- Home
- Entertainment
- Bhagyalakshmi Team: Su From So ಬಂದರೋ ಬಂದರೋ ಹಾಡಿಗೆ ಇಬ್ಬರು ಪತ್ನಿಯರ ಜತೆ ತಾಂಡವ್ ಭರ್ಜರಿ ಸ್ಟೆಪ್
Bhagyalakshmi Team: Su From So ಬಂದರೋ ಬಂದರೋ ಹಾಡಿಗೆ ಇಬ್ಬರು ಪತ್ನಿಯರ ಜತೆ ತಾಂಡವ್ ಭರ್ಜರಿ ಸ್ಟೆಪ್
Su From So ಬಂದರೋ ಬಂದರೋ ಹಾಡಿಗೆ ಇಬ್ಬರು ಪತ್ನಿಯರ ಜತೆ ತಾಂಡವ್ ಭರ್ಜರಿ ಸ್ಟೆಪ್ ಹಾಕಿದ್ದು, ಇದಕ್ಕೆ ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗ್ತಿದೆ. ಇಲ್ಲಿದೆ ನೋಡಿ ಡಾನ್ಸ್...

Su From So ಸಿನಿಮಾದ ಬಂದರೋ ಬಂದರೋ ಹಾಡಿಗೆ ಸ್ಟೆಪ್
Su From So ಸಿನಿಮಾ ಈಗ ಭರ್ಜರಿ ಯಶಸ್ಸು ಕಾಣಿಸುತ್ತಿದೆ. ಈ ಚಿತ್ರವನ್ನು ಇದಾಗಲೇ ಹಲವರು ಮೆಚ್ಚಿಕೊಂಡಿದ್ದಾರೆ. ಅದರಲ್ಲಿ ಇರುವ ಬಂದರೋ ಬಂದರೋ ಬಾವ ಬಂದರೋ ಹಾಡು ಸಕತ್ ಹಿಟ್ ಆಗಿದ್ದು, ಇದಾಗಲೇ ಹಲವಾರು ಮಂದಿ ಇದರ ರೀಲ್ಸ್ ಮಾಡಿದ್ದಾರೆ. ಇದೀಗ ಭಾಗ್ಯಲಕ್ಷ್ಮಿ ಸೀರಿಯಲ್ನ ಇಡೀ ಟೀಮ್ ಈ ಹಾಡಿಗೆ ಸ್ಟೆಪ್ ಹಾಕಿದೆ.
ಸವತಿ ಜೊತೆ ಭಾಗ್ಯ ಸ್ಟೆಪ್
ಇದರಲ್ಲಿ ಭಾಗ್ಯ, ತಾಂಡವ್, ಶ್ರೇಷ್ಠಾ, ಗುಂಡ, ತನ್ವಿ ಎಲ್ಲರನ್ನೂ ಕಾಣಬಹುದಾಗಿದೆ. ಇದಾಗಲೇ ಹಲವು ಸೀರಿಯಲ್ ನಟ-ನಟಿಯರು ಇದಕ್ಕೆ ಸ್ಟೆಪ್ ಹಾಕಿದ್ದು, ಅವರ ಸಾಲಿಗೆ ಭಾಗ್ಯಲಕ್ಷ್ಮಿ ಟೀಮ್ ಸೇರಿಕೊಂಡಿದೆ. ತಾಂಡವ್ ಮತ್ತು ಶ್ರೇಷ್ಠಾ ಕೂಡ ಇರೋದ್ರಿಂದ ಸವತಿಯ ಜೊತೆ ಸ್ಟೆಪ್ ಹಾಕ್ತಾ ಇದ್ದೀರಾ ಎಂದು ನೆಟ್ಟಿಗರು ಭಾಗ್ಯನ ಕಾಲೆಳೆಯುತ್ತಿದ್ದಾರೆ.
ಭರತನಾಟ್ಯ ಕಲಾವಿದೆ ಭಾಗ್ಯ
ಇನ್ನು ಭಾಗ್ಯ ಪಾತ್ರಧಾರಿ ಸುಷ್ಮಾ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ 1997ರಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ.
ಸುಷ್ಮಾ ಕೆ.ರಾವ್ ನಿಜರೂಪ
ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು.
ತನ್ವಿ- ಗುಂಡ ರಿಯಲ್ ಲೈಫ್
ಇನ್ನು ತನ್ವಿ ಮತ್ತು ಗುಂಡನ ಕುರಿತು ಹೇಳುವುದಾರೆ, ತನ್ವಿಯ ರಿಯಲ್ ಹೆಸರು ಅಮೃತಾ ಗೌಡ. ಅಮೃತಾ ಗೌಡ ನಿಜ ಜೀವನದಲ್ಲೂ ಶಾಲಾ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಜುಕೇಶನ್ ಜೊತೆಗೆ ಶೂಟಿಂಗ್ ಎರಡನ್ನೂ ಜೊತೆಯಾಗಿ ಮ್ಯಾನೇಜ್ ಮಾಡುವ ಈ ಬಾಲನಟಿ, ಸೋಶಿಯಲ್ ಮೀಡಿಯಾದಲ್ಲೂ (social media) ಆಕ್ಟೀವ್ ಆಗಿದ್ದಾರೆ.
ಶ್ರೇಷ್ಠಾ ಪಾತ್ರಧಾರಿ ಕಾವ್ಯಾ ಗೌಡ
ಶ್ರೇಷ್ಠಾ ಪಾತ್ರಧಾರಿ ಕಾವ್ಯಾ ಗೌಡ ಕುರಿತು ಹೇಳುವುದಾದರೆ, ಇವರು ಐದು ವರ್ಷ ತೆಲುಗು ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ.ಬೆಂಗಳೂರು ಮೂಲದ ಕಾವ್ಯಾ, ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ವಿಲನ್ ರೋಲ್ ಮೂಲಕ ಮನೆ ಮಾತಾಗಿದ್ದಾರೆ. 3 ವರ್ಷಗಳ ಹಿಂದೆ ಉದಯ ಟಿವಿಯಲ್ಲಿ ಮೂಡಿ ಬಂದ ದೇವಯಾನಿ ಧಾರಾವಾಹಿಯಲ್ಲಿ ನಟಿಸಿದ್ದರು. ವಿಜಯ್ ರಾಘವೇಂದ್ರ ನಟನೆಯ ರಿಂಗ ರಿಂಗ ರೋಸ್ ಎಂಬ ಸಿನಿಮಾಗೂ ಇವರು ನಟಿಸಿದ್ದಾರೆ. ಇದಕ್ಕೂ ಮುನ್ನ ಜೀ ಕನ್ನಡ ವಾಹಿನಿಯ 'ಮಿಸ್ಟರ್ & ಮಿಸ್‌ಸ್ ರಂಗೇಗೌಡ' ಧಾರಾವಾಹಿಯಲ್ಲಿ ಲೀಡ್ ಆಗಿ 100 ಎಪಿಸೋಡ್‌ಲ್ಲಿ ನಟಿಸಿದ್ದರು. ಆಮೇಲೆ ಸೀರಿಯಲ್ ಬಿಟ್ಟಿದ್ದರು. ಈಗ ಶ್ರೇಷ್ಠಾ ಆಗಿ ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ತಾಂಡವ್ ಪಾತ್ರಧಾರಿಯ ಕುರಿತು...
ಇನ್ನು ತಾಂಡವ್ ಪಾತ್ರಧಾರಿ ಸುದರ್ಶನ್ ರಂಗಪ್ರಸಾದ್ ಅವರ ರಿಯಲ್ ಲೈಫ್ ಕುರಿತು ಹೇಳುವುದಾದರೆ, ಇವರ ಮದುವೆಯಾಗಿ ಒಂಬತ್ತು ವರ್ಷಗಳಾಗಿವೆ. ಪತ್ನಿ ಸಂಗೀತಾ ಭಟ್ ನಟಿಯಾಗಿ, ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ. ತಮಿಳು ಸಿನಿಮಾ ಮೂಲಕ ಸಂಗೀತ ಭಟ್ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ. ಕನ್ನಡದಲ್ಲಿ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದ ಸಂಗೀತಾ ಭಟ್ ಸ್ವಲ್ಪ ಕಾಲ ಸಿನಿ ಪಯಣದಿಂದ ದೂರವೇ ಉಳಿದು 2 ವರ್ಷಗಳ ನಂತರ ಮತ್ತೆ ಸಿನಿಮಾಗಳಲ್ಲಿ ನಟಿಸಿದ್ದರು. ನಟನೆಯಿಂದ ದೂರ ಉಳಿದ ನಂತರ ಸಂಗೀತಾ ಅವರು ಕೆಲವು ದಿನಗಳ ಕಾಲ ಜರ್ಮನಿಯಲ್ಲಿದ್ದರು. ಕಳೆದ ವರ್ಷ ಬಿಡುಗಡೆಯಾದ '48 ಅವರ್ಸ್' ಸಿನಿಮಾ ಅವರ ಕೊನೆಯ ಚಿತ್ರ.