ಈ 3 ತಿಂಗ್ಳಲ್ಲಿ ಜನಿಸಿದವರು ಪ್ರತೀಕಾರ ತೀರಿಸಿಕೊಳ್ಳದೆ ಬಿಡಲ್ಲ, ದ್ರೋಹ ಎಂದಿಗೂ ಮರೆಯಲ್ಲ
Revengeful Zodiac Signs: ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ಜನನದ ತಿಂಗಳು, ರಾಶಿಚಕ್ರವು ಅವರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದರಂತೆ, ಕೆಲವು ತಿಂಗಳುಗಳಲ್ಲಿ ಜನಿಸಿದ ಜನರು ಕ್ಷಮಿಸುವ ಗುಣವನ್ನು ಹೊಂದಿರುವುದಿಲ್ಲ. ಅನುಭವಿಸಿದ ನೋವಿಗೆ ಸೇಡು ತೀರಿಸಿಕೊಳ್ಳುತ್ತಾರೆ.

ಎಂದಿಗೂ ಮರೆಯುವುದಿಲ್ಲ
ಮನುಷ್ಯನಿಗೆ ಸಿಕ್ಕಿರುವ ಅತ್ಯಂತ ದೊಡ್ಡ ಗಿಫ್ಟ್ ಎಂದರೆ ಮರೆವು. ಏಕೆಂದರೆ ಕೆಟ್ಟ ನೆನಪುಗಳು ನೋವಿಗಿಂತಲೂ ಕೆಟ್ಟದ್ದು. ಹಾಗಂತ ಮನಸ್ಸಿನಲ್ಲಿ ದೀರ್ಘಕಾಲ ಹಳೆಯ ದ್ವೇಷವನ್ನು ಇಟ್ಟುಕೊಳ್ಳುವುದು ಒಳ್ಳೆಯದಲ್ಲ. ಏಕೆಂದರೆ ಅದು ಸಹ ಕೊನೆಯಲ್ಲಿ ನಮಗೆ ನೋವುಂಟು ಮಾಡುತ್ತದೆ. ಆದರೆ ಕೆಲವರು ಮಾತ್ರ ತಾವು ಅನುಭವಿಸಿದ ನೋವುಗಳು ಮತ್ತು ದ್ರೋಹವನ್ನ ಎಂದಿಗೂ ಮರೆಯುವುದಿಲ್ಲ ಅಥವಾ ಕ್ಷಮಿಸುವುದಿಲ್ಲವಂತೆ.
ಎಂದಿಗೂ ಕ್ಷಮಿಸುವುದಿಲ್ಲ
ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ಜನನದ ತಿಂಗಳು ಮತ್ತು ರಾಶಿಚಕ್ರವು ಅವರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದರಂತೆ, ಕೆಲವು ತಿಂಗಳುಗಳಲ್ಲಿ ಜನಿಸಿದ ಜನರು ಕ್ಷಮಿಸುವ ಗುಣವನ್ನು ಹೊಂದಿರುವುದಿಲ್ಲ. ಅವರು ಅನುಭವಿಸಿದ ನೋವಿಗೆ ಖಂಡಿತವಾಗಿಯೂ ಸೇಡು ತೀರಿಸಿಕೊಳ್ಳುತ್ತಾರೆ. ಎಂದಿಗೂ ಕ್ಷಮಿಸುವುದಿಲ್ಲ. ಅವರ ಈ ಸ್ವಭಾವ ಅವರಿಗೇ ಅಪಾಯಕಾರಿಯನ್ನಾಗಿ ಮಾಡುತ್ತದೆ. ಈ ಲೇಖನದಲ್ಲಿ ಅಂತಹವರು ಯಾವ ತಿಂಗಳಿನಲ್ಲಿ ಜನಿಸಿರುತ್ತಾರೆ ಎಂಬುದನ್ನು ನೀವು ಕಂಡುಹಿಡಿಯಬಹುದು.
ಜನವರಿ
ಜನವರಿಯಲ್ಲಿ ಜನಿಸಿದವರ ಹೃದಯದಲ್ಲಿ ಕ್ಷಮೆ ಎಂಬುದು ಒಂದು ಹನಿ ಕೂಡ ಇರುವುದಿಲ್ಲ. ತುಂಬಾ ಹಠಮಾರಿಗಳು ಮತ್ತು ಪವರ್‌ಫುಲ್ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಯಾರ ಮೇಲಾದರೂ ಕೋಪಗೊಂಡು ದೂರವಿಟ್ಟರೆ ಬಾಗಿಲು ಮುಚ್ಚಿದಂತೆಯೇ. ಅದು ಶಾಶ್ವತವಾಗಿ ಮುಚ್ಚಲ್ಪಡುತ್ತದೆ. ಎಂದಿಗೂ ಎರಡನೇ ಅವಕಾಶವನ್ನು ನೀಡುವುದಿಲ್ಲ. ಇತರರ ತಪ್ಪುಗಳನ್ನು ಮರೆಯುವುದಿಲ್ಲ ಅಥವಾ ಕ್ಷಮಿಸುವುದಿಲ್ಲ. ಸೇಡು ಹೇಗಿರುತ್ತದೆಯೆಂದರೆ ಅವರು ಕಾಯುತ್ತಾರೆ ಮತ್ತು ಸೇಡು ತೀರಿಸಿಕೊಳ್ಳಲು ಯೋಜಿಸುತ್ತಾರೆ. ಒಮ್ಮೆ ಅವರು ನಿಮ್ಮ ಮೇಲಿನ ನಂಬಿಕೆಯನ್ನು ಕಳೆದುಕೊಂಡರೆ, ಅದನ್ನು ಮರಳಿ ಪಡೆಯುವುದು ಅಸಾಧ್ಯ. ನಿಮ್ಮನ್ನು ರಕ್ಷಿಸಿಕೊಳ್ಳಲು ಅವರಿಗೆ ಮಾಡಿದ ದ್ರೋಹವನ್ನ ಎಂದಿಗೂ ಮರೆಯುವುದಿಲ್ಲ.
ಅಕ್ಟೋಬರ್
ಅಕ್ಟೋಬರ್‌ನಲ್ಲಿ ಜನಿಸಿದ ಜನರು ಉತ್ಕಟ ಭಾವದವರು. ಸೇಡು ತೀರಿಸಿಕೊಳ್ಳುವ, ಕ್ಷಮಿಸದ ಸ್ವಭಾವದವರಾಗಿರುತ್ತಾರೆ. ಸೇಡಿನಲ್ಲಿ ಹಾವಿಗೆ ಹೋಲಿಸಲಾಗುತ್ತದೆ. ಇವರು ಯಾರನ್ನೂ ಎಂದಿಗೂ ಕ್ಷಮಿಸುವುದಿಲ್ಲ. ವರ್ಷಗಳ ಕಾಲ ಅಸಮಾಧಾನವನ್ನು ಮನಸ್ಸಿನಲ್ಲಿಟ್ಟುಕೊಂಡು ಸೇಡು ತೀರಿಸಿಕೊಳ್ಳಲು ಯೋಜಿಸುತ್ತಾರೆ. ತುಂಬಾ ಭಾವನಾತ್ಮಕ ಮತ್ತು ನಿಷ್ಠಾವಂತರಾಗಿರುವುದರಿಂದ ವಿಶೇಷವಾಗಿ ಪ್ರೀತಿಸಿದವರು ದ್ರೋಹ ಮಾಡಿದ್ರೆ ಸಹಿಸುವುದಿಲ್ಲ. ಯಾರಾದರೂ ಅವರನ್ನು ಮೋಸಗೊಳಿಸಿದರೆ ಅಥವಾ ದ್ರೋಹ ಮಾಡಿದರೆ ಮುಂದೊಂದು ದಿನ ನೀವು ಎಷ್ಟೇ ಪ್ರೀತಿಸಿದರೂ, ಕ್ಷಮಿಸುವುದಿಲ್ಲ ಮತ್ತು ನಿರ್ದಯವಾಗಿ ಸೇಡು ತೀರಿಸಿಕೊಳ್ಳುತ್ತಾರೆ.
ಆಗಸ್ಟ್
ಆಗಸ್ಟ್‌ನಲ್ಲಿ ಜನಿಸಿದ ಜನರು ಅಷ್ಟೇ. ಕ್ಷಮಿಸದ, ನಿರ್ದಯ ಸ್ವಭಾವದವರಾಗಿರುತ್ತಾರೆ. ಅವರು ಸಾಮಾನ್ಯವಾಗಿ ಸ್ಫೋಟಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಮತ್ತು ಇತರರೊಂದಿಗೆ ಮಾತನಾಡಲು ಮತ್ತು ಅವರ ಕಾರಣಗಳನ್ನು ಕೇಳಲು ಎಂದಿಗೂ ಸಿದ್ಧರಿರುವುದಿಲ್ಲ. ಈ ಗುಣಲಕ್ಷಣಗಳಿಂದಾಗಿ ಅವರು ಹೆಚ್ಚಾಗಿ ಆಕ್ರಮಣಕಾರಿಗಳಾಗಿರುತ್ತಾರೆ. ಅವರ ಕ್ಷಮೆಯನ್ನು ಪಡೆಯುವ ಅವಕಾಶವನ್ನು ನೀವು ಬಯಸಿದರೆ ಅವರು ಶಾಂತವಾಗುವವರೆಗೆ ಕಾಯುವುದು ಮತ್ತು ಅಸಮಾಧಾನವು ಕಡಿಮೆಯಾಗುತ್ತದೆ ಎಂದು ಆಶಿಸುವುದು ಉತ್ತಮ. ಆದರೂ ಇದು ಅಸಾಧ್ಯ.