ಉಭಯಚಾರಿ ಯೋಗ-ಸೂರ್ಯ ಗೋಚರದಿಂದಾಗಿ 5 ರಾಶಿಯವರ ಜೀವನದಲ್ಲಿ ಅದೃಷ್ಟದ ಮಿಂಚು
ಉಭಯಚಾರಿ ಯೋಗ-ಸೂರ್ಯ ಗೋಚರ: ಸೂರ್ಯನು ಕನ್ಯಾ ರಾಶಿಯನ್ನು ಪ್ರವೇಶಿಸುವುದರಿಂದ ಉಭಯಚಾರಿ, ಬುಧಾದಿತ್ಯ ಸೇರಿದಂತೆ ಹಲವು ಶುಭ ಯೋಗಗಳು ರೂಪುಗೊಳ್ಳಲಿವೆ. ಈ ಯೋಗಗಳ ಪ್ರಭಾವದಿಂದಾಗಿ ರಾಶಿಯವರ ಜೀವನದಲ್ಲಿ ಅದೃಷ್ಟ ಖುಲಾಯಿಸಲಿದ್ದು, ಆರ್ಥಿಕವಾಗಿ ಪ್ರಗತಿ ಕಾಣಲಿದ್ದಾರೆ.

ಉಭಯಚಾರಿ ಯೋಗ-ಸೂರ್ಯ ಗೋಚರ
ಅಶ್ವಿನಿ ಮಾಸದ ಕೃಷ್ಣ ಪಕ್ಷದ ಏಕಾದಶಿ ತಿಥಿಯಯಂದು ಉಭಯಚಾರಿ ಯೋಗ-ಸೂರ್ಯ ಗೋಚರದಿಂದಾಗಿ ಐದು ರಾಶಿಯವರ ಜೀವನದಲ್ಲಿ ಅದೃಷ್ಟದ ಮಿಂಚು ಸುಳಿಯಲಿದೆ. ಇದರಿಂದಾಗಿ ಐದು ರಾಶಿಯವರು ಜೀವನದಲ್ಲಿ ಆರ್ಥಿಕ ಸುಧಾರಣೆಯ ಲಕ್ಷಣಗಳು ಕಂಡು ಬರಲಿವೆ. ಸೆಪ್ಟೆಂಬರ್ 17ರಂದು ಚಂದ್ರನು ಗೌರಿ ಮತ್ತು ದುರುಧರ ಯೋಗ ರೂಪಿಸಲಿದ್ದಾನೆ. ಸೂರ್ಯ ಬುಧನೊಂದಿಗೆ ಸೇರಿ ಬುಧಾದಿತ್ಯ ಯೋಗ ರಚಿಸಲಿದ್ದಾನೆ. ನಾಳೆ ಸೂರ್ಯನು ಕನ್ಯಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದ ಉಭಯಚಾರಿ ಯೋಗ ರೂಪಗೊಳ್ಳಲಿದೆ.
ಬುಧಾದಿತ್ಯ ಯೋಗ, ಉಭಯಚಾರಿ ಯೋಗ, ಗೌರಿ ಮತ್ತು ದುರುಧರ ಯೋಗ
ಬುಧಾದಿತ್ಯ ಯೋಗ, ಉಭಯಚಾರಿ ಯೋಗ, ಗೌರಿ ಮತ್ತು ದುರುಧರ ಯೋಗದಿಂದ ಐದು ರಾಶಿಗಳಿಗೆ ವಿಷ್ಣುವಿನ ಕೃಪೆ ಸಿಗಲಿದೆ. ವಿಷ್ಣುವಿನ ಕೃಪೆಯಿಂದ ಜೀವನದಲ್ಲಿ ಹೊಸ ಬದಲಾವಣೆಗಳು ಕಂಡುಬರಲಿವೆ. ಕೆಲವೊಂದು ವಿಷಯಗಳಲ್ಲಿ ನಿಮ್ಮನ್ನು ಅದೃಷ್ಟವಂತರನ್ನಾಗಿ ಮಾಡುತ್ತದೆ. ಬುಧವಾರದಿಂದ ಎಲ್ಲಾ ರಾಶಿಗಳ ಜೀವನದಲ್ಲಿ ಹೊಸ ಉತ್ಸಾಹವನ್ನು ತಂದುಕೊಡಲಿದೆ. ಆ ಐದು ರಾಶಿಗಳು ಯಾವವು ಎಂದು ನೋಡೋಣ ಬನ್ನಿ.
ವೃಷಭ ರಾಶಿ
ವೃಷಭ ರಾಶಿಯವರಿಗೆ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಒಳ್ಳೆಯ ಸಮಯವಾಗಿದೆ. ಸ್ನೇಹಿತರ ಬೆಂಬಲ ಲಭ್ಯವಾಗಲಿದ್ದು, ಹಳೆಯ ವ್ಯವಹಾರಿಕ ಸಂಬಂಧದಲ್ಲಿ ಹೊಸತನ ಬೆಳಕು ಮೂಡಲಿದೆ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳು ಇತ್ಯರ್ಥವಾಗಲಿವೆ. ಐಷಾರಾಮಿ ಜೀವನ ಆನಂದಿಸುವ ಶುಭ ಗಳಿಗೆ ಆರಂಭವಾಗಲಿದೆ. ಈ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳಿಂದ ಲಾಭದಾಯಕ ಮಾರ್ಗದರ್ಶನ ಸಿಗಲಿದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಆರ್ಥಿಕ ವಿಷಯಗಳಲ್ಲಿ ಸಕಾರಾತ್ಮಕ ಸ್ಪಂದನೆ ಸಿಗಲಿದೆ. ಸಮಾಜದಲ್ಲಿ ನಿಮ್ಮ ಪ್ರಭಾವ ಮತ್ತು ಗೌರವ ಹೆಚ್ಚಾಗಲಿದೆ. ಅರ್ಧಕ್ಕೆ ನಿಂತ ಕೆಲಸಗಳು ಪೂರ್ಣಗೊಳ್ಳುತ್ತವೆ. ಪ್ರೀತಿ ಮತ್ತು ಪರಸ್ಪರ ಸಾಮರಸ್ಯದಿಂದಾಗಿ ನಿಮ್ಮ ವೈವಾಹಿಕ ಜೀವನವೂ ಆನಂದಮಯವಾಗಿರುತ್ತದೆ. ಕುಟುಂಬದ ಹಿರಿಯರ ಬೆಂಬಲದಿಂದ ನಿಮ್ಮ ಮಾನಸಿಕ ಸ್ಥೈರ್ಯ ಹೆಚ್ಚುತ್ತದೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ತೆಗೆದುಕೊಳ್ಳುವ ನಿರ್ಧಾರಗಳು ಆರ್ಥಿಕ ಲಾಭವನ್ನುಂಟು ಮಾಡುತ್ತವೆ. ಕೆಲಸದಲ್ಲಿ ಯಶಸ್ಸು, ಸ್ನೇಹಿತರ/ಸಂಬಂಧಿಕರ ಸಹಾಯ ಸಿಗುತ್ತದೆ. ಈ ಯೋಗಗಳಿಂದ ವೃತ್ತಿ ಜೀವನದಲ್ಲಿ ಉನ್ನತ ಸ್ಥಾನ ಅಥವಾ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ನಿಮ್ಮ ಕೆಲಸಗಳಲ್ಲಿ ಸಂಗಾತಿಯಿಂದ ಬೆಂಬಲ ಮತ್ತು ಪ್ರೀತಿ ಸಿಗಲಿದೆ. ದೊಡ್ಡ ಸಮಸ್ಯೆಯೊಂದು ಪರಿಹಾರವಾಗಿ ನೆಮ್ಮದಿಯ ನಿದ್ದೆ ಮಾಡುತ್ತೀರಿ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಯಶಸ್ಸು ಸಿಗುತ್ತದೆ. ಲಾಭದಾಯಕ ಅವಕಾಶಗಳು ನಿಮ್ಮದಾಗುತ್ತವೆ. ನಾಳೆ ಕನ್ಯಾ ರಾಶಿಯವರ ಅದೃಷ್ಟದ ಬೆಂಬಲ ಸಿಗುತ್ತದೆ. ಖಾಸಗಿ ಮತ್ತು ವೃತ್ತಿ ಬದುಕಿನಲ್ಲಿ ಸಂತೋಷ ನೆಲೆಸುತ್ತದೆ. ಚಿಂತೆಗಳು ದೂರವಾಗಿ ಬದುಕು ಸಂತಸ ಕಾಣುತ್ತದೆ
ಇದನ್ನೂ ಓದಿ: ಗಜಕೇಸರಿ ಯೋಗ, ಸಂಪತ್ತು ವೃದ್ಧಿ, ವೃತ್ತಿಯಲ್ಲಿ ಲಾಭ, ಶ್ರೀಮಂತಿಕೆ
ಮಕರ ರಾಶಿ
ಮಕರ ರಾಶಿಯ ವ್ಯಾಪಾರಿಗಳಿಗೆ ತಮ್ಮ ಪಾಲುದಾರರಿಂದ ಹೆಚ್ಚಿನ ಬೆಂಬಲವನ್ನು ಪಡೆದುಕೊಳ್ಳುತ್ತಾರೆ. ಹಿಂದಿರುಗಿ ಬರದ ಹಣ ಮತ್ತೆ ನಿಮ್ಮ ಜೇಬು ಸೇರುತ್ತದೆ. ಯಾವುದೇ ಹೊಸ ವ್ಯವಹಾರ ಆರಂಭಿಸಿದ್ರೆ, ಅದು ಲಾಭದತ್ತ ಮುಖ ಮಾಡುವ ಗಳಿಗೆ ಆರಂಭವಾಗುತ್ತದೆ. ಅನಿರೀಕ್ಷಿತ ಹಣಕಾಸಿನ ಆಗಮನದಿಂದ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ. ಸರ್ಕಾರಿ ಕೆಲಸಗಳು ಪೂರ್ಣವಾಗುತ್ತವೆ.
ಇದನ್ನೂ ಓದಿ: ಜಗತ್ತಿನಲ್ಲಿ ಅಲ್ಲೋಲ-ಕಲ್ಲೋಲ ಆದ್ರೂ ಡೋಂಟ್ ಕೇರ್; ಈ ರಾಶಿಯವರಿಗೆ ನಿದ್ದೆಯೇ ಪಂಚಪ್ರಾಣ