ಹಳೆಯ ನರುಳ್ಳೆ ಸಹ ನೋವಿಲ್ಲದೆ ಉದುರಿಹೋಗುತ್ತೆ, ಇವೆರೆಡನ್ನ ಅರಿಶಿನದೊಂದಿಗೆ ಬೆರೆಸಿ ಪವಾಡ ನೋಡಿ
Best Home Remedies for Warts: ಲೇಸರ್ ಮತ್ತು ಶಸ್ತ್ರಚಿಕಿತ್ಸೆ ಹೆಚ್ಚಿನ ವೆಚ್ಚದಿಂದ ಕೂಡಿರುವುದರಿಂದ ಅನೇಕ ಜನರು ನರುಳ್ಳೆ ತೆಗೆದುಹಾಕುವುದಿಲ್ಲ. ನಿಮಗೂ ಇದೇ ರೀತಿ ಸಮಸ್ಯೆ ಕಾಡುತ್ತಿದ್ದರೆ ಈ ಲೇಖನವು ಸಹಾಯಕವಾಗಬಹುದು.

ಅಂದವನ್ನ ಹಾಳುಮಾಡುತ್ತವೆ
ಬಾಲ್ಯದಿಂದಲೂ ಕೆಲವರಿಗೆ ನರುಳ್ಳೆ ಸಮಸ್ಯೆಗಳು ಕಾಡುತ್ತಿರುತ್ತವೆ. ಇನ್ನೂ ಹಲವರಲ್ಲಿ ವಯಸ್ಸಾದಂತೆ ಅವು ಬೆಳೆಯುತ್ತವೆ. ನರುಳ್ಳೆ ಸಮಸ್ಯೆಯಲ್ಲ. ಅವು ಸಾಮಾನ್ಯವಾಗಿ ಯಾವುದೇ ನೋವನ್ನು ಉಂಟುಮಾಡುವುದಿಲ್ಲ. ಆದರೆ ಅವು ನಮ್ಮ ಅಂದವನ್ನ ಹಾಳುಮಾಡುತ್ತವೆ. ಮುಖದ ಮೇಲೆ ಕಾಣಿಸಿಕೊಂಡರಂತೂ ಜನರಿಗೆ ಅವುಗಳನ್ನು ತೆಗೆದುಹಾಕದೆ ಬೇರೆ ದಾರಿಯಿಲ್ಲ. ಈ ಟಾಪಿಕ್ ಬಂದಾಗಲೆಲ್ಲಾ ಲೇಸರ್ ಬಳಸಿ ತೆಗೆದುಹಾಕಬೇಕು ಎನ್ನಲಾಗುತ್ತದೆ. ಆದರೆ ಈ ಪ್ರಕ್ರಿಯೆಯು ನೋವಿನಿಂದ ಕೂಡಿರುವುದಲ್ಲದೆ, ದುಬಾರಿಯಾಗಿದೆ.
ಶಸ್ತ್ರಚಿಕಿತ್ಸೆ, ಲೇಸರ್ ಬಲು ದುಬಾರಿ
ಕೆಲವರು ನರುಳ್ಳೆ ಸಮಸ್ಯೆಗೆ ಕ್ರೀಮ್‌ಗಳನ್ನು ಸಹ ಬಳಸುತ್ತಾರೆ. ಆದರೆ ಇವು ಅವುಗಳನ್ನು ತೆಗೆದುಹಾಕುತ್ತವೆಯೇ ಎಂಬುದು ಗ್ಯಾರಂಟಿಯಿಲ್ಲ. ಹೆಚ್ಚಾಗಿ ನರುಳ್ಳೆ ತೆಗೆದುಹಾಕಲು ಉತ್ತಮ ಮಾರ್ಗವೆಂದರೆ ಶಸ್ತ್ರಚಿಕಿತ್ಸೆ. ಈ ಮೊದಲೇ ಹೇಳಿದ ಹಾಗೆ ಲೇಸರ್‌ಗಳು ಮತ್ತು ಶಸ್ತ್ರಚಿಕಿತ್ಸೆ ಹೆಚ್ಚಿನ ವೆಚ್ಚದಿಂದ ಕೂಡಿರುವುದರಿಂದ ಅನೇಕ ಜನರು ತೆಗೆದುಹಾಕುವುದಿಲ್ಲ. ನಿಮಗೂ ಇದೇ ರೀತಿ ಸಮಸ್ಯೆ ಕಾಡುತ್ತಿದ್ದರೆ ಈ ಲೇಖನವು ಸಹಾಯಕವಾಗಬಹುದು.
ಯೋಗ ಗುರು ಕೈಲಾಶ್ ಬಿಷ್ಣೋಯ್ ತಿಳಿಸಿದ ಮನೆಮದ್ದು
ಹೌದು, ನೀವು ಯಾವುದೇ ನೋವು ಇಲ್ಲದೆ ನೈಸರ್ಗಿಕವಾಗಿ ನರುಳ್ಳೆ ತೆಗೆದುಹಾಕಬಹುದು. ಹೇಗೆ ಅಂತೀರಾ. ಯೋಗ ಗುರು ಕೈಲಾಶ್ ಬಿಷ್ಣೋಯ್ ತಮ್ಮ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಇದಕ್ಕೆ ಪರಿಹಾರವನ್ನು ವಿವರಿಸುವ ವಿಡಿಯೋ ಶೇರ್ ಮಾಡಿದ್ದು, ಈ ಪರಿಹಾರವನ್ನು ಬಳಸುವುದರಿಂದ ನರುಳ್ಳೆ ಯಾವುದೇ ನೋವು ಇಲ್ಲದೆ ತಾನಾಗಿಯೇ ಉದುರಿಹೋಗುತ್ತದೆ ಎಂದು ಹೇಳಿದ್ದಾರೆ. ಹಾಗಾದರೆ ಬನ್ನಿ, ಈ ಪರಿಹಾರದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.
ಏನೆಲ್ಲಾ ಬೇಕು? ಇಲ್ಲಿದೆ ನೋಡಿ ವಿಡಿಯೋ
1 ಚಮಚ ಅರಿಶಿನ
1 ಚಮಚ ಅಡುಗೆ ಸೋಡಾ
1 ಚಮಚ ನಿಂಬೆ ರಸ
ಮೊದಲು ಒಂದು ಬಟ್ಟಲಿನಲ್ಲಿ ಅರಿಶಿನ, ಅಡುಗೆ ಸೋಡಾ ಮತ್ತು ನಿಂಬೆಹಣ್ಣಿನ ರಸ ಸೇರಿಸಿ. ಈ ಮೂರು ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ನಂತರ ನೀರನ್ನು ಸೇರಿಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಕನಿಷ್ಠ ಮೂರು ಬಾರಿ ಹಚ್ಚಿ. ಆಗ ನರುಳ್ಳೆ ಉದುರುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಬಹುದು. ಹಾಗಾದರೆ ಬನ್ನಿ, ಈಗ ಈ ಪದಾರ್ಥದ ಪ್ರಯೋಜನಗಳನ್ನು ನೋಡೋಣ…
ಅಡುಗೆ ಸೋಡಾದ ಉಪಯೋಗ
ಅಡುಗೆ ಸೋಡಾ ಚರ್ಮದಿಂದ ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದಾಗಿ ನರುಳ್ಳೆ ಒಣಗುತ್ತದೆ. ಇದು ಕ್ರಮೇಣ ನರುಳ್ಳೆ ಒಳಪದರವನ್ನು ತೆಳುಗೊಳಿಸುತ್ತದೆ, ಕಾಲಾನಂತರದಲ್ಲಿ ಅದು ಬೀಳಲು ಅನುವು ಮಾಡಿಕೊಡುತ್ತದೆ. ಅಡುಗೆ ಸೋಡಾವು ಸೌಮ್ಯವಾದ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಸಹ ಹೊಂದಿದೆ.
ಸುಣ್ಣವನ್ನ ನೇರವಾಗಿ ತ್ವಚೆಗೆ ಹಚ್ಚಬೇಡಿ
ನರುಳ್ಳೆಗೆ ಸುಣ್ಣ ಹಚ್ಚುವುದರಿಂದ ಅದರ ಬೇರನ್ನು ದುರ್ಬಲಗೊಳಿಸಬಹುದು. ಅದರಲ್ಲಿರುವ ಕ್ಷಾರೀಯ ಅಂಶಗಳು ನರುಳ್ಳೆ ಚರ್ಮವನ್ನು ಸುಟ್ಟು ಒಣಗಿಸಲು ಕೆಲಸ ಮಾಡುತ್ತವೆ. ಆದರೆ ನೆನಪಿಡಿ ಚರ್ಮಕ್ಕೆ ನೇರವಾಗಿ ಸುಣ್ಣವನ್ನು ಹಚ್ಚುವ ತಪ್ಪನ್ನು ಎಂದಿಗೂ ಮಾಡಬಾರದು. ಇದು ಸುತ್ತಮುತ್ತಲಿನ ಚರ್ಮಕ್ಕೆ ಹಾನಿ ಮಾಡುತ್ತದೆ.
ಅರಿಶಿನದ ಉಪಯೋಗ
ಆನ್‌ಲೈನ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಅರಿಶಿನವು ನಂಜುನಿರೋಧಕ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಇದು ಸೋಂಕು ಮತ್ತು ನರುಳ್ಳೆಯಲ್ಲಿ ಇರುವ ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡುತ್ತದೆ. ಅರಿಶಿನವು ನರುಳ್ಳೆಯನ್ನ ಕ್ರಮೇಣ ಒಣಗಿಸಲು ಮತ್ತು ಅವು ಉದುರಲು ಸಹಾಯ ಮಾಡುತ್ತದೆ. ಇದು ಚರ್ಮದ ಮೇಲೆ ಗೋಚರಿಸುವ ಕಲೆಗಳನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ.