- Home
- Entertainment
- Cine World
- ಇತ್ತೀಚೆಗೆ ಬಂದ ರೊಮ್ಯಾಂಟಿಕ್ ಸಿನಿಮಾದಲ್ಲಿ ನಟಿಸುತ್ತಲೇ ಲವ್‌ನಲ್ಲಿ ಬಿದ್ದ ಹೀರೋ-ಹೀರೋಯಿನ್; ಯಾರದು?
ಇತ್ತೀಚೆಗೆ ಬಂದ ರೊಮ್ಯಾಂಟಿಕ್ ಸಿನಿಮಾದಲ್ಲಿ ನಟಿಸುತ್ತಲೇ ಲವ್‌ನಲ್ಲಿ ಬಿದ್ದ ಹೀರೋ-ಹೀರೋಯಿನ್; ಯಾರದು?
Saiyaara Movie Collection: ‘ಸೈಯಾರಾ’ ಸಿನಿಮಾ ಈಗಾಗಲೇ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಹಿಟ್ ಚಿತ್ರ ಎನಿಸಿಕೊಂಡಿದೆ. ಹೊಸಬರಾದ ಅನೀತ್ ಪಡ್ಡಾಮ ಅಹಾನ್ ಪಾಂಡೆಯ ನಡುವಿನ ರೊಮ್ಯಾಂಟಿಕ್ ಕೆಮಿಸ್ಟ್ರಿ ಎಲ್ಲರ ಮನಸ್ಸು ಕದ್ದಿದೆ. ಈಗ ಈ ಕಲಾವಿದರು ಲವ್‌ನಲ್ಲಿ ಬಿದ್ದಿದ್ದಾರಂತೆ.

ರೊಮ್ಯಾಂಟಿಕ್ ಲವ್ ಸ್ಟೋರಿ
ಈ ಸಿನಿಮಾದಲ್ಲಿ ಲವ್ ಸ್ಟೋರಿಯೇ ಹೈಲೈಟ್ ಆಗಿತ್ತು. ಈಗ ಈ ರೊಮ್ಯಾಂಟಿಕ್ ಸ್ಟೋರಿ, ರಿಯಲ್ ಆಗಿ ಮಾರ್ಪಟ್ಟಿದೆ. ಈ ಕಲಾವಿದರು ರಿಯಲ್ ಲೈಫ್‌ನಲ್ಲಿಯೂ ಪ್ರೀತಿ ಮಾಡ್ತಿದ್ದಾರಂತೆ. ಸದ್ಯ ಕರಿಯರ್ ಕಡೆಗೆ ಮುಖ ಮಾಡಿರುವ ಈ ಜೋಡಿ ಲವ್ ಸ್ಟೋರಿಯನ್ನು ಪ್ರೈವೇಟ್ ಆಗಿ ಇಟ್ಟುಕೊಳ್ಳಲು ನಿರ್ಧಾರ ಮಾಡಿದ್ದಾರಂತೆ.
ಸಹಜವಾಗಿ ಲವ್ ಆಯ್ತು
ನಿರ್ಮಾಪಕ ಆದಿತ್ಯ ಚೋಪ್ರಾ ಅವರಿಗೆ ಒಂದು ಮೂಲವು ಈ ಬಗ್ಗೆ ಮಾಹಿತಿ ನೀಡಿದೆ ಎನ್ನಲಾಗಿದೆ. ಅನೀತ್ ಮತ್ತು ಅಹಾನ್ ‘ಸೈಯಾರಾ’ ಸಿನಿಮಾ ಶೂಟಿಂಗ್ ಟೈಮ್‌ನಲ್ಲಿ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹೇಳಲಾಗಿದೆ. “ಬಾಲಿವುಡ್‌ನಲ್ಲಿರುವ ಅತ್ಯುತ್ತಮ ಲವ್‌ಸ್ಟೋರಿ ಸಿನಿಮಾವಿದು. ಹಾಗೆಯೇ ಈ ಲವ್ ಕೂಡ ಸಹಜವಾಗಿ ಆಯ್ತು” ಎಂದು ಹಿಂದಿ ಮಾಧ್ಯಮವೊಂದು ವರವಿ ಮಾಡಿದೆ.
ಕಮಿಟ್‌ಮೆಂಟ್ ರಿಲೇಶನ್‌ಶಿಪ್
“ಅನೀತ್‌ಗೆ ಕಪಟ ಗೊತ್ತಿಲ್ಲ, ವೀಕ್ ಆಗಿದದ್ಳು, ಶೂಟಿಂಗ್ ಟೈಮ್‌ನಲ್ಲಿ ಅಹಾನ್ ಅವಳನ್ನು ಚೆನ್ನಾಗಿ ನೋಡಿಕೊಂಡ. ಅವರು ಒಟ್ಟಿಗೆ ಕೆಲಸ ಮಾಡುವಾಗ ಒಡನಾಟ, ಬಾಂಧವ್ಯ ಹೆಚ್ಚಾಯಿತು. ಆಮೇಲೆ ಸ್ನೇಹವು ಪ್ರೀತಿಯಾಗಿ ಬದಲಾಯಿತು. ಅನೀತ್ ಮತ್ತು ಅಹಾನ್ ಒಂದು ಕಮಿಟ್‌ಮೆಂಟ್ ರಿಲೇಶನ್‌ಶಿಪ್” ಎಂದು ಮೂಲವು ತಿಳಿಸಿದೆ.
ಯಾಕೆ ಪಬ್ಲಿಕ್ ಮಾಡ್ತಿಲ್ಲ?
ಸೈಯಾರಾ ಸಿನಿಮಾ ಹಿಟ್ ಆಗಿದೆ. ಈ ಲವ್ ಸ್ಟೋರಿಯು ಕರಿಯರ್ ಮೇಲೆ ಸಮಸ್ಯೆ ತರಬಹುದು. ಹೀಗಾಗಿ ಲವ್ ವಿಷಯ ಹೇಳಬೇಡಿ ಎಂದು ಅಹಾನ್ ಪಾಂಡೆಗೆ ಸಲಹೆ ನೀಡಲಾಗಿದೆಯಂತೆ.
ಸೂಪರ್ ಹಿಟ್ ಸಿನಿಮಾ
ಜುಲೈ 18 ರಂದು ಮೋಹಿತ್ ಸೂರಿ ನಿರ್ದೇಶನದ ‘ಸೈಯಾರಾ’ ಸಿನಿಮಾವು ರಿಲೀಸ್ ಆಯ್ತು. ಈ ಚಿತ್ರವು ವಿಶ್ವಾದ್ಯಂತ 577 ಕೋಟಿ ರೂ.ಗಿಂತಲೂ ಹೆಚ್ಚು ಗಳಿಕೆ ಮಾಡಿದೆ. ಇದು 2025 ರಲ್ಲಿ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಬಾಲಿವುಡ್ ಹಾಗೂ ಇಂಡಿಯನ್ ಸಿನಿಮಾ ಎಂಬ ಹೆಗ್ಗಳಿಕೆ ಪಡೆದಿದೆ.