ಖಾಸಗಿ ವಲಯದ ಉದ್ಯೋಗಿಗಳು ಹೆಚ್ಚಾಗಿ ತುತ್ತಾಗುವ ರೋಗಗಳು: ಸಮೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ
Private employees Health: ಖಾಸಗಿ ವಲಯದ ಉದ್ಯೋಗಿಗಳು ಹೆಚ್ಚಿನ ಒತ್ತಡ, ಜೀವನಶೈಲಿ ಸಮಸ್ಯೆಗಳು ಮತ್ತು ಆರೋಗ್ಯ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಸಮೀಕ್ಷೆಗಳು ತೋರಿಸುತ್ತವೆ. ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಮಾನಸಿಕ ಒತ್ತಡ ಸಾಮಾನ್ಯ ಸಮಸ್ಯೆಗಳಾಗಿವೆ.

ಖಾಸಗಿ ವಲಯದ ಉದ್ಯೋಗಿ
ಖಾಸಗಿ ವಲಯದ ಉದ್ಯೋಗಿಗಳ ಕೆಲಸ ಹೆಚ್ಚು ಒತ್ತಡವನ್ನು ಒಳಗೊಂಡಿರುತ್ತದೆ ಎಂದು ಹಲವು ಅಧ್ಯಯನಗಳು ವರದಿ ಬಹಿರಂಗಪಡಿಸಿವೆ. ಖಾಸಗಿ ವೃತ್ತಿ ಉದ್ಯೋಗಿಯ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಖಾಸಗಿ ಕೆಲಸ ಮಾಡುವ ಶೇಕಡಾ 70ರಷ್ಟು ಉದ್ಯೋಗಿಗಳು ಜೀವನಶೈಲಿ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದಾರೆ.
ಉದ್ಯೋಗಿಗಳ ಕುರಿತು ಸಮೀಕ್ಷೆ
ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಕುರಿತು ಸಮೀಕ್ಷೆ ಮಾಡಲಾಯ್ತು. ಈ ಸಮೀಕ್ಷೆಯಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಮಾನಸಿಕ ಒತ್ತಡದಂತಹ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ರೋಗಗಳಿಗೆ ಖಾಸಗಿ ವಲಯದ ಉದ್ಯೋಗಿಗಳು ತುತ್ತಾಗುತ್ತಿರೋದ್ಯಾಕೆ? ಯಾವೆಲ್ಲಾ ಮುಂಜಾಗ್ರತ ಕ್ರಮಗಳೇನು ಎಂಬುದರ ಮಾಹಿತಿ ಇಲ್ಲಿದೆ.
ಜೀವನಶೈಲಿ ಕುರಿತು ಸಮೀಕ್ಷೆ
ಖಾಸಗಿ ವಲಯದಲ್ಲಿ ಕೆಲಸ ಮಾಡುವ ಜನರ ಜೀವನಶೈಲಿ ಕುರಿತು ಸಮೀಕ್ಷೆಯೊಂದು ನಡೆದಿತ್ತು. ಈ ಸಮೀಕ್ಷೆಯಲ್ಲಿ ಯಾವ ರೋಗದಿಂದ ಶೇಕಡಾ ಎಷ್ಟು ಜನರು ಬಳಲುತ್ತಿದ್ರು ಎಂಬ ಅಂಕಿಅಂಶ ಬಹಿರಂಗಗೊಂಡಿದೆ.
ಮಧುಮೇಹ: ಶೇ.20
ಅಧಿಕ ರಕ್ತದೊತ್ತಡ: ಶೇ.14
ಶೇ.6.3 ರಷ್ಟು ಉದ್ಯೋಗಿಗಳು ಬೊಜ್ಜು ಹೊಂದಿದ್ದರೆ ಶೇ. 3.2 ರಷ್ಟು ಜನರು ಹೃದಯ ಸಂಬಂಧಿತ ಸಮಸ್ಯೆ ಹೊಂದಿದ್ದಾರೆ.
ಮೂತ್ರಪಿಂಡ ಕಾಯಿಲೆ: ಶೇ.1.9
ಅತ್ಯಂತ ಆಘಾತಕಾರಿ ವಿಷಯ
ಅತ್ಯಂತ ಆಘಾತಕಾರಿ ವಿಷಯ ಅಂದ್ರೆ ಶೇ. 50 ಕ್ಕಿಂತ ಹೆಚ್ಚು ಉದ್ಯೋಗಿಗಳು ಒತ್ತಡದಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ಈ ಸಮೀಕ್ಷೆಯಲ್ಲಿ ಭಾಗಿಯಾದ ಶೇ.63ರಷ್ಟು ಜನರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಸಮಯ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಕೆಲಸದ ಒತ್ತಡದಿಂದಾಗಿ ಖಾಸಗಿ ಜೀವನಕ್ಕೆ ಸಮಯ ನೀಡಲು ಆಗುತ್ತಿಲ್ಲ ಎಂಬ ವಿಷಯವನ್ನು ಒಪ್ಪಿಕೊಂಡಿದ್ದಾರೆ.
ಆಹಾರ ಪದ್ಧತಿ
ಖಾಸಗಿ ಉದ್ಯೋಗದ ಶೈಲಿ ಬದಲಾಗುತ್ತಿರುವ ಕಾರಣದಿಂದಾಗಿ ಉದ್ಯೋಗಿಗಳು ಕಚೇರಿ ಅಥವಾ ಮನೆಯಲ್ಲಿ (ವರ್ಕ್ ಫ್ರಂ ಹೋಮ್) 9 ರಿಂದ 10 ಗಂಟೆಗಳ ಕಾಲ ಕುಳಿತು ಕೆಲಸ ಮಾಡುತ್ತಾರೆ. ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವದರಿಂದ ಬೊಜ್ಜು ಮತ್ತು ಕೀಲು ನೋವಿನ ಸಮಸ್ಯೆಗಳು ಹೆಚ್ಚಾಗುತ್ತದೆ.
ಜಂಕ್ ಫುಡ್ ಮತ್ತು ಅನಿಯಮಿತ ಆಹಾರ ಪದ್ಧತಿಯಿಂದಾಗಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಹೆಚ್ಚಿಸುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ನೈಟ್ ಶಿಫ್ಟ್ ಕೆಲಸ
ಖಾಸಗಿ ಕಂಪನಿಗಳಲ್ಲಿ ನೈಟ್ ಶಿಫ್ಟ್ ಕೆಲಸ ಮಾಡುವ ಸಿಬ್ಬಂದಿ ನಿದ್ದೆಯ ಕೊರತೆಯನ್ನು ಎದುರಿಸುತ್ತಾರೆ. ಈ ನಿದ್ದೆಯ ಕೊರತೆ ಒತ್ತಡ ಹೆಚ್ಚಿಸೋದರ ಜೊತೆಗೆ ಹೃದಯ ಮತ್ತು ಮೂತ್ರಪಿಂಡಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಇಂದು ಖಾಸಗಿ ವಲಯದ ಉದ್ಯೋಗಿಗಳು ಹೆಚ್ಚಾಗಿ ಲ್ಯಾಪ್‌ಟಾಪ್, ಮೊಬೈಲ್ ಬಳಕೆ ಮಾಡುತ್ತಾರೆ. ಇದು ಕಣ್ಣಿನ ದೌರ್ಬಲ್ಯ ಮತ್ತು ಕುತ್ತಿಗೆ ನೋವಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಪರಿಹಾರ ಏನು?
ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಲು ಆರೋಗ್ಯಕರ ಜೀವನ ನಡೆಸಲು ಉದ್ಯೋಗಿಗಳು ಯೋಗ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಯೋಗ ಮತ್ತು ಧ್ಯಾನದಿಂದಾಗಿ ಒತ್ತಡ ಕಡಿಮೆಯಾಗುತ್ತದೆ. ಕಚೇರಿಯಲ್ಲಿ ಪ್ರತಿ 2 ಗಂಟೆಗಳಿಗೊಮ್ಮೆ ನಡೆದಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು. ದೆ ನೋವು, ಉಸಿರಾಟದ ತೊಂದರೆ ಅಥವಾ ಆಯಾಸ ಅನಿಸಿದರೆ ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು. ಖಾಸಗಿ ವಲಯದ ಉದ್ಯೋಗಿಗಳಿಗೆ ಹೃದಯದ ಆರೋಗ್ಯಕ್ಕೆ ನಿಯಮಿತ ತಪಾಸಣೆ ಅಗತ್ಯ ಎಂದು ತಜ್ಞರು ಸಲಹೆ ನೀಡುತ್ತಾರೆ.