ನೀವು ಎಷ್ಟೇ ಬಯಸಿದ್ರೂ ಡಯಟ್ ಫಾಲೋ ಮಾಡಲು ಆಗ್ತಿಲ್ವಾ?, ಈ ಹ್ಯಾಕ್ಸ್ ಟ್ರೈ ಮಾಡಿ!
ಡಯಟ್ ಅಂದ್ರೆ ಉಪವಾಸ ಇರೋದು ಅಂತಲ್ಲ. ಡಯಟ್ ಅಂದ್ರೆ ಆರೋಗ್ಯ ಮತ್ತು ತೂಕ-ನಿರ್ವಹಣೆಗಳಿಗೆ ಪೌಷ್ಠಿಕಾಂಶ ತುಂಬಿರೋ ಸಮತೋಲಿತ ಆಹಾರ ಸೇವಿಸೋದು. ಉತ್ತಮ ಆರೋಗ್ಯಕ್ಕಾಗಿ ಹೆಲ್ತಿ ಡಯಟ್ ಫಾಲೋ ಮಾಡೋದು ಮುಖ್ಯ. ಹಾಗಾಗಿ ಇಲ್ಲಿ ಹೇಳಿರೋ ಹ್ಯಾಕ್ಸ್ ಟ್ರೈ ಮಾಡಿ ನೋಡಿ.
ಇಂದಿನ ಕಾಲದಲ್ಲಿ, ಜನರು ಹೆಚ್ಚು ಚುರುಕಾಗಿ ಮತ್ತು ಸದೃಢವಾಗಿರಲು ವಿವಿಧ ಡಯಟ್ (Diet)ಅನುಸರಿಸುತ್ತಾರೆ. ಕೆಲವು ಜನರು ತೂಕ ಕಳೆದುಕೊಳ್ಳಲು ಬಯಸಿದರೆ, ಕೆಲವರು ತೂಕ ಹೆಚ್ಚಿಸುವ ಪ್ರಕ್ರಿಯೆಯಲ್ಲಿರ್ತ್ತಾರೆ. ಇನ್ನೂ ಕೆಲವು ಜನರು ತಮ್ಮ ಕೆಲವು ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸಲು ವಿಶೇಷ ರೀತಿಯ ಡಯಟ್ ಸಹ ಅನುಸರಿಸ್ತಾರೆ. ಕೆಲವು ಜನರು ಡಯಟ್ ಪ್ರಾರಂಭಿಸುತ್ತಾರೆ, ಆದರೆ ಅದನ್ನು ಸರಿಯಾಗಿ ಫಾಲೋ ಮಾಡಲು ಸಾಧ್ಯವಾಗೋದಿಲ್ಲ. ಹಾಗಾಗಿ ಕೆಲವು ಸುಲಭ ಟಿಪ್ಸ್ ಸಹಾಯ ತೆಗೆದುಕೊಳ್ಳಬಹುದು. ಇಲ್ಲಿ ಕೆಲವು ಸುಲಭ ಹ್ಯಾಕ್ಸ್ ಬಗ್ಗೆ ತಿಳಿಯೋಣ, ಇದು ಡಯಟ್ ಬ್ರೇಕ್ ಮಾಡದೆ ಫಾಲೋ ಮಾಡಲು ಸಹಾಯ ಮಾಡುತ್ತೆ -
ಡಯಟ್ ಅನುಸರಿಸಲು ಕಾರಣ(Reason) ತಿಳಿಯಿರಿ
ಒಂದು ನಿರ್ದಿಷ್ಟ ರೀತಿಯ ಡಯಟ್ ಅನುಸರಿಸಲು ಮನಸ್ಸು ಮಾಡಿದ್ದರೆ, ಈ ಆಹಾರವನ್ನು ಏಕೆ ಅನುಸರಿಸುತ್ತಿದ್ದೀರಿ ಎಂದು ಒಮ್ಮೆ ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಬೇಕು. ಒಂದು ಕೆಲಸ ಮಾಡಲು ಕಾರಣ ತಿಳಿದಾಗ, ಅದನ್ನು ಮಾಡಲು ಹೆಚ್ಚು ಉತ್ಸುಕರಾಗುತ್ತೀರಿ. ಆಗ ಡಯಟ್ನಲ್ಲಿ ಉಳಿಯೋದು ಸುಲಭವಾಗುತ್ತೆ.
ಕಾಲಕಾಲಕ್ಕೆ ನಿಮಗೆ ನೀವೇ ರಿವಾರ್ಡ್(Reward) ನೀಡಿ
ಯಾವುದೇ ಕೆಲಸ ಮಾಡಲು ಪ್ರೇರಣೆ ಅಗತ್ಯ. ಡಯಟ್ ಫಾಲೋ ಮಾಡುವಾಗ ಹೆಚ್ಚಿನ ಜನರು ಆರಂಭದಲ್ಲಿ ಉತ್ಸುಕರಾಗಿರ್ತ್ತಾರೆ. ಆದರೆ ದಿನ ಕಳೆದಂತೆ ಉತ್ಸಾಹ ಕಮ್ಮಿಯಾಗುತ್ತೆ, ಆಗ ಡಯಟ್ ಫಾಲೋ ಮಾಡೋದು ತಪ್ಪುತ್ತೆ. ಆದ್ದರಿಂದ ಡಯಟ್‌ನಲ್ಲಿ ಉಳಿಯಲು ಕಾಲಕಾಲಕ್ಕೆ ನಿಮಗೆ ನೀವೇ ರಿವಾರ್ಡ್ ನೀಡಿ. ಇದು ನಿಮ್ಮ ಉತ್ಸಾಹವನ್ನು ಆದೇ ರೀತಿ ಉಳಿಸಿಕೊಳ್ಳುತ್ತೆ .
ತಕ್ಷಣವೇ ಆಹಾರಕ್ರಮ(Foodstyle) ಬದಲಾಯಿಸಬೇಡಿ
ಅನೇಕ ಬಾರಿ ಜನರು ಉತ್ಸಾಹದಿಂದ ತಮ್ಮ ಡಯಟ್ ಸಂಪೂರ್ಣವಾಗಿ ಬದಲಾಯಿಸುತ್ತಾರೆ. ಮೊದಮೊದಲು ಅದನ್ನು ಮಾಡೋದು ತುಂಬಾ ಸಂತೋಷಕರವೆನಿಸುತ್ತೆ. ಆದರೆ ಆಹಾರ ಕ್ರಮ ಸಂಪೂರ್ಣವಾಗಿ ಬದಲಾದಾಗ, ಅದನ್ನು ಅನುಸರಿಸೋದು ತುಂಬಾ ಕಷ್ಟ. ನಾವೆಲ್ಲರೂ ಕೆಲವು ಆಹಾರ ಪದ್ಧತಿಗಳನ್ನು ಮೊದಲಿನಿಂದ ಹೊಂದಿದ್ದೇವೆ. ಈ ಅಭ್ಯಾಸಗಳನ್ನು ಒಂದು ದಿನದಲ್ಲಿ ಬದಲಾಯಿಸಲು ಸಾಧ್ಯವಿಲ್ಲ. ಹಾಗೆ ಮಾಡೋದರಿಂದ, ಡಯಟ್ನಲ್ಲಿ ಉಳಿಯೋದು ತುಂಬಾ ಕಷ್ಟ.
ಡಯಟ್ ಮೋಡಿಫೈ(Modify) ಮಾಡಲು ಪ್ರಯತ್ನಿಸಿ
ಇದು ಸುಲಭವಾದ ಹ್ಯಾಕ್, ಡಯಟ್‌ನಲ್ಲಿ ಉಳಿಯಲು ಇದು ಸಹಾಯ ಮಾಡುತ್ತೆ. ಡಯಟ್ ಅನುಸರಿಸಲು ಬಯಸೋದಾದ್ರೆ, ಈಗಿನ ಡಯಟ್ ಬದಲಾಯಿಸೋದು ಉತ್ತಮ ಮಾರ್ಗವಾಗಿದೆ. ಆಹಾರವನ್ನು ಮೋಡಿಫೈ ಮಾಡೋದ್ರಿಂದ ದೀರ್ಘಕಾಲದವರೆಗೆ ಅದೇ ಡಯಟ್ನಲ್ಲಿ ಉಳಿಯೋದು ಸುಲಭವಾಗುತ್ತೆ.
ಅಂತಹ ಆಹಾರ ಅನುಸರಿಸೋದ್ರಿಂದ, ತಲೆನೋವು(Head ache), ಆತಂಕ, ಚಡಪಡಿಕೆ ಅಥವಾ ಇತರ ಸಮಸ್ಯೆಗಳು ಉಂಟಾಗೋದಿಲ್ಲ. ಉದಾಹರಣೆಗೆ, ಬೆಳಗಿನ ತಿಂಡಿಗೆ ಬಿಸ್ಕೆಟ್ ಮತ್ತು ಕುರುಕಲು ತಿನ್ನುವ ಅಭ್ಯಾಸ ಹೊಂದಿದ್ದರೆ, ಮಾರುಕಟ್ಟೆಯಲ್ಲಿ ಸಿಗೋ ಕುರುಕಲು ಬದಲಿಗೆ ಮನೆಯಲ್ಲಿ ಅವಲಕ್ಕಿ, ಕಡಲೆಕಾಯಿ ಮತ್ತು ಬೀಜಗಳ ಸಹಾಯದಿಂದ ಕುರುಕಲು ತಯಾರಿಸಬೇಕು.
ಆಹಾರ ತಜ್ಞರ(Food expert) ಸಹಾಯ ಪಡೆಯಿರಿ
ಇದು ಒಂದು ಸುಲಭ ಮಾರ್ಗ. ಇದು ಸರಿಯಾದ ಡಯಟ್ ಫಾಲೋ ಮಾಡಲು ಸಹಾಯ ಮಾಡುತ್ತೆ. ನೀವೇ ನಿಮ್ಮದೇ ಡಯಟ್ ಅನುಸರಿಸುವ ಮೊದಲು, ಒಮ್ಮೆ ಆಹಾರ ತಜ್ಞರ ಸಹಾಯ ತೆಗೆದುಕೊಳ್ಳಬೇಕು. ಆಹಾರ ತಜ್ಞರು ನಿಮ್ಮ ಸಮಸ್ಯೆಯನ್ನು ಅರ್ಥಮಾಡಿಕೊಳ್ತಾರೆ ಮತ್ತು ಉತ್ತಮ ಆಹಾರ ಸೂಚಿಸ್ತಾರೆ. ಇದಲ್ಲದೆ, ಡಯಟ್ ಗೆ ಸಂಬಂಧಿಸಿದ ಯಾವುದೇ ಡೌಟ್ಸ್ ನೀವು ಆಹಾರ ತಜ್ಞರೊಂದಿಗೆ ಚರ್ಚಿಸಬಹುದು.
ಆದ್ದರಿಂದ ನೀವು ಈ ಹ್ಯಾಕ್ಸ್ ಅಳವಡಿಸಿಕೊಂಡರೆ ನೀವು ಡಯಟ್ ನಲ್ಲಿ ಸುಲಭವಾಗಿ ಉಳಿಯುತ್ತೀರಿ ಮತ್ತು ನಿಮ್ಮನ್ನು ನೀವು ಹೆಚ್ಚು ಆರೋಗ್ಯಕರವಾಗಿಸಿಕೊಳ್ಳುತ್ತೀರ.