- Home
- Entertainment
- Cine World
- ಸಲ್ಮಾನ್ ಖಾನ್’ನಿಂದಾಗಿ ಸಿನಿಮಾ ಲೈಫನ್ನೆ ಕಳೆದುಕೊಂಡ ಆ ನಟ, ಬ್ಯುಸಿನೆಸ್ ಮಾಡಿ ಕೋಟ್ಯಾಧಿಪತಿಯಾಗ್ಬಿಟ್ರು
ಸಲ್ಮಾನ್ ಖಾನ್’ನಿಂದಾಗಿ ಸಿನಿಮಾ ಲೈಫನ್ನೆ ಕಳೆದುಕೊಂಡ ಆ ನಟ, ಬ್ಯುಸಿನೆಸ್ ಮಾಡಿ ಕೋಟ್ಯಾಧಿಪತಿಯಾಗ್ಬಿಟ್ರು
ದೇವರು ಒಂದು ಬಾಗಿಲು ಮುಚ್ಚಿದರೆ, ಇನ್ನೊಂದು ಬಾಗಿಲು ತೆರೆಯುತ್ತಾನೆ ಎನ್ನುವ ಮಾತಿದೆ. ನಟ ವಿವೇಕ್ ಒಬೆರಾಯ್ ಅವರ ಜೀವನದಲ್ಲಾದದ್ದು ಇದೆ. ಬಾಲಿವುಡ್‌ನ ಅವಮಾನ ಅವರನ್ನು ಯಶಸ್ವಿ ಉದ್ಯಮಿಯನ್ನಾಗಿ ಪರಿವರ್ತಿಸಿತು. ಇಂದು ಅವರ ನೆಟ್ ವರ್ತ್ ಕೋಟಿಗಳಲ್ಲಿದೆ.

ವಿವೇಕ್ ಒಬೆರಾಯ್
"ಸಾಥಿಯಾ" ಚಿತ್ರದ ಮೂಲಕ ಸಿನಿಮಾ ಇಂಡಷ್ಟ್ರಿಗೆ ಪಾದಾರ್ಪಣೆ ಮಾಡಿದ ನಟ ವಿವೇಕ್ ಒಬೆರಾಯ್ ಅವರನ್ನು ಮುಂದಿನ ಸೂಪರ್‌ಸ್ಟಾರ್ ಎಂದು ಪರಿಗಣಿಸಲಾಗಿತ್ತು. ಆದರೆ ಸಡನ್ ಆಗಿ ವೃತ್ತಿಜೀವನ ಸ್ಥಗಿತಗೊಂಡಿತು. ಇದಕ್ಕೆ ಸಲ್ಮಾನ್ ಖಾನ್ ಕಾರಣ ಎನ್ನಲಾಗಿತ್ತು. ಇತ್ತೀಚಿನ ಸಂದರ್ಶನವೊಂದರಲ್ಲಿ ವಿವೇಕ್ ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದು, ನನ್ನ ವೃತ್ತಿಜೀವನದಲ್ಲಿ ನನ್ನ ವಿರುದ್ಧ ಭಾರಿ ಬಹಿಷ್ಕಾರವಿತ್ತು. ಯಾರೂ ನನಗೆ ಕೆಲಸ ನೀಡಲು ಸಿದ್ಧರಿರಲಿಲ್ಲ ಎಂದು ಹೇಳಿದ್ದಾರೆ.
ಸಲ್ಮಾನ್ ಜೊತೆಗಿನ ಜಗಳದ ನಂತರ ನಟ ಖಿನ್ನತೆಗೆ ಒಳಗಾದ ನಟ
ಸಲ್ಮಾನ್ ಜೊತೆಗಿನ ಗಲಾಟೆ ಬಳಿಕ ವಿವೇಕ್ ಸಹಿ ಮಾಡಿದ ಚಿತ್ರಗಳಿಂದ ಅವರನ್ನು ಇದ್ದಕ್ಕಿದ್ದಂತೆ ತೆಗೆದುಹಾಕಿದ್ದರಂತೆ. ಅಷ್ಟೇ ಅಲ್ಲ ನಟನಿಗೆ ಬೆದರಿಕೆ ಫೋನ್ ಕರೆಗಳು ಬರಲು ಪ್ರಾರಂಭಿಸಿದವು. ಕೆಲವೊಮ್ಮೆ ತಾಯಿಗೆ, ಮತ್ತೆ ಕೆಲವೊಮ್ಮೆ ತಂದೆಗೆ ಬೆದರಿಕೆ ಕರೆಗಳು ಬರುತ್ತಿದ್ದವಂತೆ. ಇದರಿಂದ ವಯಕ್ತಿಕ ಜೀವನವೇ ಕಗ್ಗಂಟಾಗಿ, ಖಿನ್ನತೆಗೆ ಒಳಗಾಗಿದ್ದರಂತೆ ನಟ.
ತಾಯಿಯ ಮಡಿಲಲ್ಲಿ ತಲೆಯಿಟ್ಟು ತುಂಬಾ ಅತ್ತಿದ್ದ ನಟ.
ವಿವೇಕ್ ಒಬೆರಾಯ್ ಗೆ ಈ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗಲಿಲ್ಲವಂತೆ.ಆವಾಗ ಅವರು ತಮ್ಮ ತಾಯಿಯ ಮಡಿಲಲ್ಲಿ ತಲೆಯಿಟ್ಟು ತುಂಬಾ ಅಳುತ್ತಿದ್ದರಂತೆ. ನಾನು ಒಳ್ಳೆಯ ವ್ಯಕ್ತಿ ಆದರೂ ಯಾಕೆ ಹೀಗೆ ಆಗುತ್ತಿದೆ ಎಂದು ಅಮ್ಮನ ಬಳಿ ಕೇಳಿದ್ದರಂತೆ, ಅದಕ್ಕೆ ಅವರ ತಾಯಿ ಪ್ರೀತಿಯಿಂದ ಮುದ್ದಿಸುತ್ತಾ, 'ಮಗನೇ, ಜನರು ನಿನ್ನನ್ನು ನೋಡಿ ಸಂತೋಷದಿಂದ ಶಿಳ್ಳೆ ಹೊಡೆಯುತ್ತಿದ್ದಾಗ, ಮತ್ತು ನೀನು ಒಂದರ ನಂತರ ಒಂದರಂತೆ ಚಿತ್ರಗಳಿಗೆ ಸಹಿ ಹಾಕುತ್ತಿದ್ದಾಗ, ನನಗೆ ಯಾಕೆ ಹೀಗೆ ಎಂದು ಪ್ರಶ್ನಿಸಿದ್ದೀರಾ ಎಂದು ಕೇಳಿದರಂತೆ.
ನಮ್ಮ ಸಮಸ್ಯೆಗಳು ಎಷ್ಟು ಚಿಕ್ಕವು ಎಂದು ತಾಯಿ ಕಲಿಸಿದರು
ನಂತರ ವಿವೇಕ್ ತಾಯಿ ಅವರನ್ನು ಕ್ಯಾನ್ಸರ್ ಆಸ್ಪತ್ರೆಗೆ ಕರೆದೊಯ್ದರಂತೆ. ಅಲ್ಲಿ ಅನೇಕ ರೋಗಿಗಳು ತಮ್ಮ ಅಂತಿಮ ಹಂತಗಳಲ್ಲಿದ್ದರು. ಅವರಲ್ಲಿ ಹಲವರು ಚಿಕ್ಕ ಮಕ್ಕಳಾಗಿದ್ದರು, ಅವರಲ್ಲಿ ಶಾಲೆಗೆ ಹೋಗುವ ಮಕ್ಕಳು, ಯುವಕರು, ವಯಸ್ಸಾದವರು ಎಲ್ಲರೂ ಇದ್ದರು, ಅವರೆಲ್ಲಾ ಕೀಮೋಥೆರಪಿಗೆ ಒಳಗಾಗುತ್ತಿದ್ದರು. ಅಲ್ಲಿಗೆ ಹೋದ ನಂತರ, ನನ್ನ ಸಮಸ್ಯೆ ಏನೂ ಅಲ್ಲ ಎಂದು ನಾನು ಅರಿತುಕೊಂಡೆ ಎನ್ನುತ್ತಾರೆ ವಿವೇಕ್.
ಸಮಸ್ಯೆ ಬಂದಾಗ ನಾವು ತಪ್ಪು ಮಾಡುತ್ತೇವೆ
ನಮ್ಮ ಸಮಸ್ಯೆ ಏನೆಂದರೆ, ನಾವು ಸಮಸ್ಯೆ ಎದುರಿಸಿದಾಗಲೆಲ್ಲಾ, ನಾವು ಅದೇ ಬಾಗಿಲಿಗೆ ತಲೆ ಬಡಿಯುತ್ತಲೇ ಇರುತ್ತೇವೆ. ಹೊರಬರಲು ಬೇರೆ ಬಾಗಿಲುಗಳು ತೆರೆದಿವೆಯೇ ಎಂದು ನೋಡಲು ನಾವು ತಿರುಗಿ ನೋಡುವುದಿಲ್ಲ.. ಎಂದಿದ್ದಾರೆ ವಿವೇಕ್.
ಸ್ವಂತ ಉದ್ಯಮ ಆರಂಭಿಸಿದರು
ವಿವೇಕ್ ಒಬೆರಾಯ್ ಸಿನಿಮಾಗಳಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸದಿದ್ದರೂ, ವ್ಯವಹಾರದಲ್ಲಿ ಅವರು ಭಾರಿ ಯಶಸ್ಸನ್ನು ಕಂಡಿದ್ದಾರೆ. ರಿಯಲ್ ಎಸ್ಟೇಟ್, ಆಭರಣ, ಮದ್ಯ, ಎಗ್ರಿ ಟೆಕ್ ಮತ್ತು ಎಡ್‌ಟೆಕ್‌ನಲ್ಲಿ ಹೂಡಿಕೆ ಮಾಡುವ ಮೂಲಕ ಅವರು ಹೆಚ್ಚಿನ ಲಾಭ ಗಳಿಸಿದ್ದಾರೆ. ಇಂಟ್ರೆಸ್ಟಿಂಗ್ ವಿಷಯ ಅಂದ್ರೆ ನಟ ಯಾವುದೇ ಸಾಲವನ್ನು ತೆಗೆದುಕೊಳ್ಳದೆ ತಮ್ಮ ಕಂಪನಿ ಆರಂಭಿಸಿದರು .
ವಿವೇಕ್ ಒಬೆರಾಯ್ ಅವರ ನೆಟ್ ವರ್ತ್
ವಿವೇಕ್ ಒಬೆರಾಯ್ ತಾವು ಬ್ಯುಸಿನೆಸ್ ನಿಂದ ಗಳಿಸಿದಷ್ಟು ಹಣವನ್ನು ಸಿನಿಮಾದಿಂದ ಗಳಿಸಿಲ್ಲ ಎಂದಿದ್ದಾರೆ. ಅವರ ನೆಟ್ ವರ್ತ್ ₹12 ಬಿಲಿಯನ್ ಆಗಿದೆ ಅಂದರೆ ಸುಮಾರು1200 ಕೋಟಿ ಆಗಿದೆ.