ಈ ಮೂರು ರೂಪದಲ್ಲಿ ಪೂರ್ವಜರು ನಿಮ್ಮ ಬಳಿ ಬರ್ತಾರಂತೆ…. ತಪ್ಪಿಯೂ ಅವಮಾನ ಮಾಡ್ಬೇಡಿ
ಪಿತೃ ಪಕ್ಷದ ಸಮಯದಲ್ಲಿ, ಶ್ರಾದ್ಧ ಆಚರಣೆಗಳನ್ನು ಮಾಡುವುದು, ದಾನ ಮಾಡುವುದು ಹೆಚ್ಚು ಮಹತ್ವದ್ದಾಗಿದೆ. ಈ ವರ್ಷ, ಪಿತೃ ಪಕ್ಷವು ಭಾದ್ರಪದ ಮಾಸದ ಹುಣ್ಣಿಮೆಯಿಂದ ಪ್ರಾರಂಭವಾಗಿ ಅಶ್ವಿನಿ ಮಾಸದ ಅಮಾವಾಸ್ಯೆಯಂದು ಕೊನೆಗೊಳ್ಳುತ್ತದೆ.

ಪಿತೃ ಪಕ್ಷವು (Pitru paksha) ಪೂರ್ವಜರಿಗೆ ಶ್ರಾದ್ಧವನ್ನು ಮಾಡಲು ಉತ್ತಮ ಸಮಯವಾಗಿದೆ. ಅಶ್ವಿನ್ ಕೃಷ್ಣ ಪ್ರತಿಪದ ತಿಥಿಯಂದು ಪಿತೃ ಪಕ್ಷ ಪ್ರಾರಂಭವಾಗುತ್ತದೆ. ಪಿತೃ ಪಕ್ಷದಲ್ಲಿ ಪ್ರತಿಪದ ತಿಥಿಯನ್ನು ಪ್ರತಿಪದ ಶ್ರಾದ್ಧ ಎಂದು ಕರೆಯಲಾಗುತ್ತದೆ. ಪಿತೃ ಪಕ್ಷ ಅಶ್ವಿನ್ ಕೃಷ್ಣ ಅಮವಾಸ್ಯೆಯಂದು ಕೊನೆಗೊಳ್ಳುತ್ತದೆ, ಇದನ್ನು ಸರ್ವ ಪಿತೃ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಪಿತೃ ಪಕ್ಷದ ಸಮಯದಲ್ಲಿ, ಜನರು ತಮ್ಮ ಪೂರ್ವಜರಿಗೆ ಶ್ರಾದ್ಧ, ಪಿಂಡದಾನ, ಬ್ರಾಹ್ಮಣ ಭೋಜ್, ಪಂಚಬಲಿ ಕರ್ಮ ಇತ್ಯಾದಿಗಳನ್ನು ಮಾಡುತ್ತಾರೆ. ಪಿತೃಪಕ್ಷದ ಸಮಯವು ಪಿತೃ ದೋಷವನ್ನು ತೊಡೆದುಹಾಕಲು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಈ ವರ್ಷ ಪಿತೃ ಪಕ್ಷ ಯಾವಾಗ ಪ್ರಾರಂಭವಾಗುತ್ತದೆ ತಿಳಿಯೋಣ.
ಪಿತೃ ಪಕ್ಷ ಆರಂಭದ ದಿನಾಂಕ
ಪಿತೃ ಪಕ್ಷಕ್ಕೆ ಅಗತ್ಯವಾದ ಅಶ್ವಿನ್ ಕೃಷ್ಣ ಪ್ರತಿಪದ ತಿಥಿ ಸೆಪ್ಟೆಂಬರ್ 7 ರ ಭಾನುವಾರ ರಾತ್ರಿ 11:38 ರಿಂದ ಪ್ರಾರಂಭವಾಗುತ್ತಿದೆ ಮತ್ತು ಮರುದಿನ ಸೆಪ್ಟೆಂಬರ್ 8 ರ ಸೋಮವಾರ ರಾತ್ರಿ 9:11 ರವರೆಗೆ ಮುಂದುವರಿಯುತ್ತದೆ ಎಂದು ಹೇಳುತ್ತಾರೆ. ಅಂದರೆ ಈ ವರ್ಷ ಪಿತೃ ಪಕ್ಷ ಸೆಪ್ಟೆಂಬರ್ 8 ರಿಂದ ಪ್ರಾರಂಭವಾಗುತ್ತಿದೆ.
ಪಿತೃ ಪಕ್ಷದ 15 ದಿನಗಳಲ್ಲಿ, ಜನರು ತಮ್ಮ ಪೂರ್ವಜರಿಗೆ ತರ್ಪಣ, ಶ್ರಾದ್ಧ ಮತ್ತು ಪಿಂಡದಾನವನ್ನು ಮಾಡುತ್ತಾರೆ. ಪಿತೃ ಪಕ್ಷದ ಸಮಯದಲ್ಲಿ ಪೂರ್ವಜರು ನಮ್ಮ ಮನೆಗಳಿಗೆ ಹಲವು ರೂಪಗಳಲ್ಲಿ ಬರುತ್ತಾರೆ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ನೀವು ಬಂದವರನ್ನು ತಪ್ಪಾಗಿ ಭಾವಿಸಿ ಅವಮಾನಿಸಬಾರದು. ಇದರಿಂದ ಪೂರ್ವಜರು ಕೋಪಗೊಳ್ಳುತ್ತಾರೆ.
ಪಿತೃ ಪಕ್ಷದ ಸಮಯದಲ್ಲಿ, ಪೂರ್ವಜರು ಋಷಿಗಳು ಮತ್ತು ಸಂತರ ರೂಪದಲ್ಲಿ ಕಾಣಿಸಿಕೊಳ್ಳಬಹುದು. ಹಾಗಾಗಿ ಮನೆಗೆ ಈ ಸಮಯದಲ್ಲಿ ಸಂತರು ಯಾರದರು ಬಂದರೆ, ಅವರಿಗೆ ಆಹಾರವನ್ನು ನೀಡಿ ಕಳುಹಿಸಿ, ಅವರಿಗೆ ಬೈದು ಕಳುಹಿಸಬೇಡಿ.
ಪೂರ್ವಜರು ಕೆಲವೊಮ್ಮೆ ಹಸು ಅಥವಾ ನಾಯಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತಾರೆ. ಆದ್ದರಿಂದ, ನಿಮ್ಮ ಮನೆಗೆ ಬರುವ ಈ ಜೀವಿಗಳಿಗೆ ಸ್ವಲ್ಪ ಆಹಾರವನ್ನು ನೀಡಿ. ಅಯ್ಯೋ ನಾಯಿ ಬಂತು, ಹಸು ಬಂತು ಎಂದು ಅದನ್ನು ಓಡಿಸೋದಕ್ಕೆ ಹೋಗಬೇಡಿ. ಅವುಗಳಿಗೆ ಆಹಾರ ನೀಡೋದನ್ನು ಮರಿಬೇಡಿ.
ಕೆಲವೊಮ್ಮೆ ಪೂರ್ವಜರು (ancestor) ನಿಮ್ಮ ಮನೆಗೆ ಅತಿಥಿಗಳಾಗಿ ಬರಬಹುದು. ಆದ್ದರಿಂದ ಅತಿಥಿಗಳನ್ನು ಗೌರವಿಸಿ. ಪಿತೃಪಕ್ಷದ ಸಮಯದಲ್ಲಿ ಯಾವುದೇ ಅತಿಥಿಗಳು ನಿಮ್ಮ ಮನೆಗೆ ಬಂದರೂ ಸಹ ಅವರಿಗೆ ಅನ್ನ, ಆಹಾರ, ನೀಡಿ ಅತಿಥಿ ಸತ್ಕಾರ ಮಾಡಿ. ಇದರಿಂದ ಪಿತೃಗಳು ಖುಷಿ ಪಡುತ್ತಾರೆ.