ನೀತಾ ಅಂಬಾನಿಯವರ ಈ ದುಬಾರಿ ನೆಕ್ಲೇಸ್ ನೋಡಿದ್ರಾ, ಇದ್ರ ಸ್ಪೆಷಾಲಿಟಿ ಗೊತ್ತಾದ್ರೆ ಹೌಹಾರ್ತೀರಿ!
Nita Ambani jade saree: ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರ ಚೊಚ್ಚಲ ವೆಬ್ ಸಿರೀಸ್ 'ಬ್ಯಾಡ್ಸ್ ಆಫ್ ಬಾಲಿವುಡ್' ಶೋನಲ್ಲಿ ನೀತಾ ಅಂಬಾನಿ ಮತ್ತು ಮುಖೇಶ್ ಅಂಬಾನಿ ಹಾಜರಿದ್ದರು. ಎಂದಿನಂತೆ ಈ ಕಾರ್ಯಕ್ರಮದಲ್ಲಿಯೂ ನೀತಾ ಅಂಬಾನಿ ಲುಕ್ ಜನರ ಮನಗೆದ್ದಿತು.

ಕಳೆದ ಗುರುವಾರ ಸಂಜೆ (ಸೆಪ್ಟೆಂಬರ್ 17) ನಡೆದ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಅವರ ಮೊದಲ ವೆಬ್ ಸಿರೀಸ್ ಪ್ರಥಮ ಪ್ರದರ್ಶನದ ಸಂದರ್ಭದಲ್ಲಿ, ಅನೇಕ ಪ್ರಮುಖ ಬಾಲಿವುಡ್ ತಾರೆಯರು ಮತ್ತು ಅಂಬಾನಿ ಕುಟುಂಬದ ಸದಸ್ಯರು ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ವಿಶೇಷವಾಗಿ ನೀತಾ ಅಂಬಾನಿ ಅವರ ರಾಯಲ್ ಲುಕ್ ಎಲ್ಲರಿಗೂ ಇಷ್ಟವಾಯಿತು.
ಸದ್ಯ ನೀತಾ ಅಂಬಾನಿಯವರ ರಾಯಲ್ ಲುಕ್ ಎಲ್ಲರ ಗಮನ ಸೆಳೆದಿದೆ. ಅವರು ಜೇಡ್ ಲೇಮ್ ಸೀರೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದು, ಅವರ ಆಭರಣಗಳು ಎಲ್ಲರಿಗೂ ಇಷ್ಟವಾಗುತ್ತಿದೆ. ಸದ್ಯ ಅವರ ಜ್ಯುವೆಲರಿ ಹಾಗೂ ಸೀರೆಯ ಸ್ಪೆಷಾಲಿಟಿ ಏನು ನೋಡೋಣ ಬನ್ನಿ..
ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ, ತಮ್ಮ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ನೀತಾ ಅಂಬಾನಿಯವರ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದು, "ನೀತಾ ಅಂಬಾನಿ ಜೇಡ್ ಗ್ರೀನ್ ಬಣ್ಣದ ಟಿಶ್ಯೂ ರೇಷ್ಮೆ ಸೀರೆಯನ್ನು ಧರಿಸಿದ್ದರು. ಇದಕ್ಕೆ ಅವರು ಚಾಂಟಿಲಿ ಲೇಸ್ ಬ್ಲೌಸ್ ಮ್ಯಾಚ್ ಮಾಡಿರುವುದರಿಂದ ಬಹಳ ಅದ್ಭುತವಾಗಿ ಕಾಣುತ್ತಿದ್ದಾರೆ" ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
ಕಾರ್ಯಕ್ರಮದಲ್ಲಿ ವಿಶೇಷವಾಗಿ ನೀತಾ ಅವರ ಆಭರಣಗಳು ಎಲ್ಲರ ಗಮನ ಸೆಳೆದವು. ಹೌದು, ಅವರು ವೈಡೂರ್ಯದ ಟೈಟಾನಿಯಂನಿಂದ ಅಲಂಕರಿಸಲ್ಪಟ್ಟ ಅಪರೂಪದ ಪಾರೈಬಾ ಫ್ಲೋರಲ್ ನೆಕ್ಲೇಸ್ ಧರಿಸಿದ್ದರು. ಈ ವಜ್ರ-ಖಚಿತ ನೆಕ್ಲೇಸ್ ಅದ್ಭುತವಾಗಿ ಕಾಣುತ್ತಿದ್ದು, ಅವರು ಬೀನ್ ಕಿವಿಯೋಲೆಗಳು, ದೊಡ್ಡ ಹೃದಯ ಆಕಾರದ ವಜ್ರದ ಉಂಗುರ ಮತ್ತು ಬಳೆಯನ್ನು ಧರಿಸಿರುವುದರ ಮೂಲಕ ಸುರಸುಂದರಿಯಂತೆ ಕಾಣಿಸುತ್ತಿದ್ದರು.
ಅದರಲ್ಲೂ ಸೀರೆಯನ್ನು ಅಚ್ಚುಕಟ್ಟಾದ ನೆರಿಗೆಗಳಿಂದ ಡಿಸೈನ್ ಮಾಡಲಾಗಿದ್ದು, ಸೀರೆಯ ಅಂಚಿನಲ್ಲಿರುವ ಹಸಿರು ಲೇಸ್ ಕೂಡ ತುಂಬಾ ಆಕರ್ಷಕವಾಗಿ ಕಾಣುತ್ತದೆ. ಮೇಕಪ್ ಕೂಡ ಹೆಚ್ಚೇನೂ ಹಾಕಿಲ್ಲ. ಒಟ್ಟಾರೆ ನೀತಾ ಲುಕ್ ನೋಡಿದ್ರೆ ಕ್ಲಾಸಿಯಾಗಿ ಕಾಣುತ್ತದೆ.