Hair keratin Treatment at Home: ಕೇವಲ 10 ರೂ.ಗೆ ರೇಷ್ಮೆಯಂತಹ ಕೂದಲು ನಿಮ್ಮದಾಗುತ್ತೆ!
DIY Keratin Products: ಕೇವಲ 10 ರೂ.ಗೆ ಕೆರಾಟಿನ್ ಟ್ರೀಟ್‌ಮೆಂಟ್ ಮನೆಯಲ್ಲೇ ಮಾಡಿಕೊಳ್ಳಬಹುದು. ಈ ವಿಧಾನದಲ್ಲಿ ನಿಮ್ಮ ಕೂದಲು ರೇಷ್ಮೆಯ ಹಾಗೆ ಹೊಳೆಯುವುದಲ್ಲದೆ, ನೇರವಾಗಿರುತ್ತದೆ.

ಮನೆಯಲ್ಲೇ ಮಾಡಿಕೊಳ್ಬೋದು
ಸಾಮಾನ್ಯವಾಗಿ ಕೆರಾಟಿನ್ ಟ್ರೀಟ್‌ಮೆಂಟ್‌ಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ಪಾರ್ಲರ್‌ಗೆ ಹೋಗುತ್ತಾರೆ. ಆದರೆ ಈಗ ಕೇವಲ 10 ರೂ.ಗೆ ಕೆರಾಟಿನ್ ಟ್ರೀಟ್‌ಮೆಂಟ್ ಮನೆಯಲ್ಲೇ ಮಾಡಿಕೊಳ್ಳಬಹುದು. ಈ ವಿಧಾನದಲ್ಲಿ ನಿಮ್ಮ ಕೂದಲು ರೇಷ್ಮೆಯ ಹಾಗೆ ಹೊಳೆಯುವುದಲ್ಲದೆ, ನೇರವಾಗಿರುತ್ತದೆ.
ಏನಿದು ಕೆರಾಟಿನ್ ಟ್ರೀಟ್‌ಮೆಂಟ್?
ಯಾವಾಗಲೂ ಸರಿಯಾದ ಪೋಷಣೆ ಸಿಕ್ಕಾಗ ಮಾತ್ರ ನಮ್ಮ ಕೂದಲು ಸರಿಯಾಗಿ ಬೆಳೆಯುತ್ತದೆ. ಪೋಷಣೆ ಇಲ್ಲದಿದ್ದರೆ ಕೂದಲು ನಿರ್ಜೀವವಾಗಿ ಒಣಗುತ್ತದೆ. ಪಾರ್ಲರ್‌ನಲ್ಲಿ ಕೆರಾಟಿನ್ ಟ್ರೀಟ್‌ಮೆಂಟ್ ವೆಚ್ಚ ತುಂಬಾ ದುಬಾರಿ. ಕಡಿಮೆಯೆಂದರೂ ಸಾವಿರಾರು ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಆದರೆ ಈಗ ನಾವು ಕೇವಲ 10 ರೂ.ನಲ್ಲಿ ಮನೆಯಲ್ಲಿ ಕೆರಾಟಿನ್ ಟ್ರೀಟ್‌ಮೆಂಟ್ ಮಾಡಿಕೊಳ್ಳಬಹುದು. ಹಾಗಾದರೆ ಈ ವಿಧಾನದ ಬಗ್ಗೆ ತಿಳಿಯೋಣ ಬನ್ನಿ.
ಬೇಕಾಗುವ ಸಾಮಗ್ರಿಗಳು
ಮೊಟ್ಟೆ (1 ಅಥವಾ 2)
ತೆಂಗಿನ ಎಣ್ಣೆ (1 ಚಮಚ)
ಜೇನುತುಪ್ಪ (1 ಚಮಚ)
ಅಲೋವೆರಾ ಜೆಲ್ (ಅರ್ಧ ಕಪ್)
ನಿಂಬೆ ರಸ (ಅರ್ಧ ನಿಂಬೆ)
ಕ್ಯಾಸ್ಟರ್ ಆಯಿಲ್ (ಲಭ್ಯವಿದ್ದರೆ)
ಶಾಂಪೂ (ಕ್ಲೀನ್ ಮಾಡಲು)
ಈ ಎಲ್ಲಾ ಪದಾರ್ಥಗಳು ನಿಮಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿದ್ದು, ಇವುಗಳ ಬೆಲೆ 10 ರೂ.ಗಿಂತ ಕಡಿಮೆ ಇರುತ್ತದೆ.
STEP 1.ಕೂದಲನ್ನು ತೊಳೆಯಿರಿ
ಮೊದಲು ನಿಮ್ಮ ಕೂದಲನ್ನು ಶಾಂಪೂ ಬಳಸಿ ಚೆನ್ನಾಗಿ ತೊಳೆಯಿರಿ. ಇದರಿಂದ ಎಲ್ಲಾ ಕೊಳಕು ಮತ್ತು ಧೂಳು ಹೊರಬರುತ್ತದೆ. ಕೂದಲನ್ನು ಲಘುವಾಗಿ ಒಣಗಿಸಿ, ಆದರೆ ಒದ್ದೆಯಾಗಿ ಇರಿಸಿ.
STEP 2.ಮಿಶ್ರಣವನ್ನು ತಯಾರಿಸಿ
ಒಂದು ಬಟ್ಟಲಿನಲ್ಲಿ ಮೊಟ್ಟೆಯನ್ನು ಒಡೆಯಿರಿ. ಅದಕ್ಕೆ ತೆಂಗಿನ ಎಣ್ಣೆ, ಜೇನುತುಪ್ಪ, ಅಲೋವೆರಾ ಜೆಲ್ ಮತ್ತು ನಿಂಬೆ ರಸವನ್ನು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಬೀಟ್ ಮಾಡಿ.
STEP 4.ಮಾಸ್ಕ್ ಸೆಟ್ ಆಗಲು ಬಿಡಿ
ಕೂದಲಿನ ಸುತ್ತಲೂ ನೆಟ್ ಅಥವಾ ಟವಲ್ ಸುತ್ತಿಕೊಳ್ಳಿ. ಕನಿಷ್ಠ 1 ಗಂಟೆ ಹಾಗೆಯೇ ಬಿಡಿ. ಸಾಧ್ಯವಾದರೆ ಅರ್ಧ ದಿನ ಅಥವಾ ರಾತ್ರಿಯಿಡೀ ಹಾಗೆಯೇ ಬಿಡಿ, ಇದು ಉತ್ತಮ ಫಲಿತಾಂಶವನ್ನು ನೀಡುತ್ತದೆ.
STEP 5. ಕೂದಲನ್ನು ಚೆನ್ನಾಗಿ ತೊಳೆಯಿರಿ
ನಿಮ್ಮ ಕೂದಲನ್ನು ಮತ್ತೊಮ್ಮೆ ಚೆನ್ನಾಗಿ ತೊಳೆಯಿರಿ ಮತ್ತು ಯಾವುದೇ ಕಂಡಿಷನರ್ ಬಳಸಬೇಡಿ.
ಆರೋಗ್ಯಕರವಾಗಿ ಸುಂದರವಾಗಿ ಕಾಣುತ್ತೆ
ಈ ಮನೆಮದ್ದು ತುಂಬಾ ಸುಲಭ. ಅಗ್ಗ ಮತ್ತು ಪರಿಣಾಮಕಾರಿ. ನೀವು ಇದನ್ನು ಮನೆಯಲ್ಲಿಯೇ ಮಾಡಬಹುದು. ಜೊತೆಗೆ ಕೂದಲು ರೇಷ್ಮೆಯಂತೆ, ಹೊಳೆಯುವಂತೆ ಮತ್ತು ಸ್ಟ್ರೈಟ್ ಆಗಿ ಇರಿಸಬಹುದು. ಈ ಸುಲಭ ಹಂತಗಳನ್ನು ಅನುಸರಿಸಿದ ನಂತರ ನಿಮ್ಮ ಕೂದಲು ಎಷ್ಟು ಆರೋಗ್ಯಕರ ಮತ್ತು ಸುಂದರವಾಗಿ ಕಾಣುತ್ತದೆ ಎಂಬುದನ್ನು ನೋಡಿ. ಈ ಚಿಕಿತ್ಸೆಯು ನಿಮ್ಮ ಹಣವನ್ನು ಉಳಿಸುವುದಲ್ಲದೆ, ಕೂದಲನ್ನು ಬಲವಾಗಿ ಮತ್ತು ಸುಂದರವಾಗಿಡುತ್ತದೆ.