- Home
- Entertainment
- TV Talk
- 'ಫರ್ಸ್ಟ್ ಟೈಮ್ ಅದನ್ನ ಮಾಡಿದಾಗ ಎದ್ದು ನಿಲ್ಲೋಕು ಆಗಿರ್ಲಿಲ್ಲ..' ಇದ್ದಿದ್ದು ಇದ್ದ ಹಾಗೆ ಹೇಳಿದ ದೃಶ್ಯಂ ಸಿನಿಮಾ ಪುಟ್ಟ ಹುಡುಗಿ!
'ಫರ್ಸ್ಟ್ ಟೈಮ್ ಅದನ್ನ ಮಾಡಿದಾಗ ಎದ್ದು ನಿಲ್ಲೋಕು ಆಗಿರ್ಲಿಲ್ಲ..' ಇದ್ದಿದ್ದು ಇದ್ದ ಹಾಗೆ ಹೇಳಿದ ದೃಶ್ಯಂ ಸಿನಿಮಾ ಪುಟ್ಟ ಹುಡುಗಿ!
esther anil on drinking ದೃಶ್ಯಂ ಖ್ಯಾತಿಯ ನಟಿ ಎಸ್ತರ್ ಅನಿಲ್, ತಾವು ಕುಡಿತವನ್ನು ಪ್ರಯತ್ನಿಸಿ, ಅದು ಸರಿಹೊಂದದ ಕಾರಣ ಬಿಟ್ಟಿದ್ದಾಗಿ ಬಹಿರಂಗಪಡಿಸಿದ್ದಾರೆ. ತಮ್ಮ ಮನೆಯಲ್ಲಿ ಲಿಂಗ ತಾರತಮ್ಯವಿಲ್ಲದೆ ಬೆಳೆದಿದ್ದು, ಸಹೋದರರಿಗಿಂತ ಹೆಚ್ಚು ಸ್ವಾತಂತ್ರ್ಯ ಅನುಭವಿಸುವುದಾಗಿ ಅವರು ತಿಳಿಸಿದ್ದಾರೆ.

ಮಹಿಳೆ ಆಗಿದ್ದ ಕಾರಣಕ್ಕೆ ನಾನು ನನ್ನ ಮನೆಯಲ್ಲಿ ಎಲ್ಲಿಯೂ ಕೀಳರಿಮೆಯನ್ನು ಎದುರಿಸಿಲ್ಲ ಎಂದು ಮಲಯಾಳಂನ ದೃಶ್ಯಂ ಸಿನಿಮಾದ ಪುಟ್ಟು ಹುಡುಗಿ ಅನು ಜಾರ್ಜ್ ಪಾತ್ರದಲ್ಲಿ ನಟಿಸಿದ್ದ ನಟಿ ತಿಳಿಸಿದ್ದಾರೆ.
ಕುಡಿತದ ಬಗ್ಗೆ ಯುವ ನಟಿ ಎಸ್ತರ್ ಅನಿಲ್ ಮುಕ್ತವಾಗಿ ಮಾತನಾಡಿದ್ದಾರೆ. ಮಲಯಾಳಂನ ದೃಶ್ಯಂ ಸಿನಿಮಾದ ಅನು ಜಾರ್ಜ್ ಪಾತ್ರದ ಮೂಲಕ ಫೇಮಸ್ ಆಗಿರುವ 24 ವರ್ಷದ ನಟಿ, ನಾನು ಕೆಲ ತಿಂಗಳ ಹಿಂದೆ ಕುಡಿಯೋದನ್ನು ಫ್ಯಾಷನ್ ರೀತಿ ಟ್ರೈ ಮಾಡಿದೆ.
ಆದರೆ, ಡ್ರಿಂಕ್ಸ್ ಮಾಡೋದು ನನಗೆ ಸರಿಹೊಂದಲಿಲ್ಲ. ಆ ಕಾರಣದಿಂದಾಗಿ ಅದನ್ನು ತ್ಯಜಿಸಿದೆ ಎದು ಹೇಳಿದ್ದಾರೆ. ನಾನು ಹಾಗೂ ನನ್ನ ಸಹೋದರರು ಸಮಾನತೆಯಿಂದ ಬೆಳೆದಿದ್ದೇವೆ. ಮನೆಯಲ್ಲಿ ನನ್ನ ಮೇಲೆ ಯಾವುದೇ ನಿರ್ಬಂಧಗಳಿಲ್ಲ ಎಂದು ಎಸ್ತರ್ ಹೇಳಿದ್ದರೆ. ಪಿಂಕ್ ಪಾಡ್‌ಕ್ಯಾಸ್ಟ್ ಮಲಯಾಳಂಗೆ ನೀಡಿದ ಸಂದರ್ಶನದಲ್ಲಿ ಎಸ್ತರ್ ಅನಿಲ್ ಸವಿಸ್ತಾರವಾಗಿ ಮಾತನಾಡಿದ್ದಾರೆ.
ನಾನು ಡ್ರಿಂಕಿಂಗ್‌ಅನ್ನು ಟ್ರೈ ಮಾಡಿದೆ. ಆದರೆ, ಅದನ್ನು ಹ್ಯಾಂಡಲ್ ಮಾಡೋಕೆ ಆಗೋದಿಲ್ಲ ಅನ್ನೋದು ಗೊತ್ತಾಯಿತು. ಕುಡಿದ ಅಮಲಿನಲ್ಲಿ ನಾನು ಚೆನ್ನಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅರಿತುಕೊಂಡ ನಂತರ ನಾನು ಈ ನಿರ್ಧಾರ ತೆಗೆದುಕೊಂಡೆ ಎಂದಿದ್ದಾರೆ.
ನಾನು ಕುಡಿದ ಮೊದಲ ದಿನ ಹೇಗಿತ್ತೆಂದರೆ, ಎದ್ದು ನಿಲ್ಲೋಕು ನನಗೆ ಸಾಧ್ಯವಾಗ್ತಾ ಇರಲಿಲ್ಲ. ಕೂಡಲ ನನ್ನ ಅಮ್ಮನಿಗೆ ರೆ ಮಾಡಿದೆ. ಆಕೆ, ಬರೋಕೆ ಆಗೋದಿಲ್ಲ ಎಂದರು. ಹಾಗಾಗಿ ಮನೆಗೆ ಹೇಗೆ ಹೋಗೋದು ಅನ್ನೋದ ಆಗ ನನಗೆ ಗೊತ್ತಾಗಿರಲಿಲ್ಲ ಎಂದು ನಟಿ ಹೇಳಿದ್ದಾರೆ.
ಈಗಲೂ ನೆನಪಿದೆ ನನಗೆ. ಮನೆಗೆ ಹೋದ ಬಳಿಕ ನಾನು ಒಂದು ಇಡೀ ದಿನ ಮಲಗಿಕೊಂಡೇ ಇದ್ದೆ. ಏನೂ ಮಿಕ್ಸ್ ಆಗಿದ್ದನ್ನು ನಾನು ಕುಡಿದಿದ್ದೆ. ಆದರೆ, ಸೇಫ್ ಆದ ಪ್ಲೇಸ್‌ನಲ್ಲಿ ನಾನಿದ್ದೆ. ಅಪ್ಪ-ಅಮ್ಮ ಮೂಗಿನವರೆಗೂ ಕುಡಿಯುತ್ತಾರೆ. ಸ್ವತಃ ಅಮ್ಮನೇ ಇದನ್ನು ಹೇಳಿದ್ದರು. ಆದರೆ, ನಾನು ಒಂದು ಸ್ವಲ್ಪ ಕುಡಿದರೂ ನೆಟ್ಟಗೆ ನಿಲ್ಲೋದಿಲ್ಲಅಂತಾ ಹೇಳ್ತಾ ಇರ್ತಾರೆ. ಅವರು ನನ್ನ ತಮಾಷೆ ಮಾಡಿದನ್ನು ಈಗಲೂ ನೆನಪಿಸಿಕೊಂಡರೆ ನಗು ಬರುತ್ತದೆ ಎಂದಿದ್ದಾರೆ.
"ನಾನು ಹುಡುಗಿ ಎಂಬ ಕಾರಣಕ್ಕಾಗಿ ನನ್ನ ಮೇಲೆ ಎಂದಿಗೂ ತಾರತಮ್ಯ ಮಾಡಿಲ್ಲ. ನಾವು ಸಮಾನರಾಗಿ ಬೆಳೆದಿದ್ದೇವೆ. ವಾಸ್ತವವಾಗಿ, ನನ್ನ ಸಹೋದರರಿಗಿಂತ ನನಗೆ ಹೆಚ್ಚಿನ ಸವಲತ್ತು ಇದೆ ಎಂದು ನನಗೆ ಅನಿಸುತ್ತದೆ" ಎಂದು ಎಸ್ತರ್ ಹೇಳಿದ್ದಾರೆ.
"ಬಹುಶಃ ನಾನು ಬೇಗನೆ ಹಣ ಸಂಪಾದಿಸಲು ಪ್ರಾರಂಭಿಸಿದ್ದರಿಂದ ಇರಬಹುದು. ನಾವು ನಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದಿತ್ತು" ಎಂದು ಎಸ್ತರ್ ತಿಳಿಸಿದ್ದಾರೆ.
ನನ್ನ ಸಹೋದರ ರಾತ್ರಿ 2 ಗಂಟೆಗೆ ಬಂದರೆ, ನಾನು ಬೆಳಿಗ್ಗೆ 4 ಗಂಟೆಗೆ ಬರುತ್ತೇನೆ ಎಂದು ಎಸ್ತರ್ ಹೇಳಿದ್ದಾರೆ. ಯಾವುದೇ ನಿರ್ಬಂಧಗಳಿಲ್ಲ. ಹುಡುಗಿಯಾಗಿರುವ ಕಾರಣಕ್ಕೆ ನನ್ನ ತಂದೆ ಸ್ವಲ್ಪ ಹೆದರಬಹುದು. ಆದರೆ ನನ್ನ ತಾಯಿ ಅದನ್ನು ನನಗೆ ತೋರಿಸಲು ಬಿಡುವುದಿಲ್ಲ ಎಂದಿದ್ದಾರೆ.