ಅಫೀಸಲ್ಲಿ ಗಂಟೆಗಟ್ಟಲೆ ಕುಳಿತು ಕೆಲಸ ಮಾಡೋರಿಗೆ ಈ ಗಂಭೀರ ಸಮಸ್ಯೆ ಗ್ಯಾರಂಟಿ
ಇತ್ತೀಚಿನ ದಿನಗಳಲ್ಲಿ ಯೂರಿನ್ ಇನ್ಫೆಕ್ಷನ್ ಅನೇಕ ಜನರಲ್ಲಿ ಕಂಡುಬರುತ್ತಿದೆ, ಎಲ್ಲೋ ಇದರ ಹಿಂದಿನ ಕಾರಣ ಗಂಟೆ ಗಟ್ಟಲೆ ಕುಳಿತು ಮಾಡುವ ಡೆಸ್ಕ್ ಕೆಲಸವಾಗಿರಬಹುದು. ಇದನ್ನು ಹೇಗೆ ತಪ್ಪಿಸುವುದು ಅನ್ನೋದನ್ನು ತಿಳಿಯೋಣ.

ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಅನೇಕರು ಡೆಸ್ಕ್ ಕೆಲಸಗಳನ್ನು ಮಾಡುತ್ತಾರೆ, ಆದ್ದರಿಂದ ನಾವು ಗಂಟೆಗಟ್ಟಲೆ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುತ್ತೇವೆ. ಇದರಿಂದಾಗಿ, ಅನೇಕ ಗಂಭೀರ ಕಾಯಿಲೆಗಳ ಅಪಾಯವು ವೇಗವಾಗಿ ಹೆಚ್ಚುತ್ತಿದೆ. ನಾವು ಗಂಟೆಗಟ್ಟಲೆ ಕುರ್ಚಿಯ ಮೇಲೆ ಕುಳಿತಾಗ, ಮೂತ್ರಕೋಶದ ಮೇಲೆ ನಿರಂತರ ಒತ್ತಡ ಉಂಟಾಗಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಆಫೀಸ್ ನಲ್ಲಿ ಮೀಟಿಂಗ್ ಹಾಗೂ ಡೆಡ್ ಲೈನ್ ರೀಚ್ ಆಗಲು ಅನೇಕ ಜನರು ಮೂತ್ರ ವಿಸರ್ಜನೆಯನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಇದರೊಂದಿಗೆ, ಕಡಿಮೆ ನೀರು ಕುಡಿಯುವುದರಿಂದ ಬ್ಯಾಕ್ಟೀರಿಯಾಗಳು (bacteria) ಬೆಳೆಯಲು ಸರಿಯಾದ ವಾತಾವರಣ ಸೃಷ್ಟಿಯಾಗುತ್ತದೆ. ಡೆಸ್ಕ್ ಕೆಲಸ ಮಾಡುವ ಜನರಲ್ಲಿ ಯುಟಿಐ ಅಪಾಯ ವೇಗವಾಗಿ ಹೆಚ್ಚುತ್ತಿರುವುದಕ್ಕೆ ಇದೇ ಕಾರಣ. ಈ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದರೂ, ಈಗ ಕಾರ್ಪೊರೇಟ್ ಮತ್ತು ಐಟಿ ವಲಯದಲ್ಲಿ ಕೆಲಸ ಮಾಡುವ ಪುರುಷರು ಸಹ ಇದರಿಂದ ಪ್ರಭಾವಿತರಾಗುತ್ತಿದ್ದಾರೆ.
ಯಾವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು-
- ಮೂತ್ರ ವಿಸರ್ಜಿಸುವಾಗ ಉರಿ ಅಥವಾ ನೋವು
- ಆಗಾಗ್ಗೆ ಮೂತ್ರ ವಿಸರ್ಜನೆ
- ದಪ್ಪ, ವಾಸನೆ ಬರುವ ಮೂತ್ರ
- ಹೊಟ್ಟೆಯ ಕೆಳಭಾಗದಲ್ಲಿ ನೋವು ಅಥವಾ ಭಾರ
- ಜ್ವರ, ಶೀತ ಮತ್ತು ಆಯಾಸ
- ಪುರುಷರಲ್ಲಿ ನೋವಿನಿಂದ ಕೂಡಿದ ಸ್ಖಲನ
ಈ ಲಕ್ಷಣಗಳನ್ನು ಸಕಾಲದಲ್ಲಿ ಸರಿಪಡೀಸೋದು ತುಂಬಾನೆ ಮುಖ್ಯ. ಅದನ್ನು ನೀವು ಸರಿಪಡಿಸದಿದ್ದರೆ, ಸೋಂಕು ಪುರುಷರಲ್ಲಿ ಮೂತ್ರಪಿಂಡಗಳು ಅಥವಾ ಪ್ರಾಸ್ಟೇಟ್‌ಗೆ ಹರಡಬಹುದು. ಆದ್ದರಿಂದ, ಲಕ್ಷಣಗಳು 1-2 ದಿನಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ತಡೆಗಟ್ಟುವಿಕೆ ಹೇಗೆ?
- ಹೆಚ್ಚು ನೀರು ಕುಡಿಯಿರಿ
- ಮೂತ್ರ ಹಿಡಿದಿಟ್ಟುಕೊಳ್ಳಬೇಡಿ
- ಪ್ರತಿ ಅರ್ಧಗಂಟೆಗೊಮ್ಮೆ ಸ್ವಲ್ಪ ನಡೆಯಿರಿ
- ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ: ಶೌಚಾಲಯ ಬಳಸುವ ಮೊದಲು ಮತ್ತು ನಂತರ ಕೈಗಳನ್ನು ತೊಳೆಯಿರಿ. ಮಹಿಳೆಯರು ಯಾವಾಗಲೂ ಮುಂಭಾಗದಿಂದ ಹಿಂದಕ್ಕೆ ಸ್ವಚ್ಛಗೊಳಿಸಬೇಕು
- ಹತ್ತಿ ಬಟ್ಟೆಗಳನ್ನು ಧರಿಸಿ
- ಸಮತೋಲಿತ ಆಹಾರವನ್ನು ತೆಗೆದುಕೊಳ್ಳಿ
ಡೆಸ್ಕ್ ಜಾಬ್ ಇಂದಿನ ಜೀವನಶೈಲಿಯ (lifestyle)ಒಂದು ಭಾಗವಾಗಿದೆ, ಆದರೆ ಸಣ್ಣ ಪುಟ್ಟ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಯುಟಿಐನಿಂದ ನಿಮ್ಮನ್ನು ರಕ್ಷಿಸಬಹುದು. ಸಮಯಕ್ಕೆ ಸರಿಯಾಗಿ ನೀರು ಕುಡಿಯುವುದು, ದೇಹದ ಸಂಕೇತಗಳನ್ನು ನಿರ್ಲಕ್ಷಿಸದೆ ಮತ್ತು ಸ್ವಲ್ಪ ವಾಕ್ ಮಾಡುವುದರಿಂದ ನಿಮ್ಮ ಯೂರಿನರಿ ಆರೋಗ್ಯವನ್ನು ದೀರ್ಘಕಾಲದವರೆಗೆ ಸುರಕ್ಷಿತವಾಗಿರಿಸಿಕೊಳ್ಳಬಹುದು.