ವಯಸ್ಸು 30 + ಅದ್ಮೇಲೆ ಆರೋಗ್ಯವಾಗಿರಬೇಕಾದ್ರೆ ತಿನ್ನಲೇಬೇಕಾದ ಪ್ರಮುಖ ಆಹಾರಗಳು
Healthy lifestyle after 30: ಮೂವತ್ತು ವರ್ಷ ದಾಟಿದ ನಂತರ ದೇಹಕ್ಕೆ ಬೇಕಾಗುವ ಪೋಷಕಾಂಶಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ಮೂಳೆಗಳ ಆರೋಗ್ಯ ಸೇರಿದಂತೆ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಮೂವತ್ತು ವರ್ಷ ದಾಟಿದ ಮೇಲೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಈ ವಯಸ್ಸಿನಲ್ಲಿ ದೇಹದಲ್ಲಿ ಹಲವು ಸಮಸ್ಯೆಗಳು (ದೈಹಿಕ ಸಮಸ್ಯೆಗಳು) ಬರಬಹುದು, ಎಚ್ಚರಿಕೆಯಿಂದ ಇರದಿದ್ದರೆ. ವಯಸ್ಸಿಗೆ ತಕ್ಕಂತೆ ದೇಹಕ್ಕೆ ಪೋಷಕಾಂಶಗಳ ಅವಶ್ಯಕತೆ ಇರುತ್ತದೆ. ಯಾವ ವಯಸ್ಸಿನಲ್ಲಿ ಯಾವ ರೀತಿಯ ಪೋಷಕಾಂಶಗಳ ಅವಶ್ಯಕತೆ ಇರುತ್ತದೆ ಎಂದು ತಿಳಿದುಕೊಳ್ಳುವುದು ಮುಖ್ಯ.
ಕೆಲವರಿಗೆ ಒಂದೇ ರೀತಿಯ ಆಹಾರ ಪದ್ಧತಿಯನ್ನು ಜೀವನಪರ್ಯಂತ ಅನುಸರಿಸಬಹುದು ಎಂಬ ಭಾವನೆ ಇರುತ್ತದೆ. ಇನ್ನು ಕೆಲವರು ಎಲ್ಲಾ ವಯಸ್ಸಿನಲ್ಲೂ ಒಂದೇ ರೀತಿಯ ಆಹಾರ ಸೇವಿಸಬೇಕು ಎಂದು ಭಾವಿಸುತ್ತಾರೆ. ಈ ಭಾವನೆಗಳು ತಪ್ಪು. ವಯಸ್ಸು, ಲಿಂಗ ಮತ್ತು ದೈಹಿಕ ಸಮಸ್ಯೆಗಳನ್ನು ಅನುಸರಿಸಿ ಪ್ರತಿಯೊಬ್ಬರಿಗೂ ಬೇರೆ ಬೇರೆ ರೀತಿಯ ಆಹಾರ ಸೂಕ್ತ.
30 ವರ್ಷ ದಾಟಿದ ಮೇಲೆ ಕೆಲವು ಆಹಾರಗಳನ್ನು ಸೇವಿಸುವುದು ಅಗತ್ಯ. ಈ ವಯಸ್ಸಿನಲ್ಲಿ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತವೆ. ಆದ್ದರಿಂದ ಈ ಹಂತದಲ್ಲಿ ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸುವುದು ಮುಖ್ಯ. ವಿಶೇಷವಾಗಿ ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚು ಜಾಗರೂಕರಾಗಿರಬೇಕು. ಪ್ರೋಟೀನ್ ಯುಕ್ತ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು.
ಮೊಟ್ಟೆ, ಚಿಕನ್, ದ್ವಿದಳ ಧಾನ್ಯಗಳು, ಬಾದಾಮಿ, ಧಾನ್ಯಗಳು ಪ್ರೋಟೀನ್‌ನ ಉತ್ತಮ ಮೂಲಗಳು. ಇದಲ್ಲದೆ ಕೊಬ್ಬು ರಹಿತ ಹಾಲು ಮತ್ತು ಮೊಸರನ್ನು ನಿಯಮಿತವಾಗಿ ಸೇವಿಸಬೇಕು. ಅಗತ್ಯವಿದ್ದರೆ ವೈದ್ಯರ ಸಲಹೆಯ ಮೇರೆಗೆ ಆಹಾರ ಪೂರಕಗಳನ್ನು ಸೇವಿಸಬಹುದು.
ಸಿಟ್ರೆಸ್ ಹಣ್ಣುಗಳು: ನಿಂಬೆಹಣ್ಣು, ಕಿತ್ತಳೆ ಅಥವಾ ಸಿಟ್ರಸ್ ಜಾತಿಯ ಯಾವುದೇ ಹಣ್ಣು ಈ ಸಮಯದಲ್ಲಿ ನಿಮಗೆ ಶಕ್ತಿಯನ್ನು ನೀಡುತ್ತದೆ. ತೂಕವನ್ನು ನಿಯಂತ್ರಣದಲ್ಲಿಟ್ಟುಕೊಂಡು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ನಿಂಬೆಹಣ್ಣಿನಲ್ಲಿ ಹಲವು ಉಪಯೋಗಗಳಿವೆ.
ಬ್ರೊಕೊಲಿ - ವಿಟಮಿನ್, ಖನಿಜಗಳು, ಉತ್ಕರ್ಷಣ ನಿರೋಧಕಗಳು ಮತ್ತು ನಾರಿನಿಂದ ಸಮೃದ್ಧವಾಗಿರುವ ತರಕಾರಿ ಬ್ರೊಕೊಲಿ. ಒಂದು ಕಪ್ ಅಥವಾ 90 ಗ್ರಾಂ ಹಸಿ ಬ್ರೊಕೊಲಿಯಲ್ಲಿ 6 ಗ್ರಾಂ ಕಾರ್ಬೋಹೈಡ್ರೇಟ್‌ಗಳು, 2.6 ಗ್ರಾಂ ಪ್ರೋಟೀನ್, 0.3 ಗ್ರಾಂ ಕೊಬ್ಬು, 2.4 ಗ್ರಾಂ ನಾರು ಇರುತ್ತದೆ. ಇದಲ್ಲದೆ ವಿಟಮಿನ್-ಸಿ, ವಿಟಮಿನ್-ಎ, ವಿಟಮಿನ್-ಕೆ, ವಿಟಮಿನ್-ಬಿ-9 ಅಥವಾ ಫೋಲೇಟ್, ಪೊಟ್ಯಾಸಿಯಮ್, ರಂಜಕ, ಸೆಲೆನಿಯಮ್ ಇರುತ್ತದೆ.
ಬೆಳ್ಳುಳ್ಳಿ, ಮೀನು, ಬಾದಾಮಿ, ಜೇನುತಪ್ಪ ಮತ್ತು ಚಿಯಾ ಬೀಜಗಳನ್ನು ನಿಯಮಿತವಾಗಿ ಸೇವಿಸೋದನ್ನು ಆರಂಭಿಸಬೇಕು. ಇವುಗಳಲ್ಲಿ ವಿಟಮಿನ್‌ಗಳು, ಉತ್ಕರ್ಷಣ ನಿರೋಧಕಗಳು, ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳಿರುತ್ತವೆ. ಆರೋಗ್ಯವಂತ ವ್ಯಕ್ತಿ ದಿನಕ್ಕೆ ಎರಡು ಟೀ ಸ್ಪೂನ್ ಜೇನುತುಪ್ಪ ಸೇವಿಸಬಹುದಾಗಿದೆ. ಬಾದಾಮಿ ರೋಗ ನಿರೋಧಕ್ಕೆ ಶಕ್ತಿ ಹೆಚ್ಚಿಸುತ್ತದೆ.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.