Benefits of Festivals: ಹಬ್ಬವನ್ನ ಆಚರಿಸುವುದರಿಂದ ಮೆಂಟಲ್ ಹೆಲ್ತ್ ಚೆನ್ನಾಗಿರುತ್ತಂತೆ
ಹಬ್ಬಗಳು ನಮ್ಮ ಮಾನಸಿಕ ಆರೋಗ್ಯಕ್ಕೆ ಏಕೆ ಒಳ್ಳೆಯದು ಎಂಬುದಕ್ಕೆ ನಾಲ್ಕು ಕಾರಣಗಳು ಇಲ್ಲಿವೆ...

ಸಂತೋಷವಾಗಿರಲು ಇದು ಸಮಯ
ಹಬ್ಬದ ಸೀಸನ್ ಬಂದಿದೆ. ವಿಶೇಷವಾಗಿ ಹೆಣ್ಮಕ್ಕಳ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಶಾಪಿಂಗ್ ಮಾಡಲು, ಹೊಸ ಪರಿಕರಗಳನ್ನು ಖರೀದಿಸಲು, ರುಚಿಕರವಾದ ಭಕ್ಷ್ಯಗಳನ್ನು ಸವಿಯಲು ಮತ್ತು ಕುಟುಂಬ, ಸ್ನೇಹಿತರು ಹಾಗೂ ಪ್ರೀತಿಪಾತ್ರರೊಂದಿಗೆ ಸಮಯವನ್ನು ಆನಂದಿಸಲು ಇದು ಸಮಯ. ಅಂದಹಾಗೆ ಹಬ್ಬದ ಸೀಸನ್ ನಮ್ಮ ಮಾನಸಿಕ ಆರೋಗ್ಯಕ್ಕೂ ಒಳ್ಳೆಯದಂತೆ.
ಏಕೆ ಒಳ್ಳೆಯದು?
ಹಬ್ಬದ ಕುರಿತು ಮಾತನಾಡಿರುವ ಮನಶಾಸ್ತ್ರಜ್ಞರು, "ನಮ್ಮ ಪರಿಸ್ಥಿತಿ ಏನೇ ಇರಲಿ ಅಥವಾ ನಾವು ಪ್ರಪಂಚದ ಯಾವುದೇ ಭಾಗದಲ್ಲಿದ್ದರೂ ನಾವೆಲ್ಲಾ ಒಟ್ಟಿಗೆ ಸೇರುತ್ತೇವೆ ಅಂದರೆ ಅದು ಹಬ್ಬದ ಸಂದರ್ಭಗಳಲ್ಲಿ ಮಾತ್ರ. ಹಬ್ಬಗಳು ನಮ್ಮ ಬೇರುಗಳು, ಸಂಸ್ಕೃತಿ ಮತ್ತು ಸಂಪ್ರದಾಯದೊಂದಿಗೆ ಸಂಪರ್ಕ ಸಾಧಿಸಲು ಉತ್ತಮ ಮಾರ್ಗವಾಗಿದೆ" ಎಂದು ತಿಳಿಸಿದ್ದಾರೆ. ಅಂದಹಾಗೆ ಹಬ್ಬಗಳು ನಮ್ಮ ಮಾನಸಿಕ ಆರೋಗ್ಯಕ್ಕೆ ಏಕೆ ಒಳ್ಳೆಯದು ಎಂಬುದಕ್ಕೆ ನಾಲ್ಕು ಕಾರಣಗಳು ಇಲ್ಲಿವೆ...
ಕುಟುಂಬದೊಂದಿಗೆ ಕಾಲ ಕಳೆಯಲು
ಹಬ್ಬದಂದು ನಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮತ್ತೆ ಬೆರೆಯಲು, ಸಮಯ ಕಳೆಯಲು ನಮಗೆ ಅವಕಾಶ ಸಿಗುತ್ತದೆ. ಅವರೊಂದಿಗೆ ಮಾತನಾಡಲು ಮತ್ತು ಜೀವನದ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಳ್ಳಲು ಅವಕಾಶ ಸಿಗುತ್ತದೆ. ಹಬ್ಬಗಳು ಇಲ್ಲದಿದ್ದರೆ ಬ್ಯುಸಿ ಲೈಫ್‌ಸ್ಟೈಲ್‌ನಿಂದ ಇವೆಲ್ಲ ಸಾಧ್ಯವಾಗುವುದೇ ಇಲ್ಲ. ಈ ಸಮಯದಲ್ಲಿ ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಅದು ನೀವು ಅವರ ಬಗ್ಗೆ ಎಷ್ಟರ ಮಟ್ಟಿಗೆ ಕಾಳಜಿ ವಹಿಸುತ್ತೀರಿ ಎಂದು ತಿಳಿಸುತ್ತದೆ.
ಸಂತೋಷದ ಹಾರ್ಮೋನುಗಳು ಬಿಡುಗಡೆ
ನಮ್ಮ ತಜ್ಞರು ಹೇಳುವಂತೆ ಆಚರಣೆಗಳು ಮತ್ತು ಹಬ್ಬಗಳು ಸಂತೋಷದ ಹಾರ್ಮೋನು ಎಂಡಾರ್ಫಿನ್ ಬಿಡುಗಡೆ ಮಾಡುತ್ತದೆ . ಅದು ಸಂತೋಷದ ಭಾವನೆಯನ್ನು ಉಂಟುಮಾಡುತ್ತವೆ. ನೀವು ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಚರಿಸುತ್ತಿದ್ದರಂತೂ ಎಂಡಾರ್ಫಿನ್‌ಗಳು ಖಿನ್ನತೆಯನ್ನು ದೂರವಿಡಲು ನಿಮಗೆ ಸಹಾಯ ಮಾಡುತ್ತವೆ.
ಒಂಟಿತನವನ್ನು ನಿವಾರಿಸಲು ಸಹಕಾರಿ
ಜನರು ತಮ್ಮ ಪ್ರೀತಿಪಾತ್ರರ ಜೊತೆ ಹಬ್ಬಗಳನ್ನು ಆಚರಿಸುವುದರಿಂದ ಒಂಟಿತನದ ಭಾವನೆಯನ್ನು ಹೋಗಲಾಡಿಸಲು ಸಹಾಯ ಮಾಡಬಹುದು. ನೀವು ಹಬ್ಬದ ಸಮಯದಲ್ಲಿ ಅಡುಗೆಮನೆಯಲ್ಲಿ ಸಹಾಯ ಮಾಡಬಹುದು ಮತ್ತು ಒಡಹುಟ್ಟಿದವರೊಂದಿಗೆ ಮನೆಯನ್ನು ಅಲಂಕರಿಸಬಹುದು. ಇದು ಜನರಿಗೆ ನಾವೆಲ್ಲಾ ಒಂದೇ ಎಂಬ ಭಾವನೆ ಮೂಡಿಸುತ್ತದೆ. ವಿಶೇಷವಾಗಿ ಕೊರೊನಾ ನಂತರ ಹಬ್ಬದ ಆಚರಣೆಗಳು ಮೊದಲಿಗಿಂತ ಹೆಚ್ಚು ಚೆನ್ನಾಗಿವೆ. ಏಕೆಂದರೆ ಜನರು ಸಮುದಾಯದ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ತಜ್ಞರು ತಿಳಿಸಿದ್ದಾರೆ.
ಇತರ ಧರ್ಮೀಯರು ಭಾಗಿ
ಮನಶಾಸ್ತ್ರಜ್ಞರ ಪ್ರಕಾರ, ಹಬ್ಬಗಳು ಹೊಸ ಅನುಭವಗಳಿಗೆ ನಮ್ಮನ್ನು ತೆರೆದುಕೊಳ್ಳಲು ಸಹಾಯ ಮಾಡುತ್ತವೆ. ನಾವು ಇತರ ಸಮುದಾಯಗಳ ಸಂಪ್ರದಾಯಗಳೊಂದಿಗೆ ಪರಿಚಯ ಮಾಡಿಕೊಳ್ಳುತ್ತೇವೆ. ಅದು ಸಾಮಾನ್ಯವಾಗಿ ರೋಮಾಂಚಕಾರಿಯಾಗಿರುತ್ತದೆ. ಇದು ನಮ್ಮ ಪರಸ್ಪರ ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ. ಇದು ಪರಸ್ಪರ ಸಂಬಂಧಗಳನ್ನು ನಿರ್ಮಿಸಲು ಕಾರಣವಾಗುತ್ತದೆ. ಇದು ನಮ್ಮ ಮಾನಸಿಕ ಆರೋಗ್ಯವನ್ನು ಬಹಳಷ್ಟು ಸುಧಾರಿಸುತ್ತದೆ.