Mother's Day 2022; ಮಗಳ ಜೊತೆ ಫಸ್ಟ್ ಮದರ್ಸ್ ಡೇ ಆಚರಿಸಿದ Priyanka Chopra
ತಾಯಂದಿರ ದಿನ (Mother's Day 2022) ಇದು ಪ್ರತಿಯೊಬ್ಬ ವ್ಯಕ್ತಿಗೂ ವಿಶೇಷ ದಿನವಾಗಿದೆ. ಈ ವಿಶೇಷ ದಿನವನ್ನು ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ಆಚರಿಸಲಾಗುತ್ತದೆ. ಅಂದಹಾಗೆ, ಈ ವರ್ಷ ಮೊದಲ ಬಾರಿಗೆ ತಮ್ಮ ಮಕ್ಕಳೊಂದಿಗೆ ಮೊದಲ ತಾಯಂದಿರ ದಿನವನ್ನು ಆಚರಿಸುತ್ತಿರುವ ಬಾಲಿವುಡ್‌ನಲ್ಲಿದ್ದಾರೆ ಅನೇಕ ನಟಿಯರಿದ್ದಾರೆ. ಇವುಗಳಲ್ಲಿ ಪ್ರಿಯಾಂಕಾ ಚೋಪ್ರಾ (Priyanka Chopra), ಪ್ರೀತಿ ಜಿಂಟಾ (Preity Zinta), ಭಾರತಿ ಸಿಂಗ್ (Bharti Singh) ಮತ್ತು ಕಾಜಲ್ ಅಗರ್ವಾಲ್ (Kajal Aggarwal) ಅವರ ಹೆಸರುಗಳು ಸೇರಿವೆ.

ಈ ವರ್ಷ ಪ್ರಿಯಾಂಕಾ ಚೋಪ್ರಾ ಮಗಳು ಮಾಲ್ತಿ ಮೇರಿಯ ತಾಯಿಯಾಗಿದ್ದಾರೆ. ಆದರೆ, ಇದುವರೆಗೂ ಮಗಳ ಮುಖವನ್ನು ನಟಿ ಯಾರಿಗೂ ತೋರಿಸಿಲ್ಲ. ಪ್ರಿಯಾಂಕಾ ಚೋಪ್ರಾ ಬಾಡಿಗೆ ತಾಯ್ತಾನದ ಮೂಲಕ ಮಗುವನ್ನು ಪಡೆದಿದ್ದಾರೆ.
ಅದೇ ಸಮಯದಲ್ಲಿ, ಪೇಮಸ್ ಕಾಮಿಡಿಯನ್ ಭಾರ್ತಿ ಸಿಂಗ್ ಕೂಡ ಏಪ್ರಿಲ್‌ನಲ್ಲಿ ಮಗ ಗೋಲಾಗೆ ತಾಯಿಯಾದರು. ಭಾರ್ತಿ ಸಿಂಗ್ ಇದುವರೆಗೂ ತನ್ನ ಮಗನ ಫೋಟೋವನ್ನು ಶೇರ್ ಮಾಡಿಕೊಂಡಿಲ್ಲ.
Mothers Day 2022, Kajal Agarwal shares first photo of son Neil Kitchlu on mothers day have a look
ಇತ್ತೀಚೆಗಷ್ಟೇ ತಾಯಿಯಾದ ನಟಿ ಕಾಜಲ್ ಅಗರ್ವಾಲ್ ಅವರು ಸಹ ತನ್ನ ಮಗನ ಜೊತೆ ಮೊದಲ ಮದರ್ಸ್ ಡೇ ಸೆಲೆಬ್ರೇಟ್ ಮಾಡುತ್ತಿದ್ದಾರೆ. ನಟಿ ಮಗನ ಹೆಸರನ್ನು ರಿವಿಲ್ ಮಾಡಿದ್ದಾರೆ ಆದರೆ ಫೊಟೋವನ್ನು ಇನ್ನು ಬಹಿರಂಗ ಪಡಿಸಿಲ್ಲ.
ಪ್ರೀತಿ ಜಿಂಟಾ ಕಳೆದ ವರ್ಷ ನವೆಂಬರ್‌ನಲ್ಲಿ ಅವಳಿ ಮಕ್ಕಳ ತಾಯಿಯಾದರು. ಪ್ರಿತಿ ಜಿಂಟಾ ಅವರಿಗೆ ಸಹ ಇದು ಫಸ್ಟ್ ಮದರ್ಸ್ ಡೇ ಆಗಿದೆ. ಸರೋಗೆಸಿ ಮೂಲಕ ಮಕ್ಕಳನ್ನು ಪಡೆದಿರುವ ನಟಿ ಇದುವರೆಗೂ ತಮ್ಮ ಮಕ್ಕಳ ಪೋಟೋ ರೀವಿಲ್ ಮಾಡಿಲ್ಲ .
ಕಿರು ತೆರೆಯಲ್ಲಿ ಫೇಮಸ್ ಆಗಿರುವ ಡೆಬಿನಾ ಬ್ಯಾನರ್ಜಿ ಕಳೆದ ತಿಂಗಳು ಏಪ್ರಿಲ್‌ನಲ್ಲಿ ತಾಯಿಯಾದರು. ಅವರು ಸಹ ಈ ವರ್ಷ ತನ್ನ ಮೊದಲ ತಾಯಂದಿರ ದಿನವನ್ನು ತನ್ನ ಮಗುವಿನ ಜೊತೆ ಆಚರಿಸುತ್ತಿದ್ದಾರೆ. ಇನ್ನೂ ಅವರು ಮಗಳ ಮುಖ ತೋರಿಸಿಲ್ಲ.
ಟಿವಿ ಧಾರಾವಾಹಿಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ ಕಿಶ್ವರ್ ಮರ್ಚೆಂಟ್ ಕಳೆದ ವರ್ಷ ಆಗಸ್ಟ್‌ನಲ್ಲಿ ಮಗ ನಿರ್ವೀರ್‌ನ ತಾಯಿಯಾದರು. ಈ ವರ್ಷ ಆಕೆ ತನ್ನ ಮೊದಲ ತಾಯಂದಿರ ದಿನವನ್ನು ತನ್ನ ಮಗನೊಂದಿಗೆ ಆಚರಿಸುತ್ತಿದ್ದಾರೆ.
ಏಕ್ತಾ ಕಪೂರ್ ಅವರ ಶೋ ಕಸೌತಿ ಜಿಂದಗಿ ಕೇ ಸೇರಿದಂತೆ ಹಲವು ಟಿವಿ ಶೋಗಳಲ್ಲಿ ಕೆಲಸ ಮಾಡಿರುವ ಪೂಜಾ ಬ್ಯಾನರ್ಜಿ ಈ ವರ್ಷದ ಮಾರ್ಚ್‌ನಲ್ಲಿ ತಾಯಿಯಾದರು. ಅವರು ತಮ್ಮ ಮಗಳು ಸನಾ ಅವರೊಂದಿಗೆ ಮೊದಲ ತಾಯಂದಿರ ದಿನವನ್ನು ಆಚರಿಸುತ್ತಿದ್ದಾರೆ.
ಆದಿತ್ಯ ನಾರಾಯಣ್ ಅವರ ಪತ್ನಿ ಶ್ವೇತಾ ಅಗರ್ವಾಲ್ ಈ ವರ್ಷದ ಫೆಬ್ರವರಿಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಶ್ವೇತಾ ಕೂಡ ತನ್ನ ಮಗಳ ಜೊತೆ ಮೊದಲ ತಾಯಂದಿರ ದಿನವನ್ನು ಆಚರಿಸುತ್ತಿದ್ದಾರೆ. ಆದಾಗ್ಯೂ, ಇನ್ನೂ ಮಗುವಿನ ಮುಖವನ್ನು ತೋರಿಸಿಲ್ಲ.