- Home
- Entertainment
- Cine World
- ಎಲ್ಲಾ ದಾಖಲೆ ಬ್ರೇಕ್ ಮಾಡಿತ್ತು 1957ರ ಸಿನಿಮಾ; 2025ರಲ್ಲಾಗಿದ್ರೆ ಕಲೆಕ್ಷನ್ ಆಗ್ತಿತ್ತು 2,000 ಕೋಟಿ ರೂಪಾಯಿ
ಎಲ್ಲಾ ದಾಖಲೆ ಬ್ರೇಕ್ ಮಾಡಿತ್ತು 1957ರ ಸಿನಿಮಾ; 2025ರಲ್ಲಾಗಿದ್ರೆ ಕಲೆಕ್ಷನ್ ಆಗ್ತಿತ್ತು 2,000 ಕೋಟಿ ರೂಪಾಯಿ
Box Office Collection Record: ಭಾರತೀಯ ಚಿತ್ರರಂಗದ ಒಂದು ಐಕಾನಿಕ್ ಸಿನಿಮಾವಾಗಿದೆ. ಕೇವಲ 60 ಲಕ್ಷದಲ್ಲಿ ನಿರ್ಮಾಣವಾದ ಈ ಚಿತ್ರ, ವಿಶ್ವಾದ್ಯಂತ 8 ಕೋಟಿಗೂ ಅಧಿಕ ಗಳಿಸಿತ್ತು, ಇದರ ಇಂದಿನ ಮೌಲ್ಯ ಸುಮಾರು ₹2000 ಕೋಟಿ ಆಗಿದೆ.

ಭಾರತೀಯ ಸಿನಿಲೋಕ
ಭಾರತೀಯ ಸಿನಿಲೋಕದ ಇತಿಹಾಸದಲ್ಲಿ ಸಿನಿಮಾವೊಂದು ಇಡೀ ದೇಶದ ಮೂಲೆ ಮೂಲೆಯಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಈ ಚಿತ್ರ ಎಲ್ಲರ ಮೆಚ್ಚುಗೆ ಪಡೆಯಯೋದರ ಜೊತೆಯಲ್ಲಿ ಬಾಕ್ಸ್ ಆಫಿಸ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿತ್ತು. ಚಿತ್ರರಂಗದ ದಿಗ್ಗಜ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದರು
ಮದರ್ ಇಂಡಿಯಾ
1957ರಲ್ಲಿ ಬಿಡುಗಡೆಯಾದ 'ಮದರ್ ಇಂಡಿಯಾ' ಸಿನಿಮಾ ಇಂದಿಗೂ ಹಲವರಿಗೆ ಸ್ಪೂರ್ತಿಯಾಗಿದೆ. ನರ್ಗಿಸ್, ಸುನಿಲ್ ದತ್ ಮತ್ತು ರಾಜ್ ಕುಮಾರ್ ಸೇರಿದಂತೆ ಕಲಾವಿದರು ಈ ಸಿನಿಮಾ ಮೂಲಕ ಇಂದಿಗೂ ಅಮರವಾಗಿದ್ದಾರೆ. ಮೆಹಬೂಬ್ ಖಾನ್ ನಿರ್ದೇಶನದ ಮದರ್ ಇಂಡಿಯಾ ಸಿನಿಮಾ ಎಲ್ಲಾ ವರ್ಗದವರನ್ನು ತಲುಪಿತ್ತು. ಇಂದಿನ ಕಾಲದಲ್ಲಿ ಮದರ್ ಇಂಡಿಯಾ ಸಿನಿಮಾದ ಬಾಕ್ಸ್ ಆಫಿಸ್ ಕಲೆಕ್ಷನ್ ಎಷ್ಟಾಗಿರುತ್ತೆ ಅಂತ ನೀವು ಲೆಕ್ಕ ಹಾಕಿದ್ರೆ ಶಾಕ್ ಆಗ್ತೀರಿ.
ಪ್ರವಾಹ ದೃಶ್ಯ
1955ರಲ್ಲಿ ಉತ್ತರ ಪ್ರದೇಶದ ಹಲವು ಭಾಗ ಪ್ರವಾಹಕ್ಕೆ ತುತ್ತಾಗಿತ್ತು. ಛಾಯಾಗ್ರಾಹಕ ಫರ್ಡೂನ್ ಇರಾನಿ ಅವರು ಈ ಪ್ರವಾಹ ದೃಶ್ಯಗಳನ್ನು ಸೆರೆ ಹಿಡಿದಿದ್ದರು. ಈ ಪ್ರವಾಹದ ದೃಶ್ಯಗಳು ಮದರ್ ಇಂಡಿಯಾ ಸಿನಿಮಾ ಪ್ರಮುಖ ಭಾಗವಾಗಿದ್ದವು. ವರದಿಗಳ ಪ್ರಕಾರ, ಮದರ್ ಇಂಡಿಯಾ ಸಿನಿಮಾ 60 ಲಕ್ಷ ರೂಪಾಯಿಯಲ್ಲಿ ನಿರ್ಮಾಣವಾಗಿತ್ತು.
ಐಕಾನಿಕ್ ಸಿನಿಮಾ
ಚಿತ್ರ ಬಿಡುಗಡೆಯಾದ ಕೆಲವೇ ವಾರಗಳಲ್ಲಿ ಹಾಕಿದ ಬಂಡವಾಳದ ಜೊತೆಯೆ ಹಲವು ಪಟ್ಟುಗಳನ್ನು ಆದಾಯವನ್ನು ನಿರ್ಮಾಪಕರಿಗೆ ನೀಡಿತ್ತು. ಅಕ್ಟೋಬರ್ 25, 1957 ರಂದು ದೀಪಾವಳಿ ಹಬ್ಬದಂದು ಬಿಡುಗಡೆಯಾದ ಮದರ್ ಇಂಡಿಯಾ ಸಿನಿಮಾ ನಿರೀಕ್ಷೆಗೂ ಮೀರಿದ ಹಿಟ್ ನೀಡಿತ್ತು. ಮದರ್ ಇಂಡಿಯಾ ಭಾರತೀಯ ಚಿತ್ರರಂಗದ ಐಕಾನಿಕ್ ಸಿನಿಮಾ ಎಂದು ಕರೆಸಿಕೊಳ್ಳುತ್ತದೆ.
ಇದನ್ನೂ ಓದಿ: 25 ಥಿಯೇಟರ್‌ನಲ್ಲಿ ಬಿಡುಗಡೆ; ಸಿನಿಮಾ ನೋಡಿದವರು ತಿಂಗಳುಗಟ್ಟಲೇ ನಿದ್ದೆ ಮಾಡಲಿಲ್ಲ!
ಬಾಕ್ಸ್ ಆಫಿಸ್ ಇಂಡಿಯಾ ವರದಿ
ಬಾಕ್ಸ್ ಆಫಿಸ್ ಇಂಡಿಯಾ ವರದಿ ಪ್ರಕಾರ, ಮದರ್ ಇಂಡಿಯಾ ಭಾರತದಲ್ಲಿ 4 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ವಿಶ್ವದಾದ್ಯಂತ 8 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಮದರ್ ಇಂಡಿಯಾ ಹಿಸ್ಟರಿ ಕ್ರಿಯೇಟ್ ಮಾಡಿತ್ತು. ಆ ವರ್ಷದ ಅತ್ಯಧಿಕ ಗಳಿಕೆಯ ಸಿನಿಮಾ ಆಗಿತ್ತು. ಮಾಧ್ಯಮ ವರದಿಗಳ ಪ್ರಕಾರ, ಈ ಚಿತ್ರದ ಗಳಿಕೆ ಇಂದಿನ ಮೌಲ್ಯದಲ್ಲಿ ₹2000 ಕೋಟಿಗಳವರೆಗೆ ಇರುತ್ತಿತ್ತು. ಆಸ್ಕರ್‌ಗೆ ನಾಮನಿರ್ದೇಶನಗೊಂಡ ಭಾರತದ ಮೊದಲ ಸಿನಿಮಾ ಆಗಿತ್ತು.
ಇದನ್ನೂ ಓದಿ: 135 ನಿಮಿಷದ ಹಾರರ್ ಸಿನಿಮಾ 16 ದಿನದಲ್ಲಿ ಗಳಿಸಿದ್ದು 3140 ಕೋಟಿ; ಭಾರತದಲ್ಲಿಯೂ ರಿಲೀಸ್ ಆಗಿದೆ!