- Home
- Entertainment
- Cine World
- ಅಕ್ಷಯ್ ಕುಮಾರ್ ಬಳಿ ಇದೆ 2000 ಕೋಟಿ FD… ಆದ್ರೂ ಬಿಟ್ಟಿಲ್ಲ ಹಣದ ವ್ಯಾಮೋಹ … ಈಗಲೂ ಮಾಡ್ತಾರೆ ಈ ಕೆಲಸ
ಅಕ್ಷಯ್ ಕುಮಾರ್ ಬಳಿ ಇದೆ 2000 ಕೋಟಿ FD… ಆದ್ರೂ ಬಿಟ್ಟಿಲ್ಲ ಹಣದ ವ್ಯಾಮೋಹ … ಈಗಲೂ ಮಾಡ್ತಾರೆ ಈ ಕೆಲಸ
"ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ" ನ ಫಿನಾಲೆ ಸಂಚಿಕೆಯಲ್ಲಿ, ಅಕ್ಷಯ್ ಕುಮಾರ್ ತಮ್ಮ ಸ್ಥಿರ ಠೇವಣಿ (ಎಫ್‌ಡಿ) ಬಗ್ಗೆ ಮಾತನಾಡಿದರು. ಜಿತೇಂದ್ರ ಅವರ ನ್ಯೂಸ್ ಓಡಿ ಹೇಗೆ ಅಕ್ಷಯ್ ಹೆಚ್ಚಿನ ಹಣ ಗಳಿಸಲು ಪ್ರೇರಣೆ ತೆಗೆದುಕೊಂಡರು ಅನ್ನೋದನ್ನು ತಿಳಿಸಿದ್ದಾರೆ.

ಅಕ್ಷಯ್ ಕುಮಾರ್
ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) 1987 ರಿಂದ ಭಾರತೀಯ ಚಲನಚಿತ್ರೋದ್ಯಮದಲ್ಲಿ ನಿರಂತರವಾಗಿ ಸಕ್ರಿಯರಾಗಿದ್ದಾರೆ. ಪ್ರತಿ ವರ್ಷ ಅತಿ ಹೆಚ್ಚು ಚಲನಚಿತ್ರಗಳನ್ನು ನೀಡುವ ಮೂಲಕ ಹೆಸರುವಾಸಿಯಾದ ಅವರು ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ
ಅತಿ ಹೆಚ್ಚು ತೆರಿಗೆ ಪಾವತಿಸುವ ನಟ
ಇವರು ಅತಿ ಹೆಚ್ಚು ಸಂಭಾವನೆ ಪಡೆಯುವುದು ಮಾತ್ರವಲ್ಲ. ಹಲವಾರು ವರ್ಷಗಳಿಂದ ‘ಭಾರತದ ಅತಿ ಹೆಚ್ಚು ತೆರಿಗೆ ಪಾವತಿದಾರ’ (Highest tax payer) ಎಂಬ ಬಿರುದನ್ನು ಹೊಂದಿದ್ದಾರೆ. ಇದೀಗ ಅವರು ತಮ್ಮ ಹಣ ಹೆಚ್ಚು ಮಾಡುವ ವಿಧಾನದ ಬಗ್ಗೆ ತಿಳಿಸಿದ್ದಾರೆ.
ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ
ಇತ್ತೀಚೆಗೆ, ಅಕ್ಷಯ್ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ (ಸೀಸನ್ 3) ನ ಸೀಸನ್ ಫೈನಲ್‌ನಲ್ಲಿ ಕಾಣಿಸಿಕೊಂಡರು, ಅಲ್ಲಿ ತಂಡವು ಅವರ ಚಿತ್ರರಂಗದಲ್ಲಿನ 35 ವರ್ಷಗಳು ತುಂಬಿರುವುದನ್ನು ಸೆಲೆಬ್ರೇಟ್ ಮಾಡಿದರು. ಈ ಮಾತು ಕತೆ ಸಮಯದಲ್ಲಿ, ನಟ ಆರ್ಥಿಕ ಭದ್ರತೆಗಾಗಿ (financial security) ಪ್ರೇರಣೆ ಕೊಟ್ಟಿದ್ದು ಯಾರು? ಹಣ ಹೇಗೆ ಹೆಚ್ಚಿಸಿದರು ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಹಣ ಉಳಿಸಲು ಜೀತೇಂದ್ರರಿಂದ ಪ್ರೇರಣೆ
ಹಣದ ಕುರಿತು ಮಾತನಾಡುತ್ತಾ ಅಕ್ಷಯ್ ಕುಮಾರ್ "ಜಿತೇಂದ್ರ ಸಾಹೇಬ್ 100 ಕೋಟಿ ರೂಪಾಯಿಗಳ ಸ್ಥಿರ ಠೇವಣಿ (FD) ಇಟ್ಟಿದ್ದಾರೆಂದು ಬಹಳ ಹಿಂದೆಯೇ ಪತ್ರಿಕೆಯೊಂದರಲ್ಲಿ ಓದಿದ್ದೆ. ಆವಾಗ ನನ್ನ ತಂದೆಯ ಬಳಿಗೆ ಓಡಿ ಹೋಗಿ, 'ಅಪ್ಪಾ, ಯಾರಾದರೂ 100 ಕೋಟಿ ರೂಪಾಯಿಗಳ ಎಫ್‌ಡಿ ಮಾಡಿದರೆ, ಎಷ್ಟು ಬಡ್ಡಿ ಸಿಗುತ್ತದೆ?' ಎಂದು ಕೇಳಿದ್ದು ಇನ್ನೂ ನೆನಪಿದೆ.
100 ಕೋಟಿ ರೂ. ಎಫ್ ಡಿಗೆ 13% ಬಡ್ಡಿದರ
ಆ ಸಮಯದಲ್ಲಿ ಬಡ್ಡಿದರ 13% ಇತ್ತು, ಅಂದರೆ ತಿಂಗಳಿಗೆ 1.3 ಕೋಟಿ ರೂಪಾಯಿ. 'ನಾನು ಅಂತಹ ಎಫ್‌ಡಿ ಮಾಡಿದ ದಿನ, ನಾನು ಆರ್ಥಿಕವಾಗಿ ಸುರಕ್ಷಿತವಾಗಿರುತ್ತೇನೆ ಎಂದು ನಾನು ಅಂದೇ ಅಂದುಕೊಂಡೆ. ಅದಕ್ಕಾಗಿ ಹೆಚ್ಚು ಹೆಚ್ಚು ದುಡಿಯಲು ಪ್ರಾರಂಭಿಸಿದೆ.
ನಿಲ್ಲದ ಹಣದ ವ್ಯಾಮೋಹ
ಆದರೆ ಎಷ್ಟು ಹಣ ಇದ್ದರೂ ಜನ ಎಂದಿಗೂ ತೃಪ್ತರಾಗುವುದಿಲ್ಲ. ಆ ಅಂಕಿ ಅಂಶ ನನಗೆ ಹೆಚ್ಚುತ್ತಲೇ ಇತ್ತು - 100 ಕೋಟಿ ರೂಪಾಯಿಗಳಿಂದ 1,000 ಕೋಟಿ ರೂಪಾಯಿಗಳಿಗೆ ಮತ್ತು ನಂತರ 2,000 ಕೋಟಿ ರೂಪಾಯಿಗಳಿಗೆ ಎಫ್ ಡಿ ಮಾಡಿ. ಈ ದುರಾಸೆ ಎಂದಿಗೂ ಕೊನೆಗೊಳ್ಳುವುದಿಲ್ಲ ಎಂದಿದ್ದಾರೆ ಅಕ್ಷಯ್.
ಮಿಡಲ್ ಕ್ಲಾಸ್ ಆಲೋಚನೆ ಇನ್ನೂ ಬಿಟ್ಟಿಲ್ಲ
ಈ ಸಂದರ್ಭದಲ್ಲಿ ಕಪಿಲ್ ಇನ್ನೂ ನೀವು ಮಿಡಲ್ ಕ್ಲಾಸ್ ಯೋಚನೆ (middle class thought) ಬಿಟ್ಟೀದ್ದೀರಾ? ಇಲ್ಲವೇ? ಎಂದು ಕೇಳಿದಾಗ ಅಕ್ಷಯ್ ಮುಗುಳ್ನಗುತ್ತಾ, "ಇಂದೂ ಸಹ, ನನ್ನ ಮಗ ಅಥವಾ ಮಗಳು ಫ್ಯಾನ್ ಅಥವಾ ಲೈಟ್ ಹಾಕಿದರೆ, ನಾನು ತಕ್ಷಣ ಹೋಗಿ ಅದನ್ನು ಆಫ್ ಮಾಡುತ್ತೇನೆ. ಅದರಿಂದ ಕೇವಲ 2000 ಬಿಲ್ ಹೆಚ್ಚು ಬರುತ್ತೆ ಅನ್ನೋದು ಗೊತ್ತಿದೆ. ಆದರೆ ನಾನು ನನ್ನನ್ನು ತಡೆಯಲು ಸಾಧ್ಯವಿಲ್ಲ. ಅದು ನನ್ನ ಅಭ್ಯಾಸ. ನಾನು ಜಿಪುಣ ಅಲ್ಲ, ಆದರೆ ಬೆಳೆದು ಬಂದ ರೀತಿ ಹಾಗಿದೆ ಎಂದಿದ್ದಾರೆ.