- Home
- Entertainment
- Sandalwood
- ಸಿನಿಮಾ ಬಿಟ್ಟು ಹೋಟೆಲ್ ಸೇರಿಕೊಂಡ್ರಾ Sapthami Gowda? ಕಾಂತಾರ ಬೆಡಗಿ ದೋಸೆಗೆ ಸಕತ್ ಡಿಮಾಂಡ್!
ಸಿನಿಮಾ ಬಿಟ್ಟು ಹೋಟೆಲ್ ಸೇರಿಕೊಂಡ್ರಾ Sapthami Gowda? ಕಾಂತಾರ ಬೆಡಗಿ ದೋಸೆಗೆ ಸಕತ್ ಡಿಮಾಂಡ್!
ಕಾಂತಾರ ಬೆಡಗಿ ಸಪ್ತಮಿ ಗೌಡ ಹೋಟೆಲ್ ಒಂದರಲ್ಲಿ ದೋಸೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದಕ್ಕೆ ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗಿದೆ.

ಪ್ಯಾನ್ ಇಂಡಿಯಾ ಸ್ಟಾರ್
ಕಾಂತಾರ ಸಿನಿಮಾ ಬಳಿಕ ನಟಿ ಸಪ್ತಮಿ ಗೌಡ (Sapthami Gowda) ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಇವರಿಗೆ ಬೇರೆ ಬೇರೆ ಭಾಷೆಗಳಿಂದಲೂ ಡಿಮಾಂಡ್ ಹೆಚ್ಚಾಗಿದೆ. ‘ಕಾಂತಾರ’ ಚಿತ್ರದ ನಂತರ ತೆಲುಗು, ಹಿಂದಿ ಚಿತ್ರರಂಗಕ್ಕೂ ಹೋಗಿ ಬಂದಿರುವ ನಟಿ, ಸದ್ಯ ಕನ್ನಡದಲ್ಲಿ ಸತೀಶ್ ನೀನಾಸಂ ಜೊತೆಗೆ ‘ದಿ ರೈಸ್ ಆಫ್ ಅಶೋಕ’ ಹಾಗೂ ಡಾಲಿ ಧನಂಜಯ ಜೊತೆಗೆ ‘ಹಲಗಲಿ’ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅವರ ನಟನೆಯ ‘ದಿ ರೈಸ್ ಆಫ್ ಅಶೋಕ’ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ‘ಹಲಗಲಿ’ ಚಿತ್ರಕ್ಕೆ ಶೂಟಿಂಗ್ ನಡೆಯುತ್ತಿದೆ.
ಹೋಟೆಲ್ನಲ್ಲಿ ದೋಸೆ ಮಾಡಿದ ನಟಿ
ಇಷ್ಟೆಲ್ಲಾ ಇರುವಾಗಲೇ ನಟಿ ಹೋಟೆಲ್ ಒಂದರಲ್ಲಿ ದೋಸೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಮೀನಾಕ್ಷಿ ಕಾಫಿ ಬಾರ್ನಲ್ಲಿ ನಟಿ ದೋಸೆ ಹಾಕಿರುವುದಾಗಿ ನ್ಯೂಸ್ಬೀಟ್ ಕನ್ನಡ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಲಾಗಿದೆ. ನಟಿ ಇದರಲ್ಲಿ ದೋಸೆ ಹುಯ್ಯುವುದನ್ನು ನೋಡಬಹುದಾಗಿದೆ. ಹಿಂದೆ ಇದ್ದವರೆಲ್ಲಾ ಇದನ್ನು ನೋಡುತ್ತಿದ್ದು, ಈ ದೋಸೆಗೆ ಸಕತ್ ಡಿಮಾಂಡ್ ಇದೆ ಎನ್ನುವುದು ತಿಳಿಯುತ್ತದೆ.
ನಟನೆ ಬಿಟ್ಟು ದೋಸೆ
ನಟನೆ ಬಿಟ್ಟು ಹೋಟೆಲ್ನಲ್ಲಿ ದೋಸೆ ಮಾಡುವುದಕ್ಕೆ ನಟಿ ಸೇರಿಕೊಂಡ್ರಾ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಮತ್ತೆ ಕೆಲವರು ಪಾಪ ಅವರು ಎಷ್ಟೇ ತಿರುಗಿಸಿದ್ರೂ ದೋಸೆ ದೊಡ್ಡನೇ ಆಗ್ತಿಲ್ಲ ಎಂದು ನಟಿಯ ಕಾಲೆಳೆಯುತ್ತಿದ್ದಾರೆ.
ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಎಂಟ್ರಿ
ಇನ್ನು ನಟಿಯ ಕುರಿತು ಹೇಳುವುದಾದರೆ, ನಟಿಗೆ ಈಗ 29 ವರ್ಷ ವಯಸ್ಸು. ಇನ್ನು ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ನಟಿ ಸಪ್ತಮಿ ಗೌಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಡಾಲಿ ಧನಂಜಯ್ ಜೊತೆ ತೆರೆ ಹಂಚಿಕೊಂಡರು. 2ನೇ ಸಿನಿಮಾ ಕಾಂತಾರದಲ್ಲಿ ನಟ ರಿಷಬ್ ಶೆಟ್ಟಿಗೆ ಜೋಡಿಯಾಗಿ ನಟಿಸಿದ ಬಳಿಕ ಸಪ್ತಮಿ ಗೌಡ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಜೊತೆಗೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶನ ಮಾಡಿದ್ದ ವಿವೇಕ್ ಅಗ್ನಿಹೋತ್ರಿ ಅವರ ದಿ ವ್ಯಾಕ್ಸಿನ್ ವಾರ್ ಚಿತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್ಗೆ ಸಪ್ತಮಿ ಎಂಟ್ರಿ ಕೊಟ್ಟು, ಸಣ್ಣ ಪಾತ್ರದಲ್ಲೇ ಎಲ್ಲರ ಗಮನ ಸೆಳೆದರು.
ಜೀವನದ ವಿಷಯ ಬಹಿರಂಗ
ಹಿಂದೊಮ್ಮೆ ನಟಿ ತಮ್ಮ ಜೀವನದ ಕೆಲವೊಂದು ವಿಷಯಗಳನ್ನು ಬಹಿರಂಗಪಡಿಸಿದ್ದರು. ಅದೇ ವೇಳೆ, ಕಾಂತಾರದ ಬಳಿಕ ಸಂಭಾವನೆ ಹೆಚ್ಚಾಯ್ತಾ ಎನ್ನುವ ಪ್ರಶ್ನೆಗೂ ಉತ್ತರಿಸಿದ್ದರು. ತಮ್ಮ ತಂದೆ ಪೊಲೀಸ್ ಅಧಿಕಾರಿಯಾಗಿದ್ದವರು. ಅವರೇ ನನಗೆ ಎಲ್ಲಾ ಎಂದಿದ್ದ ನಟಿ, ಅಪ್ಪನಿಗೆ ಹೇಳದೇ ಏನೂ ಕೆಲಸ ಮಾಡ್ತಿರಲಿಲ್ಲ. ರಾತ್ರಿ ಕದ್ದು ಮುಚ್ಚಿ ಎಲ್ಲೂ ಹೋಗಿಲ್ಲ. ಸ್ಕೂಲ್-ಕಾಲೇಜಿನ ಪರೀಕ್ಷೆಯಲ್ಲಿ ಕಾಪಿ ಅಂತೂ ಮಾಡೇ ಇಲ್ಲ. ಕಾಲೇಜಿಗೆ ಬಂಕ್ ಮಾಡಿದ್ದೇನೆ ಆದ್ರೆ ಆವಾಗ್ಲೂ ಮನೆಯಲ್ಲಿ ಹೇಳಿದ್ದೆ. ದುಡ್ಡಂತೂ ಕದ್ದೇ ಇಲ್ಲ ಎಂದೆಲ್ಲಾ ಹೇಳಿದ್ದರು.
ಸಂಭಾವನೆಯ ಬಗ್ಗೆ ನಟಿ ಮಾತು
ಕೊನೆಗೆ ಸಂಭಾವನೆಯ ವಿಷಯದ ಕುರಿತು ಪ್ರಶ್ನೆ ಕೇಳಲಾಗಿತ್ತು. ಸಾಮಾನ್ಯವಾಗಿ ಚಿತ್ರ ತಾರೆಯರು ಒಂದು ಹಿಟ್ ಚಿತ್ರ ಕೊಟ್ಟರೆ, ಸಹಜ ಎಂಬಂತೆ ಅವರ ಸಂಭಾವನೆ ಕೂಡ ಹೆಚ್ಚಾಗುತ್ತದೆ. ಅದರಂತೆಯೇ, ಕಾಂತಾರದ ಯಶಸ್ಸಿನ ಬಳಿಕ ಸಿನಿಮಾಕ್ಕೆ ಪಡೆಯುವ ಸಂಭಾವನೆ ಎಷ್ಟು ಪಟ್ಟು ಜಾಸ್ತಿ ಆಗಿದೆ ಎಂಬ ಪ್ರಶ್ನೆಯನ್ನು ನಟಿಯ ಮುಂದಿಟ್ಟಾಗ, ಕಾಂತಾರ ಚಿತ್ರದ ಪ್ರೊಡಕ್ಷನ್ ಮಾಡಿದವರೇ ಎರಡನೆಯ ಚಿತ್ರದ ಪ್ರೊಡಕ್ಷನ್ ಕೂಡ ಮಾಡಿದ್ರು. ಸೋ ನಾನು ಮೊದಲ ಚಿತ್ರಕ್ಕೂ ಪೇಮೆಂಟ್ ಕೇಳಿರಲಿಲ್ಲ, ಎರಡನೆಯ ಚಿತ್ರಕ್ಕೂ ಕೇಳಿಲ್ಲ ಎಂದಿದ್ದರು.
7-8 ಪಟ್ಟು ಜಾಸ್ತಿ ಸಂಭಾವನೆ?
ಆದರೆ ಅವರಾಗಿಯೇ 7-8 ಪಟ್ಟು ಜಾಸ್ತಿ ಸಂಭಾವನೆ ಕೊಟ್ಟರು ಎಂದು ನಟಿ ರಿವೀಲ್ ಮಾಡಿದ್ದರು. ಆದರೆ ಎಷ್ಟು ಎನ್ನುವ ಬಗ್ಗೆ ಅವರು ರಿವೀಲ್ ಮಾಡಲಿಲ್ಲ. ಕಾಂತಾರದಲ್ಲಿ ನಾನು ಒಂದೂವರೆ ಕೋಟಿ ರೂಪಾಯಿ ಸಂಭಾವನೆ ಪಡೆದೆ ಎಂದು ದೊಡ್ಡ ಮ್ಯಾಗಜೀನ್ ಒಂದರಲ್ಲಿ ಪ್ರಕಟವಾಯ್ತು. ಅದನ್ನು ನೋಡಿ ನನಗೆ ತುಂಬಾ ಖುಷಿಯಾಯ್ತು. ಮುಂದೆ ಇಷ್ಟು ದುಡ್ಡು ಪಡೆಯುವ ಹಾಗೆ ಆಗಲಿ ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ ಎಂದಿದ್ದರು. ಅದರ ವಿಡಿಯೋಗಳ ಮತ್ತೆ ವೈರಲ್ ಆಗುತ್ತಿವೆ.
ಬರುತ್ತಿರುವ ಚಿತ್ರಗಳ ಬಗ್ಗೆ ನಟಿ ಮಾತು
ಇದೇ ವೇಳೆ ಈಗ ತಮಗೆ ಬರುತ್ತಿರುವ ಚಿತ್ರಗಳ ಬಗ್ಗೆಯೂ ಮಾತನಾಡಿರುವ ನಟಿ, ‘ಕಾಂತಾರ’ ಚಿತ್ರದ ಎಫೆಕ್ಟೋ ಏನೋ, ಹೆಚ್ಚೆಚ್ಚು ಅದೇ ರೀತಿಯ ಪಾತ್ರಗಳು ಬರುತ್ತಿವೆ. ನಾನು ಇಂಥಾ ಕಥೆಗಳ ಜೊತೆಗೆ ಕಮರ್ಷಿಯಲ್ ಸಿನಿಮಾಗೆ ಎದುರು ನೋಡುತ್ತಿದ್ದೇನೆ. ಆದರೆ ರೆಗ್ಯೂಲರ್ ಕಮರ್ಷಿಯಲ್ ಕತೆಗಳು ಕಡಿಮೆ ಬರುತ್ತಿವೆ ಎಂದಿದ್ದಾರೆ.