ಗುಲಾಬಿ ಅಥವಾ ಬಿಳಿ ಬಣ್ಣದ ಸೀಬೆಕಾಯಿ: ಇವೆರಡರಲ್ಲಿ ದೇಹದ ಆರೋಗ್ಯಕ್ಕೆ ಯಾವುದು ಬೆಸ್ಟ್?
ಬಿಳಿ ಅಥವಾ ಗುಲಾಬಿ ಬಣ್ಣದ ಸೀಬೆಕಾಯಿ ಎರಡೂ ರುಚಿಯಾಗಿರುತ್ತಾದರೂ ಬಹುತೇಕರಿಗೆ ಇವೆರೆಡರ ನಡುವಿನ ವ್ಯತ್ಯಾಸವೇನು?, ಆರೋಗ್ಯಕ್ಕೆ ಯಾವುದು ಉತ್ತಮ ಎಂಬ ಪ್ರಶ್ನೆ ಮನಸ್ಸಿನಲ್ಲಿ ಇರುತ್ತದೆ.

ಯಾವುದು ಬೆಸ್ಟ್?
ಬೇರೆ ಹಣ್ಣುಗಳಿಗೆ ಹೋಲಿಕೆ ಮಾಡಿದರೆ ಸೀಬೆಕಾಯಿ ಅಥವಾ ಪೇರಲದ ರುಚಿ ವಿಶಿಷ್ಟ ಎಂಬುದು ಗಮನಿಸಬೇಕಾದ ಸಂಗತಿ. ಸಾಮಾನ್ಯವಾಗಿ ನಾವು ಮಾರುಕಟ್ಟೆಗೆ ಹೋದಾಗ ಎರಡು ರೀತಿಯ ಸೀಬೆಕಾಯಿ ಸಿಗುತ್ತದೆ. ಒಂದು ಬಿಳಿ ಬಣ್ಣದ್ದು, ಮತ್ತೊಂದು ಗುಲಾಬಿ ಬಣ್ಣದ್ದು. ಎರಡೂ ರುಚಿಯಾಗಿರುತ್ತಾದರೂ ಬಹುತೇಕರಿಗೆ ಇವೆರೆಡರ ನಡುವಿನ ವ್ಯತ್ಯಾಸವೇನು?, ಆರೋಗ್ಯಕ್ಕೆ ಯಾವುದು ಉತ್ತಮ ಎಂಬ ಪ್ರಶ್ನೆ ಮನಸ್ಸಿನಲ್ಲಿ ಇರುತ್ತದೆ. ಆದ್ದರಿಂದ ಇವರೆಡರಲ್ಲಿ ಯಾವುದು ಬೆಸ್ಟ್ ಎಂದು ಇಂದು ತಿಳಿಯೋಣ?.
ಗುಲಾಬಿ ಬಣ್ಣದ ಪೇರಲ
ಪೌಷ್ಟಿಕಾಂಶದ ನಿಧಿಯಾಗಿರುವ ಗುಲಾಬಿ ಬಣ್ಣದ ಪೇರಲವು ಅದರ ಉತ್ಕರ್ಷಣ ನಿರೋಧಕಗಳಿಗೆ ಹೆಸರುವಾಸಿಯಾಗಿದೆ. ವಿಶೇಷವಾಗಿ ಲೈಕೋಪೀನ್ ಇದಕ್ಕೆ ಗುಲಾಬಿ ಬಣ್ಣವನ್ನು ನೀಡುತ್ತದೆ. ಲೈಕೋಪೀನ್ ಒಂದು ಪ್ರಬಲ ಸಂಯುಕ್ತವಾಗಿದ್ದು, ಅದು ದೀರ್ಘಕಾಲದಿಂದ ಇರುವ ಕಾಯಿಲೆಗಳ (Chronic disease)ಅಪಾಯ ಕಡಿಮೆ ಮಾಡಲು, ಹೃದಯವನ್ನು ಆರೋಗ್ಯಕರವಾಗಿಡಲು ಮತ್ತು ಚರ್ಮವನ್ನು ಸೂರ್ಯನ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಬಿಳಿ ಬಣ್ಣದ ಪೇರಲ
ಇನ್ನು ಬಿಳಿ ಬಣ್ಣದ ಪೇರಲವು ಸ್ವಲ್ಪ ಹೆಚ್ಚು ವಿಟಮಿನ್ ಸಿ ಅನ್ನು ಹೊಂದಿರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಹೊಳೆಯುವ ಚರ್ಮವನ್ನು ಕಾಪಾಡಿಕೊಳ್ಳಲು ಅವಶ್ಯಕವಾಗಿದೆ.
ನೈಸರ್ಗಿಕವಾಗಿ ಸಿಹಿಯಾಗಿದೆ
ಗುಲಾಬಿ ಬಣ್ಣದ ಪೇರಲವು ನೈಸರ್ಗಿಕವಾಗಿ ಸಿಹಿಯಾಗಿರುವುದರಿಂದ ರಸಭರಿತ ಮತ್ತು ರುಚಿಕರವಾದ ಹಣ್ಣುಗಳನ್ನು ತಿನ್ನಲು ಇಷ್ಟಪಡುವವರಿಗೆ ಇದು ಫೇವರಿಟ್ ಆಗಿದೆ. ಇದರರ್ಥ ಇದು ಸ್ವಲ್ಪ ಹೆಚ್ಚು ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತದೆ.
ಮಧುಮೇಹ ರೋಗಿಗಳಿಗೆ ಬೆಸ್ಟ್
ಬಿಳಿ ಬಣ್ಣದ ಪೇರಲದ ಸಿಹಿ ಕಡಿಮೆಯಾಗಿರುತ್ತದೆ. ಆದ್ದರಿಂದ ಸಕ್ಕರೆ ಸೇವನೆಯನ್ನು ನಿಯಂತ್ರಿಸಲು ಬಯಸುವವರಿಗೆ ಅಥವಾ ಮಧುಮೇಹದಿಂದ ಬಳಲುತ್ತಿರುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.
ಸೀಬೆಕಾಯಿಯಲ್ಲಿದೆ ಹೆಚ್ಚು ಫೈಬರ್
ಸೀಬೆಕಾಯಿ ನಾರಿನಂಶದಿಂದ ಸಮೃದ್ಧವಾಗಿದೆ. ಇದು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆ ಉತ್ತೇಜಿಸುತ್ತದೆ ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಪೇರಲವನ್ನು ಅದರ ಬೀಜಗಳೊಂದಿಗೆ ಸೇವಿಸಿದರೆ, ನೀವು ನಾರಿನ ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತೀರಿ.
ಸರಿಯಾಗಿ ಆಯ್ಕೆ ಮಾಡಿ
ತ್ವಚೆ ಮತ್ತು ಹೃದಯ ಆರೋಗ್ಯವಾಗಿರಲು ಬಯಸಿದರೆ ಲೈಕೋಪೀನ್ ಅಂಶವನ್ನು ಹೊಂದಿರುವ ಗುಲಾಬಿ ಪೇರಲವು ಅತ್ಯುತ್ತಮ ಆಯ್ಕೆಯಾಗಿದೆ. ಆದರೆ ನೀವು ಹೆಚ್ಚು ಸಿಟ್ರಸ್ ಪರಿಮಳದೊಂದಿಗೆ ಹೆಚ್ಚಿನ ವಿಟಮಿನ್ ಸಿ ಬಯಸಿದರೆ ಬಿಳಿ ಪೇರಲವು ಉತ್ತಮ ಆಯ್ಕೆಯಾಗಿದೆ. ಈಗ ನಿಮಗೆ ಯಾವುದು ಬೆಸ್ಟ್ ಅದನ್ನು ಆಯ್ಕೆ ಮಾಡಿ.