ಸೆಪ್ಟೆಂಬರ್‌ನಲ್ಲಿವೆ ನಿಮ್ಮ ಆಸೆ ಈಡೇರಿಸುವ 4 ದಿನಗಳು
Lucky Days: 2025ರ ಸೆಪ್ಟೆಂಬರ್ ತಿಂಗಳಿನಲ್ಲಿ 4 ಮುಖ್ಯ ದಿನಗಳು ನಮ್ಮ ಬದುಕಲ್ಲಿ ಬದಲಾವಣೆ ತಂದು ಆಸೆಗಳನ್ನ ಈಡೇರಿಸುತ್ತವೆ. ಈ ದಿನಗಳು ಬಲವಾದ ಆಧ್ಯಾತ್ಮಿಕ ಶಕ್ತಿ ಹೊಂದಿವೆ.

ಅದ್ಭುತಗಳನ್ನುಂಟುಮಾಡುವ ಮುಖ್ಯ ದಿನಗಳು!
ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ದಿನಗಳು ಯಾವಾಗಲೂ ವಿಶೇಷವಾಗಿರುತ್ತವೆ. ಗ್ರಹಗಳು, ಚಂದ್ರ, ಸೂರ್ಯ ವಿಶಿಷ್ಟ ಸ್ಥಾನದಲ್ಲಿರುವುದೇ ಕಾರಣ. ಅಂಥ ಕೆಲವು ದಿನಗಳು ನಮ್ಮ ಬದುಕಲ್ಲಿ ಬದಲಾವಣೆ ತಂದು ಆಸೆಗಳನ್ನು ಈಡೇರಿಸುತ್ತವೆ. 2025ರ ಸೆಪ್ಟೆಂಬರ್ ಅಂಥದ್ದೇ ಅದ್ಭುತಗಳ ತಿಂಗಳು. ಈ ತಿಂಗಳ 4 ಮುಖ್ಯ ದಿನಗಳು ನಿಮ್ಮ ಆಸೆಗಳಿಗೆ ಶಕ್ತಿ ತುಂಬುತ್ತವೆ.
ಸೆಪ್ಟೆಂಬರ್ 7 – ಪೂರ್ಣ ಚಂದ್ರಗ್ರಹಣ
ಆಧ್ಯಾತ್ಮಿಕವಾಗಿ ಬಲಿಷ್ಠ ದಿನ. ಚಂದ್ರನ ಬೆಳಕು ಮರೆಯಾದಂತೆ ಮನಸ್ಸಿನ ಕತ್ತಲು ಕಳೆಯುತ್ತದೆ ಎಂಬ ನಂಬಿಕೆ ಇದೆ. ಹಳೆಯ ಭಾರ, ಅಪೂರ್ಣ ಕೆಲಸ, ನೋವುಂಟುಮಾಡುವ ನೆನಪುಗಳನ್ನು ಬಿಡಲು ಇದು ಸೂಕ್ತ ದಿನ.
ಏನು ಮಾಡಬೇಕು?
ಆ ರಾತ್ರಿ ನಿಮ್ಮ ಆಸೆಗಳನ್ನು ಬರೆದು, ಬೇಡದ ಯೋಚನೆಗಳನ್ನು ಮನಸ್ಸಿನಿಂದ ತೆಗೆದುಹಾಕಿ. ದೀಪ ಹಚ್ಚಿ ಪ್ರಾರ್ಥಿಸಿದರೆ ಮನಶಾಂತಿ, ನಂಬಿಕೆ ಹೆಚ್ಚುತ್ತದೆ.
ಸೆಪ್ಟೆಂಬರ್ 16 – ಬುಧ ಕನ್ಯಾರಾಶಿಯಲ್ಲಿ
ಸಂವಹನ, ಶಿಕ್ಷಣ, ಯೋಜನೆಗೆ ಒಳ್ಳೆಯ ದಿನ. ಬುಧ ಕನ್ಯಾರಾಶಿಯಲ್ಲಿರುವುದರಿಂದ ಯೋಚನೆಗಳು ಸ್ಪಷ್ಟವಾಗುತ್ತವೆ. ವ್ಯಾಪಾರ, ಕೆಲಸ, ಶಿಕ್ಷಣಕ್ಕೆ ಸಂಬಂಧಿಸಿದ ಯೋಜನೆ ಆರಂಭಿಸಲು ಉತ್ತಮ ಸಮಯ.
ಏನು ಮಾಡಬೇಕು?
ನಿಮ್ಮ ಗುರಿಗಳನ್ನು ಸ್ಪಷ್ಟವಾಗಿ ಬರೆದು, ಅವುಗಳನ್ನು ಸಾಧಿಸಲು ಸಣ್ಣ ಹೆಜ್ಜೆಗಳನ್ನು ಇಡಿ. ಈ ದಿನ ತೆಗೆದುಕೊಂಡ ನಿರ್ಧಾರಗಳು ದೀರ್ಘಕಾಲದ ಲಾಭ ತರುತ್ತವೆ.
ಸೆಪ್ಟೆಂಬರ್ 21 – ಸೂರ್ಯಗ್ರಹಣ + ಅಮಾವಾಸ್ಯೆ
ಸೆಪ್ಟೆಂಬರ್‌ನ ಅತ್ಯಂತ ವಿಶೇಷ ದಿನ. ಸೂರ್ಯ-ಚಂದ್ರ ಸಂಗಮವು ಹೊಸ ಆರಂಭಕ್ಕೆ ಅವಕಾಶ ನೀಡುತ್ತದೆ. ಕುಟುಂಬ, ವೃತ್ತಿ, ಆರೋಗ್ಯದಲ್ಲಿ ಹೊಸ ನಿರ್ಧಾರ ತೆಗೆದುಕೊಳ್ಳಬಹುದು. ಬದುಕನ್ನು ಹೊಸದಾಗಿ ಶುರುಮಾಡಬೇಕೆಂಬ ಆಸೆ ಇದ್ದರೆ ಈ ದಿನ ಅದಕ್ಕೆ ದಾರಿ ತೋರುತ್ತದೆ.
ಏನು ಮಾಡಬೇಕು?
ಧ್ಯಾನ ಮಾಡಿ, ಆಸೆಗಳನ್ನು ಮನದಲ್ಲಿ ದೃಢವಾಗಿಟ್ಟುಕೊಳ್ಳಿ. ನಿಮ್ಮ ಮನದಲ್ಲಿ ಬಿತ್ತುವ ಬೀಜ ಮುಂದೆ ದೊಡ್ಡ ಮರವಾಗುತ್ತದೆ ಎಂಬ ನಂಬಿಕೆಯಿಂದ ಕೆಲಸ ಮಾಡಿ.
ಇದನ್ನೂ ಓದಿ: ಶುಕ್ರನಿಂದ ರಾಜಯೋಗಗಳು ಮತ್ತು ಧನ ಯೋಗ, ಈ 5 ರಾಶಿಗೆ ಹಣ, ಪ್ರತಿಷ್ಠೆ, ಅದೃಷ್ಟ!
ಸೆಪ್ಟೆಂಬರ್ 24 – ಮಂಗಳ-ಪ್ಲುಟೊ ಶಕ್ತಿ
ಪರೀಕ್ಷೆ ಮತ್ತು ಗೆಲುವಿನ ನಡುವೆ ಸುಳಿದಾಡುವ ದಿನ. ಮಂಗಳ ಧೈರ್ಯ ತುಂಬುತ್ತದೆ, ಪ್ಲುಟೊ ಹಳೆಯ ಅಭ್ಯಾಸಗಳನ್ನು ಮುರಿದು ಹೊಸ ದಾರಿ ತೋರಿಸುತ್ತದೆ. ಇದು ನಿಮ್ಮನ್ನು ಸ್ವಲ್ಪ ಒತ್ತಡಕ್ಕೆ ಸಿಲುಕಿಸಿದರೂ ಕೊನೆಗೆ ಬಲಿಷ್ಠರನ್ನಾಗಿ ಮುನ್ನಡೆಸುತ್ತದೆ.
ಏನು ಮಾಡಬೇಕು?
ಬದುಕಿನಲ್ಲಿ ತಡೆಯಂತೆ ಕಾಣುವ ಅಭ್ಯಾಸ, ಭಯಗಳನ್ನು ಬಿಟ್ಟುಬಿಡಿ. “ನಾನು ಮಾಡಬಲ್ಲೆ” ಎಂಬ ಧೃಢತೆಯಿಂದ ಹೊಸ ಪ್ರಯತ್ನ ಶುರುಮಾಡಿ.
ಈ 4 ದಿನಗಳನ್ನು ಮಿಸ್ ಮಾಡ್ಕೋಬೇಡಿ!
ಸೆಪ್ಟೆಂಬರ್ ಒಳ್ಳೆಯ ಶಕ್ತಿ ತುಂಬುವ ತಿಂಗಳಾದರೂ 7, 16, 21, 24 – ಈ ನಾಲ್ಕು ದಿನಗಳು ನಿಮ್ಮ ಬದುಕಿನ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಆಸೆ ಈಡೇರಿಸಿಕೊಳ್ಳಲು ಬಯಸುವವರು ಈ ದಿನಗಳಲ್ಲಿ ಸಕಾರಾತ್ಮಕ ಚಿಂತನೆ, ನಂಬಿಕೆಯಿಂದ ಸಣ್ಣ ಪ್ರಯತ್ನ ಶುರುಮಾಡಿದರೂ ಒಳ್ಳೆಯ ಫಲ ಸಿಗುತ್ತದೆ.
ನಕ್ಷತ್ರಗಳು ದಾರಿ ತೋರಿಸುತ್ತವೆ; ಆದರೆ ನಿಮ್ಮ ಮನಸ್ಥಿತಿ, ಶ್ರಮ, ನಂಬಿಕೆಯೇ ಅದನ್ನು ನಿಜಮಾಡುತ್ತದೆ. ಹಾಗಾಗಿ ಈ ೪ ದಿನಗಳನ್ನು ಮಿಸ್ ಮಾಡದೆ ಕನಸುಗಳನ್ನು ನನಸಾಗಿಸಲು ಶುರುಮಾಡಿ.
ಇದನ್ನೂ ಓದಿ: ಸೆ.7 ಚಂದ್ರಗ್ರಹಣ: ಜನ್ಮದಿನಕ್ಕೆ ಅನುಸಾರ ನಿಮ್ಮ ಗ್ರಹಗತಿ ಹೇಗಿದೆ? ಪ್ರೀತಿ, ಹಣ, ಆರೋಗ್ಯ, ಕರಿಯರ್ ಪ್ರಭಾವ ಏನು?