- Home
- Entertainment
- Anchor Anushreeಗೆ ನಾವೇ ಬೆಳೆಸಿದ್ದು, MLA ಮದ್ವೆಯಲ್ಲೂ ಈ ಪರಿ ಇನ್ಸಲ್ಟ್ ಮಾಡ್ಲಿಲ್ಲ... ಫ್ಯಾನ್ಸ್ ಆಕ್ರೋಶ!
Anchor Anushreeಗೆ ನಾವೇ ಬೆಳೆಸಿದ್ದು, MLA ಮದ್ವೆಯಲ್ಲೂ ಈ ಪರಿ ಇನ್ಸಲ್ಟ್ ಮಾಡ್ಲಿಲ್ಲ... ಫ್ಯಾನ್ಸ್ ಆಕ್ರೋಶ!
ಆ್ಯಂಕರ್ ಅನುಶ್ರೀ ಮದುವೆ ವಿಜೃಂಭಣೆಯಿಂದ ನಡೆಯುತ್ತಿದೆ. ಆದರೆ ಅಭಿಮಾನಿಗಳಿಗೆ ಒಳಗೆ ಎಂಟ್ರಿ ಸಿಗದೇ ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೊನೆಗೂ ಕೂಡಿ ಬಂತು ಅನುಶ್ರೀಗೆ ಕಂಕಣಭಾಗ್ಯ
ಆ್ಯಂಕರ್ ಅನುಶ್ರೀ ಬಹಳ ವರ್ಷಗಳಿಂದ ಕಾತರದಿಂದ ಕಾಯ್ತದ್ದ ಕ್ಷಣ ಕೊನೆಗೂ ಬಂದೇ ಬಿಟ್ಟಿದೆ. 38 ವರ್ಷದ ಅನುಶ್ರೀಗೆ ಕಂಕಣಭಾಗ್ಯ ಕೂಡಿ ಬಂದಿದೆ. ಇಂದು ಅವರ ಮದುವೆ ಸಮಾರಂಭ ಭರ್ಜರಿಯಾಗಿ ನಡೆಯುತ್ತಿದೆ. ಕೊಡಗು ಮೂಲದ ರೋಷನ್ ಜೊತೆಗೆ ಅನುಶ್ರೀ ಇಂದು ಮದುವೆಯಾಗಿದ್ದಾರೆ.
ರೆಸಾರ್ಟ್ನಲ್ಲಿ ಅನುಶ್ರೀ ಮದುವೆ
ಬೆಂಗಳೂರಿನ ಕಗ್ಗಲಿಪುರ ಬಳಿಯ ರೆಸಾರ್ಟ್ ಒಂದರಲ್ಲಿ ಮದುವೆ ನಡೆಯುತ್ತಿದೆ. ಕಿರುತೆರೆ ಕಲಾವಿದರು ಮತ್ತು ಚಿತ್ರೋದ್ಯಮದ ಗಣ್ಯರು ಆಗಮಿಸಿ ನೂತನ ವಧು-ವರರನ್ನು ಆಶೀರ್ವದಿಸುತ್ತಿದ್ದಾರೆ. ಸಹಜವಾಗಿ ಅನುಶ್ರೀ ಅವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣ, ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಅಭಿಮಾನಿಗಳ ದಂಡು
ಎಷ್ಟೇ ಭದ್ರತೆ ಒದಗಿಸಿದರೂ ತಮ್ಮ ನೆಚ್ಚಿನ ನಟ-ನಟಿ, ಸೆಲೆಬ್ರಿಟಿಗಳನ್ನು ನೋಡಲು ಬರುವ ದೊಡ್ಡ ಅಭಿಮಾನಿಗಳ ವರ್ಗವೇ ಇರುತ್ತದಲ್ಲ, ಅದೇ ರೀತಿ ಆ್ಯಂಕರ್ ಅನುಶ್ರೀ ಅವರ ಮದುವೆಯಲ್ಲಿಯೂ ಆಗುತ್ತಿದೆ. ಅಭಿಮಾನಿಗಳನ್ನು ನಿಯಂತ್ರಿಸಲು ಸಾಧ್ಯವಾಗಷ್ಟು ರೀತಿಯಲ್ಲಿ ಜನರು ಬರುತ್ತಿದ್ದಾರೆ. ಇದರಿಂದ ಕೆಲವರಿಗೆ ಒಳಗೆ ಹೋಗಲು ಪೊಲೀಸರು ಬಿಡುತ್ತಿಲ್ಲ.
ಅಭಿಮಾನಿಗಳಿಗೆ ಎಂಟ್ರಿ ಇಲ್ಲ!
ಇದರಿಂದ ಅಭಿಮಾನಿಗಳಿಗೆ ರೋಷ ಉಕ್ಕಿ ಹರಿಯುತ್ತಿದೆ. ಆ್ಯಂಕರ್ ಅನುಶ್ರೀ ಬೆಳೆದಿರುವುದೇ, ಈ ಪರಿ ಹೆಸರು ಮಾಡಿರುವುದೇ ನಮ್ಮಂಥ ಅಭಿಮಾನಿಗಳಿಂದ. ನಾವೇನು ಇಲ್ಲಿ ಪುಕ್ಕಟೆ ಊಟ ಮಾಡಲು ಬಂದಿರಲಿಲ್ಲ. ಅಕ್ಷತೆ ಹಾಕಿ ವಧು-ವರರನ್ನು ಆಶೀರ್ವದಿಸಿ ಹೋಗೋಣ ಎಂದುಕೊಂಡು ಬಂದಿದ್ವಿ. ಆದರೆ ನಮಗೆ ತುಂಬಾ ಇನ್ಸಲ್ಟ್ ಮಾಡಲಾಗಿದೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.
ಅಭಿಮಾನಿಗಳ ಆಕ್ರೋಶ
ಯಾವ ಮಿನಿಸ್ಟರ್, ಎಂಎಲ್ಎ ಮದುವೆಗೆ ಹೋದಾಗಲೂ ಈ ಪರಿ ಇನ್ಸಲ್ಟ್ ಆಗಿರಲಿಲ್ಲ. ಈಗ ಆಗಿದೆ. ಈ ಹಿಂದೆ ಶಾಸಕರ ಮದುವೆಗೆ ಹೋಗಿದ್ವಿ. ಅಲ್ಲಿ ಕೂಡ ಈ ಪರಿ ನಮ್ಮನ್ನು ನೋಡಿಕೊಂಡಿರಲಿಲ್ಲ. ಆದರೆ ಅನುಶ್ರೀ ಮದುವೆಯಲ್ಲಿ ಮಾತ್ರ ಅಭಿಮಾನಿಗಳಿಗೆ ತುಂಬಾ ಇನ್ಸಲ್ಟ್ ಆಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನುಶ್ರೀ- ರೋಷನ್ ಮದುವೆ
ಅನುಶ್ರೀ ಮದುವೆಯಾಗುತ್ತಿರುವ ಹುಡುಗನ ಹೆಸರು ರೋಷನ್. ರಾಮಮೂರ್ತಿ ಹಾಗೂ ಸಿಸಿಲಿಯಾ ಇವರ ತಂದೆ-ತಾಯಿ. ರೋಷನ್ ಮೂಲತಃ ಕೊಡಗಿನವರಾಗಿದ್ದ, ಉದ್ಯಮಿಯಾಗಿದ್ದಾರೆ. ಅಂದಹಾಗೆ, ಅನುಶ್ರೀ ಹಾಗೂ ರೋಷನ್ ಅವರು ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದು, ಇವರದ್ದು ಲವ್ ಕಂ ಅರೇಂಜ್ಡ್ ಮ್ಯಾರೇಜ್ ಎಂದು ಹೇಳಲಾಗುತ್ತಿದೆ. ಇಂದು ಬೆಳಗ್ಗೆ 10:56 ಶುಭ ಮುಹೂರ್ತದಲ್ಲಿ ದಾಂಪತ್ಯ ಜೀವನಕ್ಕೆ ಈ ಜೋಡಿ ಕಾಲಿಟ್ಟಿದ್ದು, ಮದುವೆ ಕಾರ್ಯ ನಡೆಯುತ್ತಿದೆ.