- Home
- Entertainment
- Cine World
- Indian Celebrities Married Divorcee: ರಾಜಮೌಳಿಯಂತೆ ಈ ಸೆಲೆಬ್ರಿಟಿಗಳು ಡಿವೋರ್ಸಿಗಳನ್ನು ಮದುವೆಯಾದ್ರು, ಅವ್ರ ಮಕ್ಕಳನ್ನು ಒಪ್ಕೊಂಡ್ರು...ಕನ್ನಡಿಗಾರು?
Indian Celebrities Married Divorcee: ರಾಜಮೌಳಿಯಂತೆ ಈ ಸೆಲೆಬ್ರಿಟಿಗಳು ಡಿವೋರ್ಸಿಗಳನ್ನು ಮದುವೆಯಾದ್ರು, ಅವ್ರ ಮಕ್ಕಳನ್ನು ಒಪ್ಕೊಂಡ್ರು...ಕನ್ನಡಿಗಾರು?
ಕನ್ನಡ ಸೇರಿದಂತೆ ಬೇರೆ ಭಾಷೆಯಲ್ಲಿ ಕೂಡ ಕೆಲ ಸೆಲೆಬ್ರಿಟಿಗಳು ಎರಡನೇ ಮದುವೆಯಾಗಿದ್ದಾರೆ. ಡಿವೋರ್ಸ್ ಆಗಿರುವ ಅಥವಾ ಸಂಗಾತಿಯನ್ನು ಕಳೆದುಕೊಂಡಿರುವವರನ್ನು ಮದುವೆಯಾಗಿರುವುದರ ಜೊತೆಗೆ, ಅವರ ಮಗುವನ್ನು ತಮ್ಮ ಮಗು ಎಂದು ಒಪ್ಪಿಕೊಂಡಿದ್ದಾರೆ. ಅವರು ಯಾರು?

ಎಸ್ ಎಸ್ ರಾಜಮೌಳಿ
ಭಾರತೀಯ ಚಿತ್ರರಂಗದಲ್ಲಿ ಅತ್ಯದ್ಭುತ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಎಸ್ ಎಸ್ ರಾಜಮೌಳಿ ಲವ್ ಸ್ಟೋರಿ ಕೂಡ ಸಿನಿಮಾವನ್ನು ಮೀರಿಸಿದೆ. ಈ ಹಿಂದೆಯೇ ರಮಾ ಅವರಿಗೆ ಮದುವೆಯಾಗಿ, ಮಗನಿದ್ದನು. ರಮಾ ಅವರು ಪತಿಯಿಂದ ದೂರವಾದರು. 2001 ರಿಂದ ರಮಾ ಅವರು ರಾಜಮೌಳಿಯನ್ನು ಮದುವೆಯಾಗಿದ್ದಾರೆ. ರಮಾರ ಮೊದಲ ಮದುವೆಯಿಂದ ಎಸ್ ಎಸ್ ಕಾರ್ತಿಕೇಯ ಇದ್ದಾನೆ. ಅಂದಹಾಗೆ ಈ ಜೋಡಿ ಎಸ್ಎಸ್ ಮಯೂಖಾ ಎಂಬ ಮಗಳನ್ನು ದತ್ತು ಸ್ವೀಕಾರ ಮಾಡಿದ್ದಾರೆ.
ಮನೋಜ್ ಮಂಚು
ಮೌನಿಕಾ ರೆಡ್ಡಿ ಅವರನ್ನು ಮನೋಜ್ ಮಂಚು ಮದುವೆಯಾಗಿದ್ದಾರೆ. ಇವರಿಬ್ಬರಿಗೂ ಇದು ಎರಡನೇ ಮದುವೆ. ಮೌನಿಕಾ ರೆಡ್ಡಿ ಅವರ ಮೊದಲ ಮದುವೆಯಿಂದ ಮಗ ಇದ್ದನು. ಮನೋಜ್ ಅವರು ಈ ಮಗನನ್ನು ತನ್ನ ಮಗ ಎಂದು ಒಪ್ಪಿಕೊಂಡಿದ್ದಾರೆ.
ಸುಜಾತಾ ಅಕ್ಷಯ್
ನಟಿ ಸುಜಾತಾ ಅವರು ಅಕ್ಷಯ್ ಅವರನ್ನು ಮದುವೆಯಾಗಿದ್ದಾರೆ. ಸುಜಾತಾಗೆ ಇದು ಎರಡನೇ ಮದುವೆ. ಸುಜಾತಾಗೆ ಮಗ ಇದ್ದನು. ಸುಜಾತಾ ಅವರ ಮಗನನ್ನು ಅಕ್ಷಯ್ ತನ್ನ ಮಗ ಎಂದು ಒಪ್ಪಿಕೊಂಡಿದ್ದಾರೆ.
ಬಿಗ್ ಬಾಸ್ ರಂಜಿತ್
ಬಿಗ್ ಬಾಸ್ ಕನ್ನಡ ಖ್ಯಾತಿಯ ರಂಜಿತ್ ಅವರು ಮಾನಸಾ ಗೌಡ ಅವರನ್ನು ಮದುವೆಯಾಗಿದ್ದಾರೆ. ಮಾನಸಾಗೆ ಮೊದಲೇ ಮದುವೆಯಾಗಿ 13 ವರ್ಷದ ಮಗಳಿದ್ದಾಳೆ. ಈ ವಿಷಯ ಇತ್ತೀಚೆಗೆ ರಿವೀಲ್ ಆಗಿದೆ.
ಅನುಪಮ್ ಖೇರ್
ಅನುಪಮ್ ಖೇರ್ ಅವರು ಕಿರಣ್ ಖೇರ್ ಅವರನ್ನು ಮದುವೆಯಾಗಿದ್ದಾರೆ. ಕಿರಣ್ ಅವರಿಗೆ ಈಗಾಗಲೇ ಮದುವೆಯಾಗಿ ಸಿಕಂದರ್ ಎಂಬ ಮಗನಿದ್ದನು. ಕಿರಣ್ ಅವರಿಗೆ ಆಮೇಲೆ ಮಕ್ಕಳಾಗಲಿಲ್ಲ. ಆದರೆ ಅನುಪಮ್ ಮಾತ್ರ ಕಿರಣ್ ಮಗನನ್ನು ತನ್ನ ಮಗ ಎಂದು ನಂಬಿದ್ದಾರೆ.