ರಣವೀರ್, ಶ್ರೀಲೀಲಾ ಜೊತೆಯಾಗುತ್ತಿರುವ ಜಾಹೀರಾತು ಬಜೆಟ್ ಕಾಂತಾರಾ 1 ಗಿಂತ ಹೆಚ್ಚು
ರಣವೀರ್, ಶ್ರೀಲೀಲಾ ಜೊತೆಯಾಗುತ್ತಿರುವ ಜಾಹೀರಾತು ಬಜೆಟ್ ಕಾಂತಾರಾ 1 ಗಿಂತ ಹೆಚ್ಚು, ಈ ಜಾಹೀರಾತನ್ನು ಅಟ್ಲಿ ನಿರ್ದೇಶನ ಮಾಡುತ್ತಿದ್ದಾರೆ. ಅಷ್ಟಕ್ಕೂ ಈ ಜಾಹೀರಾತು ಯಾವುದು, ಇದರ ಬಜೆಟ್ ಎಷ್ಟು ಕೋಟಿ?

ರಣವೀರ್, ಡಿಯೋಲ್, ಶ್ರೀಲೀಲಾ ಜಾಹೀರಾತು
ರಣವೀರ್, ಡಿಯೋಲ್, ಶ್ರೀಲೀಲಾ ಜಾಹೀರಾತು
ಬಾಲಿವುಡ್ ನಟ ರಣವೀರ್ ಸಿಂಗ್, ಬಾಬಿ ಡಿಯೋಲ್ ಹಾಗೂ ನಟಿ ಶ್ರೀಲೀಲಾ ಇದೀಗ ಜಾಹೀರಾತು ಒಂದರಲ್ಲೇ ಜೊತೆಯಾಗಿ ಕಾಣಿಸಿಕೊಲ್ಳುತ್ತಿದ್ದಾರೆ. ನಟ ನಟಿಯರು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದು ಹೊಸದೇನಲ್ಲ. ಆದರೆ ಈ ಮೂವರ ಜಾಹೀರಾತು ಇದೀಗ ಭಾರಿ ಸದ್ದು ಮಾಡುತ್ತಿದೆ. ಕಾರಣ ಇದರ ಬಜೆಟ್, ಈ ಜಾಹೀರಾತು ಬಜೆಟ್ ಕಾಂತಾರಾ ಚಾಪ್ಟರ್ 1 ಸಿನಿಮಾಗಿಂತ ಹೆಚ್ಚು.
ಕಾಂತಾರಾ ಚಾಪ್ಟರ್ 1 ಬಜೆಟ್‌ಗಿಂತ ಹೆಚ್ಚು
ಕಾಂತಾರಾ ಚಾಪ್ಟರ್ 1 ಬಜೆಟ್‌ಗಿಂತ ಹೆಚ್ಚು
ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ಕಾಂತಾರಾ ಚಾಪ್ಟರ್ 1 ಸಿನಿಮಾ 600 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ ಕಾಂತಾರಾ 1 ಸಿನಿಮಾ ಬಜೆಟ್ 125 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಆದರೆ ರಣವೀರ್ ಸಿಂಗ್, ಬಾಬಿ ಡಿಯೋಲ್ ಹಾಗೂ ಶ್ರೀಲೀಲಾ ಕಾಣಿಸಿಕೊಳ್ಳುತ್ತಿರುವ ಜಾಹೀರಾತು ಬಜೆಟ್ 150 ಕೋಟಿ ರೂಪಾಯಿ.
ಅತೀ ದುಬಾರಿ ಜಾಹೀರಾತು
ಅತೀ ದುಬಾರಿ ಜಾಹೀರಾತು
ವರದಿಗಳ ಪ್ರಕಾರ ಈ ಜಾಹೀರಾತು ಅತೀ ದುಬಾರಿ ಜಾಹೀರಾತುಗಳ ಸಾಲಿಗೆ ಸೇರಿಕೊಂಡಿದೆ. 150 ಕೋಟಿ ರೂಪಾಯಿ ಪೈಕಿ ರಣವೀರ್ ಸಿಂಗ್, ಶ್ರೀಲೀಲಾ, ಬಾಬಿ ಡಿಯೋಲ್ ಹಾಗೂ ನಿರ್ದೇಶಕ ಅಟ್ಲಿಗೆ ಬಹುಪಾಲು ಸಂಭಾವನೆ ರೂಪದಲ್ಲಿ ಹೋಗುತ್ತಿದೆ. ಕಾಂತಾರಾ ಚಾಪ್ಟರ್ 1 ಮಾತ್ರವಲ್ಲ, 130 ಕೋಟಿ ರೂಪಾಯಿಯಲ್ಲಿ ನಿರ್ಮಾಣವಾದ ಛಾವ ಸಿನಿಮಾ ಬಜೆಟ್‌ಗಿಂತಲೂ ಹೆಚ್ಚು ವೆಚ್ಚವಾಗುತ್ತಿದೆ.
ಚಿಂಗ್ಸ್ ದೇಸಿ ಚೈನೀಸ್ ಬ್ರ್ಯಾಂಡ್ ಜಾಹೀರಾತು
ಚಿಂಗ್ಸ್ ದೇಸಿ ಚೈನೀಸ್ ಬ್ರ್ಯಾಂಡ್ ಜಾಹೀರಾತು
ಭಾರತದಲ್ಲಿ ದೇಸಿ ಚೈನೀಸ್ ಫುಡ್ ನೀಡುತ್ತಿರುವ ಚಿಂಗ್ಸ್ ದೇಸಿ ಚೈನೀಸ್ ಫುಡ್ ಬ್ರ್ಯಾಂಡ್ ಉತ್ಪನ್ನದ ಹೊಸ ಜಾಹೀರಾತಿನಲ್ಲಿ ರಣವೀರ್ ಸಿಂಗ್, ಶ್ರೀಲೀಲಾ ಹಾಗೂ ಬಾಬಿ ಡಿಯೋಲ್ ಕಾಣಿಸಿಕೊಳ್ಳುತ್ತಿದ್ದಾರೆ. 1996ರಲ್ಲಿ ಅಜಯ್ ಗುಪ್ತಾ ಮುಂಬೈನಲ್ಲಿ ಆರಂಭಿಸಿದ ಚಿಂಗ್ಸ್ ದೇಸಿ ಚೈನೀಸ್ ಇದೀಗ ಅತೀ ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ.
ಅಟ್ಲಿ ನಿರ್ದೇಶನ
ಅಟ್ಲಿ ನಿರ್ದೇಶನ
150 ಕೋಟಿ ರೂಪಾಯಿ ಬಜೆಟ್ ಇರುವ ಈ ಜಾಹೀರಾತನ್ನು ಖ್ಯಾತ ನಿರ್ದೇಶಕ ಅಟ್ಲಿ ನಿರ್ದೇಶನ ಮಾಡುತ್ತಿದ್ದಾರೆ. ಜವಾನ್ ಮೂಲಕ ಯಶಸ್ವಿ ನಿರ್ದೇಶಕನಾಗಿ ಹೊರಹೊಮ್ಮಿರುವ ಅಟ್ಲಿ, ಈ ಜಾಹೀರಾತು ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ಈ ಬಿಗ್ ಬಜೆಟ್ ಜಾಹೀರಾತು ಭಾರಿ ಕುತೂಹಲಕ್ಕೆ ಕಾರಣವಾಗಿದೆ.