- Home
- Entertainment
- Bigg Bossಗೆ ಎಂಟ್ರಿ ಕೊಡಲಿದ್ದಾರೆ National crush 'ಟಗರು ಪುಟ್ಟಿ'? RCB ಫ್ಯಾನ್ಸ್ ಫುಲ್ ಖುಷ್!
Bigg Bossಗೆ ಎಂಟ್ರಿ ಕೊಡಲಿದ್ದಾರೆ National crush 'ಟಗರು ಪುಟ್ಟಿ'? RCB ಫ್ಯಾನ್ಸ್ ಫುಲ್ ಖುಷ್!
ಕ್ರಿಕೆಟ್ ಪ್ರೇಮಿಗಳ ನ್ಯಾಷನಲ್ ಕ್ರಷ್, ಟಗರು ಪುಟ್ಟಿ, ಅಂತರಾಷ್ಟ್ರೀಯ ಖ್ಯಾತಿಯ ಕ್ರಿಕೆಟ್ ಪಟು ಈ ಬಾರಿ ಬಿಗ್ಬಾಸ್ ಸೀಸನ್ 12ಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಇದೆ. ಏನಿದು ವಿಷ್ಯ?

ಜೋರಾಗಿದೆ ಬಿಗ್ಬಾಸ್ ಹವಾ
ಈಗ ಏನಿದ್ರೂ ಕನ್ನಡದಲ್ಲಿಯೂ ಬಿಗ್ಬಾಸ್ (Bigg Boss 12) ಹವಾ ಜೋರಾಗಿಯೇ ನಡೆದಿದೆ. ಯಾರಾರು ಈ ಷೋಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಬಗ್ಗೆ ಇದಾಗಲೇ ಟೀಂ ಡೇಟ್ ಕೂಡ ಅನೌನ್ಸ್ ಮಾಡಿದೆ. ಸೆಪ್ಟೆಂಬರ್ 28ರಿಂದ ಷೋ ಆರಂಭವಾಗಲಿದೆ. ಮಾಮೂಲಿನಂತೆ ಕಲರ್ಸ್ ಕನ್ನಡದಲ್ಲಿಯೇ ಈ ಬಾರಿಯೂ ಈ ರಿಯಾಲಿಟಿ ಷೋ ನಡೆಯಲಿದೆ.
ಸ್ಪರ್ಧಿಗಳ ಬಗ್ಗೆ ಕುತೂಹಲ
ಈ ಬಾರಿ ಯಾರು ಸ್ಪರ್ಧಿಸಲಿದ್ದಾರೆ ಎನ್ನುವ ಬಗ್ಗೆ ಆರಂಭಿಕ ಲಿಸ್ಟ್ ಕೂಡ ಬಿಡುಗಡೆಯಾಗಿದೆ. ಆದರೆ ಅಂತಿಮವಾಗಿ ಯಾರ್ಯಾರು ಇರಲಿದ್ದಾರೆ ಎನ್ನುವ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ. ಈ ಮಧ್ಯೆಯೇ ಹಲವು ಹೆಸರುಗಳು ಕೂಡ ಕೇಳಿಬರುತ್ತಿವೆ.
ಬಿಗ್ಬಾಸ್ ಇತಿಹಾಸದಲ್ಲಿ ಮೊದಲ ಬಾರಿ...
ಆದರೆ, ಇದೀಗ ಬಿಗ್ಬಾಸ್ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಎನ್ನುವಂತೆ, ಅಂತರಾಷ್ಟ್ರೀಯ ಖ್ಯಾತಿಯ ಕ್ರಿಕೆಟ್ ಪಟು, 23 ವರ್ಷದ ಯುವತಿ ಶ್ರೇಯಾಂಕಾ ಪಾಟೀಲ್ (Shreyanka Patil in BBK 12) ಎನ್ನುವ ಮಾತು ಕೇಳಿಬರುತ್ತಿದೆ. ಅಷ್ಟಕ್ಕೂ RCB ಫ್ಯಾನ್ಸ್ಗೆ ಇವರ ಹೆಸರು ಗೊತ್ತಿದ್ದದ್ದೇ.
ಕನ್ನಡತಿ ಶ್ರೇಯಾಂಕ ಪಾಟೀಲ್
ಕ್ರಿಕೆಟ್ಗೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಸೂಪರ್ಸ್ಟಾರ್ ಆಗಿ ಮೆರೆದವರು ಟೀಮ್ ಇಂಡಿಯಾ ಆಲ್ರೌಂಡರ್, ಕನ್ನಡತಿ ಶ್ರೇಯಾಂಕ ಪಾಟೀಲ್. ಇವರು ಆರ್‌ಸಿಬಿ ತಂಡದ ಬೆಡಗಿ, ಭಾರತ ತಂಡದ ಬೆಸ್ಟ್ ಕ್ರಿಕೆಟರ್ ಮತ್ತು ನಮ್ಮ ಕನ್ನಡತಿ ಎಂದೇ ಫೇಮಸ್ ಆದವರು. ಇವರು ಇದೀಗ ಬಿಗ್ಬಾಸ್ ಕನ್ನಡದ 12ನೇ ಸೀಸನ್ಗೆ ಬರಲಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ.
'ಟಗರು ಪುಟ್ಟಿ' ಎಂಬ ಅಡ್ಡ ಹೆಸರು
ಅಷ್ಟಕ್ಕೂ ಶ್ರೇಯಾಂಕಾ ಪಾಟೀಲ್ ಸದ್ಯ 'ಟಗರು ಪುಟ್ಟಿ' ಎಂದು ಕರೆಸಿಕೊಳ್ಳುತ್ತಿದ್ದಾರೆ. ಇವರು ನ್ಯಾಷನಲ್ ಕ್ರಷ್ ಕೂಡ ಆಗಿದ್ದಾರೆ. ಶ್ರೇಯಾಂಕಾ ಪಾಟೀಲ್ ಈಗ ದೊಡ್ಡ ಸ್ಟಾರ್ ಕ್ರಿಕೆಟರ್ ಆಗಿ ಬೆಳೆದು ನಿಂತಿರುವುದಕ್ಕೆ ತಂದೆಗೂ ಹೆಮ್ಮೆ ಇದೆ.
ವಿರಾಟ್ ಕೊಹ್ಲಿ ಅಪ್ಪಟ ಅಭಿಮಾನಿ
ಈಚೆಗೆ ಇವರು ಸಕತ್ ಸದ್ದು ಮಾಡಿದ್ದು, ತಮ್ಮ ತಂದೆಗೆ ಭರ್ಜರಿ ಉಡುಗೊರೆ ನೀಡುವ ಮೂಲಕ. ತಮ್ಮ ಮಗಳನ್ನು ಈ ಹಂತಕ್ಕೆ ತಂದು ನಿಲ್ಲಿಸಲು ಸಾಕಷ್ಟು ಕಷ್ಟಪಟ್ಟಿದ್ದಾರೆ ಇವರ ತಂದೆ. ಇಷ್ಟೆಲ್ಲಾ ಕಷ್ಟಪಟ್ಟು ಬೆಳೆಸಿದ ಕಾರಣಕ್ಕೆ ಶ್ರೇಯಾಂಕಾ ಪಾಟೀಲ್ ಅವರು, 35 ಲಕ್ಷ ರೂಪಾಯಿ ಮೌಲ್ಯದ ಟೋಯೋಟಾ ಇನೋವಾ ಕ್ರ್ಸೈಸ್ಟಾ ಕಾರನ್ನು ಉಡುಗೊರೆಯಾಗಿ ನೀಡಿ ಸುದ್ದಿ ಮಾಡಿದ್ದರು. ಇವರು ಕ್ರಿಕೆಟಿಗ ವಿರಾಟ್ ಕೊಹ್ಲಿ ಅಪ್ಪಟ ಅಭಿಮಾನಿ
ಬಲಗೈ ಆಫ್-ಬ್ರೇಕ್ ಬೌಲರ್
ಇನ್ನು ಶ್ರೇಯಾಂಕಾ ಪಾಟೀಲ್ ಅವರ ಕುರಿತು ಹೇಳುವುದಾದರೆ, ಇವರು ಹುಟ್ಟಿದ್ದು ಬೆಂಗಳೂರಿನಲ್ಲಿ. ಜುಲೈ 31, 2002 ಹುಟ್ಟಿದ ಇವರಿಗೆ ಈಗ 23 ವರ್ಷ ವಯಸ್ಸು. ಕರ್ನಾಟಕದ ಕ್ರಿಕೆಟಿಗರಾಗಿದ್ದು, ಬಲಗೈ ಆಫ್-ಬ್ರೇಕ್ ಬೌಲರ್ ಆಗಿ ಆಡುತ್ತಾರೆ.
RCB ಮಹಿಳಾ ತಂಡದ ಕಾಯಂ ಆಟಗಾರ್ತಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ತಂಡದ ಕಾಯಂ ಆಟಗಾರ್ತಿಯಾಗಿದ್ದು, WPL 2024 ರಲ್ಲಿ ಪರ್ಪಲ್ ಕ್ಯಾಪ್ ಮತ್ತು ಎಮರ್ಜಿಂಗ್ ಪ್ಲೇಯರ್ ಪ್ರಶಸ್ತಿ ಗೆದ್ದ ಮೊದಲ ಆಟಗಾರ್ತಿಯಾಗಿದ್ದಾರೆ. WPL 2025ರಲ್ಲಿ ಇವರು ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದರು. ಇವರು ಬಿಗ್ಬಾಸ್ಗೆ ಬರುತ್ತಾರೆಯೇ ಎನ್ನುವುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.