- Home
- Entertainment
- Cine World
- ತೋರಿಕೆಗಷ್ಟೇ ಬೆಸ್ಟ್ ನೀತು ಕಪೂರ್-ರಿಷಿ ಕಪೂರ್ ಸಂಬಂಧ… ತೆರೆಮೇಲೆ ಹೀರೋ, ರಿಯಲ್ ಲೈಫ್ ವಿಲನ್ ಈ ಸ್ಟಾರ್ ನಟ
ತೋರಿಕೆಗಷ್ಟೇ ಬೆಸ್ಟ್ ನೀತು ಕಪೂರ್-ರಿಷಿ ಕಪೂರ್ ಸಂಬಂಧ… ತೆರೆಮೇಲೆ ಹೀರೋ, ರಿಯಲ್ ಲೈಫ್ ವಿಲನ್ ಈ ಸ್ಟಾರ್ ನಟ
ಬಾಲಿವುಡ್ ನ ಸ್ಟಾರ್ ಸೆಲೆಬ್ರಿಟಿ ಜೋಡಿಗಳಾದ ನೀತು ಕಪೂರ್ ಮತ್ತು ರಿಷಿ ಕಪೂರ್ ಸಂಬಂಧ ಕ್ಯಾಮೆರಾ ಮುಂದೆ ಮಾತ್ರ ಉತ್ತಮವಾಗಿತ್ತು. ಆದರೆ ನಿಜವಾಗಿಯೂ ಇವರಿಬ್ಬರ ಜೀವನದಲ್ಲಿ ಕಾಂಟ್ರವರ್ಸಿಗಳೇ ತುಂಬಿತ್ತು. ರಿಷಿ ಕಪೂರ್ ತೆರೆ ಮೇಲೆ ಮಾತ್ರ ಹೀರೋ, ರಿಯಲ್ ಲೈಫಲ್ಲಿ ವಿಲನ್ ಆಗಿದ್ದರು.

ನೀತು ಕಪೂರ್-ರಿಷಿ ಕಪೂರ್
ಬಾಲಿವುಡ್ ನ ಸೆಲೆಬ್ರಿಟಿ ಜೋಡಿಗಳಲ್ಲಿ (celebrity couples) ಜನಪ್ರಿಯ ಜೋಡಿಗಳೆಂದರೆ, ನೀತು ಕಪೂರ್ ಮತ್ತು ರಿಷಿ ಕಪೂರ್ ಕೂಡ ಹೌದು, ಇವರಿಬ್ಬರನ್ನು ನೋಡಿ ಬೆಸ್ಟ್ ಆನ್ ಸ್ಕ್ರೀನ್ ಮತ್ತು ಆಫ್ ಸ್ಕ್ರೀನ್ ಕಪಲ್ ಎಂದು ಹೇಳಿದವರೆಷ್ಟೋ. ಆದರೆ ನಿಜವಾಗಿಯೂ ಇವರಿಬ್ಬರು ಬೆಸ್ಟ್ ಕಪಲ್ಸ್ ಆಗಿದ್ರಾ? ಖಂಡಿತಾ ಇಲ್ಲ.
ಕಾಂಟ್ರವರ್ಸಿಗಳಿಂದ ತುಂಬಿದ್ದ ಸಂಬಂಧ
ರಿಷಿ ಮತ್ತು ನೀತು(Rishi Kapoor and Neetu Kapoor) ಸಂಬಂಧ ತೆರೆ ಮೇಲೆ ಅಥವಾ ಕ್ಯಾಮೆರಾ ಮುಂದೆ ಕಾಣಿಸಿದಷ್ಟು ಉತ್ತಮವಾಗಿರಲಿಲ್ಲ ಎನ್ನುವ ಮಾಹಿತಿ ಇದೀಗ ವೈರಲ್ ಆಗುತ್ತಿದೆ. ಇವರಿಬ್ಬರ ಸಂಸಾರ ತೊಂದರೆಯಿಂದ ಕೂಡಿತ್ತಂತೆ. ಇಬ್ಬರ ಜೀವನದಲ್ಲಿ ಕಾಂಟ್ರವರ್ಸಿಗಳೇ ತುಂಬಿತ್ತು ಎನ್ನುತ್ತಿದೆ ವೈರಲ್ ಸುದ್ದಿಗಳು.
ಟೀನೇಜಲ್ಲಿ ಲವ್ವಲ್ಲಿ ಬಿದ್ದ ನೀತು ಕಪೂರ್
ರಿಷಿ ಕಪೂರ್ ಪ್ರೀತಿಯಲ್ಲಿ ಬಿದ್ದಾಗ, ನೀತೂಗೆ ಕೇವಲ ಟೀನೇಜರ್ (teengager ) ಆಗಿದ್ದರು. ಆಕರ್ಷಣೆಯನ್ನೆ ಲವ್ ಎಂದು ತಿಳಿದು ರಿಷಿ ಕಪೂರನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸಿದ್ದರು ನೀತು. ಆದರೆ ಸ್ವಲ್ಪ ಸಮಯದಲ್ಲೇ ನೀತುಗೆ ರಿಷಿ ಕಪೂರ್ ಕೋಪ ಮತ್ತು ಡ್ರಿಂಕಿಂಗ್ ಅಭ್ಯಾಸ ಸಂಬಂಧದಲ್ಲಿ ಮುಳ್ಳಾಗುತ್ತದೆ ಎನ್ನೋದು ತಿಳಿದು ಬಂದಿದೆ.
ರಿಷಿ ಕಪೂರ್ ಕೊಟ್ಟ ಟಾರ್ಚರ್
ತಮ್ಮ ಅಟೋ ಬಯೋಗ್ರಫಿಯಲ್ಲಿ (AutoBiography)ರಿಷಿ ಕಪೂರ್ ತಮ್ಮ ಅಭ್ಯಾಸದ ಬಗ್ಗೆ ಬರೆದುಕೊಂಡಿದ್ದರು. ಒಂದು ಸಲ ರಿಷಿ ಎಷ್ಟು ಡ್ರಿಂಕ್ಸ್ ಮಾಡಿದ್ದರು ಎಂದರೆ ಬಳಿಕ ನೀತು ಕಪೂರ್ ಗೆ ಒತ್ತಾಯ ಮಾಡಿ, ತಮ್ಮ ಮಾಜಿ ಗೆಳತಿ ಯಾಸ್ಮಿನ್ ಗೆ ಕರೆ ಮಾಡುವಂತೆ ಮಾಡಿ, ಮತ್ತೆ ತಮ್ಮ ಬಳಿ ಆಕೆ ಮಾತನಾಡುವಂತೆ ಬೇಡಿಕೊಳ್ಳಲು ಹೇಳಿದ್ದರಂತೆ.
ಮೌನವಾಗಿ ಉಳಿದ ನೀತು ಕಪೂರ್
ಈ ಎಲ್ಲಾ ಘಟನೆಗಳಿಂದ ನೀತು ಅವಮಾನಿತರಾಗಿದ್ದರಂತೆ, ಆದರೆ ಮೌನವಾಗಿಯೇ ಉಳಿದರು. ನಂತರ ತಮ್ಮ ಸಂಬಂಧದಲ್ಲಿ, ಮದುವೆಯಲ್ಲಿ ಹಲವು ಏಳು ಬೀಳುಗಳು ಬಂದರೂ ಎಲ್ಲವನ್ನೂ ಸಹಿಸಿಕೊಂಡು ನಿಭಾಯಿಸಿಕೊಂಡು ಬಂದಿದ್ದರು ನೀತು ಕಪೂರ್.
ಜೂಹಿ, ದಿವ್ಯಾ ಭಾರ್ತಿ ಜೊತೆ ಅಫೇರ್
ರಿಷಿ ಕಪೂರ್ ಹಲವು ನಟಿಯರ ಜೊತೆಗೆ ಅಫೇರ್ ಹೊಂದಿದ್ದರು ಎನ್ನುವ ಸುದ್ದಿ ಕೇಳಿ ಬರುತ್ತಲೇ ಇತ್ತು. ನಟಿಯರಾದ ಟೀನಾ ಮುನಿಮ್, ಜೂಹಿ ಚಾವ್ಲಾ (Juhi Chawla), ದಿವ್ಯಾ ಭಾರ್ತಿ ಎಲ್ಲರ ಜೊತೆಗೂ ರಿಷಿ ಕಪೂರ್ ಹೆಸರು ಕೇಳಿ ಬಂದಿತ್ತು, ಆದರೂ ನೀತು ಕಪೂರ್ ಸಂಬಂಧದಿಂದ ಹಿಂದೆ ಸರಿಯಲಿಲ್ಲ.
ಇತರ ನಟಿಯರ ಜೊತೆ ಫ್ಲರ್ಟ್ ಮಾಡುತ್ತಿದ್ದ ರಿಷಿ
ನೀತು ಕಪೂರ್ ಸ್ವತಃ ಹಲವು ಬಾರಿ ಈ ಕುರಿತು ಮಾಹಿತಿ ನೀಡಿತ್ತು. ಹಲವಾರು ಬಾರಿ ನಟಿ ತಮ್ಮ ಪತಿ ಬೇರೆ ನಟಿಯರೊಂದಿಗೆ ಫ್ಲರ್ಟ್ ಮಾಡೋದು, ಬೇರೆಯವರ ಜೊತೆ ಒನ್ ನೈಟ್ ಸ್ಟಾಂಡ್ (one night stand) ಮಾಡಿದ್ದನ್ನೆಲ್ಲಾ ಹಲವಾರು ಬಾರಿ ಕಣ್ಣಾರೆ ನೋಡಿದ್ದರಂತೆ. ಈ ಸಂಬಂಧಗಳು ಹೆಚ್ಚು ಸಮಯ ಉಳಿಯೋದಿಲ್ಲ ಎಂದು ಅರಿತ ನೀತು ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲವಂತೆ.
ಅಪ್ಪನಿಗೆ ಹೆದರುತ್ತಿದ್ದ ರಣಬೀರ್ ಕಪೂರ್
ಮನೆಯಲ್ಲೂ ಅಷ್ಟೇ ರಿಷಿ ಕಪೂರ್ ಅವರ ಕುಡಿತ ಮತ್ತು ವಿಪರೀತ ಸಿಟ್ಟು, ಸುಂದರವಾದ ಕೌಟುಂಬಿಕ ವಾತಾವರಣವನ್ನೇ ಹಾಳು ಮಾಡುತ್ತಿತ್ತಂತೆ. ಈ ಬಗ್ಗೆ ರಣಬೀರ್ ಕಪೂರ್ (Ranbir Kapoor) ಸಹ ಒಂದು ಬಾರಿ ಹೇಳಿದ್ದು, ತಾವು ತಮ್ಮ ತಂದೆಗೆ ಹೆದರುತ್ತಿರುವುದಾಗಿ ಹಾಗೂ ಅಮ್ಮ-ಅಪ್ಪನ ನಡುವೆ ವಿಪರೀತ ಜಗಳ ನಡೆಯುತ್ತಿತ್ತು ಎಂದಿದ್ದಾರೆ.
ಮಕ್ಕಳನ್ನು ನಿಯಂತ್ರಿಸುತ್ತಿದ್ದ ರಿಷಿ ಕಪೂರ್
ರಿಷಿ ಕಪೂರ್ ತುಂಬಾನೆ ಕಂಟ್ರೋಲಿಂಗ್ ಪೋಷಕರಾಗಿದ್ದರು, ಅವರು ತಮ್ಮ ಮಕ್ಕಳ ಆಸೆಗಳಿಗೂ ಸಹ ತಡೆ ಹಾಕುತ್ತಿದ್ದರು. ಮಗಳು ರಿಧಿಮಾ ಕಪೂರ್ ಗೆ (Riddhima Kapoor) ಸಿನಿಮಾ ಇಂಡಷ್ಟ್ರಿಗೆ ಎಂಟ್ರಿ ಕೊಡುವ ಮಹದಾಸೆ ಇತ್ತಂತೆ, ಆದರೆ ರಿಷಿ ಕಪೂರ್ ಅದಕ್ಕೆ ಸಮ್ಮತಿ ನೀಡಲಿಲ್ಲ.
ರಿಷಿ ಕಪೂರ್ ಕ್ಯಾನ್ಸರ್ ಹೋರಾಟ
ಕೊನೆಗೆ ರಿಷಿ ಕಪೂರ್ ತಮ್ಮ ಕ್ಯಾನ್ಸರ್ ಹೋರಾಟದ ಸಮಯದಲ್ಲೂ ಸಹ ವೈದ್ಯರನ್ನು ಒಪ್ಪಿಸಿ ಕೊಂಚ ಆಲ್ಕೋಹಾಲ್ ಸೇವಿಸುತ್ತಿದ್ದರಂತೆ, ಜೊತೆಗೆ ನೀತು ಕಪೂರ್ ಬಳಿ ಕೂಡ ವೈದ್ಯರು ರಾತ್ರಿ ಹೊತ್ತು ಒಂದು ಪೆಗ್ ತೆಗೆದುಕೊಳ್ಳಲು ಸಲಹೆ ನೀಡಿದ್ದಾರೆ ಎಂದಿದ್ದರಂತೆ.
ಕೌಟುಂಬಿಕೆ ಕಲಹ ಮರೆಮಾಚಿ ಆದರ್ಶ ದಂಪತಿಗಳಂತೆ ಪೋಸ್
ಇಷ್ಟೆಲ್ಲಾ ಕೌಟುಂಬಿಕ ಕಲಹಗಳು ನಡೆಯುತ್ತಿದ್ದರೂ ಸಹ ಕೊನೆಯವರೆಗೂ ನೀತು ರಿಷೀ ಕಪೂರ್ ವಿರುದ್ಧ ಸಾರ್ವಜನಿಕವಾಗಿ ಒಂದೇ ಒಂದು ಬಾರಿಯೂ ಕೆಟ್ಟದಾಗಿ ಮಾತನಾಡಿರಲಿಲ್ಲ. ಯಾವಾಗಲೂ ರಿಷಿಗೆ ಬೆಂಬಲ ನೀಡುತ್ತಾ, ತಾವು ಆದರ್ಶ ದಂಪತಿಗಳು ಎಂಬುದನ್ನು ತೋರಿಸಿದರು.
ರಿಷಿ ಕಪೂರ್ ಸಾವಿನ ಬಳಿಕ ನೀತು
ರಿಷಿ ಕಪೂರ್ ಮರಣದ ನಂತರ ನೀತು ಕಪೂರ್ ನೋಡಿದವರೆಲ್ಲಾ, ಈಗ ನೀತು ಫ್ರೀ ಆದಂತೆ ಕಾಣಿಸುತ್ತಿದೆ, ಜೊತೆಗೆ ಸ್ವತಂತ್ರ್ಯವಾಗಿರುವಂತೆ, ಖುಷಿಯಾಗಿರುವಂತೆ ಕಾಣಿಸುತ್ತಿದೆ, ಅಷ್ಟೇ ಅಲ್ಲ ತಮಗೆ ಬೇಕಾದ ಜೀವನವನ್ನು ಈಗ ನಡೆಸುತ್ತಿದ್ದಾರೆ ಎನ್ನುತ್ತಿದ್ದಾರೆ ಅಭಿಮಾನಿಗಳು. ಈಕೆಯ ಜರ್ನಿ ಹೇಳುತ್ತೆ, ಕೆಲವೊಮ್ಮೆ ಮೌನ, ಆಳವಾದ ಗಾಯವನ್ನು ಕೂಡ ಮರೆಮಾಚುತ್ತೆ ಎಂದು.