ಎರಡನೇ ಮದುವೆ ಯೋಗ ಈ ತಿಂಗಳಲ್ಲಿ ಹುಟ್ಟಿದ ಗಂಡಸರಿಗೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ನಿರ್ದಿಷ್ಟ ತಿಂಗಳುಗಳಲ್ಲಿ ಹುಟ್ಟಿದ ಗಂಡು ಮಕ್ಕಳ ಜಾತಕದಲ್ಲಿ ಎರಡನೇ ಮದುವೆ ಬರೆಯಲ್ಪಟ್ಟಿರುತ್ತದೆ. ಈ ತಿಂಗಳುಗಳು ಯಾವುವು ಎಂದು ನೋಡೋಣ...

ಮದುವೆ ಪ್ರತಿಯೊಬ್ಬರ ಜೀವನದಲ್ಲೂ ಮಹತ್ವದ ಘಟ್ಟ. ಒಂದು ವಯಸ್ಸಿಗೆ ಬಂದ ಮೇಲೆ ಎಲ್ಲರೂ ಮದುವೆ ಆಗ್ಬೇಕು ಅಂತ ಅಂದುಕೊಳ್ತಾರೆ. ಹೆಚ್ಚಿನವರ ಜೀವನದಲ್ಲಿ ಮದುವೆ ಒಂದೇ ಸಲ ಆಗುತ್ತೆ. ಆದ್ರೆ ಎಲ್ಲರಿಗೂ ಮದುವೆ ಸಕ್ಸಸ್ ಆಗಲ್ಲ. ಅಂಥವರು ವಿಚ್ಛೇದನ ಪಡೆದು ಎರಡನೇ ಮದುವೆ ಆಗೋ ನಿರ್ಧಾರ ತಗೋಬಹುದು. ಜ್ಯೋತಿಷ್ಯದ ಪ್ರಕಾರ ಕೆಲವು ತಿಂಗಳಲ್ಲಿ ಹುಟ್ಟಿದವ್ರ ಜಾತಕದಲ್ಲಿ ಎರಡನೇ ಮದುವೆ ಯೋಗ ಜಾಸ್ತಿ ಇರುತ್ತಂತೆ.
ಏಪ್ರಿಲ್‌ನಲ್ಲಿ ಹುಟ್ಟಿದವರು ಆಶಾವಾದಿಗಳು. ಈ ತಿಂಗಳಲ್ಲಿ ಹುಟ್ಟಿದ ಗಂಡುಮಕ್ಕಳು ಮದುವೆಯಲ್ಲಿ ಸುರಕ್ಷತೆ, ಸ್ಥಿರತೆಯನ್ನ ಬಯಸ್ತಾರೆ. ಮೊದಲ ಮದುವೆಯಲ್ಲಿ ಇವು ಸಿಗದಿದ್ದರೆ, ಅವರು ಎರಡನೇ ಮದುವೆ ಆಗುವ ಸಾಧ್ಯತೆ ಹೆಚ್ಚು. ತಮಗೆ ಬೇಕಾದ ವ್ಯಕ್ತಿ ಜೀವನದಲ್ಲಿ ಇರಬೇಕು ಅಂತ ಬಯಸ್ತಾರೆ. ಅದಕ್ಕೇ ಎರಡನೇ ಮದುವೆಗೂ ಹಿಂದೆ ಮುಂದೆ ನೋಡಲ್ಲ.
ಜೂನ್‌ನಲ್ಲಿ ಹುಟ್ಟಿದ ಗಂಡುಮಕ್ಕಳಿಗೂ ಎರಡನೇ ಮದುವೆ ಯೋಗ ಜಾಸ್ತಿ. ಈ ಹುಡುಗರು ಸ್ವಾಭಾವಿಕವಾಗಿಯೇ ಸ್ವಾತಂತ್ರ್ಯ, ಸ್ವಾಭಿಮಾನ ಬಯಸ್ತಾರೆ. ಮೊದಲ ಮದುವೆಯಲ್ಲಿ ಸ್ವಾತಂತ್ರ್ಯ ಕಡಿಮೆ ಅಂತ ಅನಿಸಿದ್ರೆ, ಆ ಸಂಬಂಧ ಬಿಟ್ಟು ಎರಡನೇ ಮದುವೆಗೆ ರೆಡಿ ಆಗ್ತಾರೆ. ತಮ್ಮ ಸ್ವಾತಂತ್ರ್ಯಕ್ಕೆ ಗೌರವ ಕೊಡೋ ವ್ಯಕ್ತಿಯನ್ನ ಮಾತ್ರ ಜೀವನಕ್ಕೆ ಆಹ್ವಾನಿಸ್ತಾರೆ.
ಆಗಸ್ಟ್‌ನಲ್ಲಿ ಹುಟ್ಟಿದವರು ವಿಶಾಲ ಹೃದಯಿಗಳು. ಎಲ್ಲರನ್ನೂ ಪ್ರೀತಿಯಿಂದ ನೋಡ್ಕೊಳ್ಬೇಕು ಅಂತ ಬಯಸ್ತಾರೆ. ಏನೇ ನಿರ್ಧಾರ ತಗೋಬೇಕು ಅಂದ್ರೆ ಎಲ್ಲರ ಸಲಹೆ ಕೇಳ್ತಾರೆ. ಆದ್ರೆ ತಮ್ಮ ನಿರ್ಧಾರಕ್ಕೆ ಯಾರಾದ್ರೂ ಅಡ್ಡಿಪಡಿಸಿದ್ರೆ ಇಷ್ಟಪಡಲ್ಲ. ಜೊತೆಗಿರೋರು ತಮ್ಮ ಆಲೋಚನೆಗಳಿಗೆ ಗೌರವ ಕೊಡದಿದ್ರೆ ದೂರ ಆಗ್ತಾರೆ. ಆಲೋಚನೆಗಳನ್ನ ಹಂಚಿಕೊಳ್ಳುವ ವ್ಯಕ್ತಿ ಜೊತೆ ಜೀವನ ನಡೆಸ್ಬೇಕು ಅಂತ ಬಯಸ್ತಾರೆ.
ನವೆಂಬರ್‌ನಲ್ಲಿ ಹುಟ್ಟಿದ ಗಂಡಸರು ಸಾಮರಸ್ಯ, ಸಮತೋಲನ ಬಯಸ್ತಾರೆ. ಮೊದಲ ಮದುವೆಯಲ್ಲಿ ಇವು ಸಿಗದಿದ್ರೆ, ಎರಡನೇ ಮದುವೆಯಲ್ಲಿ ಪಡೆಯೋಕೆ ಪ್ರಯತ್ನಿಸ್ತಾರೆ. ಆದ್ರೆ ಎರಡನೇ ಸಲ ಮದುವೆ ಆಗೋದ್ರಲ್ಲಿ ತುಂಬಾ ಜಾಗ್ರತೆ ವಹಿಸ್ತಾರೆ. ಜೊತೆಗಾರರನ್ನ ಆಯ್ಕೆ ಮಾಡಿಕೊಳ್ಳೋದ್ರಲ್ಲಿ ತರಾತುರಿ ಮಾಡಲ್ಲ.
ಡಿಸೆಂಬರ್‌ನಲ್ಲಿ ಹುಟ್ಟಿದ ಗಂಡಸರು ಭಾವುಕರು, ಉತ್ಸಾಹಿಗಳು. ಕೆಲಸದಲ್ಲಿ ಆಸಕ್ತಿ ಜಾಸ್ತಿ. ಮೊದಲ ಮದುವೆಯಲ್ಲಿ ಸಂತೋಷ ಸಿಗದಿದ್ರೆ, ಮತ್ತೆ ಮದುವೆ ಆಗಿ ಸಂತೋಷ ಹುಡುಕ್ತಾರೆ. ತಮ್ಮ ಇಷ್ಟಗಳಿಗೆ ತಕ್ಕ ಜೊತೆಗಾರರ ಜೊತೆ ಜೀವನ ನಡೆಸ್ಬೇಕು ಅಂತ ಅಂದುಕೊಳ್ತಾರೆ. ಇಷ್ಟ ಇಲ್ಲದವರ ಜೊತೆ ಜೀವನ ನಡೆಸಲ್ಲ.