MalayalamNewsableKannadaKannadaPrabhaTeluguTamilBanglaHindiMarathimynation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಅಲರ್ಜಿಯಿಂದ ಮೂಗಿನಲ್ಲಿ ತುರಿಕೆ ಆಗ್ತಿದ್ಯಾ? ಈ ಮನೆಮದ್ದುಗಳನ್ನು ಟ್ರೈ ಮಾಡಿ

ಅಲರ್ಜಿಯಿಂದ ಮೂಗಿನಲ್ಲಿ ತುರಿಕೆ ಆಗ್ತಿದ್ಯಾ? ಈ ಮನೆಮದ್ದುಗಳನ್ನು ಟ್ರೈ ಮಾಡಿ

ಹವಾಮಾನದ ಬದಲಾವಣೆಯಿಂದ, ಅಲರ್ಜಿಯಾಗಿ ಮೂಗು ತುರಿಕೆ ಅನುಭವಿಸಲು ಪ್ರಾರಂಭಿಸುತ್ತೆ. ಈ ತುರಿಕೆಯಿಂದಾಗಿ, ಉಸಿರಾಟದ ತೊಂದರೆ ಉಂಟಾಗುತ್ತೆ. ಹೊರಗಿನ  ವಸ್ತುವಿಗೆ ಒಡ್ಡಿಕೊಳ್ಳೋದರಿಂದ ಮೂಗಿನಲ್ಲಿ ಅಲರ್ಜಿಗಳು ಉಂಟಾಗಬಹುದು. 

2 Min read
Suvarna News
Published : Nov 29 2022, 07:02 PM IST
Share this Photo Gallery
  • FB
  • TW
  • Linkdin
  • Whatsapp
  • Google NewsFollow Us
110
Asianet Image

ಹವಾಮಾನ ಬದಲಾದಂತೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅವುಗಳನ್ನು ಅಲರ್ಜಿಗಳು(Allergy) ಸಹ ಒಂದು. ಮುಖ್ಯವಾಗಿ ಮೂಗಿನಲ್ಲಿ ತುರಿಕೆ ಸಹ ಉಂಟಾಗುತ್ತದೆ. ಹಲವಾರು ಕಾರಣಗಳಿಂದ ಮೂಗಿನಲ್ಲಿ ತುರಿಕೆ ಉಂಟಾಗುತ್ತೆ. ಇದು ಯಾಕೆ ಉಂಟಾಗುತ್ತದೆ, ಇದಕ್ಕೇನು ಪರಿಹಾರ ಎನ್ನುವ ಬಗ್ಗೆ ನೀವು ತಿಳಿಯಲು ಬಯಸಿದರೆ ಮುಂದೆ ಓದಿ… ಇಲ್ಲಿ ಈ ಕುರಿತು ಸಂಪೂರ್ಣ ಮಾಹಿತಿ ನೀಡಲಾಗಿದೆ. 

210
Asianet Image

ಮೂಗಿನಲ್ಲಿ ತುರಿಕೆಗೆ ಅನೇಕ ಕಾರಣಗಳಿವೆ, ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ:
ಎಸ್ಜಿಮಿ ಮೂಗಿನ ಅಲರ್ಜಿಗೆ ಕಾರಣವಾಗಬಹುದು.
ಮೂಗಿನ ಅಲರ್ಜಿ ಅಥವಾ ಅಲರ್ಜಿಕ್ ರೈನಿಟಿಸ್ ಹೊಂದಿರೋದು.
ಅಸ್ತಮಾ(Asthma) ಇದ್ದಾಗ ಮೂಗಿನ ಅಲರ್ಜಿ ಉಂಟಾಗಬಹುದು.

310
Asianet Image

ಸಿಗರೇಟಿನ ಹೊಗೆಯು ಮೂಗಿನಲ್ಲಿ ತುರಿಕೆಗೆ ಕಾರಣವಾಗುತ್ತೆ .
ಮೂಗಿನಲ್ಲಿ ಧೂಳು ತುರಿಕೆಗೆ ಕಾರಣವಾಗಬಹುದು.
ಪರ್ಫ್ಯೂಮಿನ(Perfume)  ಅಡ್ಡಪರಿಣಾಮಗಳು ಮೂಗಿನಲ್ಲಿ ತುರಿಕೆಗೆ ಕಾರಣವಾಗುತ್ತೆ .
ಆನುವಂಶಿಕ ಕಾರಣಗಳು ಮೂಗಿನಲ್ಲಿ ತುರಿಕೆಗೆ ಕಾರಣವಾಗಬಹುದು.

410
dust allergy

dust allergy

ತಜ್ಞರು ನೀಡುವ ಔಷಧಗಳ ಮೂಲಕ ಮೂಗಿನಲ್ಲಿ ತುರಿಕೆಯನ್ನು ಗುಣಪಡಿಸಬಹುದು, ಆದರೆ ಮನೆಮದ್ದುಗಳ ಮೂಲಕ ಮೂಗಿನ ತುರಿಕೆಯನ್ನು ಸಹ ನೀವು ಸರಿಪಡಿಸಬಹುದು. ಆ ಮನೆಮದ್ದುಗಳನ್ನು ನೋಡೋಣ-

510
Asianet Image

ಜೇನುತುಪ್ಪ ಮತ್ತು ತುಳಸಿ(Tulasi) - ಮೂಗಿನಲ್ಲಿ ತುರಿಕೆಯು ವೈರಸ್ ಅಥವಾ ಬ್ಯಾಕ್ಟೀರಿಯಾದ ಸೋಂಕುಗಳಿಗೆ ಕಾರಣವಾಗಬಹುದು. ಸೋಂಕನ್ನು ಹೋಗಲಾಡಿಸಲು ತುಳಸಿ ಎಲೆಗಳನ್ನು ಪೇಸ್ಟ್ ಮಾಡಿ. ಅದಕ್ಕೆ ಜೇನುತುಪ್ಪ ಸೇರಿಸಿ. ಉಗುರುಬೆಚ್ಚಗಿನ ನೀರಿನೊಂದಿಗೆ ಈ ಪೇಸ್ಟ್ ತೆಗೆದುಕೊಳ್ಳಿ. ಈ ಮಿಶ್ರಣವನ್ನು ಸೇವಿಸೋದರಿಂದ ಚರ್ಮದಲ್ಲಿ ತುರಿಕೆಯ ಸಮಸ್ಯೆಯನ್ನು ಸಹ ತೆಗೆದುಹಾಕುತ್ತೆ.

610
Asianet Image

ಪಪ್ಪಾಯಿ (papaya)- ಪಪ್ಪಾಯಿ ಸೇವನೆಯು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತೆ. ಪಪ್ಪಾಯಿಯಲ್ಲಿ ಬ್ರೋಮೆಲೈನ್ ಎಂಬ ಕಿಣ್ವವಿದೆ, ಇದು ಮೂಗಿನ ಊತ ಮತ್ತು ತುರಿಕೆಯ ಸಮಸ್ಯೆಯನ್ನು ತೆಗೆದುಹಾಕುತ್ತೆ. ಪ್ರತಿದಿನ ಪಪ್ಪಾಯಿ ಸೇವಿಸಬೇಡಿ. ನೀವು ಇದನ್ನು ವಾರಕ್ಕೆ 3 ರಿಂದ 4 ಬಾರಿ ತಿನ್ನಬಹುದು.

710
Asianet Image

ಅರಿಶಿನ (Turmeric) - ಅರಿಶಿನದಲ್ಲಿ ಕರ್ಕ್ಯುಮಿನ್ ಕಂಡುಬರುತ್ತೆ. ಅರಿಶಿನ ಸೇವಿಸೋದರಿಂದ ಮೂಗು ಮತ್ತು ಚರ್ಮದಲ್ಲಿ ತುರಿಕೆಯ ಸಮಸ್ಯೆ ನಿವಾರಿಸುತ್ತೆ. ಅರಿಶಿನವನ್ನು ಉಗುರುಬೆಚ್ಚಗಿನ ನೀರು ಅಥವಾ ಹಾಲಿನೊಂದಿಗೆ ತೆಗೆದುಕೊಳ್ಳಬಹುದು. ಬಿಸಿ ಹಾಲು ಅಥವಾ ನೀರಿಗೆ 1 ಟೀಸ್ಪೂನ್ ಅರಿಶಿನ ಸೇರಿಸಿ. ರಾತ್ರಿ ಇದನ್ನು ಸೇವಿಸೋದರಿಂದ ಮೂಗಿನಲ್ಲಿ ತುರಿಕೆ ನಿವಾರಣೆಯಾಗುತ್ತೆ. ಅರಿಶಿನದ ಸೇವನೆಯು ಮೂಗಿನ ಅಲರ್ಜಿಗಳನ್ನು ನಿವಾರಿಸಲು ಪ್ರಯೋಜನಕಾರಿ.

810
Asianet Image

ಕರಿಮೆಣಸು(black pepper) ಮೂಗಿನಲ್ಲಿ ತುರಿಕೆಯ ಸಮಸ್ಯೆ ನಿವಾರಿಸಲು ಕರಿಮೆಣಸನ್ನು ಬಳಸಬಹುದು. ಅಲರ್ಜಿಯಿಂದಾಗಿ ತುರಿಕೆಯಾಗಿದ್ದರೆ, ಕರಿಮೆಣಸಿನ ಸೇವನೆಯು ಪ್ರಯೋಜನಕಾರಿ. ಕರಿಮೆಣಸು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಕರಿಮೆಣಸಿನೊಂದಿಗೆ ಜೇನುತುಪ್ಪ ಬೆರೆಸಿ. ಉಗುರು ಬೆಚ್ಚಗಿನ ನೀರಿನೊಂದಿಗೆ ಕರಿಮೆಣಸು ಮತ್ತು ಜೇನುತುಪ್ಪ ಬೆರೆಸಿ ತಿನ್ನಿ.

910
Asianet Image

ಕಪಾಲಭಾತಿ ಪ್ರಾಣಾಯಾಮ(Pranayama)- ಮೂಗಿನಲ್ಲಿ ತುರಿಕೆ ಇದ್ದಾಗ ಕಪಾಲಭಾತಿ ಪ್ರಾಣಾಯಾಮ ಮಾಡಬಹುದು. ಅನೇಕ ಬಾರಿ ಮೂಗಿನ ಮಾರ್ಗವನ್ನು ನಿರ್ಬಂಧಿಸೋದರಿಂದ ತುರಿಕೆಯ ಸಮಸ್ಯೆ ಇರುತ್ತೆ. ತುರಿಕೆ ತೆಗೆದುಹಾಕಲು ಮೂಗಿನ ಮಾರ್ಗವನ್ನು ತೆರೆಯೋದು ಬಹಳ ಮುಖ್ಯ. ಇದಕ್ಕಾಗಿ, ಕಪಾಲಭಾತಿಯನ್ನು 15 ನಿಮಿಷಗಳ ಕಾಲ ಅಭ್ಯಾಸ ಮಾಡಿ. ಕಪಾಲಭಾತಿ ಮಾಡಲು ದೀರ್ಘವಾಗಿ ಉಸಿರೆಳೆದುಕೊಳ್ಳಿ. ಉಸಿರನ್ನು ಒಳಗೆ ಎಳೆದುಕೊಳ್ಳಿ. ನಂತರ ಉಸಿರಾಡಿ

1010
Asianet Image

ಅಲರ್ಜಿ ಹೆಚ್ಚಾದರೆ ಅದನ್ನು ನಿರ್ಲಕ್ಷಿಸಬೇಡಿ. ಮೂಗಿನಲ್ಲಿ ತುರಿಕೆ ಇದ್ದರೆ ಅಲರ್ಜಿ ಟೆಸ್ಟ್ ಮಾಡಬಹುದು. ಅಲರ್ಜಿಯ ಲಕ್ಷಣಗಳನ್ನು ಒಂದು ವಾರದೊಳಗೆ ಗುಣವಾಗಬೇಕು. ನೀವು ವ್ಯತ್ಯಾಸ ಅನುಭವಿಸಿದ್ರೆ, ವೈದ್ಯರನ್ನು ಭೇಟಿ ಮಾಡಿ. ಸರಿಯಾಗಿ ಔಷಧಿ ಪಡೆಯೋದು ಉತ್ತಮ. 

Suvarna News
About the Author
Suvarna News
ಆರೋಗ್ಯ
 
Recommended Stories
Top Stories
Asianet
Follow us on
  • Facebook
  • Twitter
  • whatsapp
  • YT video
  • insta
  • Andriod_icon
  • IOS_icon
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved