- Home
- Sports
- Cricket
- ಟೀಂ ಇಂಡಿಯಾ ಆಟಗಾರರ ಫಿಟ್ನೆಸ್ ಪರೀಕ್ಷಿಸಲು ‘ಬ್ರೊನ್ಕೊ ಟೆಸ್ಟ್’! ಅಷ್ಟಕ್ಕೂ ಏನಿದು ಹೊಸ ಟೆಸ್ಟ್? ಹೇಗಿರುತ್ತೆ ಈ ಟೆಸ್ಟ್?
ಟೀಂ ಇಂಡಿಯಾ ಆಟಗಾರರ ಫಿಟ್ನೆಸ್ ಪರೀಕ್ಷಿಸಲು ‘ಬ್ರೊನ್ಕೊ ಟೆಸ್ಟ್’! ಅಷ್ಟಕ್ಕೂ ಏನಿದು ಹೊಸ ಟೆಸ್ಟ್? ಹೇಗಿರುತ್ತೆ ಈ ಟೆಸ್ಟ್?
ನವದೆಹಲಿ: ಟೀಂ ಇಂಡಿಯಾ ಆಟಗಾರರ ಫಿಟ್ನೆಸ್ ಸಾಬೀತುಪಡಿಸಲು ಇದೀಗ ಬಿಸಿಸಿಐ ಹೊಸ ಫಿಟ್ನೆಸ್ ಟೆಸ್ಟ್‌ನಲ್ಲಿ ಪಾಲ್ಗೊಳ್ಳಲು ಬಿಸಿಸಿಐ ಸೂಚಿಸಿದೆ. ಅಷ್ಟಕ್ಕೂ ಏನಿದು ಫಿಟ್ನೆಸ್ ಟೆಸ್ಟ್ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

ಭಾರತೀಯ ಕ್ರಿಕೆಟಿಗರ ಫಿಟ್ನೆಸ್ ಹೆಚ್ಚಳಕ್ಕೆ ಬಿಸಿಸಿಐ ಹೊಸ ಕ್ರಮ ಕೈಗೊಂಡಿದ್ದು, ರಗ್ಬಿ ಆಟಗಾರರಂತೆ ‘ಬ್ರೊನ್ಕೊ ಟೆಸ್ಟ್’ನಲ್ಲಿ ಪಾಲ್ಗೊಳ್ಳಲು ಸೂಚಿಸಿದೆ.
ಜಿಮ್‌ನಲ್ಲಿ ಹೆಚ್ಚಿನ ಸಮಯ ಕಳೆಯುವುದರಿಂದ ಆಟಗಾರರು ಓಡುವುದು ಕಡಿಮೆಯಾಗಿದೆ. ಇದನ್ನು ಹೆಚ್ಚಿಸಲು ಈ ಟೆಸ್ಟ್ ಪರಿಚಯಿಸಲಾಗಿದೆ.
ಭಾರತದ ಸ್ಟ್ರೆಂಥ್ ಆ್ಯಂಡ್ ಕಂಡಿಷನಿಂಗ್ ಕೋಚ್ ಆ್ಯಡ್ರಿಯನ್ ಲೆ ರಾಕ್ಸ್ ಸಲಹೆ ಮೇರೆಗೆ ಬಿಸಿಸಿಐ ಈ ಟೆಸ್ಟ್ ನಡೆಸಲಿದೆ.
ಈ ವರೆಗೂ ಆಟಗಾರರು ಯೋ ಯೋ ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಅದರಲ್ಲಿ 2 ಕಿ.ಮೀ. ಓಟ ಸೇರಿ ವಿವಿಧ ಪರೀಕ್ಷೆ ನಡೆಸಲಾಗುತ್ತಿತ್ತು.
ನಿರ್ದಿಷ್ಟ ಅಂಕ ಗಳಿಸಿದ ಆಟಗಾರರನ್ನಷ್ಟೇ ಆಯ್ಕೆ ಮಾಡಲಾಗುತ್ತಿತ್ತು. ಇನ್ನು ಮುಂದೆ ಆಟಗಾರರಿಗೆ ಬ್ರೊನ್ಕೊ ಟೆಸ್ಟ್ ನಡೆಸಲಾಗುತ್ತದೆ. ಇದರಿಂದ ಆಟಗಾರರು ಓಡುವ ಸಾಮರ್ಥ್ಯ ಹೆಚ್ಚಿಸುವುದು ಬಿಸಿಸಿಐ ಗುರಿ.
ಬೆಂಗಳೂರಿನಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಈಗಾಗಲೇ ಈ ಪರೀಕ್ಷೆ ನಡೆಸಲಾಗುತ್ತಿದ್ದು, ಹಲವು ಆಟಗಾರರು ಭಾಗಿಯಾಗಿದ್ದಾರೆ.
ಏನಿದು ಬ್ರೊನ್ಕೊ ಟೆಸ್ಟ್?
ಆಟಗಾರರು 20 ಮೀಟರ್ ಓಡಿ ಹಿಂದಿರುಗಿ ಬಂದು, ಬಳಿಕ ಅದೇ ರೀತಿ 40 ಮೀಟರ್, 60 ಮೀಟರ್ ಓಡಿ ಮರಳಬೇಕು. ಇದು ಒಂದು ಸೆಟ್.
ಈ ರೀತಿ ಬಿಡುವು ಪಡೆಯದೆ 5 ಸೆಟ್ ಪೂರೈಸಬೇಕು. ಈ ಪರೀಕ್ಷೆಯನ್ನು 6 ನಿಮಿಷಗಳಲ್ಲಿ ಪೂರೈಸಬೇಕು.