- Home
- Life
- Kitchen
- ಗಂಟೆಗಟ್ಟಲೆ ಕುಳಿತು ಅಕ್ಕಿಯಲ್ಲಿರೊ ಹುಳುವನ್ನ ಆರಿಸ್ತೀರಾ?, ಈ ವಿಧಾನ ಬಳಸಿ ಕೆಲವೇ ನಿಮಿಷದಲ್ಲಿ ಎಲ್ಲಾ ಮಾಯ
ಗಂಟೆಗಟ್ಟಲೆ ಕುಳಿತು ಅಕ್ಕಿಯಲ್ಲಿರೊ ಹುಳುವನ್ನ ಆರಿಸ್ತೀರಾ?, ಈ ವಿಧಾನ ಬಳಸಿ ಕೆಲವೇ ನಿಮಿಷದಲ್ಲಿ ಎಲ್ಲಾ ಮಾಯ
Rice Storage Tips: ಅಕ್ಕಿಯಲ್ಲಿ ಹುಳುವನ್ನು ಕಂಡರೆ ಗಂಟೆಗಟ್ಟಲೆ ಕುಳಿತು ತೆಗೆದುಹಾಕುತ್ತಿದ್ದೀರಾ?. ಈಗ ಅದೆಲ್ಲ ಬಿಡಿ. ಇಲ್ಲಿ ಬಹಳ ಸಿಂಪಲ್ಲಾದ ವಿಧಾನ ಶೇರ್ ಮಾಡಲಾಗಿದೆ. ಇದರ ಸಹಾಯದಿಂದ ಕೆಲವೇ ನಿಮಿಷದಲ್ಲಿ 10 ರಿಂದ 12 ಕೆಜಿ ಅಕ್ಕಿಯಲ್ಲಿರುವ ಹುಳುವನ್ನು ತೊಡೆದುಹಾಕಬಹುದು.

ಕೆಲವೇ ನಿಮಿಷದಲ್ಲಿ ಹುಳು ಮಾಯ
ವಿಶೇಷವಾಗಿ ದಕ್ಷಿಣ ಭಾರತೀಯ ಮನೆಗಳಲ್ಲಿ ಅಕ್ಕಿಯನ್ನ ದೀರ್ಘಕಾಲದವರೆಗೆ ಸಂಗ್ರಹಿಸಿದಾಗ ಹುಳಗಳ ಬಾಧೆ ಸಾಮಾನ್ಯ ಸಮಸ್ಯೆಯಾಗಿದೆ. ಈ ಸಣ್ಣ ಕೀಟಗಳು ಅಕ್ಕಿಯ ಗುಣಮಟ್ಟವನ್ನು ಹಾಳು ಮಾಡುವುದಲ್ಲದೆ, ಬಳಕೆಗೂ ಬರದಂತೆ ಮಾಡಿಬಿಡುತ್ತವೆ. ವಿಶೇಷವಾಗಿ ಮಳೆಗಾಲದಲ್ಲಿ ಅಕ್ಕಿಯ ಬಾಧೆಯ ಸಮಸ್ಯೆ ಅತ್ಯಂತ ತೀವ್ರವಾಗಿರುತ್ತದೆ. ಈಗ ನಿಮ್ಮ ಅಕ್ಕಿಯಲ್ಲಿಯೂ ಹುಳುವನ್ನು ಕಂಡರೆ ಗಂಟೆಗಟ್ಟಲೆ ಕುಳಿತು ಅವುಗಳನ್ನು ತೆಗೆದುಹಾಕುತ್ತಿದ್ದೀರಾ?. ಅದೆಲ್ಲ ಬಿಡಿ. ಯೂಟ್ಯೂಬರ್ ಗರಿಮಾ ತುಂಬಾ ಅಗ್ಗದ ವಿಧಾನವನ್ನು ಹಂಚಿಕೊಂಡಿದ್ದಾರೆ. ಇದರ ಸಹಾಯದಿಂದ ನೀವು ಕೆಲವೇ ನಿಮಿಷದಲ್ಲಿ 10 ರಿಂದ 12 ಕೆಜಿ ಅಕ್ಕಿಯಲ್ಲಿರುವ ಹುಳುವನ್ನು ತೊಡೆದುಹಾಕಬಹುದು.
ಹುಳು ನಿವಾರಣೆಗೆ ಬೇಕಾಗುವ ಪದಾರ್ಥಗಳು
*ಟಿಶ್ಯೂ ಪೇಪರ್
*2 ಚಮಚ ಉಪ್ಪು
*ಒಂದೂವರೆ ಚಮಚ ಅರಿಶಿನ
*7 ಲವಂಗ
*2 ಕರ್ಪೂರ ಮಾತ್ರೆಗಳು
ತುಂಬಾ ಬಿಗಿ ಬೇಡ
ಅಕ್ಕಿಯಿಂದ ಹುಳುವನ್ನು ಬಹಳಬೇಗ ತೆಗೆದುಹಾಕಲು ನೀವು ಮಾಡಬೇಕಾದುದು ಇಷ್ಟೇ. ಮೇಲೆ ಹೇಳಿರುವ, ಪ್ರಬಲ ಪರಿಮಳ ಬೀರುವ ಈ ಎಲ್ಲಾ ನೈಸರ್ಗಿಕ ಪದಾರ್ಥಗಳನ್ನು ಸೇರಿಸಿ ಸಣ್ಣ ಗಂಟನ್ನು ಮಾಡಬೇಕು. ಹೀಗೆ ಮಾಡುವುದರಿಂದ ಇದರ ಪರಿಮಳದಿಂದ ಹುಳುವು ಅಕ್ಕಿಯಲ್ಲಿ ಉಳಿಯುವುದನ್ನು ತಡೆಯುತ್ತದೆ. ಅಂದಹಾಗೆ ಗಂಟನ್ನು ಮಾಡುವಾಗ ಎಲ್ಲಾ ಪದಾರ್ಥಗಳನ್ನು ಟಿಶ್ಯೂ ಪೇಪರ್‌ನಲ್ಲಿ ಇರಿಸಿ. ಸಣ್ಣ ಬಂಡಲ್ ತರಹ ಮಾಡಿ. ಬಂಡಲ್ ಅನ್ನು ತುಂಬಾ ಬಿಗಿಯಾಗಿ ಕಟ್ಟದಂತೆ ಜಾಗರೂಕರಾಗಿರಿ. ವಾಸನೆ ಹೊರಬರಲು ಅದನ್ನು ಸ್ವಲ್ಪ ತೆರೆದಿಡಿ.
ಈ ವಿಧಾನ ಬಹಳ ಬೇಗನೆ ಕೆಲಸ ಮಾಡುತ್ತೆ
ಗಂಟು ಸಿದ್ಧವಾದ ನಂತರ, ಅದನ್ನು ಅಕ್ಕಿ ರಾಶಿಯಲ್ಲಿ ಇಡುವುದು ಮುಖ್ಯ. ಈ ವಿಧಾನ ಬಹಳ ಬೇಗನೆ ಕೆಲಸ ಮಾಡುತ್ತದೆ. ಕರ್ಪೂರ, ಅರಿಶಿನ ಮತ್ತು ಲವಂಗಗಳ ಪ್ರಬಲವಾದ ಪರಿಮಳವು ಹುಳುಗಳನ್ನು ಬಹಳ ಬೇಗ ಹಿಮ್ಮೆಟ್ಟಿಸಲು ಒಟ್ಟಾಗಿ ಕೆಲಸ ಮಾಡುತ್ತದೆ. 10 ನಿಮಿಷದಲ್ಲಿ ವಾಸನೆ ಕೇಳಿ ತೊಂದರೆಗೊಳಗಾಗುವ ಹುಳುಗಳು ಅಕ್ಕಿಯಿಂದ ಓಡಿಹೋಗುವುದನ್ನು ನೀವು ಗಮನಿಸಬಹುದು.
ಪರ್ಯಾಯ ವಿಧಾನ
ನೀವು ಬಯಸಿದರೆ ಸಣ್ಣ ಗಂಟು ಮಾಡುವ ಬದಲು ನೇರವಾಗಿ ಅಕ್ಕಿಗೆ ಉಪ್ಪು, ಅರಿಶಿನ ಮತ್ತು ಲವಂಗ ಸೇರಿಸಬಹುದು. ಆದರೆ ನೇರವಾಗಿ ಕರ್ಪೂರ ಸೇರಿಸುವುದನ್ನು ತಪ್ಪಿಸಿ. ನೇರವಾಗಿ ಕರ್ಪೂರವನ್ನು ಸೇರಿಸುವುದರಿಂದ ಅದು ಅಕ್ಕಿಯ ವಾಸನೆಯನ್ನೇ ಮೀರಿಸಬಹುದು. ಹೀಗೆ ಈ ಪದಾರ್ಥಗಳನ್ನು ನೇರವಾಗಿ ಸೇರಿಸುವುದರಿಂದ ವೇಗವಾಗಿ ಕೆಲಸ ಮಾಡುತ್ತದೆ.
ಅಕ್ಕಿ ಸಂಗ್ರಹಿಸುವ ವಿಧಾನ
*ಅಕ್ಕಿಯನ್ನು ಸಂಗ್ರಹಿಸುವಾಗ ಸ್ವಲ್ಪ ಉಪ್ಪು ಮತ್ತು ಕೆಲವು ಲವಂಗವನ್ನು ಸೇರಿಸಿ. ಉಪ್ಪು ತೇವಾಂಶವನ್ನು ಹೀರಿಕೊಳ್ಳುತ್ತದೆ ಮತ್ತು ಲವಂಗದ ವಾಸನೆಯು ಕೀಟಗಳನ್ನು ದೂರವಿಡುತ್ತದೆ.
*ನೀವು ಬಯಸಿದರೆ ಇಂಗುವನ್ನು ಬಟ್ಟೆಯಲ್ಲಿ ಕಟ್ಟಿ ಅಕ್ಕಿಯೊಳಗೆ ಇಡಬಹುದು. ಇದರಿಂದ ಪತಂಗಗಳು ಅಕ್ಕಿಯ ಮೇಲೆ ದಾಳಿ ಮಾಡುವುದನ್ನು ತಡೆಯಬಹುದು. ಏಕೆಂದರೆ ಅದರ ವಾಸನೆಯೂ ಸಾಕಷ್ಟು ಪ್ರಬಲವಾಗಿರುತ್ತದೆ.
*ಒಂದು ಹಳೆಯ ಮತ್ತು ಅತ್ಯಂತ ಪರಿಣಾಮಕಾರಿ ವಿಧಾನವೆಂದರೆ ಬೆಂಕಿಕಡ್ಡಿಯನ್ನು ಹಾಕುವುದು. ಬೆಂಕಿಕಡ್ಡಿಯ ತುದಿಯಲ್ಲಿರುವ ಗಂಧಕದ ವಾಸನೆಯು ಕೀಟಗಳು ಅಕ್ಕಿಯನ್ನು ಸಮೀಪಿಸದಂತೆ ತಡೆಯುತ್ತದೆ.