IPL ಟಿಕೆಟ್‌ಗೆ ಶೇ.40 ಜಿಎಸ್‌ಟಿ! 500 ರುಪಾಯಿ ಟಿಕೆಟ್‌ಗೆ GST ಸೇರಿಸಿದರೆ ಎಷ್ಟಾಗುತ್ತೆ?
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಿಎಸ್‌ಟಿಯನ್ನು ಜಾರಿಗೆ ತಂದಿದ್ದು, ಇದೇ ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ. ಸಾಮಾನ್ಯ ಜನಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗುವಂತ ಬದಲಾವಣೆಗಳಾಗಿವೆ. ಆದರೆ ಐಪಿಎಲ್ ಟಿಕೆಟ್‌ಗೆ 40% ಜಿಎಸ್‌ಟಿ ವಿಧಿಸಲಾಗಿದೆ. ಇದರ ಪರಿಣಾಮವೇನು ನೋಡೋಣ ಬನ್ನಿ
15

Image Credit : Getty
ಕೇಂದ್ರದ ಜಿಎಸ್‌ಟಿ ಸುಧಾರಣೆ ನೀತಿಯಿಂದ ಐಪಿಎಲ್ ಟಿಕೆಟ್ ದರಗಳು ಮತ್ತಷ್ಟು ದುಬಾರಿಯಾಗಲಿದೆ.
25
Image Credit : ANI
ಸರ್ಕಾರ ಕ್ಯಾಸಿನೋ, ರೇಸ್ ಕ್ಲಬ್ ಅಥವಾ ಐಪಿಎಲ್ ಟಿಕೆಟ್‌ಗಳ ಮೇಲಿನ ತೆರಿಗೆಯನ್ನು ಶೇ.28ರ ಬದಲು ಶೇ.40ರ ಸ್ಲ್ಯಾಬ್‌ಗೆ ಸೇರಿಸಲಾಗಿದೆ. ಇದರಿಂದ ಸಹಜವಾಗಿಯೇ ಟಿಕೆಟ್ ದರದಲ್ಲಿ ಏರಿಕೆಯಾಗಲಿದೆ.
35
Image Credit : Getty
ಐಪಿಎಲ್ ಟಿಕೆಟ್‌ಗಳನ್ನು 'ಲಕ್ಸುರಿ ಗೂಡ್ಸ್' ವಿಭಾಗಕ್ಕೆ ಸೇರಿಸಲಾಗಿದೆ. ಹೀಗಾಗಿ ಐಪಿಎಲ್ ಟಿಕೆಟ್ ಜಿಎಸ್‌ಟಿಯಲ್ಲಿ 40% ತೆರಿಗೆ ವಿಧಿಸಲಾಗಿದೆ.
45
Image Credit : ANI
ಮೊದಲು ₹500 ಟಿಕೆಟ್‌ಗೆ ₹140 ಜಿಎಸ್‌ಟಿ ಸೇರಿ ಒಟ್ಟು 640 ರು. ಇತ್ತು. ಆದರೆ ಇನ್ನು ₹500 ಟಿಕೆಟ್‌ಗೆ 40 ಶೇ. ಜಿಎಸ್‌ಟಿ ಇರಲಿದ್ದು, ಬೆಲೆ ₹700 ಆಗಲಿದೆ.
55
Image Credit : stockPhoto
ಆದರೆ ಭಾರತದ ಕ್ರಿಕೆಟ್ ಪಂದ್ಯ ಹಾಗೂ ಇತರ ಕ್ರೀಡೆಗಳ ಟಿಕೆಟ್‌ಗೆ ಶೇ.18 ತೆರಿಗೆ ಸ್ಲ್ಯಾಬ್ ನಿಗದಿಪಡಿಸಲಾಗಿದೆ. ಇದರಲ್ಲಿ ₹500ರ ಒಳಗಿನ ಟಿಕೆಟ್‌ಗೆ ಜಿಎಸ್‌ಟಿ ಅನ್ವಯಿಸಲ್ಲ. ₹500 ಮೇಲ್ಪಟ್ಟರೆ ಶೇ.18 ಜಿಎಸ್‌ಟಿ ಇರಲಿದೆ.
Latest Videos