ಕಾನ್ಫೆಡೆಂಟ್ ಆಗಿ ಸುಳ್ಳು ಹೇಳ್ತಾರೆ ಅಂದ್ರೆ ಈ ತಿಂಗಳಲ್ಲೇ ಹುಟ್ಟಿರುತ್ತಾರೆ
ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ಜನ್ಮ ತಿಂಗಳು ಅವರ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ. 4 ತಿಂಗಳುಗಳಲ್ಲಿ ಜನಿಸಿದವರು ಕೆಲವೊಮ್ಮೆ ಪರಿಸ್ಥಿತಿಗಳಿಗೆ ಅನುಗುಣವಾಗಿ ಸುಲಭವಾಗಿ ಸುಳ್ಳು ಹೇಳುವ ಪ್ರವೃತ್ತಿ ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ.

ಅತಿದೊಡ್ಡ ಸುಳ್ಳುಗಾರರು
ಕೆಲವರು ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳುತ್ತಿರುತ್ತಾರೆ. ಈ ರೀತಿ ನಿಮ್ಮ ಸುತ್ತಲೂ ಜನರಿದ್ರೆ ಅವರು ಇದೇ ತಿಂಗಳುಗಳಲ್ಲಿ ಹುಟ್ಟಿರುತ್ತಾರೆ ಎಂದು ತಿಳಿದುಕೊಳ್ಳಿ. ಈ ತಿಂಗಳುಗಳಲ್ಲಿ ಹುಟ್ಟಿರುವ ಕೆಲವರು ಅತಿದೊಡ್ಡ ಸುಳ್ಳುಗಾರರು ಆಗಿರುತ್ತಾರೆ ಎಂದು ಹೇಳಲಾಗುತ್ತದೆ.
ಸೂಕ್ಷ್ಮವಾಗಿರುವ ಸುಳ್ಳುಗಳು
ಜ್ಯೋತಿಷ್ಯದ ಪ್ರಕಾರ, ಜನ್ಮ ತಿಂಗಳು ಆ ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಸುತ್ತದೆ. ಕೆಲವು ತಿಂಗಳಲ್ಲಿ ಜನಿಸಿದವರು ತಮ್ಮ ಭಾವನೆಗಳು ಮರೆ ಮಾಡಿಕೊಳ್ಳದೇ ಫಿಲ್ಟರ್ ಮಾಡದೇ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಇನ್ನು ಕೆಲವರು ಬಾಯಿ ಬಿಟ್ಟರೇ ಸುಳ್ಳುಗಳನ್ನು ಹೇಳುತ್ತಾರೆ. ಕೆಲವು ತಿಂಗಳುಗಳಲ್ಲಿ ಜನಿಸಿದ ಜನರು ಹೇಳುವ ಸುಳ್ಳುಗಳು ತುಂಬಾ ಸೂಕ್ಷ್ಮವಾಗಿರುತ್ತವೆ. ಇವರು ಸುಳ್ಳು ಹೇಳುತ್ತಿರೋದನ್ನು ಪತ್ತೆ ಮಾಡೋದು ಅಷ್ಟು ಸುಲಭದ ಕೆಲಸವಲ್ಲ.
ಫೆಬ್ರವರಿ
ಈ ತಿಂಗಳಲ್ಲಿ ಜನಿಸಿದ ಜನರು ಕಲ್ಪನಾಶೀಲರು ಮತ್ತು ಕನಸುಗಾರರಾಗಿರುತ್ತಾರೆ. ಭಾವನಾತ್ಮಕ ಕಥೆಗಳನ್ನು ರಚಿಸುವ ಇವರು ಅದನ್ನು ಸತ್ಯ ಎಂಬಂತೆ ನಿರೂಪಣೆ ಮಾಡುತ್ತಾರೆ. ಫೆಬ್ರವರಿಯಲ್ಲಿ ಜನಿಸಿರುವ ಇವರು ನಂಬಲರ್ಹವಾದ ಸುಳ್ಳುಗಳನ್ನೇ ಹೇಳುತ್ತಾರೆ. ಇತರರಿಗೆ ನೋವುಂಟು ಮಾಡಲು ಬಯಸದ ಕಾರಣ ಆ ಸಮಯಕ್ಕೆ ಬೇಕಾದಂತಹ ಸುಳ್ಳುಗಳನ್ನು ಹೇಳುತ್ತಾರೆ. ಕೆಲವು ಅಪಾಯದ ಸಂದರ್ಭಗಳಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಸುಳ್ಳು ಹೇಳುತ್ತಾರೆ.
ಮೇ
ಮೇನಲ್ಲಿ ಜನಿಸಿದವರು ಬುದ್ಧಿವಂತರಾಗಿದ್ದು, ಎಂತಹ ಪರಿಸ್ಥಿತಿಯಿದ್ದರೂ ಜಾಣ್ಮೆಯಿಂದ ನಿಭಾಯಿಸುತ್ತಾರೆ. ತುಂಬಾ ಕುಶಲತೆಯಿಂದ ಪ್ರತಿಯೊಂದು ಅಪಾಯದ ಸಂದರ್ಭಗಳನ್ನು ನಿರ್ವಹಿಸುತ್ತಾರೆ. ಇವರು ಭೇಟಿಯಾಗುವ ಜನರನ್ನು ನೋಡಿ ಸುಳ್ಳುಗಳನ್ನು ಹೇಳುತ್ತಾರೆ. ಪರಿಸ್ಥಿತಿಗೆ ತಕ್ಕಂತೆ ತಮ್ಮ ಮಾತುಗಳನ್ನು ಬದಲಾಯಿಸುವಲ್ಲಿ ಇವರು ನಿಪುಣರಾಗಿರುತ್ತಾರೆ. ಮೊದಲು ಒಂದು ವಿಷಯವನ್ನು ಹೇಳಿ ಮತ್ತೆ ಅದನ್ನು ಜಾಣತನದಿಂದ ಬದಲಾಯಿಸುತ್ತಾರೆ.
ಇದನ್ನೂ ಓದಿ: ಮಂಗಳನ ರಾಶಿಗೆ ಬುಧನ ಪ್ರವೇಶ! ದೀಪಾವಳಿ ನಂತರ 3 ರಾಶಿಗಳಿಗೆ ಅದೃಷ್ಟ ಖಚಿತ!
ಅಕ್ಟೋಬರ್
ಈ ತಿಂಗಳಲ್ಲಿ ಜನಿಸಿದವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿದ್ದು, ತಮ್ಮ ಸದಭಿರುಚಿಯ ಮಾತುಗಳಿಂದಲೇ ಜನರನ್ನು ಸೆಳೆಯುತ್ತಾರೆ. ಸತ್ಯವನ್ನು ಮರೆಮಾಡಲು ಅಥವಾ ಅಪಾಯಗಳಿಂದ ಪಾರಾಗಲು ಅಥವಾ ಇತರರಿಗಿಂತ ತಾವು ಶ್ರೇಷ್ಠ ಎಂದು ಬಿಂಬಿಸಿಕೊಳ್ಳಲು ಕೇಳುಗರಿಗೆ ಹಿತವಾದ ಸುಳ್ಳುಗಳನ್ನು ಹೇಳುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಇತರರನ್ನು ಸಂತೋಷವಾಗಿಡಲು ಸುಳ್ಳು ಹೇಳುವ ಅಭ್ಯಾಸ ಮಾಡಿಕೊಂಡಿರುತ್ತಾರೆ.
ಇದನ್ನೂ ಓದಿ: ನಾಳೆ ದ್ವಿಪುಷ್ಕರ ಯೋಗದ ಶುಭ ಸಂಯೋಗ; 5 ರಾಶಿಗಳಿಗೆ ಅದೃಷ್ಟದ ಮಳೆ, ಸಿಗಲಿದೆ 2 ಪಟ್ಟು ಪ್ರಯೋಜನ
ಆಗಸ್ಟ್
ಆಗಸ್ಟ್‌ನಲ್ಲಿ ಜನಿಸಿದ ಜನರು ತುಂಬಾ ನಿಗೂಢ ವ್ಯಕ್ತಿಗಳಂತೆ ಕಾಣಿಸಿಕೊಳ್ಳುತ್ತಾರೆ. ಇವರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳೋದು ತುಂಬಾ ಕಷ್ಟದ ಕೆಲಸವಾಗಿರುತ್ತದೆ. ಯಾರೊಂದಿಗೆ ಹೆಚ್ಚು ಮಾತನಾಡಲು ಬಯಸದ ಇವರು, ತುಂಬಾ ಸುಲಭವಾಗಿ ಎಲ್ಲರೂ ನಂಬುವಂತೆ ಸುಳ್ಳು ಹೇಳುತ್ತಾರೆ. ತಮ್ಮದೇ ಕಲ್ಪನೆಯಲ್ಲಿ ಎಲ್ಲರಿಗೂ ಇಷ್ಟವಾಗುವಂತಹ ಆಸಕ್ತಿದಾಯಕವಾದ ಸುಳ್ಳುಗಳನ್ನು ಹೇಳುವದರಿಂದ ಇವರ ಮೇಲೆ ಅನುಮಾನವೇ ಬರಲ್ಲ.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.