ಧರ್ಮಸ್ಥಳ ಕೇಸ್ ನಲ್ಲಿ ಅಣ್ಣಾಮಲೈ ಹೆಸರು ಹೇಳಿದ್ಯಾಕೆ ಸೆಂಥಿಲ್? ಗಣಿ ಧಣಿ ರೆಡ್ಡಿಯ ಸ್ಫೋಟಕ ಹೇಳಿಕೆ
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಸಂಸದ ಸೆಂಥಿಲ್ ವಿರುದ್ಧ ಧರ್ಮಸ್ಥಳ ವಿವಾದ, ಅಪಪ್ರಚಾರ ಹಾಗೂ ಎಡಪಂಥೀಯ, ನಗರ ನಕ್ಸಲ್ ಭಾಗಿತ್ವದ ಆರೋಪಗಳನ್ನು ಮಾಡಿದ್ದಾರೆ. ರಾಜ್ಯ ಸರ್ಕಾರದ ಬೆಂಬಲವಿರುವುದರಿಂದ ಎಸ್ಐಟಿ ವಿಚಾರಣೆ ಕಷ್ಟ ಎಂದಿದ್ದಾರೆ. ಸೆಂಥಿಲ್ ರಾಹುಲ್ ಗಾಂಧಿಯ ಬಲಗೈ ಎಂದು ಆರೋಪಿಸಿದ್ದಾರೆ.

ಬಳ್ಳಾರಿ: ಸಂಸದ ಸಸಿಕಾಂತ್ ಸೆಂಥಿಲ್ ಅವರು ತನ್ನ ವಿರುದ್ಧ ಹೂಡಿರುವ ಮಾನನಷ್ಟ ಮೊಕದ್ದಮೆ ಮತ್ತು ಆರೋಪದ ಹಿನ್ನೆಲೆಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಶನಿವಾರ ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮತ್ತೆ ಸೆಂಥಿಲ್ ವಿರುದ್ಧ ಧ್ವನಿ ಎತ್ತಿದ್ದಾರೆ. ಇತ್ತೀಚಿನ ಧರ್ಮಸ್ಥಳ ವಿವಾದ, ಅಪಪ್ರಚಾರ ಹಾಗೂ ಸೆಂಥಿಲ್ ಪಾತ್ರದ ಬಗ್ಗೆ ಹಲವು ಗಂಭೀರ ಆರೋಪಗಳನ್ನು ಮಾಡಿರುವ ಅವರು ಹಿಂದೂ ಧಾರ್ಮಿಕ ಭಾವನೆ. ಮೇಲೆ ಎಡಪಂಕ್ತಿಯರು ನಗರ ನಕ್ಸಲ್ ಭಾಗಿಯಾಗಿದ್ದಾರೆ ಎಂದು ಹೇಳಿದ್ದೇ ಅದಕ್ಕೆ ಬದ್ಧ ಎಂದಿದ್ದಾರೆ. ಧರ್ಮಸ್ಥಳ ವಿಚಾರ ರಾಜ್ಯದ ಮಟ್ಟದಲ್ಲಷ್ಟೇ ಅಲ್ಲದೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ ಎಂದು ರೆಡ್ಡಿ ಹೇಳಿದರು. “ಇದು ಹಿಂದೂ ಧಾರ್ಮಿಕ ಭಾವನೆಗೆ ಸಂಬಂಧಿಸಿದ ವಿಚಾರ. ಇದರಲ್ಲಿ ಎಡಪಂಥೀಯರು, ನಗರ ನಕ್ಸಲ್‌ಗಳು ಭಾಗಿಯಾಗಿದ್ದಾರೆ ಎಂದು ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ” ಎಂದು ಅಭಿಪ್ರಾಯಪಟ್ಟರು. ಬಳ್ಳಾರಿ ಮೂಲದ ಸಮೀರ್, ಸೌಜನ್ಯ ಪ್ರಕರಣಗಳ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಯಿತು, ಮಿಲಿಯನ್ ವೀಕ್ಷಣೆ ಗಳಿಸಿ ಅನಗತ್ಯ ಕುತಂತ್ರ ರೂಪಿಸಲಾಯಿತು ಎಂದರು.
ಸೆಂಥಿಲ್ ವಿರುದ್ಧ ಗಂಭೀರ ಆರೋಪ
ಜನಾರ್ದನ ರೆಡ್ಡಿ ಅವರು ತಮ್ಮ ಹೇಳಿಕೆಯಲ್ಲಿ, ಮುಸುಕುದಾರಿ ಚಿನ್ನಯ್ಯ ಸೇರಿದಂತೆ ಕೆಲವು ಮಂದಿ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸಿದರು. ಇದರ ಹಿಂದೆ ತಮಿಳುನಾಡು ಮೂಲದ ಎಡಪಂಥೀಯ ಚಿಂತನೆಯ ಸೆಂಥಿಲ್ ಇದ್ದಾನೆ ಎಂದು ನಾನು ಮೊದಲು ಹೇಳಿದ್ದೇನೆ. ಸೆಂಥಿಲ್ ಎಡಪಂಥೀಯರ ಪರವಾಗಿ ಮಾತನಾಡಿ, ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದಾನೆ. “ಸೆಂಥಿಲ್ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದಾನೆ. ಆದರೆ ನನಗೆ ಇದು ಹೊಸದೇನಲ್ಲ. ಪತ್ರಿಕಾ ಕ್ಷೇತ್ರದಲ್ಲಿದ್ದಾಗಲೂ, ರಾಜಕೀಯ ಜೀವನದಲ್ಲೂ ನಾನು ಅನೇಕ ಬಾರಿ ಇಂತಹ ಪ್ರಕರಣಗಳನ್ನು ಎದುರಿಸಿದ್ದೇನೆ” ಎಂದು ಪ್ರತಿಕ್ರಿಯಿಸಿದರು.
ಸಿಬಿಐ ತನಿಖೆಗೆ ಆಗ್ರಹ
ರೆಡ್ಡಿ ಅವರ ಪ್ರಕಾರ, ಸ್ಥಳೀಯ ಪೊಲೀಸರು ಅಥವಾ ಎಸ್ಐಟಿ ಮೂಲಕ ಈ ಪ್ರಕರಣದ ನಿಜಾಂಶ ಹೊರಬರಲು ಸಾಧ್ಯವಿಲ್ಲ. “ಸೆಂಥಿಲ್‌ಗೆ ರಾಜ್ಯ ಸರ್ಕಾರದ ಬೆಂಬಲವಿರುವುದರಿಂದ ಎಸ್ಐಟಿ ವಿಚಾರಣೆ ಕಷ್ಟ. ಹೀಗಾಗಿ ಸಿಬಿಐ ಅಥವಾ ಎನ್ಐಎ ತನಿಖೆ ಅಗತ್ಯ. ಗಡಿಯಾಚೆಯವರೂ, ವಿದೇಶಿ ಸಂಘಟನೆಗಳೂ ಈ ಅಪಪ್ರಚಾರದಲ್ಲಿ ಕೈವಾಡವಿಟ್ಟಿರಬಹುದಾದ್ದರಿಂದ ರಾಷ್ಟ್ರಮಟ್ಟದಲ್ಲಿ ತನಿಖೆ ನಡೆಸಬೇಕು” ಎಂದು ಅವರು ಒತ್ತಾಯಿಸಿದರು. ಪತ್ರಿಕೆಯ ಎಡಿಟರ್ ಅಗಿದ್ದಾಗಿನಿಂದಲೂ ರಾಜಕೀಯ ಬಂದ ಮೇಲೂ ಈ ರೀತಿಯ ಕೇಸ್ ನೋಡಿದ್ದೇನೆ. ತಾವು ಭಾಗಿಯಾಗಿಲ್ಲ ಅನ್ನೊದಾದ್ರೂ ಸಿಎಂ ಭೇಟಿ ಮಾಡಿ ಸಿಬಿಐ ತನಿಖೆಗೆ ಅಗ್ರಹಿಸಬೇಕಿತ್ತು. ಕರವಳಿ ಭಾಗದಲ್ಲಿ ಬಿಜೆಪಿ ಪ್ರಬಲವಾಗಿದೆ ಎಂದು ಸೆಂಥಿಲ್ ಅದನ್ನು ತುಳಿಯು ಕೆಲಸ ಮಾಡ್ತಿದ್ದಾರೆ. ಸಮಾಜ ಒಡೆಯೋದಕ್ಕಾಗಿಯೇ ಸೆಂಥಿಲ್ ರಾಜಕೀಯಕ್ಕೆ ಬಂದಿದ್ದಾರೆ. ಸೆಂಥಿಲ್ ಹೆಸರನ್ನು ಶಾಸಕ ಯಶಪಾಲ್ ಸುವರ್ಣ ವಿಜಯೇಂದ್ರ ಕೂಡ ಹೇಳಿದ್ದಾರೆ.
ಕಾಂಗ್ರೆಸ್ ನೇತೃತ್ವದ ವಿರುದ್ಧ ಆರೋಪ
ಸುದ್ದಿಗೋಷ್ಠಿಯಲ್ಲಿ ರೆಡ್ಡಿ ಕಾಂಗ್ರೆಸ್ ನಾಯಕತ್ವವನ್ನೂ ಗುರಿಯಾಗಿಸಿಕೊಂಡು, “ಸೆಂಥಿಲ್ ರಾಹುಲ್ ಗಾಂಧಿಯ ಬಲಗೈ. ರಾಹುಲ್ ಗಾಂಧಿ ಸ್ವತಃ ಶಿಕ್ಷೆಗೆ ಒಳಗಾಗಿದ್ದಾರೆ. ಸೋನಿಯಾ ಗಾಂಧಿ ಹೆರಾಲ್ಡ್ ಕೇಸ್‌ನಲ್ಲಿ ಜಾಮೀನು ಪಡೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಕೂಡ ಶಿಕ್ಷೆಗೆ ಒಳಗಾಗಿದ್ದಾರೆ ಎನ್ನುವದು ಸೆಂಥಿಲ್ ಮರೆಯಬಾರದು. ಸೋನಿಯಾ ಗಾಂಧಿ ಹೆರಾಲ್ಡ್ ಕೇಸ್ ನಲ್ಲಿ ಬೆಲ್ ತೆಗೆದುಕೊಂಡು ಹೊರಗಿದ್ದಾರೆ. ಹೆರಾಲ್ಡ್ ಕೇಸ್‌ನಲ್ಲಿ ರಾಹುಲ್ ಗಾಂಧಿ ಕೋಟಿ ಕೋಟಿ ಲೂಟಿ ಹೊಡೆದಿದ್ದಾರೆ. ಬಳ್ಳಾರಿ ಯೂಟ್ಯೂಬರ್ ನಿಂದ ಸ್ಟಾರ್ಟ್ ಅಗಿ ಎಡಪಂಥೀಯ ನಿಲುವಿನಂತ ಹೋಗಿದೆ. ಮೂಲ ಸೂತ್ರಧಾರ ಸೆಂಥಿಲ್ ಎಂದು ಪರೋಕ್ಷವಾಗಿ ಹೇಳಿದ ಜನಾರ್ದನ ರೆಡ್ಡಿ, ಅಣ್ಣಾ ಮಲೈ ಫೇಸ್ ಮಾಡೋಕೆ ಅಗದೇ ಅವರ ಹೆಸರು ಪ್ರಸ್ತಾಪ ಮಾಡಿದ್ದಾರೆ. ಅಣ್ಣಪ್ಪ ದೇವರೇ ಧರ್ಮಸ್ಥಳದಲ್ಕಿ ಷಡ್ಯಂತ್ರ ಪ್ರೂ ಮಾಡಿದ್ದಾರೆ. ಎಸ್ಐಟಿಯಿಂದ ನಿಜ ಹೊರಗೆ ಬಂದಿದೆ ಅದ್ರೇ ಸಿಬಿಐ ವಿಚಾರಣೆಯಾದ್ರೆ ಹೊರರಾಜ್ಯ ಹೊರ ದೇಶದ ಷಡ್ಯಂತ್ರ ಹೊರಗೆ ಬರುತ್ತದೆ. ಸೆಂಥಿಲ್ ವಿರುದ್ಧ ಲಿಗಲೀ ಫೈಟ್ ಮಾಡ್ತೇನೆ. ಸೆಂಥಿಲ್ ವಿರುದ್ಧ ನನ್ನ ಹೇಳಿಕೆಗೆ ಬದ್ಧ. ರಾಷ್ಟ್ರ ಮಟ್ಟದ ವಿಚಾರಣೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಕಾರವಾರ ಹಾಗೂ ಕರಾವಳಿ ಭಾಗದಲ್ಲಿ ಬಿಜೆಪಿ ಬಲ ಹೆಚ್ಚುತ್ತಿರುವುದನ್ನು ತಡೆಯಲು ಸೆಂಥಿಲ್ ರಾಜಕೀಯಕ್ಕೆ ಬಂದಿದ್ದಾರೆ ಎಂದು ಆರೋಪಿಸಿದರು. “ಸೆಂಥಿಲ್ ವಿರುದ್ಧ ಕಾನೂನು ಹೋರಾಟ ಮುಂದುವರಿಸುತ್ತೇನೆ” ಸೆಂಥಿಲ್ ಹೆಸರನ್ನು ಶಾಸಕರಾದ ಯಶಪಾಲ್ ಸುವರ್ಣ ಹಾಗೂ ವಿಜಯೇಂದ್ರ ಕೂಡ ಉಲ್ಲೇಖಿಸಿದ್ದಾರೆ ಎಂದು ರೆಡ್ಡಿ ಹೇಳಿದರು. “ಸೆಂಥಿಲ್ ವಿರುದ್ಧ ಲೀಗಲ್ ಫೈಟ್ ಮಾಡುತ್ತೇನೆ. ನನ್ನ ಹೇಳಿಕೆಗೆ ನಾನು ಬದ್ಧ. ಇದು ಕೇವಲ ರಾಜ್ಯದ ವಿಷಯವಲ್ಲ, ರಾಷ್ಟ್ರಮಟ್ಟದಲ್ಲಿ ತನಿಖೆ ಆಗಲೇಬೇಕು” ಎಂದು ರೆಡ್ಡಿ ತಮ್ಮ ಮಾತನ್ನು ಸಮಾಪಿಸಿದರು.