ಶಾಕಿಂಗ್! ಸ್ಮೋಕ್ ಮಾಡೋದ್ರಿಂದ ಹೀಗೂ ಆಗುತ್ತಾ?
ನಿರಂತರವಾಗಿ ಹೇರ್ ಫಾಲ್ ಆಗ್ತಿದ್ಯಾ? ನಿಮ್ಮ ಕೂದಲು ಉದುರುವಿಕೆ ತಡೆಯಲು ವಿವಿಧ ರೀತಿಯ ಎಣ್ಣೆ ಬಳಸಿ ದಣಿದಿದ್ದೀರಾ? ಇನ್ನು ಹೇಗಪ್ಪಾ ಹೇರ್ ಫಾಲ್ ತಡೆಯೋದು ಎಂದು ಯೋಚಿಸುತ್ತಾ ಹೇರ್ ಟ್ರೀಟ್ಮೆಂಟ್ ತೆಗೆದುಕೊಳ್ಳಲು ಯೋಜಿಸುತ್ತಿದ್ದೀರಾ? ಈ ಎಲ್ಲಾ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದಲ್ಲಿ ನೀವು ಇದನ್ನ ಮಿಸ್ ಮಾಡದೇ ಓದಬೇಕು.
ಯಾವುದೇ ಸಮಸ್ಯೆಗೆ ಟ್ರೀಟ್ಮೆಂಟ್ ತೆಗೆಯೋ ಮೊದಲು ಅದರ ಕಾರಣಗಳ ಬಗ್ಗೆ ಗಮನ ಹರಿಸೋದು ಅಗತ್ಯ. ಕೂದಲು ಉದುರುವಿಕೆಯ (Hair fall) ವಿಷಯವಾಗಿದ್ದರೂ ಸಹ ನೀವು ಇದನ್ನೆ ಮಾಡ್ಬೇಕು. ಹೇರ್ ಫಾಲ್ ಬದಲಾದ ಲೈಫ್ ಸ್ಟೈಲ್, ಅತಿಯಾದ ಸ್ಟ್ರೆಸ್ ಅಥವಾ ಸೇವಿಸುವ ಆಹಾರದ ಅಜಾಗರೂಕತೆ ಕಾರಣ ಎಂದು ಸಾಮಾನ್ಯವಾಗಿ ಕಂಡುಬರುತ್ತೆ. ಆದರೆ ಇದರ ಹೊರತಾಗಿ, ಸ್ಮೋಕಿಂಗ್ ಹ್ಯಾಬಿಟ್ ಕೂಡ ಕೂದಲು ಉದುರುವಿಕೆಗೆ ಕಾರಣವಾಗಬಹುದು.
ಧೂಮಪಾನವು (Smoking) ಆರೋಗ್ಯಕ್ಕೆ ಹಾನಿಕಾರಕ ಎಂದು ನಮಗೆಲ್ಲರಿಗೂ ತಿಳಿದಿದೆ. ಅಲ್ಲದೇ ಸ್ಮೋಕಿಂಗ್ ನಿಂದ ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗೆ ಒಳಗಾಗುವ ಸಾಧ್ಯತೆ ಕೂಡ ಹೆಚ್ಚಾಗಿದೆ. ಇದು ನಿಮ್ಮ ಚರ್ಮ ಮತ್ತು ಕೂದಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತೆ. ಇನ್ನು ಹೆಚ್ಚು ಸ್ಮೋಕ್ ಮಾಡೋ ಅಭ್ಯಾಸ ಹೊಂದಿರುವ ಜನರು ಕೂದಲು ಉದುರುವ ಸಮಸ್ಯೆ ಸಹ ಎದುರಿಸ್ತಾರೆ ಎಂದು ತಜ್ಞರು ತಿಳಿಸಿದ್ದಾರೆ.
ಸ್ಮೋಕಿಂಗ್ ಕೂದಲು ಉದುರುವಿಕೆಗೆ ಕಾರಣವಾಗುತ್ತಾ ?
ಧೂಮಪಾನವು ಕೂದಲು ಉದುರುವಿಕೆಗೆ ಕಾರಣವಾಗುತ್ತೋ ಇಲ್ವೋ ಎಂಬುದರ ಬಗ್ಗೆ ನೀವು ಕನ್ ಫ್ಯೂಸ್ ಆಗುತ್ತಿದ್ದೀರಾ?, ಅದಕ್ಕೆ ಆನ್ಸರ್ ಹೌದು. ಸ್ಮೋಕಿಂಗ್ ಮತ್ತು ಕೂದಲು ಉದುರುವಿಕೆಯ ನಡುವೆ ಆಳವಾದ ಸಂಬಂಧವಿದೆ. ನೀವು ಧೂಮಪಾನ ಮಾಡುವಾಗ ನಿಕೋಟಿನ್(Nicotin) ನಿಮ್ಮ ದೇಹವನ್ನು ಪ್ರವೇಶಿಸುತ್ತೆ.
ಈ ನಿಕೋಟಿನ್ ದೇಹದಲ್ಲಿನ ಅನೇಕ ಪ್ರಮುಖ ನ್ಯೂಟ್ರಿಯೆಂಟ್ಸ್ ಮತ್ತು ಮಿನರಲ್ಸ್ (Minerals) ಹೀರಿಕೊಳ್ಳಲು ಬಿಡೋದಿಲ್ಲ. ಈ ಕಾರಣದಿಂದಾಗಿಯೇ ಮಿನರಲ್ ಸಮೃದ್ಧ ಆಹಾರ ಸೇವಿಸಿದ ನಂತರವೂ, ದೇಹವು ಅದರ ಪ್ರಯೋಜನ ಪಡೆಯೋದಿಲ್ಲ. ಇದು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೆ, ಕೂದಲಿನ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತೆ.
ಕಬ್ಬಿಣ ಮತ್ತು ಜಿಂಕ್(Zinc) ಹೀರಿಕೊಳ್ಳೋದಿಲ್ಲ
ನಿಕೋಟಿನ್ ದೇಹದಲ್ಲಿ ಕಬ್ಬಿಣ ಮತ್ತು ಜಿಂಕ್ ಹೀರಿಕೊಳ್ಳಲು ಅಡ್ಡಿಪಡಿಸುತ್ತೆ. ಇದರಿಂದಾಗಿ ದೇಹದಲ್ಲಿ ಕಬ್ಬಿಣ ಅಂಶದ ಕೊರತೆ ಉಂಟಾಗುತ್ತೆ ಮತ್ತು ಈ ಕಾರಣದಿಂದಾಗಿ, ಪೋಷಕಾಂಶಗಳು ಕೂದಲನ್ನು ಸರಿಯಾಗಿ ತಲುಪೋದಿಲ್ಲ, ಇದರಿಂದಾಗಿ ಕೂದಲು ಉದುರಲು ಪ್ರಾರಂಭಿಸುತ್ತೆ. ಕೂದಲಿನ ಬೆಳವಣಿಗೆಗೆ ಕಬ್ಬಿಣ ಮತ್ತು ಜಿಂಕ್ ಬಹಳ ಮುಖ್ಯ. ಧೂಮಪಾನ ಸಂಪೂರ್ಣವಾಗಿ ಅವಾಯ್ಡ್ ಮಾಡೋದು ಅಗತ್ಯ.
ಧೂಮಪಾನದ ಒಂದು ಪ್ರಮುಖ ಅಡ್ಡಪರಿಣಾಮ ಎಂದರೆ ಇದು ನಿಮ್ಮ ನೆತ್ತಿಯಲ್ಲಿ ರಕ್ತದ ಹರಿವನ್ನು ನಿಧಾನಗೊಳಿಸುತ್ತೆ. ಉತ್ತಮ ಕೂದಲಿನ ಬೆಳವಣಿಗೆಗೆ(Hair growth), ನೆತ್ತಿಯಲ್ಲಿ ಉತ್ತಮ ರಕ್ತ ಪರಿಚಲನೆ ಹೊಂದೋದು ಬಹಳ ಮುಖ್ಯ. ಆದರೆ ದೇಹದಲ್ಲಿರುವ ನಿಕೋಟಿನ್ ನೆತ್ತಿಯ ರಕ್ತದ ಹರಿವನ್ನು ನಿಧಾನಗೊಳಿಸುತ್ತೆ, ಇದರಿಂದ ಬೇರುಗಳು ದುರ್ಬಲಗೊಂಡು, ಕೂದಲು ಉದುರಲು ಆರಂಭವಾಗುತ್ತೆ.
ಸ್ಮೋಕಿಂಗ್ ಯಾವುದೇ ರೀತಿಯಲ್ಲಿ ಆರೋಗ್ಯಕ್ಕೆ ಒಳ್ಳೆಯದಲ್ಲ, ಹಾಗಾಗಿ ಸ್ಮೋಕಿಂಗ್ ತ್ಯಜಿಸಲು ಈ ಕೆಳಗೆ ನೀಡಿದ ಪರಿಹಾರ ಅಳವಡಿಸಿಕೊಳ್ಳಿ. ಪ್ರತಿಯೊಬ್ಬರೂ ಸಾಧ್ಯವಾದಷ್ಟು ಬೇಗ ಸ್ಮೋಕಿಂಗ್ ನಿಂದ ದೂರವಿರಬೇಕು. ಇದಕ್ಕಾಗಿ ಹೋಮಿಯೋಪಥಿಯ(Homeopathy) ಮಾರ್ಗ ಅಳವಡಿಸಿಕೊಳ್ಳೋದು ಒಳ್ಳೆದು.
ಕೆಲವು ಪರಿಹಾರಗಳು ಈ ಕೆಳಗಿನಂತಿವೆ:
• ಒಂದು ಹನಿ ಲವಂಗದ ಎಣ್ಣೆ(Clove oil) ನಾಲಿಗೆಯ ಹಿಂಭಾಗಕ್ಕೆ ಹಚ್ಚಿ. ಇದು ಧೂಮಪಾನ ಮಾಡುವ ನಿಮ್ಮ ಬಯಕೆಯನ್ನು ತಕ್ಷಣವೇ ಕೊನೆಗೊಳಿಸುತ್ತೆ. ಧೂಮಪಾನವನ್ನು ತ್ಯಜಿಸಲು ಇದು ಸುಲಭವಾದ ಮಾರ್ಗವಾಗಿದೆ. ಟ್ರೈ ಮಾಡಿ ನೋಡಿ.
• ಲವಂಗದ ಎಣ್ಣೆಯಲ್ಲದೆ, ಪುದೀನಾ-ಪರಿಮಳದ ಗಮ, ಕ್ಯಾರೆಟ್(Carrot) ಅಗಿಯೋದು ಸಹ ಧೂಮಪಾನದ ಅಭ್ಯಾಸ ನಿವಾರಿಸಲು ನಿಮಗೆ ಸಹಾಯ ಮಾಡುತ್ತೆ.
• ಧೂಮಪಾನದ ಹೊರತಾಗಿ ನಿಮ್ಮ ಕೈ ಮತ್ತು ಬಾಯಿಯನ್ನು ಬೇರೆ ಯಾವುದೇ ಕೆಲಸದಲ್ಲಿ ನಿರತವಾಗಿಡಲು ಪ್ರಯತ್ನಿಸಿ.