MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Fashion
  • ದುಬಾರಿ ಕ್ರೀಂ, ಐಷಾರಾಮಿ ಟ್ರೀಟ್‌ಮೆಂಟ್ ಯಾವ್ದೂ ಅಲ್ಲ; ಮನೆಮದ್ದು ಮಾತ್ರ ಫಾಲೋ ಮಾಡ್ತಾರಂತೆ ಸೋನಾಕ್ಷಿ ಸಿನ್ಹಾ!

ದುಬಾರಿ ಕ್ರೀಂ, ಐಷಾರಾಮಿ ಟ್ರೀಟ್‌ಮೆಂಟ್ ಯಾವ್ದೂ ಅಲ್ಲ; ಮನೆಮದ್ದು ಮಾತ್ರ ಫಾಲೋ ಮಾಡ್ತಾರಂತೆ ಸೋನಾಕ್ಷಿ ಸಿನ್ಹಾ!

Sonakshi Sinha’s Beauty Secrets: ಸೋನಾಕ್ಷಿ ಸಿನ್ಹಾಗೆ 38 ವರ್ಷ ತುಂಬಿದ್ದು, ಅವರ ಸುಂದರ ತ್ವಚೆಯ ರಹಸ್ಯ 'Less is More'. ಮೊಯಿಶ್ಚರೈಸ್ ಮಾಡಿಕೊಂಡ ನಂತರ ಅಲೋವೆರಾ ಜೆಲ್, ಜೊಜೊಬಾ ಮತ್ತು ಬಾದಾಮಿ ಎಣ್ಣೆ ಪೇಸ್ಟ್ ಅವರ ತ್ವಚೆಯ ಆರೈಕೆಯ ದಿನಚರಿಯಾಗಿದೆ. 

2 Min read
Author : Ashwini HR
Published : Jun 04 2025, 05:44 PM IST
Share this Photo Gallery
  • FB
  • TW
  • Linkdin
  • Whatsapp
14
ಸಾಮಾಜಿಕ ಮಾಧ್ಯಮದಲ್ಲಿ ವೈರಲ್
Image Credit : @sonakshi sinha

ಸಾಮಾಜಿಕ ಮಾಧ್ಯಮದಲ್ಲಿ ವೈರಲ್

ಬಾಲಿವುಡ್‌ನ ಅತ್ಯಂತ ಪವರ್‌ಫುಲ್ ನಟಿ ಸೋನಾಕ್ಷಿ ಸಿನ್ಹಾ. ಇವರ ಪ್ರತಿಯೊಂದು ಸ್ಟೈಲ್ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಬೇಗ ವೈರಲ್ ಆಗುತ್ತದೆ. ವಿಶೇಷವಾಗಿ ಸೋನಾಕ್ಷಿ ಜಹೀರ್ ಇಕ್ಬಾಲ್ ಅವರನ್ನು ಮದುವೆಯಾದ ನಂತರ, ಅವರು ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಅಂದಹಾಗೆ ಮೊನ್ನೆ ಜೂನ್ 2 ರಂದು ಸೋನಾಕ್ಷಿಗೆ 38 ವರ್ಷ ತುಂಬಿತು. ಆದರೆ ಈ ವಯಸ್ಸಿನಲ್ಲೂ, ಸೋನಾಕ್ಷಿಯ ಸುಂದರ ಮತ್ತು ಹೊಳೆಯುವ ತ್ವಚೆ ಎಲ್ಲರನ್ನೂ ಬೆರಗುಗೊಳಿಸುತ್ತದೆ. ಹಾಗಾಗಿ ಸೋನಾಕ್ಷಿ ತನ್ನ ಆರೋಗ್ಯಕರ ಮತ್ತು ಹೊಳೆಯುವ ಚರ್ಮಕ್ಕಾಗಿ ಯಾವ ದಿನಚರಿಯನ್ನು ಅನುಸರಿಸುತ್ತಾರೆ ಎಂಬುದನ್ನು ನಾವಿಂದು ನೋಡೋಣ..

24
ತ್ವಚೆ ಆರೈಕೆಯಲ್ಲಿ ಸೋನಾಕ್ಷಿಯವರ ಏಕೈಕ ಟಿಪ್ಸ್
Image Credit : Social Media

ತ್ವಚೆ ಆರೈಕೆಯಲ್ಲಿ ಸೋನಾಕ್ಷಿಯವರ ಏಕೈಕ ಟಿಪ್ಸ್

ಜನಪ್ರಿಯ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಸೋನಾಕ್ಷಿ, ತನ್ನ ಹೆತ್ತವರಿಂದ ಉತ್ತಮ ತ್ವಚೆಯನ್ನು ಅನುವಂಶಿಕವಾಗಿ ಪಡೆದಿದ್ದೇನೆ ಎಂದು ರಿವೀಲ್ ಮಾಡಿದ್ದಾರೆ. ಆದರೆ 30 ವರ್ಷ ದಾಟಿದ ನಂತರ ಸೋನಾಕ್ಷಿ ತನ್ನ ಬಗ್ಗೆ ಗಮನ ಹರಿಸಲು ಪ್ರಾರಂಭಿಸಿದರು. ತ್ವಚೆಯ ಆರೈಕೆಯ ಬಗ್ಗೆ ಅರಿತುಕೊಂಡರು. ತ್ವಚೆಯ ಆರೈಕೆಯ ದಿನಚರಿ ಬಹಳ ಸರಳವಾಗಿದೆ ಎಂದು ಹೇಳಿರುವ ಸೋನಾಕ್ಷಿ, "ತ್ವಚೆಯನ್ನು ಮೊಯಿಶ್ಚರೈಸ್ ಮಾಡಿಕೊಂಡು ನಾನು ಜೊಜೊಬಾ ಮತ್ತು ಬಾದಾಮಿ ಎಣ್ಣೆಯನ್ನು ಅಲೋವೆರಾ ಜೆಲ್‌ನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚುತ್ತೇನೆ. ಇದೇ ನನ್ನ ತ್ವಚೆ ಆರೈಕೆಯ ಮಂತ್ರ." ಎಂದು ತಿಳಿಸಿದ್ದಾರೆ ಸೋನಾಕ್ಷಿ.

Related Articles

Related image1
ಕೇಶ ವಿನ್ಯಾಸಕ್ಕೆ ಪಾರ್ಲರ್​ಗೆ ಹೋಗ್ತೀರಾ? ಯಾಮಾರಿದ್ರೆ ಬ್ರೈನ್​​ ಸ್ಟ್ರೋಕ್: ಏನಿದು Beauty Parlour Stroke Syndrome?
Related image2
Beauty Tips: ಮುಖ ನ್ಯಾಚುರಲ್ಲಾಗಿ ಹೊಳೆಯಬೇಕೆಂದ್ರೆ ಪ್ರತಿದಿನ 10 ನಿಮಿಷ ತುಪ್ಪ ಹಚ್ಚಿ, ರಿಸಲ್ಟ್ ನೋಡಿ ಬೆರಗಾಗ್ತೀರಿ!
34
ತಾಯಿ ಹೇಳಿದ ಮನೆಮದ್ದುಗಳು
Image Credit : @sonakshi sinha

ತಾಯಿ ಹೇಳಿದ ಮನೆಮದ್ದುಗಳು

ಸೋನಾಕ್ಷಿ ಹೇಳುವಂತೆ ತನ್ನ ತಾಯಿ ತನಗೆ ಅನೇಕ ದೇಸಿ ಬ್ಯೂಟಿ ಮಾಸ್ಕ್‌ಗಳು ಮತ್ತು ಪ್ಯಾಕ್‌ಗಳನ್ನು ತಯಾರಿಸಲು ಕಲಿಸಿದ್ದಾರೆ. ತ್ವಚೆಯು ತುಂಬಾ ಒಣಗಿದಾಗ, ತುಪ್ಪ ಅಥವಾ ಕೊಬ್ಬರಿ ಎಣ್ಣೆಯನ್ನು ಹಚ್ಚಲು ಸಲಹೆ ನೀಡುತ್ತಾರೆ. ತಾಯಿ ತುಂಬಾ ಇಷ್ಟಪಡುವ ಒಂದು ವಿಶೇಷ ವಿಧಾನವೆಂದರೆ ಮುಲ್ತಾನಿ ಮಿಟ್ಟಿ ಮತ್ತು ಅಲೋವೆರಾದ ಪೇಸ್ಟ್. ತಾಜಾ ಅಲೋವೆರಾ ಎಲೆ ಕತ್ತರಿಸಿ ನೇರವಾಗಿ ಮುಖದ ಮೇಲೆ ಉಜ್ಜುತ್ತಾರೆ. ಸೋನಾಕ್ಷಿ ಪ್ರಕಾರ, "ಇದು ತುಂಬಾ ಉಲ್ಲಾಸಕರವೆನಿಸುತ್ತದೆ ಮತ್ತು ಚರ್ಮಕ್ಕೆ ಹೊಸ ಜೀವ ನೀಡುತ್ತದೆ."

44
ಮೊಡವೆಗಳಿಗೆ ವರದಾನ
Image Credit : our own

ಮೊಡವೆಗಳಿಗೆ ವರದಾನ

ಸೋನಾಕ್ಷಿ ಮಾತ್ರವಲ್ಲ, ಎಲ್ಲಾ ಸೌಂದರ್ಯ ತಜ್ಞರು ಹೇಳುವ ಪ್ರಕಾರ, ಮುಲ್ತಾನಿ ಮಿಟ್ಟಿ ಮತ್ತು ಅಲೋವೆರಾ ಜೆಲ್ ಎರಡೂ ತ್ವಚೆಗೆ ಉತ್ತಮ. ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ, ಮುಲ್ತಾನಿ ಮಿಟ್ಟಿ ನಿಮ್ಮ ಮುಖದ ಮೇಲಿನ ಮೊಡವೆಗಳಿಗೆ ಒಂದು ವರದಾನವಾಗಿದೆ. ಇದು ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ ಮತ್ತು ತಾತ್ಕಾಲಿಕವಾಗಿ ರಂಧ್ರಗಳನ್ನು ಕುಗ್ಗಿಸುತ್ತದೆ. ಹೆಲ್ತ್‌ಲೈನ್ ಪ್ರಕಾರ, ಅಲೋವೆರಾವು ಆರ್ಧ್ರಕ ಮತ್ತು ಉರಿಯೂತದ ಗುಣಗಳನ್ನು ಹೊಂದಿದ್ದು, ಅದು ಎಸ್ಜಿಮಾ, ಬಿಸಿಲಿನ ಬೇಗೆ ಮತ್ತು ಒಣ ಚರ್ಮಕ್ಕೆ ಪರಿಹಾರ ನೀಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಸೌಂದರ್ಯ ಸಲಹೆಗಳು
ಜೀವನಶೈಲಿ

Latest Videos
Recommended Stories
Recommended image1
ಭಾರತೀಯರ ಹೆಮ್ಮೆ: ಸೀರೆ, ಕುಪ್ಪಸವಾಯ್ತು, ಈಗ ಕೈಬಳೆಯಲ್ಲೂ ಗಜರಾಜನ ಹವಾ!
Recommended image2
Body Glitter Spray: ಪಾರ್ಟಿಗಳಲ್ಲಿ ಮಿಂಚೋಕೆ ಬಂದಿದೆ ಹೊಸ ಟ್ರೆಂಡ್! ಏನಿದು ಬಾಡಿ ಗ್ಲಿಟರ್ ಸ್ಪ್ರೇ?
Recommended image3
ಕೈಗಳಿಗೆ ವಜ್ರದ ಹೊಳಪು ನೀಡುವ ಸುಂದರ ಕಡಗಗಳು: 5 ಸ್ಟೋನ್ ವರ್ಕ್ ಕಡಗ ಡಿಸೈನ್
Related Stories
Recommended image1
ಕೇಶ ವಿನ್ಯಾಸಕ್ಕೆ ಪಾರ್ಲರ್​ಗೆ ಹೋಗ್ತೀರಾ? ಯಾಮಾರಿದ್ರೆ ಬ್ರೈನ್​​ ಸ್ಟ್ರೋಕ್: ಏನಿದು Beauty Parlour Stroke Syndrome?
Recommended image2
Beauty Tips: ಮುಖ ನ್ಯಾಚುರಲ್ಲಾಗಿ ಹೊಳೆಯಬೇಕೆಂದ್ರೆ ಪ್ರತಿದಿನ 10 ನಿಮಿಷ ತುಪ್ಪ ಹಚ್ಚಿ, ರಿಸಲ್ಟ್ ನೋಡಿ ಬೆರಗಾಗ್ತೀರಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved