Snake Bite Horoscope Connection : ಪದೇ ಪದೇ ಹಾವು ಕಚ್ಚಿದ್ರೂ ರಾಜಸ್ಥಾನದ ಮಹಿಳೆ ಬದುಕುಳಿದಿದ್ದಾಳೆ. ಆಕೆ ಹಿಂದೆ ಹಾವು ಬೀಳಲು ಕಾರಣ ಏನು? ಜ್ಯೋತಿಷ್ಯ ಈ ಬಗ್ಗೆ ಏನು ಹೇಳುತ್ತೆ? 

ಹಾವು (snake) ಕಚ್ಚಿದ್ರೆ ಬದುಕುಳಿಯೋದು ಬಹಳ ಕಷ್ಟ. ಅನೇಕರು ಭಯಕ್ಕೆ ಹೃದಯಾಘಾತಕ್ಕೊಳಗಾಗ್ತಾರೆ. ಆದ್ರೆ ರಾಜಸ್ಥಾನದ ಪಾಲಿ ಜಿಲ್ಲೆಯ ಮುಸ್ಲಿಂ ಮಹಿಳೆ ಅಫ್ಸಾನಾ ಬಾನೋಗೆ ಆರು ತಿಂಗಳಲ್ಲಿ 7ಬಾರಿ ಹಾವು ಕಚ್ಚಿದೆ. ಒಂದು ಬಾರಿ ಪರಿಸ್ಥಿತಿ ಗಂಭೀರವಾಗಿತ್ತು. ಆದ್ರೆ ಪ್ರತಿ ಬಾರಿ ಹವು ಕಚ್ಚಿದಾಗ್ಲೂ ಸಾವಿನ ಜೊತೆ ಹೋರಾಡಿ ಬದುಕಿ ಬಂದಿದ್ದಾಳೆ ಅಫ್ಸಾನಾ. ಮನೆಯವರಿಗೆ ಹಾವಿನ ಭಯ ಶುರುವಾಗಿದ್ದು, ಅಫ್ಸಾನಾಗೇ ಹಾವು ಯಾಕೆ ಕಚ್ಚುತ್ತೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡ್ತಿದೆ. ಹಾವಿನ ದ್ವೇಷ ಹನ್ನೆರಡು ವರ್ಷ ಅಂತಾರೆ. ಹಾವಿನ ಕಡಿತ ಹಾಗೂ ಭಯಕ್ಕೆ ಯಾವ ದೋಷ ಕಾರಣ ಎಂಬುದನ್ನು ಜ್ಯೋತಷಿಗಳು ಹೇಳಿದ್ದಾರೆ.

ಹಾವು ಕಡಿತ - ಹಾವಿನ ಭಯಕ್ಕೆ ಯಾವ ಗ್ರಹ ಕಾರಣ : ಜ್ಯೋತಿಷ್ಯದ ಪ್ರಕಾರ, ವೃಶ್ಚಿಕ ರಾಶಿಯಲ್ಲಿ ಚಂದ್ರ ಅಥವಾ ಶನಿಯ ಸಂಯೋಜನೆ ಆದ್ರೆ ಇದು ಹಾವು ಕಡಿತದ ಸೂಚನೆಯಾಗಿದೆ. ಚಂದ್ರನು ವೃಶ್ಚಿಕ ರಾಶಿಯಲ್ಲಿದ್ದು, ಶನಿಯು ಅದನ್ನು ಮೂರನೇ, ಏಳನೇ ಅಥವಾ ಹತ್ತನೇ ಅಂಶದಿಂದ ನೋಡಿದರೆ ಇದು ಹೆಚ್ಚು ಚಿಂತಿಸುವ ವಿಷ್ಯವಾಗಿದೆ. ವೃಶ್ಚಿಕ ರಾಶಿ ಕೀಟ ಇತ್ಯಾದಿಗಳಿಗೆ ಸಂಬಂಧಿಸಿದೆ. ಶನಿ ಮಾರಕ ಸ್ಥಾನ ತಲುಪಿದಾಗಲೆಲ್ಲ ಜನರು ಸಮಸ್ಯೆ ಅನುಭವಿಸಬೇಕಾಗುತ್ತದೆ. ಈ ಸಂಯೋಗ ವ್ಯಕ್ತಿಯ ಜಾತಕದ ಲಗ್ನ ಕುಂಡಲಿ, ನವಮಾಂಸ ಕುಂಡಲಿ, ದ್ವಾದಶಾಂಶ ಕುಂಡಲಿ, ತ್ರಿಶಾಂಶ ಕುಂಡಲಿ, ಶತ್ರಿಶಾಂಶ ಕುಂಡಲಿಯಲ್ಲಿ ರೂಪುಗೊಂಡರೆ, ಅವನಿಗೆ ಹಾವಿನ ಕಡಿತದ ಅಪಾಯದಲ್ಲಿದ್ದೇ ಇರುತ್ತಾನೆ.

ನೂರಕ್ಕೆ ಒಂದು ರೂ. ನಾಣ್ಯ ಸೇರಿಸಿ ಗಿಫ್ಟ್ ನೀಡೋ ಹಿಂದಿದೆ ಈ ಎಲ್ಲ ಕಾರಣ

ಹಾವಿನ ಕಡಿತದ ಬಗ್ಗೆ ಸಂಖ್ಯಾಶಾಸ್ತ್ರ ಏನು ಹೇಳುತ್ತದೆ? : ಗ್ರಹಗಳಲ್ಲಿ ಆಗುವ ಬದಲಾವಣೆಯೇ ಹಾವು ಕಡಿತಕ್ಕೆ ಕಾರಣ ಎಂದು ಸಂಖ್ಯಾಶಾಸ್ತ್ರ ಕೂಡ ಹೇಳುತ್ತದೆ. ಚಂದ್ರ ಮತ್ತು ರಾಹುವಿನ ಗ್ರಹಣ ಇದಕ್ಕೆ ಮುಖ್ಯ ಕಾರಣ. ಮಂಗಳನ ಸಂಯೋಗ ಮತ್ತು ರಾಹು ಜೊತೆ ಶನಿಯ ಮಹಾದಶದಿಂದಾಗಿ ಇದು ಸಂಭವಿಸುತ್ತದೆ.

ಪ್ರತಿ ಬಾರಿ ಮಹಿಳೆ ಪಾರಾಗಿದ್ದು ಹೇಗೆ? : ಕಳೆದ ಆರು ತಿಂಗಳಿಂದ 7 ಬಾರಿ ಹಾವಿನ ಕಡಿತಕ್ಕೆ ಒಳಗಾದ್ರೂ ಮಹಿಳೆ ಬದುಕುಳಿದಿದ್ದಾಳೆ. ಇದಕ್ಕೆ ಕಾರಣ, ಹಾವು ಕಚ್ಚಿದ ತಕ್ಷಣ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ತಕ್ಷಣ ಚಿಕಿತ್ಸೆ ಸಿಕ್ಕಿದೆ. ಐದನೇ ಬಾರಿ ಹಾವು ಕಚ್ಚಿದಾಗ ಮಹಿಳೆ ಸ್ಥಿತಿ ಗಂಭೀರವಾಗಿತ್ತು. ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಯ್ತು.

ಹಾವು ಕಡಿದ ನಂತ್ರ ವೈದ್ಯರು ಮೊದಲು ಏನು ಪರೀಕ್ಷೆ ಮಾಡ್ತಾರೆ? : ಕಚ್ಚಿದ ಹಾವು ಯಾವ್ದು ಎಂಬುದನ್ನು ಮೊದಲು ತಿಳಿಯಬೇಕು. ವೈದ್ಯರ ಪ್ರಕಾರ, ಹಾವು ಕಚ್ಚಿಸಿಕೊಂಡು ಬಂದ ವ್ಯಕ್ತಿಯ ರಕ್ತವನ್ನು ಇಪ್ಪತ್ತು ನಿಮಿಷಗಳ ಕಾಲ ಹಾಗೆ ಇಡಲಾಗುತ್ತದೆ. ರಕ್ತ ಅಲ್ಲಿಯೇ ಹೆಪ್ಪುಗಟ್ಟಲು ಶುರುವಾದ್ರೆ, ಕಚ್ಚಿದ ಹಾವು ವಿಷಕಾರಿಯಾಗಿರಲಿಲ್ಲ ಎಂದರ್ಥ. ರಕ್ತ ಹೆಪ್ಪುಗಟ್ಟದೆ ಹಾಗೇ ಇದ್ರೆ ಕಚ್ಚಿದ್ದು ವಿಷಕಾರಿ ಹಾವು ಎಂದರ್ಥ. ಇದ್ರ ಆಧಾರದ ಮೇಲೆ ವೈದ್ಯರು ವ್ಯಕ್ತಿಗೆ ಚಿಕಿತ್ಸೆ ನೀಡ್ತಾರೆ. ಪದೇ ಪದೇ ಹಾವು ಕಚ್ಚಿದ್ರೆ ವ್ಯಕ್ತಿಯ ದೇಹದಲ್ಲಿ ಆಂಟಿಬಾಡಿಸ್ ರೂಪಗೊಳ್ಳುತ್ತವೆ.

ಸೆಪ್ಟೆಂಬರ್ 14 ರ ನಂತರ ಈ ರಾಶಿಗೆ ಅದೃಷ್ಟ ಬದಲು, ಬುಧನಿಂದ ಯಶಸ್ಸು,

ಸರ್ಪ ದೋಷ ನಿವಾರಣೆಗೆ ಇದು ಸೂಕ್ತ : ಶಾಸ್ತ್ರದಲ್ಲಿ ಸರ್ಪ ದೋಷ ನಿವಾರಣೆಗೆ ಅನೇಕ ಉಪಾಯವಿದೆ. ಸರ್ಪದೋಷ ನಿವಾರಿಸಿಕೊಳ್ಳಲು ಜನರು ವಿಸೇಷ ದೇವಸ್ಥಾನಗಳಿಗೆ ಹೋಗ್ತಾರೆ. ಅದ್ರಲ್ಲಿ ಮಹಾರಾಷ್ಟ್ರದ ನಾಸಿಕ್ನ ತ್ರಿಂಬಕ್ ಪ್ರದೇಶ ಒಂದು. ತ್ರಿಂಬಕೇಶ್ವರ ಜ್ಯೋತಿರ್ಲಿಂಗದ ಪವಿತ್ರ ಸ್ಥಳದಲ್ಲಿ ಸರ್ಪದ ವಿಗ್ರಹವನ್ನು ತಯಾರಿಸಿ ದಹನ ಮಾಡಲಾಗುತ್ತದೆ. ಸರ್ಪ ದೋಷ ನಿವಾರಣೆಗೆ ವಿಶೇಷ ನಾಗಬಲಿ ಪೂಜೆಯನ್ನು ಮಾಡಲಾಗುತ್ತದೆ. ಹಿಂದೂ ನಂಬಿಕೆಯ ಪ್ರಕಾರ, ತಿಳಿದೋ ತಿಳಿಯದೆಯೋ ಹಾವನ್ನು ಕೊಂದವರು ಪಾಪದಿಂದ ಮುಕ್ತಿಪಡೆಯಲು ಇದನ್ನು ಮಾಡ್ಬೇಕು.