತಿಯತ್ತ
Image Credit : Instagram

ಎಲ್ಲರ ಕಣ್ಣು ಈ ಯುವತಿಯತ್ತ

ನವೆಂಬರ್ 6 ಮತ್ತು ನವೆಂಬರ್ 11 ರಂದು ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (BJP) ಇಂದು ಎರಡನೆಯ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಎಲ್ಲರ ಗಮನ ಸೆಳೆದದ್ದು ಮೈಥಿಲಿ ಠಾಕೂರ್​. ನಿನ್ನೆಯಷ್ಟೇ ಪಕ್ಷಕ್ಕೆ ಸೇರಿ ಇಂದು ಬಿಹಾರದ ಅಲಿನಗರ ಕ್ಷೇತ್ರದಿಂದ ಸ್ಪರ್ಧಿಸಿರೋ 25 ವರ್ಷದ ಮೈಥಿಲಿ ಠಾಕೂರ್​ನತ್ತ ಇಡೀ ದೇಶದ ಕಣ್ಣು ನೆಟ್ಟಿದೆ. ಈಕೆಗಾಗಿ ಗೂಗಲ್​ನಲ್ಲಿ ಭಾರಿ ಪ್ರಮಾಣದಲ್ಲಿ ಸರ್ಚ್​ ನಡೆಯುತ್ತಿದೆ. ಅಷ್ಟಕ್ಕೂ ಯಾರೀ ಮೈಥಿಲಿ?

28
ಸಂಗೀತ ಲೋಕಕ್ಕೆ ಚಿರಪರಿಚಿತ
Image Credit : Instagram

ಸಂಗೀತ ಲೋಕಕ್ಕೆ ಚಿರಪರಿಚಿತ

ಸಂಗೀತ ಪ್ರಿಯರಿಗೆ ಮೈಥಿಲಿ ಠಾಕೂರ್​ (Maithili Thakur) ಹೆಸರು ಚಿರಪರಿಚಿತ. ಶಾಸ್ತ್ರೀಯ ಸಂಗೀತ ಜಾನಪದ ಸಂಗೀತದಲ್ಲಿ ಹಿನ್ನೆಲೆ ಗಾಯಕಿಯಾಗಿರುವ ಮೈಥಿಲಿ ಹಿಂದಿ , ಬಂಗಾಳಿ , ಮೈಥಿಲಿ , ಉರ್ದು , ಮರಾಠಿ , ಭೋಜ್‌ಪುರಿ , ಪಂಜಾಬಿ , ತಮಿಳು , ಇಂಗ್ಲಿಷ್ ಸೇರಿದಂತೆ ಹಲವಾರು ಭಾಷೆಗಳಲ್ಲಿ ಸಾಂಪ್ರದಾಯಿಕ ಜಾನಪದ ಸಂಗೀತವನ್ನು ಹಾಡಿ ಸೈ ಎನ್ನಿಸಿಕೊಂಡಿದ್ದಾರೆ. ಅದರಲ್ಲಿಯೂ ರಾಮಾಯಣ, ಮಹಾಭಾರತ ಸೇರಿದಂತೆ ಪೌರಾಣಿಕ ಉಪಕಥೆ ರಸವತ್ತಾಗಿ ಹೇಳುವುದರಲ್ಲಿ ಈಕೆ ನಿಪುಣೆ.

Related Articles

Related image1
'ನ್ಯಾಯ ಬೇಕೆಂದ್ರೆ ವಿಷ್ಣುವನ್ನೇ ಕೇಳಿ' ಎಂದ CJI ಗವಾಯಿ, ದರ್ಗಾ ಬಗ್ಗೆ ಸುಪ್ರೀಂ ಕೋರ್ಟ್‌ ಹೇಳಿದ್ದೇನು? ವಿವಾದದ ಕೇಂದ್ರಬಿಂದು ಏನು?
Related image2
ರಾಹುಲ್​ ಗಾಂಧಿಗೆ ಸಿಗದ ನೊಬೆಲ್​ ಪ್ರಶಸ್ತಿ: ಕಾಂಗ್ರೆಸ್​ ಅಸಮಾಧಾನ- ನಾಯಕನ ಪೋಸ್ಟ್​ ವೈರಲ್​
38
 ಸಂಗೀತ ಕುಟುಂಬ
Image Credit : Instagram

ಸಂಗೀತ ಕುಟುಂಬ

ಬಿಹಾರದ (Bihar Poll) ಮಧುಬನಿ ಜಿಲ್ಲೆಯ ಬೇಣಿಪಟ್ಟಿಯ ಸಂಗೀತ ಶಿಕ್ಷಕ ರಮೇಶ್ ಠಾಕೂರ್ ಮತ್ತು ಭಾರತಿ ಠಾಕೂರ್ ಅವರ ಮಗಳಾದ ಮೈಥಿಲಿ 6ನೇ ವಯಸ್ಸಿನಿಂದಲೇ ಸಂಗೀತ ಅಭ್ಯಾಸ ಮಾಡಿದವರು. ಇವರ ಅಜ್ಜ ಕೂಡ ಸಂಗೀತಗಾರ. ಹಲವಾರು ವಾಹಿನಿಗಳ ಸಂಗೀತ ಷೋನಲ್ಲಿ ಸ್ಪರ್ಧಿಸಿ ಹಲವು ಬಹುಮಾನಗಳನ್ನು ಗೆದ್ದವರು.

48
ಹಲವು ಪ್ರಶಸ್ತಿಗಳು
Image Credit : Instagram

ಹಲವು ಪ್ರಶಸ್ತಿಗಳು

ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ವಿಡಿಯೋ ಮಾಡಿ ಸೋಷಿಯಲ್​ ಮೀಡಿಯಾ ಸ್ಟಾರ್​ ಆಗಿರೋ ಮೈಥಿಲಿ, ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾರ್ಯಕ್ರಮಗಳು, ಸಾಹಿತ್ಯ ಉತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಇವರಿಗೆ ಕೇಂದ್ರ ಸರ್ಕಾರದ ಅಟಲ್ ಮಿಥಿಲಾ ಸಮ್ಮಾನ್ ಪ್ರಶಸ್ತಿ ನೀಡಲಾಗಿದೆ. 2019 ರಲ್ಲಿ ಮೈಥಿಲಿ ಮತ್ತು ಅವರ ಇಬ್ಬರು ಸಹೋದರರಾದ ರಿಷವ್ ಮತ್ತು ಅಯಾಚಿ ಅವರನ್ನು ಚುನಾವಣಾ ಆಯೋಗವು ಮಧುಬನಿಯ ಬ್ರಾಂಡ್ ರಾಯಭಾರಿಗಳನ್ನಾಗಿ ಮಾಡಿತು. ರಿಷವ್ ತಬಲಾದಲ್ಲಿ ಮತ್ತು ಅಯಾಚಿ ಗಾಯಕರಾಗಿದ್ದಾರೆ ಮತ್ತು ಆಗಾಗ್ಗೆ ತಾಳವಾದ್ಯದಲ್ಲಿಯೂ ಪ್ರದರ್ಶನ ನೀಡುತ್ತಾರೆ.

58
ಮಧುಬನಿ ಕಲೆಯ ಪ್ರಚಾರ
Image Credit : ANI

ಮಧುಬನಿ ಕಲೆಯ ಪ್ರಚಾರ

ಭಾರತದ ಬಿಹಾರದ ಮಿಥಿಲಾ ಪ್ರದೇಶದಲ್ಲಿ ಬೇರೂರಿರುವ ಸಾಂಪ್ರದಾಯಿಕ ಜಾನಪದ ಕಲಾ ಪ್ರಕಾರವಾದ ಮಧುಬನಿ ಕಲೆಯನ್ನು ಉತ್ತೇಜಿಸುವಲ್ಲಿ ಮೈಥಿಲಿ ಠಾಕೂರ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಮಧುಬನಿ ಕಲೆಯನ್ನು ಸೋಷಿಯಲ್ ಮೀಡಿಯಾ ಮೂಲಕ ಜನರ ಮುಂದಿಡುತ್ತಿದ್ದಾರೆ. ಮಧುಬನಿ ಚಿತ್ರಕಲೆಯ ಇತಿಹಾಸ, ತಂತ್ರಗಳು ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವ ವಿಷಯವನ್ನು ಹಂಚಿಕೊಳ್ಳುತ್ತಾರೆ. 

68
ಕಥೆಯ ಮೂಲಕ ಕಲೆ
Image Credit : X

ಕಥೆಯ ಮೂಲಕ ಕಲೆ

ಕಲಾ ಪ್ರಕಾರದ ಬಗ್ಗೆ ದೃಶ್ಯಗಳು ಮತ್ತು ಕಥೆಗಳನ್ನು ಒಳಗೊಂಡಿರುವ ಅವರ ಆಕರ್ಷಕ ಪೋಸ್ಟ್‌ಗಳು, ಅವರ ಅನುಯಾಯಿಗಳಿಗೆ ಶಿಕ್ಷಣ ನೀಡಲು ಮತ್ತು ವಿಶ್ವಾದ್ಯಂತ ಈ ವಿಶಿಷ್ಟ ಸಾಂಸ್ಕೃತಿಕ ಸಂಪ್ರದಾಯದಲ್ಲಿ ಆಸಕ್ತಿಯನ್ನು ಹುಟ್ಟುಹಾಕಲು ಸಹಾಯ ಮಾಡಿವೆ.

78
ಬಿಜೆಪಿ ಸೇರಿದ್ದೇಕೆ?
Image Credit : X/TawdeVinod and Instagram/maithilithakur

ಬಿಜೆಪಿ ಸೇರಿದ್ದೇಕೆ?

ಬಿಜೆಪಿ ಸೇರಿದ್ದ ಬಗ್ಗೆ ಮಾತನಾಡಿದ್ದ ಮೈಥಿಲಿ, ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವ ನನ್ನ ಮೇಲೆ ತುಂಬಾ ಬಿದ್ದಿದೆ. ಅವರಿಂದ ಸ್ಫೂರ್ತಿ ಪಡೆದು, ನಾನು ಅವರನ್ನು ಬೆಂಬಲಿಸಲು ಇಲ್ಲಿದ್ದೇನೆ ಎಂದಿದ್ದಾರೆ. ರಾಜಕೀಯ ಸೇರುವ ನನ್ನ ನಿರ್ಧಾರವು ವೈಯಕ್ತಿಕ ಮಹತ್ವಾಕಾಂಕ್ಷೆಯಿಂದ ನಡೆಸಲ್ಪಡುವುದಿಲ್ಲ, ಬದಲಾಗಿ ಜನರಿಗೆ ಸೇವೆ ಸಲ್ಲಿಸುವ ಬಯಕೆಯಿಂದ ನಡೆಸಲ್ಪಟ್ಟಿದೆ ಎಂದಿದ್ದಾರೆ.

88
ರಾಜಕೀಯದ ಬಗ್ಗೆ...
Image Credit : Instagram

ರಾಜಕೀಯದ ಬಗ್ಗೆ...

"ರಾಜಕೀಯ ಪಕ್ಷವನ್ನು ಸೇರುವುದರಿಂದ ನೀವು ರಾಜಕಾರಣಿಯಾಗುತ್ತೀರಿ ಎಂದು ನಾನು ನಂಬುವುದಿಲ್ಲ; ನಾನು ಸಮಾಜಕ್ಕೆ ಸೇವೆ ಸಲ್ಲಿಸಲು ಮತ್ತು ಅವರ ಸಿದ್ಧಾಂತವನ್ನು ಪ್ರತಿಯೊಬ್ಬ ವ್ಯಕ್ತಿಗೂ ತಲುಪಿಸಲು ಇಲ್ಲಿದ್ದೇನೆ" ಎಂದಿದ್ದಾರೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಭಾರತ ಸುದ್ದಿ
ರಾಜಕೀಯ ಸುದ್ದಿ
ನರೇಂದ್ರ ಮೋದಿ
ಬಿಹಾರ
ಚುನಾವಣೆ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved