- Home
- Entertainment
- ಶರತ್-ದುರ್ಗಾ ಮದ್ವೆ ಫಿಕ್ಸ್? ದೀಪಾಗೆ ಸಿಕ್ತು ಗಂಡನ ಕಿಸ್! ರೋಚಕ ತಿರುವಿನಲ್ಲಿ ಎರಡು ಸೀರಿಯಲ್ಸ್
ಶರತ್-ದುರ್ಗಾ ಮದ್ವೆ ಫಿಕ್ಸ್? ದೀಪಾಗೆ ಸಿಕ್ತು ಗಂಡನ ಕಿಸ್! ರೋಚಕ ತಿರುವಿನಲ್ಲಿ ಎರಡು ಸೀರಿಯಲ್ಸ್
ದುರ್ಗಾ ಮತ್ತು ಶರತ್ ಮದುವೆಯಾಗಬೇಕೆಂಬ ಪ್ರೇಕ್ಷಕರ ಬಯಕೆ. ಮಾಯಾಳ ಕುತಂತ್ರದಿಂದ ಅಂಬಿಕಾಳ ಸಾವು. ಶರತ್ ತಾಯಿಯ ಪಟ್ಟು. ಹಿತಾಳ ಆಸೆ. ದುರ್ಗಾ-ಶರತ್ ಮದುವೆ ಫಿಕ್ಸ್ ಆಗಿದೆಯೇ?

ದುರ್ಗಾ ಮತ್ತು ಶರತ್ ಮದ್ವೆಗೆ ವೀಕ್ಷಕರ ಆಸೆ
ದುರ್ಗಾ ಮತ್ತು ಶರತ್ ಮದ್ವೆಯಾಗಬೇಕು ಎಂದು ನಾ ನಿನ್ನ ಬಿಡಲಾರೆ ಸೀರಿಯಲ್ ಪ್ರೇಮಿಗಳು ಕನಸು ಕಾಣುತ್ತಲೇ ಇದ್ದಾರೆ. ಇವರಿಬ್ಬರ ಜೋಡಿಗೆ ಜೈಜೈ ಎನ್ನುತ್ತಿದ್ದಾರೆ. ಆದರೆ, ಮಾಯಾ ಜೊತೆ ಶರತ್ ಮದುವೆ ಫಿಕ್ಸ್ ಆಗಿದೆ. ಶರತ್ ಮೊದಲ ಪತ್ನಿ ಅಂಬಿಕಾ ಆತ್ಮಕ್ಕೂ ದುರ್ಗಾ ಮತ್ತು ಶರತ್ ಒಂದಾಗುವ ತವಕ. ಮೋಸದ ಜಾಲದಿಂದ ಇದೇ ಮಾಯಾ ಅಂಬಿಕಾಳನ್ನು ಸಾಯಿಸಿರುವುದು ಯಾರಿಗೂ ಗೊತ್ತಿಲ್ಲ. ಆದರೆ ಶರತ್ ತಾಯಿಗೆ ಅಂಬಿಕಾಳ ಆತ್ಮದ ಶಕ್ತಿಯನ್ನು ಕಸಿಯಬೇಕು ಎನ್ನುವ ತವಕ. ಆದ್ದರಿಂದ ವಿಲನ್ ಮಾಯಾ ಜೊತೆ ಶರತ್ ಮದುವೆಗೆ ಆಕೆ ಪಟ್ಟು ಹಿಡಿದಿದ್ದಾರೆ.
ಹಿತಾಳ ಅಮ್ಮನಾಗಿ ದುರ್ಗಾ
ಆದರೆ, ಶರತ್ ಮಗಳು ಹಿತಾಗೆ ಅಮ್ಮನಂತೆ ಕಾಣುತ್ತಿರುವವಳು ದುರ್ಗಾ. ಅವಳಿಗೂ ತನ್ನ ಅಪ್ಪನ ಜೊತೆ ದುರ್ಗಾಳ ಮದುವೆ ಮಾಡಿಸುವ ಆಸೆ. ಮಾಯಾ ಕಂಡರೆ ಅವಳಿಗೆ ಆಗುವುದಿಲ್ಲ. ಏಕೆಂದರೆ ದುರ್ಗಾ ಕೂಡ ಹಿತಾಳನ್ನು ಅಮ್ಮನಂತೆಯೇ ಪ್ರೀತಿಸುತ್ತಿದ್ದಾಳೆ. ಹಾಗೆಂದು ಶರತ್ ಮತ್ತು ಮಾಯಾ ಪ್ರೀತಿ ಮಾಡುತ್ತಿಲ್ಲ. ಇದೇ ಈ ಸೀರಿಯಲ್ ಕುತೂಹಲ ಕಥನ.
ವೀಕ್ಷಕರ ಆಸೆ ಈಡೇರಿಕೆ!
ಇಲ್ಲಿ ನಾಯಕ-ನಾಯಕಿ ಲವ್ ಮಾಡಲ್ಲ, ಆದರೆ ಬಹುತೇಕರಿಗೆ ಇವರಿಬ್ಬರೂ ಒಂದಾಗಲಿ ಎನ್ನುವ ಆಸೆ. ವಿಲನ್ಗಳು ಮಾತ್ರ ಇವರಿಬ್ಬರ ಮದುವೆ ಆಗದಂತೆ ತಡೆಯುತ್ತಿದ್ದಾರೆ. ಅಂಬಿಕಾ ಸತ್ತ ರೀತಿಯಲ್ಲಿಯೇ ದುರ್ಗಾಳನ್ನೂ ಮುಗಿಸುವ ಪ್ಲ್ಯಾನ್ ಮಾಡಿದ್ದಳು ಮಾಯಾ. ಆದರೆ ದುರ್ಗಾಳನ್ನು ಬೆಂಕಿಯ ಜ್ವಾಲೆಯಿಂದ ಬದುಕಿಸಿದ್ದಾನೆ ಶರತ್. ಇದೀಗ ಶರತ್ ಮತ್ತು ದುರ್ಗಾ ಮದುವೆಯಾಗುವ ಕಾಲ ಸನ್ನಿಹಿತವಾಗಿದೆ. ಮುಂದಿನ ಪ್ರೊಮೋದಲ್ಲಿ ಇವರ ಮದುವೆಯ ದೃಶ್ಯ ತೋರಿಸಲಾಗಿದೆ. ಹಾಗಿದ್ದರೆ ಇವರ ಮದ್ವೆ ಆಯ್ತಾ?
ಬ್ರಹ್ಮಗಂಟುವಿನಲ್ಲಿ ಸೌಂದರ್ಯಳಿಗೆ ಟ್ವಿಸ್ಟ್
ಅದೇ ಇನ್ನೊಂದೆಡೆ, ಬ್ರಹ್ಮಗಂಟು ಸೀರಿಯಲ್ನಲ್ಲಿ ಚಿರುಗೆ ಅತ್ತಿಗೆ ನಿಜ ಗುಣವನ್ನು ಬಯಲು ಮಾಡುವುದು ನಾಯಕಿ ದೀಪಾಗೆ ಕಷ್ಟವಾಗಿದೆ. ಅವಳು ಎಲ್ಲರನ್ನೂ ಕೊಲ್ಲಿಸಲು ಮಾಡಿರುವ ಸಂಚು ದೀಪಾಗೆ ತಿಳಿದಿದ್ದರೂ ಅದಕ್ಕೆ ಸಾಕ್ಷಿ ಇಲ್ಲ. ಇದೀಗ ಮೋಸದಿಂದ ಅರ್ಚನಾಳ ಮದುವೆಯನ್ನು ಯಾವನದ್ದೋ ಜೊತೆ ಮಾಡಿಸಲು ಹೊರಟಿದ್ದಾಳೆ ಸೌಂದರ್ಯ. ಅರ್ಚನಾ ಮದುವೆಯಾಗಬೇಕು ಎಂದಿರೋ ರಾಹುಲ್ಗೆ ಅಪಘಾತ ಮಾಡಿಸಿದ್ದಾಳೆ. ಆದರೆ ಇದಕ್ಕೆ ಸಾಕ್ಷಿ ಇಲ್ಲ.
ಅರ್ಚನಾ-ರಾಹುಲ್ ಮದುವೆಗೆ ದೀಪಾ ಪಟ್ಟು
ಏನೇ ಆದರೂ ಅರ್ಚನಾ ಮತ್ತು ರಾಹುಲ್ನನ್ನು ಮದುವೆ ಮಾಡಿಸುವುದಾಗಿ ಸೌಂದರ್ಯಗೆ ದೀಪಾ ಸವಾಲು ಹಾಕಿದ್ರೆ, ಅತ್ತ ಸೌಂದರ್ಯ ಈ ಮದುವೆ ಆಗಲು ಬಿಡುವುದಿಲ್ಲ. ಅರ್ಚನಾ ಮದುವೆ ಬೇರೆಯವರ ಜೊತೆ ಮಾಡಿಸುವುದಾಗಿ ಹೇಳಿದ್ದಾಳೆ.
ಸೌಂದರ್ಯಳಿಗೆ ದೀಪಾ ಸವಾಲು
ಇದೀಗ ತಾನಿಲ್ಲದೇ ನಿನ್ನಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಸೌಂದರ್ಯ ಸವಾಲು ಹಾಕಿದ್ದರಿಂದಲೇ ತನ್ನ ಹೊಲಿಗೆ ಅಂಗಡಿಗೆ ಸೌಂದರ್ಯಳ ಹೆಸರು ಫೋಟೋ ಇಟ್ಟುಕೊಂಡು ವ್ಯವಹಾರ ಕುದುರಿಸಿಕೊಳ್ತಿದ್ದಾಳೆ ದೀಪಾ. ಇದರಿಂದ ಸೌಂದರ್ಯ ಸೊಕ್ಕು ಅಡಗುವ ಸಮಯ ಬಂದಿದೆ.
ಮಿಲನಾ ನಾಗರಾಜ್ ಮಾಹಿತಿ
ಈ ಎರಡೂ ಸೀರಿಯಲ್ಗಳ ಟ್ವಿಸ್ಟ್ ಕುರಿತು ನಟಿ ಮಿಲನಾ ನಾಗರಾಜ್ ಮಾಹಿತಿ ನೀಡಿದ್ದಾರೆ. ಅದೇನೆಂದು ಈ ಕೆಳಗಿನ ಲಿಂಕ್ನಲ್ಲಿದೆ ನೋಡಿ...