Mahanati Season-2 ವೇದಿಕೆಯಲ್ಲಿ ಇತಿಹಾಸ ಸೃಷ್ಟಿ: ಅಮಿತಾಭ್ ಬಚ್ಚನ್ ಗ್ರ್ಯಾಂಡ್ ಎಂಟ್ರಿ!
ಜೀ ಕನ್ನಡ ವಾಹಿನಿಯಲ್ಲಿ ವೀಕೆಂಡ್ಗಳಲ್ಲಿ ಪ್ರಸಾರ ಆಗ್ತಿರೋ ಮಹಾನಟಿ ರಿಯಾಲಿಟಿ ಷೋನ ಸೀಸನ್-2ನಲ್ಲಿ ಇತಿಹಾಸ ಸೃಷ್ಟಿಯಾಗಿದ್ದು, ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ. ಡಿಟೇಲ್ಸ್ ಇಲ್ಲಿದೆ...

ಮಹಾನಟಿ ಷೋ ಕುರಿತು...
ಜೀ ಕನ್ನಡ ವಾಹಿನಿಯಲ್ಲಿ ವೀಕೆಂಡ್ಗಳಲ್ಲಿ ಪ್ರಸಾರ ಆಗ್ತಿರೋ ಮಹಾನಟಿ ರಿಯಾಲಿಟಿ ಷೋನ ಸೀಸನ್-2ನಲ್ಲಿ ಇದಾಗಲೇ ಹಲವಾರು ನಟಿಯರು ಮಿಂಚುತ್ತಿದ್ದಾರೆ. ರಾಜ್ಯದ ಮೂಲೆಮೂಲೆಗಳಲ್ಲಿ ಆಡಿಷನ್ ನಡೆಸಿ ಕೆಲವು ಕಲಾವಿದೆಯನ್ನು ಕರೆಸಲಾಗಿದೆ. ಅವರಿಗೆ ಹಲವು ರೌಂಡ್ಗಳ ಟಾಸ್ಕ್ ಕೊಡಲಾಗುತ್ತಿದೆ. ಹೀಗೆ ಮಹಾನಟಿ ಷೋ ಮೊದಲ ಸೀಸನ್ ಭಾರಿ ಯಶಸ್ಸು ಕಂಡಿತ್ತು. ಇದೀಗ ಸೀಸನ್-2 ಶುರುವಾಗಿದೆ.
ಮಹಾನಟಿ ಷೋನಲ್ಲಿ ಬಿಗ್ ಬಿ
ಇದೀಗ ಒಂದು ಇಂಟರೆಸ್ಟಿಂಗ್ ವಿಷ್ಯವೊಂದನ್ನು ವಾಹಿನಿ ಹೊರ ಹಾಕಿದೆ. ಅದೇನೆಂದರೆ, ಮಹಾನಟಿ ಷೋನಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಬರಲಿದ್ದಾರೆ ಎನ್ನುವುದು. ಅವರು ಯಾವ ಹಾಡಿಗೆ ಸ್ಟೆಪ್ ಹಾಕಲಿದ್ದಾರೆ ಎಂದು ವೀಕ್ಷಕರಿಗೆ ಪ್ರಶ್ನೆ ಕೇಳಲಾಗಿದೆ. ಇದರ ಪ್ರೊಮೋಗೆ ಥರಹೇವಾಗಿ ಕಮೆಂಟ್ಸ್ ಸುರಿಮಳೆಯಾಗುತ್ತಿದ್ದು, ವೀಕ್ಷಕರು ತಮ್ಮದೇ ಆದ ರೀತಿಯಲ್ಲಿ ಉತ್ತರಿಸುತ್ತಿದ್ದಾರೆ.
ಬಾಲಿವುಡ್ ಕಂಡ ಅಪರೂಪದ ನಟ
ಅಷ್ಟಕ್ಕೂ, ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಬಾಲಿವುಡ್ ಕಂಡ ಅಪರೂಪದ ನಟ. ಬ್ಲ್ಯಾಕ್ ಆ್ಯಂಡ್ ವೈಟ್ ಚಿತ್ರದಿಂದ ಹಿಡಿದು ಈ 82ರ ಹರೆಯದಲ್ಲಿಯೂ ಅಷ್ಟೇ ಉತ್ಸಾಹದ ಚಿಲುಮೆಯಾಗಿ, ನಗೆಯ ಬುಗ್ಗೆಯಾಗಿ ಚಿಮ್ಮುತ್ತಿದ್ದಾರೆ.
ಬಹುಮುಖ ಪ್ರತಿಭೆ
ಹಿರಿತೆರೆ, ಕಿರುತೆರೆ, ನಿರ್ದೇಶನ, ನಿರ್ಮಾಣ ಎಲ್ಲದರಲ್ಲಿಯೂ ಇವರದ್ದು ಎತ್ತಿದ ಕೈ. 1970ರ ದಶಕದಲ್ಲಿ ಜಂಜೀರ್, ದೀವಾರ್, ಆನಂದ್, ರೋಟಿ ಕಪಾಡಾ ಮತ್ತು ಮಕಾನ್ ಚಿತ್ರಗಳ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅಮಿತಾಭ್ ಬಚ್ಚನ್ ಅವರಿಗೆ ಈ ವಯಸ್ಸಿನಲ್ಲಿಯೂ ಉತ್ಸಾಹ ಬತ್ತಿಲ್ಲ. ಅವರ ಎನರ್ಜಿ ಇನ್ನೂ ಹಾಗೆಯೇ ಇದೆ. ವಯಸ್ಸೆನ್ನುವುದು ಮನಸ್ಸಿಗಲ್ಲ ಎನ್ನುವ ಮಾತು ಅಕ್ಷರಶಃ ಇವರಿಗೆ ಅನ್ವಯ ಆಗುತ್ತದೆ. 82ರ ಹರೆಯದಲ್ಲಿ ಬಿಗ್ ಬಿ ಫುಲ್ ಎನರ್ಜಿಯಿಂದ ಕಾಣಿಸಿಕೊಳ್ಳುತ್ತಿದ್ದಾರೆ.
ಶಾರುಖ್ ಖಾನ್ ಅವರನ್ನು ಹಿಂದಿಕ್ಕಿದ ಬಿಗ್ ಬಿ
ಈಚೆಗಷ್ಟೇ ಬಿಗ್-ಬಿ ತಮ್ಮ 82ನೇ ವಯಸ್ಸಿನಲ್ಲಿ, ನಟ ಶಾರುಖ್ ಖಾನ್ ಅವರನ್ನು ಹಿಂದಿಕ್ಕಿದ್ದ ಸುದ್ದಿ ಬಂದಿತ್ತು. . ಹೌದು. 2024-25ನೇ ಸಾಲಿನಲ್ಲಿ 340 ಕೋಟಿ ರೂಪಾಯಿ ಆದಾಯ ಗಳಿಸುವ ಜೊತೆಗೆ 120 ಕೋಟಿ ರೂಪಾಯಿಗಳನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಕಟ್ಟುವ ಮೂಲಕ ಅಮಿತಾಭ್ ಶಾರುಖ್ರನ್ನು ಹಿಂದಕ್ಕಟ್ಟಿದ್ದಾರೆ. ಈ ಮೂಲಕ, ಭಾರತೀಯ ನಟರಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸಿದ ನಟ ಎಂಬ ಕೀರ್ತಿ ಪಡೆದಿದ್ದಾರೆ. ಇಲ್ಲಿಯವರೆಗೆ ಈ ಪಟ್ಟ ಶಾರುಖ್ ಖಾನ್ ಅವರಿಗೆ ಇತ್ತು.
ರಿಗೆ ರೂಪದಲ್ಲಿ 52.50 ಕೋಟಿ ಪಾವತಿ
ಇದೇ 15ರಂದು ಅಮಿತಾಭ್ ಅವರು, ಮುಂಗಡ ತೆರಿಗೆ ರೂಪದಲ್ಲಿ 52.50 ಕೋಟಿ ರೂ.ಗಳನ್ನು ಸರ್ಕಾರಕ್ಕೆ ಸಲ್ಲಿಸಿರುವುದಾಗಿ ವರದಿಯಾಗಿದೆ. ಅಷ್ಟಕ್ಕೂ ನಟಿ ಇಷ್ಟೊಂದು ಸಂಪಾದನೆ ಮಾಡಲು ಕಾರಣವಾಗಿದ್ದು, ಎಲ್ಲರಿಗೂ ತಿಳಿದಿರುವಂತೆ ಅವರು ಸಿನಿಮಾ ಮಾತ್ರವಲ್ಲದೇ ಹಲವಾರು ಬ್ರಾಂಡ್ ಗಳ ರಾಯಭಾರಿಯೂ ಆಗಿದ್ದಾರೆ. ಅದರ ಜಾಹೀರಾತುಗಳಿಂದ ಜೊತೆಗೆ ಕೌನ್ ಬನೇಗಾ ಕರೋಡ್ಪತಿ ಷೋನಿಂದ ಕೋಟಿ ಕೋಟಿಯಲ್ಲಿ ಸಂಪಾದನೆ ಮಾಡುತ್ತಿದ್ದಾರೆ.
ಕಲ್ಕಿ 2 ಸಿನಿಮಾಕ್ಕೆ ಅಮಿತಾಭ್ ರೆಡಿ
ಅದರ ಜೊತೆಗೆ, ಈಗ ಕಲ್ಕಿ 2 ಸಿನಿಮಾಕ್ಕೆ ಅಮಿತಾಭ್ ರೆಡಿ ಕೂಡ ಆಗಿದ್ದಾರೆ. ಇನ್ನು ತೆರಿಗೆ ವಿಷಯಕ್ಕೆ ಬರುವುದಾದರೆ ನಂಬರ್ 1 ಸ್ಥಾನದಲ್ಲಿದ್ದ ಶಾರುಖ್ ನಂ.2ಗೆ ಹೋಗಿದ್ದಾರೆ. 2024-25ನೇ ಸಾಲಿನಲ್ಲಿ ಶಾರುಖ್ ಪಾವತಿಸಿದ್ದು 92 ಕೋಟಿ ರೂ. ತೆರಿಗೆ. ಅವರಿಗಿಂತ ಶೇ. 30ರಷ್ಟು ಜಾಸ್ತಿ ತೆರಿಗೆಯನ್ನು ಅಮಿತಾಭ್ ಬಚ್ಚನ್ ಪಾವತಿಸಿದ್ದಾರೆ. ತಮಿಳುನಟ ವಿಜಯ್ ಅವರು, ಈ ಪಟ್ಟಿಯಲ್ಲಿ ಟಾಪ್ 3ನೇ ಸ್ಥಾನದಲ್ಲಿದ್ದಾರೆ. ಇವರು 80 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ.
ಮಹಾನಟಿ ಷೋ ಕುರಿತು
ಮಹಾನಟಿ ಸೀಸನ್ 2 ಕುರಿತು ಹೇಳುವುದಾದರೆ, ಇದರಲ್ಲಿ ತೀರ್ಪುಗಾರರಾಗಿ ರಮೇಶ್ ಅರವಿಂದ್, ಪ್ರೇಮಾ, ತರುಣ್ ಸುಧೀರ್ ಮತ್ತು ನಿಶ್ವಿಕಾ ನಾಯ್ಡು ಇದ್ದಾರೆ. ರಮೇಶ್ ಅರವಿಂದ್ ಮಾಸ್ಟರ್ ಮೈಂಡ್ ಆಗಿ ಮಾರ್ಗದರ್ಶನ ನೀಡುತ್ತಿದ್ದಾರೆ.