DMK ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಅಣ್ಣಾಮಲೈ; ಕೇಂದ್ರ ಸಚಿವ ಅಮಿತ್ ಶಾ ನಿಗಿ ನಿಗಿ ಕೆಂಡ!
DMK ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಅಣ್ಣಾಮಲೈ; ಕೇಂದ್ರ ಸಚಿವ ಅಮಿತ್ ಶಾ ನಿಗಿ ನಿಗಿ ಕೆಂಡ! Tamil nadu k Annamalai BJP Exit DMK Shock Union Minister Amit Shah Fury

ತಮಿಳುನಾಡು ರಾಜಕಾರಣ
ಡಿಎಂಕೆ ಗೆಲ್ಲುವ ಸಾಧ್ಯತೆ ಅಂತ ಹೇಳಿದ್ರಾ ಅಣ್ಣಾಮಲೈ?
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಗೆಲ್ಲುವ ಸಾಧ್ಯತೆ ಇದೆ ಎಂದು ಬಿಜೆಪಿ ಮುಖಂಡ ಕೆ.ಅಣ್ಣಾಮಲೈ ಹೇಳಿದ್ದು ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಕಳೆದ ಕೆಲವು ವರ್ಷಗಳಿಂದ ಅಧಿಕಾರದಲ್ಲಿರುವ ಡಿಎಂಕೆಯನ್ನು ತೀವ್ರವಾಗಿ ಅಣ್ಣಾಮಲೈ ವಿರೋಧಿಸುತ್ತಿದ್ದರು. ಇದೀಗ ಅಣ್ಣಾಮಲೈ ಹೇಳಿಕೆ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕೆ ಅಣ್ಣಾಮಲೈ ಬೇಸರ
ತಮಿಳುನಾಡು ಬಿಜೆಪಿ ಘಟಕದಲ್ಲಿ ಗೊಂದಲ
ಬಿಜೆಪಿಯಲ್ಲಿ ನಡೆಯುತ್ತಿರುವ ಕೆಲಸಗಳು ನನಗೆ ಸಮಾಧಾನ ತಂದಿಲ್ಲ ಎಂದು ಹೇಳುವ ಮೂಲಕ ಎಲ್ಲವೂ ಸರಿಯಿಲ್ಲ ಎಂಬುದನ್ನು ಅಣ್ಣಾಮಲೈ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ತಮಿಳುನಾಡು ಬಿಜೆಪಿ ಘಟಕದಲ್ಲಿ ಗೊಂದಲಗಳು ಮುಂದುವರೆದಿವೆ. ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆಯನ್ನು ಅಧಿಕಾರದಿಂದ ಕೆಳಗಿಳಿಸುವುದು ಬಿಜೆಪಿಯ ಗುರಿಯಾಗಿತ್ತು. ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸಬೇಕೆಂಬುದು ನನ್ನ ನಿಲುವು. ಆದರೆ ಹಾಗೆ ಮಾಡಿದರೆ ಮುಂಬರುವ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ಶಕ್ತಿ ಬಿಜೆಪಿಗೆ ಇಲ್ಲ ಎಂದು ಅಣ್ಣಾಮಲೈ ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ.
ಶೇ.20 ರಿಂದ 22ರಷ್ಟು ಮತ
ಸದ್ಯ ತಮಿಳುನಾಡಿನ ಎರಡೂ ಮೈತ್ರಿ ಪಕ್ಷಗಳ ನಡುವೆ ಶೇ.20 ರಿಂದ 22ರಷ್ಟು ಮತಗಳಿವೆ. ಈಗಿನ ಪರಿಸ್ಥಿತಿಯನ್ನು ನೋಡಿದರೆ ಡಿಎಂಕೆ ಬಲಿಷ್ಠವಾಗಿದೆ. ನನಗೆ ತಿಳಿದಿರುವಂತೆ ಡಿಎಂಕೆಗೆ ಶೇ.40ಕ್ಕಿಂತ ಹೆಚ್ಚು ಮತಗಳಿವೆ. ತಮಿಳುನಾಡಿನಲ್ಲಿ ಎಂ.ಕೆ.ಸ್ಟಾಲಿನ್ ಆಡಳಿತದ ವಿರುದ್ಧ ಹೆಚ್ಚಿನ ವಿರೋಧ ಕಾಣುತ್ತಿಲ್ಲ ಎಂದು ರಾಜ್ಯ ರಾಜಕೀಯದ ಸದ್ಯದ ಪರಿಸ್ಥಿತಿ ಬಗ್ಗೆ ಅಣ್ಣಾಮಲೈ ಮಾತನಾಡಿದ್ದಾರೆ.
ತಮಿಳುನಾಡಿನಲ್ಲಿ ವಿರೋಧ ಅಲೆ
ಈ ಮಧ್ಯೆ, ಅಣ್ಣಾಮಲೈ ಅವರ ಈ ಹೇಳಿಕೆಯ ಆಡಿಯೊ ಮಾಹಿತಿಯನ್ನು ದೆಹಲಿಯ ಬಿಜೆಪಿ ನಾಯಕರಿಗೆ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ. ಅಣ್ಣಾಮಲೈ ಅವರ ಈ ಮಾತುಗಳನ್ನು ಕೇಳಿ ಅಮಿತ್ ಶಾ ತೀವ್ರ ಗೊಂದಲಕ್ಕೀಡಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ಅಣ್ಣಾಮಲೈ ಬಿಜೆಪಿ ತೊರೆಯುತ್ತಾರಾ? ತೊರೆದ್ರೆ ಯಾವ ಪಕ್ಷ ಸೇರ್ಪಡೆಯಾಗುತ್ತಾರೆ ಎಂಬ ಚರ್ಚೆಗಳು ತಮಿಳುನಾಡು ರಾಜಕಾರಣದಲ್ಲಿ ಆರಂಭಗೊಂಡಿವೆ.
ಅಣ್ಣಾಮಲೈ ?
ಕುಪ್ಪುಸಾಮಿ ಅಣ್ಣಾಮಲೈ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮತ್ತು ಮಾಜಿ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಯಾಗಿದ್ದಾರೆ. ಅಣ್ಣಾಮಲೈ ಅವರು 2011 ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದಾರೆ. ಉಡುಪಿ, ಚಿಕ್ಕಮಗಳೂರು ಮತ್ತು ಬೆಂಗಳೂರಿನಲ್ಲಿ ಅಣ್ಣಾಮಲೈ ಸೇವೆ ಸಲ್ಲಿಸಿದರು. ಅಣ್ಣಾಮಲೈ ಕಾರ್ಯಶೈಲಿಯಿಂದಾಗಿ ಅವರನ್ನು ಕರ್ನಾಟಕ ಪೊಲೀಸರ ಸಿಂಗಂ ಎಂದು ಕರೆಯಲಾಗುತ್ತಿತ್ತು.