MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gowri Ganesha Habba Wishes
Ind vs Afg T20 Series
Bengaluru Metro Stations
Karnataka Power Crisis
Belagavi Cantonment Board
Today's Horoscope in Kannada
Satish Jarkiholi ED Complaint
BRICS Summit 2026
Agumbe Ghat Road Development
SSLC Toppers Reward
Bengaluru Tunnel Road Project
India-Russia Relations
Vijay Mallya
ED Investigation Satish Jarkiholi
Mangaluru Railway Zone
Devanahalli Land Dispute
Ganesh Festival Restrictions
  • Home
  • Entertainment
  • Drishti bottu ದತ್ತ ಬದಲಾಗ್ತಾನಾ, ಸೀರಿಯಲ್ಲೇ ಮುಗಿಯತ್ತಾ? ನಟ Rakshith Gowda ಎಂಟ್ರಿ ಏಕೆ? ಉತ್ತರ ಇಲ್ಲಿದೆ...

Drishti bottu ದತ್ತ ಬದಲಾಗ್ತಾನಾ, ಸೀರಿಯಲ್ಲೇ ಮುಗಿಯತ್ತಾ? ನಟ Rakshith Gowda ಎಂಟ್ರಿ ಏಕೆ? ಉತ್ತರ ಇಲ್ಲಿದೆ...

ದೃಷ್ಟಿಬೊಟ್ಟು ಧಾರಾವಾಹಿ ಅಂತ್ಯಗೊಳ್ಳುವ ಸುಳಿವು ಸಿಕ್ಕಿದ್ದು, ತಂಡದ ಫೋಟೋಶೂಟ್ ಮತ್ತು ಮುದ್ದುರಾಜ್ ಅನೂಪ್ ಅವರ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಈ ವದಂತಿಗೆ ಪುಷ್ಟಿ ನೀಡಿವೆ. ದತ್ತನ ಪಾತ್ರಧಾರಿ ವಿಜಯ್ ಸೂರ್ಯ ಬಿಗ್ ಬಾಸ್‌ಗೆ ಹೋಗುತ್ತಿರುವುದು ಧಾರಾವಾಹಿ ನಿಲ್ಲಲು ಕಾರಣ ಎನ್ನಲಾಗಿದೆ.

2 Min read
Author : Suchethana D
Published : Sep 15 2025, 12:31 PM IST
Share this Photo Gallery
  • FB
  • TW
  • Linkdin
  • Whatsapp
17
ದೃಷ್ಟಿಬೊಟ್ಟು ಸೀರಿಯಲ್​ ದಿ ಎಂಡ್​?
Image Credit : Instagram

ದೃಷ್ಟಿಬೊಟ್ಟು ಸೀರಿಯಲ್​ ದಿ ಎಂಡ್​?

ಇದೇ ಸೆಪ್ಟೆಂಬರ್​ 28ರಿಂದ Bigg Boss Kannada Seaon 12 ಷೋ ಆರಂಭವಾಗಲಿದೆ. ಇದಕ್ಕಾಗಿ ಕೆಲವು ಸೀರಿಯಲ್​ಗಳನ್ನೂ ಮುಗಿಸಲಾಗುತ್ತಿದೆ. ಬಿಗ್​ಬಾಸ್​ನಲ್ಲಿ ಪಾಲ್ಗೊಳ್ಳಲು ದೃಷ್ಟಿಬೊಟ್ಟು (Drishti Bottu) ಸೀರಿಯಲ್ ದತ್ತಾಬಾಯಿ ರೋಲ್​ ಮಾಡ್ತಿರೋ ನಟ ವಿಜಯ ಸೂರ್ಯ ಕೂಡ ಹೋಗಲಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ. ಇದೇ ಕಾರಣಕ್ಕೆ, ವಿಜಯ ಸೂರ್ಯ (Vijay Suriya) ಅವರು ದೃಷ್ಟಿ ಬೊಟ್ಟು ಸೀರಿಯಲ್​ನಿಂದ ಹೊರಕ್ಕೆ ಬಂದಿದ್ದಾರೆ ಎನ್ನುವ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸುದ್ದಿಯಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ದತ್ತನ ಸಾವು?
Image Credit : Instagram

ದತ್ತನ ಸಾವು?

ಅಷ್ಟಕ್ಕೂ ಸೀರಿಯಲ್​ನಲ್ಲಿ ಇದಾಗಲೇ ಮಸಿ ಬಳೆದುಕೊಂಡಿದ್ದ ದೃಷ್ಟಿ ತನ್ನ ನಿಜ ರೂಪವನ್ನು ತೋರಿಸಿದ್ದಾಳೆ. ಇವರಿಬ್ಬರ ನಡುವೆ ಬಣ್ಣದ ವಿಷಯವನ್ನೇ ಇಟ್ಟುಕೊಂಡು ಬೆಂಕಿ ಹಚ್ಚುವ ಪ್ಲ್ಯಾನ್​ ಮಾಡಿದ್ದ ದತ್ತನ ಅತ್ತಿಗೆ ಶರಾವತಿಗೆ ಸೋಲಾಗಿದೆ. ಇದೇ ಕಾರಣಕ್ಕೆ ಆಕೆ ದತ್ತನನ್ನು ಮುಗಿಸಲು ಸ್ಕೆಚ್​ ಹಾಕಿದ್ದಳು. ಈಗ ದತ್ತನ ಸಾವಿನ ಸುದ್ದಿಯೂ ಬಂದಾಗಿದೆ. ಆತನ ಕಾರು ಅಪ್ಪಚ್ಚಿಯಾಗಿದೆ ಎಂದೇ ತೋರಿಸಲಾಗಿದೆ.

Related Articles

Related image1
ಹೂವಿನ ಬಾಣದಂತೆ... ವೈರಲ್​ ಹಾಡಿಗೆ ಸ್ವೀಟ್​ ದನಿ ಕೊಟ್ಟ Naa Ninna Bidalaare ಹಿತಾ ಪುಟ್ಟಿ!
Related image2
Bigg Boss ಮೋಕ್ಷಿತಾ ಪೈ ಸದ್ದಿಲ್ಲದೇ ಮದುವೆಯಾದ್ರಾ? ನಟನ ಪರಿಚಯಿಸುತ್ತಲೇ ಮೌನ ಮುರಿದ ನಟಿ...
37
ದತ್ತನ ರೋಲ್​ ಬದಲಾಗುತ್ತಾ?
Image Credit : colors kannada instagram

ದತ್ತನ ರೋಲ್​ ಬದಲಾಗುತ್ತಾ?

ಇಷ್ಟು ಹೇಳುತ್ತಿದ್ದಂತೆಯೇ ದತ್ತನ ರೋಲ್​​ ಬದಲಾಗುತ್ತದೆ. ಆತನಿಗೆ ಪ್ಲಾಸ್ಟಿಕ್​ ಸರ್ಜರಿ ಮಾಡಿ ಹೊಸ ನಟನನ್ನು ತರಲಾಗುತ್ತದೆ ಎಂದೇ ಹೇಳಲಾಗುತ್ತಿದೆ. ಹಳೆಯ ದತ್ತ ವಿಜಯ ಸೂರ್ಯನನ್ನು ಸಾಯಿಸುವುದಿಲ್ಲ, ಬದಲಿಗೆ ಅವರನ್ನೇ ಕೋಮಾದಲ್ಲಿ ಇರಿಸುವಂತೆ ಮಾಡಿ ಬಿಗ್​ಬಾಸ್​​ನಿಂದ ಬಂದ ಮೇಲೆ ಸೀರಿಯಲ್​ ಮುಂದುವರೆಸಬಹುದು, ಇಲ್ಲದೇ ಅದಕ್ಕಿಂತಲೂ ಹೆಚ್ಚಾಗಿ ಸೀರಿಯಲ್​ಗೆ ಬೇರೆಯ ರೀತಿ ಟ್ವಿಸ್ಟ್​ ಕೊಟ್ಟು ಪ್ಲಾಸ್ಟಿಕ್​ ಸರ್ಜರಿ ಮಾಡಲಾಗುತ್ತದೆ ಎಂದೇ ವೀಕ್ಷಕರು ಅಂದುಕೊಂಡಿದ್ದರು.

47
ಮುದ್ದುರಾಜ ಅನೂಪ್​ ಪೋಸ್ಟ್​
Image Credit : Instagram

ಮುದ್ದುರಾಜ ಅನೂಪ್​ ಪೋಸ್ಟ್​

ಆದರೆ, ಇದೀಗ ದೃಷ್ಟಿಯ ತಮ್ಮನ ರೋಲ್​ ಮಾಡ್ತಿರೋ ಬಾಲಕ ಮುದ್ದುರಾಜ ಅನೂಪ್​ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಾಕಿದ್ದು, ಎಲ್ಲರೂ ಏನು ಎತ್ತ ಎಂದು ತಿಳಿಯಲಾಗದೇ ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ. 'ನಿಮ್ಮೆಲ್ಲರೊಂದಿಗೆ ನನ್ನ ಅತ್ಯುತ್ತಮ ಸ್ಮರಣೀಯ ಸಮಯವನ್ನು ಕಳೆದಿದ್ದೇನೆ. ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ ಮತ್ತು ಶೀಘ್ರದಲ್ಲೇ ಮತ್ತೆ ಈ ತಂಡದ ಭಾಗವಾಗಲು ಬಯಸುತ್ತೇನೆ' ಎಂದು ಬಾಲಕ ಬರೆದುಕೊಂಡಿದ್ದಾನೆ.

57
ಅಂತಿಮ ಫೋಟೋಶೂಟ್​
Image Credit : Instagram

ಅಂತಿಮ ಫೋಟೋಶೂಟ್​

ಹಾಗಿದ್ದರೆ ಸೀರಿಯಲ್​ ಮುಗಿಯುವುದು ಬಹುತೇಕ ಖಚಿತವಾಗಿದೆ. ಅಷ್ಟೇ ಅಲ್ಲದೇ ಇಡೀ ಟೀಮ್​ನವರು ಫೋಟೋಶೂಟ್​ ಕೂಡ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ವಿಜಯಸೂರ್ಯ ಇಲ್ಲ ಎನ್ನುವುದು ಮಾತ್ರ ಕುತೂಹಲಕ್ಕೆ ಕಾರಣವಾಗಿದೆ. ಸೀರಿಯಲ್​ ಮುಗಿಸುವುದೇ ಹೌದಾದರೆ ದತ್ತನನ್ನು ಸಾಯಿಸುವ ಅವಶ್ಯಕತೆ ಇತ್ತೇ ಎಂದು ಕೆಲವರು ಪ್ರಶ್ನಿಸುತ್ತಿದ್ದರೂ, ಕೊನೆಯಲ್ಲಿ ಸೀರಿಯಲ್​ ಟ್ವಿಸ್ಟ್​ ಪಡೆದು ಎಲ್ಲರೂ ಒಂದಾಗುವಂತೆ ಮಾಡುವ ಸಾಧ್ಯತೆ ಇದೆ.

67
ನಿರ್ಮಾಪಕರ ಫೋಟೋ
Image Credit : Instagram

ನಿರ್ಮಾಪಕರ ಫೋಟೋ

ಆದರೆ, ಇನ್ನೊಂದು ಕುತೂಹಲ ಎಂದರೆ ಬಾಲಕ ಹಾಕಿರುವ ಪೋಸ್ಟ್​ನಲ್ಲಿ ನಟ ರಕ್ಷಿತ್​ ಗೌಡ (Rakshith Gowda) ಕಾಣಿಸಿಕೊಂಡಿದ್ದಾರೆ. ಹಾಗಿದ್ದರೆ, ದತ್ತಾಬಾಯಿ ಆಗಿ ರಕ್ಷಿತ್​ ಅವರು ಬರುತ್ತಿದ್ದಾರೆಯೇ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. 

77
ನಿರ್ಮಾಪಕರ ಜೊತೆ ಟೀಂ
Image Credit : Instagram

ನಿರ್ಮಾಪಕರ ಜೊತೆ ಟೀಂ

ಆದರೆ, ಅಸಲಿಗೆ ದೃಷ್ಟಿಬೊಟ್ಟು ಸೀರಿಯಲ್​ನ ನಿರ್ಮಾಪಕರಲ್ಲಿ ಅವರೂ ಒಬ್ಬರು. ಇನ್ನೊಬ್ಬರು ಅನುಷಾ ಶಿವಪ್ರಸಾದ್​. ಇವರಿಬ್ಬರೂ ಈ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ದರಿಂದ ಅಲ್ಲಿಗೆ ದೃಷ್ಟಿಬೊಟ್ಟು ಸೀರಿಯಲ್​​ ಅಂತ್ಯ ಕಾಣುವುದು ಖಚಿತವಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ದೃಷ್ಟಿ ಬೊಟ್ಟು ಧಾರಾವಾಹಿ
ವಿಜಯ್ ಸೂರ್ಯ
ಬಿಗ್ ಬಾಸ್ ಕನ್ನಡ
ಕಲರ್ಸ್ ಕನ್ನಡ

Latest Videos
Recommended Stories
Recommended image1
ಡೋಲು-ಮೋಲು, ಕಿತ್ತೊಗಿರೋ ಆಕ್ಟಿಂಗ್: ಬೆಂಕಿ ಹಚ್ಚಿ ತೆಪ್ಪೆಗೆ ಕುಳಿತ ಶಾಸ್ತ್ರಿ! ಗಗನ್ ಗರಂ!
Recommended image2
ತಮ್ಮ ಪುಟ್ಟ ಅಧಿಪತಿಗೆ ವಿಶೇಷ ಹೆಸರಿನಿಟ್ಟ ಡಾಲಿ ಧನಂಜಯ್; ಮಗನ ಫೋಟೋ ಹಂಚಿಕೊಂಡ ನಟ
Recommended image3
ಒಂದಲ್ಲ, ಎರಡಲ್ಲ.. 'ಡಿಸಿ' ನಟಿಯ ಕೈಯಲ್ಲಿದೆ 8 ಸಿನಿಮಾಗಳು: ವಾಮಿಕಾ ಗಬ್ಬಿ ಹವಾ ಫುಲ್ ಜೋರು
Related Stories
Recommended image1
ಹೂವಿನ ಬಾಣದಂತೆ... ವೈರಲ್​ ಹಾಡಿಗೆ ಸ್ವೀಟ್​ ದನಿ ಕೊಟ್ಟ Naa Ninna Bidalaare ಹಿತಾ ಪುಟ್ಟಿ!
Recommended image2
Bigg Boss ಮೋಕ್ಷಿತಾ ಪೈ ಸದ್ದಿಲ್ಲದೇ ಮದುವೆಯಾದ್ರಾ? ನಟನ ಪರಿಚಯಿಸುತ್ತಲೇ ಮೌನ ಮುರಿದ ನಟಿ...
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved