- Home
- Life
- Food
- ಸಾಂಬಾರ್ ಸಿಕ್ಕಾಪಟ್ಟೆ ಖಾರ ಆಯ್ತಾ?, ಇಷ್ಟು ಮಾಡಿದ್ರೆ ಕೆಲವೇ ನಿಮಿಷದಲ್ಲಿ ಖಾರನೂ ಮಾಯ, ರುಚಿಯೂ ಹೆಚ್ಚು
ಸಾಂಬಾರ್ ಸಿಕ್ಕಾಪಟ್ಟೆ ಖಾರ ಆಯ್ತಾ?, ಇಷ್ಟು ಮಾಡಿದ್ರೆ ಕೆಲವೇ ನಿಮಿಷದಲ್ಲಿ ಖಾರನೂ ಮಾಯ, ರುಚಿಯೂ ಹೆಚ್ಚು
Spicy Food Rescue: ಇನ್ಮುಂದೆ ನಿಮ್ಮ ಅಡುಗೆಯಲ್ಲಿ ಒಂದು ವೇಳೆ ಖಾರ ಹೆಚ್ಚಾದರೆ ನೀವೂ ಈ ಟ್ರಿಕ್ಸ್ ಉಪಯೋಗಿಸಿಕೊಂಡು ಖಾರ ಕಡಿಮೆ ಮಾಡುವುದಲ್ಲದೆ, ಆಹಾರದ ರುಚಿಯನ್ನೂ ಹೆಚ್ಚಿಸಬಹುದು.

ಈ ಟ್ರಿಕ್ಸ್ ಉಪಯೋಗಿಸಿ
ಸಾಂಬಾರ್, ಗ್ರೇವಿ, ರಸಂ ಹೀಗೆ ಯಾವುದೇ ಇರಲಿ ಕೆಲವೊಮ್ಮೆ ತುಂಬಾ ಹುಳಿ, ಮತ್ತೆ ಕೆಲವೊಮ್ಮೆ ತುಂಬಾ ಖಾರ, ಉಪ್ಪಾಗುವುದು ಉಂಟು. ಹೀಗಾದಾಗ ಕೆಲವರು ಗಡಿಬಿಡಿಯಲ್ಲಿ ಚೆಲ್ಲುತ್ತಾರೆ. ಅನೇಕರು ಏನಾದರೂ ಟ್ರಿಕ್ಸ್ ಮಾಡಿ ಅದನ್ನ ಸರಿಪಡಿಸಲು ಪ್ರಯತ್ನಿಸುತ್ತಾರೆ. ಹಾಗಾಗಿ ಇಂದು ನಾವು ಈಗಷ್ಟೇ ಅಡುಗೆ ಕಲಿಯುತ್ತಿರುವ ಅಥವಾ ಅಡುಗೆಯಲ್ಲಿ ಖಾರ ಹೆಚ್ಚಾದಾಗ ಏನು ಮಾಡಬೇಕೆಂದು ಯೋಚಿಸುತ್ತಿರುವವರಿಗೆ ಕೆಲವು ಟಿಪ್ಸ್ ತಂದಿದ್ದೇವೆ. ಇನ್ಮುಂದೆ ನಿಮ್ಮ ಅಡುಗೆಯಲ್ಲಿ ಒಂದು ವೇಳೆ ಖಾರ ಹೆಚ್ಚಾದರೆ ನೀವೂ ಈ ಟ್ರಿಕ್ಸ್ ಉಪಯೋಗಿಸಿಕೊಂಡು ಖಾರ ಕಡಿಮೆ ಮಾಡುವುದಲ್ಲದೆ, ಆಹಾರದ ರುಚಿಯನ್ನೂ ಹೆಚ್ಚಿಸಬಹುದು.
ಯಾವ್ದೆ ಆಗ್ಲಿ ಅತಿಯಾದ್ರೆ ಚೆನ್ನಾಗಿರಲ್ಲ
ಅನೇಕರು ಹುಳಿಯಾದ್ರೆ, ಉಪ್ಪಾದ್ರೆ ತಡೆದುಕೊಳ್ತಾರೆ. ಆದ್ರೆ ಖಾರ ಅತಿಯಾದ್ರೆ ಆಗಲ್ಲ. ಕಣ್ಣಲ್ಲಿ, ಬಾಯಲ್ಲಿ ನೀರು ಬಂದ್ಬಿಡುತ್ತೆ. ಅಷ್ಟೇ ಅಲ್ಲ, ಉಪ್ಪು, ಹುಳಿ, ಖಾರ ಈ ಮೂರರಲ್ಲಿ ಯಾವುದೂ ಹೆಚ್ಚಾದರೂ ಅಡುಗೆ ರುಚಿ ಬರಲ್ಲ. ಒಂದು ವೇಳೆ ನೀವು ಈ ಸಮಸ್ಯೆಯನ್ನು ಎದುರಿಸಿದ್ದರೆ ಚಿಂತಿಸುವ ಅಗತ್ಯವಿಲ್ಲ. ಕೆಲವು ಸರಳ ವಿಧಾನಗಳು ಖಾರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾದರೆ ಬನ್ನಿ, ಇಂಟ್ರೆಸ್ಟಿಂಗ್ ಕಿಚನ್ ಟಿಪ್ಸ್ ನೋಡೋಣ.
ಹುರಿದ ಕಡಲೆ ಹಿಟ್ಟು
ನೀವು ಡ್ರೈ ಮಾಡಿದಾಗ ಅದಕ್ಕೆ ಖಾರ ಹೆಚ್ಚಾದ್ರೆ ಆಗ ಖಾರ ಕಡಿಮೆ ಮಾಡಲು ನೀವು ಸ್ವಲ್ಪ ಹುರಿದ ಕಡಲೆ ಹಿಟ್ಟನ್ನು ಸೇರಿಸಬಹುದು. ನಿಮ್ಮಲ್ಲಿ ಹುರಿದ ಕಡಲೆ ಹಿಟ್ಟು ಇಲ್ಲದಿದ್ದರೆ, ಒಂದು ತುಂಡು ಯಾವುದೇ ಹಿಟ್ಟಿನ ಉಂಡೆ ಸೇರಿಸುವುದರಿಂದಲೂ ಖಾರವೂ ಕಡಿಮೆಯಾಗುತ್ತದೆ. ಹೌದು, ಕಡಲೆ ಹಿಟ್ಟು ಅಥವಾ ಹಿಟ್ಟಿನ ಉಂಡೆ ಖಾರವನ್ನು ಹೀರಿಕೊಳ್ಳುವಲ್ಲಿ ಪರಿಣಾಮಕಾರಿಯಾಗಿದೆ.
ಮೊಸರು ಪ್ರಯೋಜನಕಾರಿ
ಖಾರವನ್ನು ಕಡಿಮೆ ಮಾಡಲು ಮೊಸರನ್ನು ಬಳಸಬಹುದು ಎಂದು ನಿಮಗೆ ತಿಳಿದಿದೆಯೇ?. ಹೌದು. ನೀವು ದಪ್ಪನೆಯ ಗ್ರೇವಿ, ಕರಿ, ಸಾಂಬಾರ್ ಮಾಡಿದ್ದರೆ ಅದರ ಖಾರವನ್ನು ಕಡಿಮೆ ಮಾಡಲು ನೀವು ಮೊಸರು, ಫ್ರೆಶ್ ಕ್ರೀಮ್ ಅನ್ನು ಬಳಸಬಹುದು. ಈ ಪದಾರ್ಥಗಳಲ್ಲಿ ಯಾವುದಾದರೂ ಒಂದನ್ನು ಹಾಕಿ ಬೆರೆಸಿದರೆ ಅದ್ಭುತ ರಿಸಲ್ಟ್ ನೋಡಬಹುದು.
ತೆಂಗಿನ ಹಾಲು ಅಥವಾ ಗೋಡಂಬಿ ಪೇಸ್ಟ್ ಬಳಕೆ
ಸಾಂಬಾರ್‌ಗೆ ತೆಂಗಿನ ಹಾಲು ಅಥವಾ ಗೋಡಂಬಿ ಪೇಸ್ಟ್ ಸೇರಿಸುವುದರಿಂದಲೂ ಖಾರ ಕಡಿಮೆಯಾಗುತ್ತದೆ. ಈ ಟೆಕ್ನಿಕ್ ಖಾರವನ್ನು ಕಡಿಮೆ ಮಾಡುವುದಲ್ಲದೆ, ಅದರ ವಿನ್ಯಾಸವನ್ನು ಸುಧಾರಿಸುತ್ತದೆ.
ಬೇಯಿಸಿದ ಆಲೂಗಡ್ಡೆ
ಬೇಯಿಸಿದ ಆಲೂಗಡ್ಡೆಯನ್ನು ಮ್ಯಾಶ್ ಮಾಡಿ ಸೇರಿಸುವುದರಿಂದಲೂ ಖಾರವನ್ನು ಹೀರಿಕೊಳ್ಳುವಲ್ಲಿ ಪರಿಣಾಮಕಾರಿ ಎಂದು ನೋಡಬಹುದು.