ಮಂಗಳನ ರಾಶಿಗೆ ಬುಧನ ಪ್ರವೇಶ! ದೀಪಾವಳಿ ನಂತರ 3 ರಾಶಿಗಳಿಗೆ ಅದೃಷ್ಟ ಖಚಿತ!
ಅಕ್ಟೋಬರ್ 24 ರಂದು ಬುಧ ಗ್ರಹವು ವೃಶ್ಚಿಕ ರಾಶಿಗೆ ಪ್ರವೇಶಿಸಲಿದೆ. ಈ ಗ್ರಹ ಸಂಚಾರದಿಂದಾಗಿ ಮೂರು ರಾಶಿಯವರ ಜೀವನದಲ್ಲಿ ಧನಾತ್ಮಕ ಬದಲಾವಣೆಗಳಾಗಲಿದ್ದು, ಅವರು ಆರ್ಥಿಕವಾಗಿ ಮತ್ತು ವೃತ್ತಿಪರವಾಗಿ ಲಾಭವನ್ನು ಕಾಣಲಿದ್ದಾರೆ.

ವೃಶ್ಚಿಕ ರಾಶಿಗೆ ಪ್ರವೇಶ
ನವಗ್ರಹಗಳಲ್ಲಿ ಬುಧ ಗ್ರಹವನ್ನು ಮಾತು, ಜ್ಞಾನ, ಸಂವಹನದ ಕಾರಕ ಎಂದು ಪರಿಗಣಿಸಲಾಗುತ್ತದೆ. ಈ ವರ್ಷದ ದೀಪಾವಳಿ ನಂತರ ಅಕ್ಟೋಬರ್ 24ರಂದು ಬುಧನು ಮಂಗಳನ ಅಧಿಪತ್ಯದ ವೃಶ್ಚಿಕ ರಾಶಿಗೆ ಪ್ರವೇಶಿಸಲಿದ್ದಾನೆ. ವೃಶ್ಚಿಕ ರಾಶಿಯ ಪ್ರವೇಶದಿಂದ ಮೂರು ರಾಶಿಚಕ್ರದವರ ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಆಗಲಿವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ಧನಾತ್ಮಕ ಬದಲಾವಣೆಗಳನ್ನು ಕಾಣುವ ಮೂರು ರಾಶಿಗಳು ಯಾವವು ಎಂದು ಈ ಲೇಖನದಲ್ಲಿ ನೋಡೋಣ.
ಮಿಥುನ ರಾಶಿ
ಬುಧ ಗ್ರಹ ಮಂಗಳ ರಾಶಿಗೆ ಪ್ರವೇಶ ಮಾಡೋದರಿಂದ ಅಕ್ಟೋಬರ್ 24ರ ನಂತರ ಮಿಥುನ ರಾಶಿಯವರಿಗೆ ಅದೃಷ್ಟ ಹೆಚ್ಚಾಗಲಿದೆ. ಬುಧ ಸಂಚಾರದಿಂದ ಮಿಥುನ ರಾಶಿಯವರ ಆರ್ಥಿಕ ಜೀವನ ಬಲಪಡಿಸುತ್ತದೆ. ಈ ರಾಶಿಯವರು ವ್ಯಾಪಾರದಲ್ಲಿ ಹೆಚ್ಚು ಲಾಭ ಕಾಣಲಿದ್ದು, ಆರ್ಥಿಕ ಸಮಸ್ಯೆಗಳು ದೂರವಾಗಿ ನೆಮ್ಮದಿ ನೆಲೆಸುತ್ತದೆ. ಹಾಗೆಯೇ ಆದಾಯ ಹೆಚ್ಚಿಸುವ ದಾರಿಗಳು ನಿಮಗೆ ಕಾಣಿಸಲಿದ್ದು, ಆರ್ಥಿಕ ಸುಧಾರಣೆಯಿಂದ ಮಿಥುನ ರಾಶಿಯವರ ಆಸೆಗಳು ಈಡೇರಲಿವೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ.
ತುಲಾ ರಾಶಿ
ಇನ್ನು ಅಕ್ಟೋಬರ್ 24ರಂದು ಬುಧನ ಗ್ರಹ ತುಲಾ ರಾಶಿಯ 2ನೇ ಮನೆಗೆ ಪ್ರವೇಶಿಸಲಿದ್ದಾನೆ. ಈ ಚಲನೆಯಿಂದಾಗಿ ತುಲಾ ರಾಶಿಯವರ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಕಾಣುತ್ತಾರೆ ಮತ್ತು ಆ ಆನಂದವನ್ನು ಅನುಭವಿಸುತ್ತಾರೆ. ಆರ್ಥಿಕ ಸ್ಥಿತಿಗತಿ ಸುಧಾರಣೆಯಿಂದಾಗಿ ಮನೆಯಲ್ಲಿನ ಕಷ್ಟಗಳು ದೂರವಾಗಿ ಸಂತೋಷ ಮತ್ತು ಶಾಂತಿ ನೆಲೆಸಲಿದೆ. ಸಾಂಸಾರಿಕ ಮನಸ್ತಾಪಗಳು ಸಹ ದೂರಾಗಲಿವೆ.
ಇದನ್ನೂ ಓದಿ: ಜನ್ಮ ದಿನಕ್ಕೆ ಅನುಗುಣವಾಗಿ ನಾಳೆಯಿಂದ ನಿಮ್ಮ ಭವಿಷ್ಯ ಹೇಗಿದೆ? ಯಾವ ಕಾರ್ಯ ಆರಂಭಿಸಬಹುದು?
ಕುಂಭ ರಾಶಿ
ಅಕ್ಟೋಬರ್ 24ರ ನಂತರ ಮಂಗಳನ ಅಧಿಪತ್ಯದ ರಾಶಿ ಬುಧ ಗ್ರಹದ ಪ್ರವೇಶದಿಂದ ಕುಂಭ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ. ಕುಂಭ ರಾಶಿಯವರ ಬಹುದಿನಗಳ ಕಠಿಣ ಪರಿಶ್ರಮಕ್ಕೆ ಸೂಕ್ತ ಮತ್ತು ಲಾಭದಾಕವಾದ ಫಲ ಸಿಗಲಿದೆ. ಹೂಡಿಕೆಯಲ್ಲಿ ಲಾಭ, ವ್ಯಾಪಾರದಲ್ಲಿ ವೃದ್ಧಿ ಕಾಣಲಿದ್ದೀರಿ. ವೃತ್ತಿ ಜೀವನದಲ್ಲಿ ನಿಮ್ಮ ಸ್ಪರ್ಧಿಗಳನ್ನು ಗೆದ್ದು ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಎಲ್ಲರಿಂದ ಗೌರವ ಪಡೆದುಕೊಳ್ಳುತ್ತೀರಿ. ವಿಶೇಷವಾಗಿ ವೃತ್ತಿ ಜೀವನದಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ಕುಂಭ ರಾಶಿಯವರು ಕಾಣಲಿದ್ದಾರೆ.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
ಇದನ್ನೂ ಓದಿ: Chanakya Niti: ಎಂಥದ್ದೇ ಸಂದರ್ಭ, ಸಮಸ್ಯೆ, ಒತ್ತಡ ಎದುರಾದ್ರೂ ಈ ವಿಷ್ಯಾನಾ ಯಾರಾತ್ರಾನೂ ಹೇಳ್ಬೇಡಿ