- Home
- Entertainment
- Cine World
- Shah Rukh Khan ಮುಟ್ಟಿದಾಗಿನಿಂದ ಕೈ ತೊಳೆದೇಕೊಂಡಿಲ್ವಂತೆ ಈ ಹಾಟ್ ಬ್ಯೂಟಿ Prakruti Mishra
Shah Rukh Khan ಮುಟ್ಟಿದಾಗಿನಿಂದ ಕೈ ತೊಳೆದೇಕೊಂಡಿಲ್ವಂತೆ ಈ ಹಾಟ್ ಬ್ಯೂಟಿ Prakruti Mishra
71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ 'ಜವಾನ್' ಚಿತ್ರಕ್ಕಾಗಿ ಶಾರುಖ್ ಖಾನ್‌ಗೆ ಪ್ರಶಸ್ತಿ ತಂದುಕೊಟ್ಟ ತೀರ್ಪುಗಾರರಲ್ಲಿ ಒಬ್ಬರಾದ ನಟಿ ಪ್ರಕೃತಿ ಮಿಶ್ರಾ, ಶಾರುಖ್ ತಮ್ಮ ಕೈಕುಲುಕಿದ ನಂತರ ಆ ಕೈಯನ್ನು ತೊಳೆದುಕೊಂಡಿಲ್ಲ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಕೈತೊಳೆಯದ ನಟಿ
ಕೆಲವರಿಗೆ ಚಿತ್ರತಾರೆಯರು ಎಂದರೆ ದೇವರಿಗಿಂತಲೂ ಮಿಗಿಲಾದವರು. ಜೀವನದಲ್ಲಿ ಒಮ್ಮೆಯಾದರೂ ಅವರನ್ನು ನೋಡಬೇಕು ಎಂದು ಬಯಸುವವರು ಹೆಚ್ಚುಮಂದಿ. ಆದರೆ ಇನ್ನು ಕೆಲವರಿಗೆ ಆ ನಟರನ್ನು ಒಮ್ಮೆಯಾದರೂ ಮುಟ್ಟಿ ಮಾತನಾಡಿಸಬೇಕು ಎಂದು ಇರುತ್ತದೆ. ಅಂಥದ್ದೇ ಒಂದು ಆಸೆ ಇಟ್ಟುಕೊಂಡಿರುವ ಬಹುಭಾಷಾ ತಾರೆಯೊಬ್ಬಳು ಶಾರುಖ್ ಖಾನ್ ಮುಟ್ಟಿದ ಕಾರಣಕ್ಕೆ ತನ್ನ ಕೈಯನ್ನೇ ತೊಳೆಯಲಿಲ್ಲವಂತೆ!
ಶಾರುಖ್ಗೆ ಮೊದಲ ರಾಷ್ಟ್ರೀಯ ಪ್ರಶಸ್ತಿ
71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ, ಶಾರುಖ್ ಖಾನ್ (Shah Rukh Khan) 'ಜವಾನ್' ಚಿತ್ರಕ್ಕಾಗಿ ತಮ್ಮ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದರು. 30 ವರ್ಷಗಳ ಇತಿಹಾಸದಲ್ಲಿ ಅವರಿಗೆ ಇದೇ ಮೊದಲ ಬಾರಿಗೆ ಈ ಪ್ರಶಸ್ತಿ ಒಲಿದಿದೆ. ಈ ಪ್ರಶಸ್ತಿಗೆ ಆಯ್ಕೆ ಮಾಡುವ ಜ್ಯೂರಿ ಪ್ಯಾನೆಲ್ನಲ್ಲಿ ಇರುವವರು ಒಡಿಯಾ ಚಲನಚಿತ್ರಗಳು ಮತ್ತು ಹಿಂದಿ ದೂರದರ್ಶನದಲ್ಲಿ ಕೆಲಸ ಮಾಡುತ್ತಿರುವ ಪ್ರಕೃತಿ ಮಿಶ್ರಾ (Prakruti Mishra).
ಶೇಕ್ಹ್ಯಾಂಡ್ ಮಾಡಿದ ಶಾರುಖ್
ಇವರು ಮೊನ್ನೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಯೂ ಹಾಜರು ಇದ್ದರು. ಅಲ್ಲಿ ಅವರನ್ನು ನಟ ಶಾರುಖ್ ಖಾನ್ ಶೇಕ್ಹ್ಯಾಂಡ್ ಮಾಡಿದ್ದರು. ಅದರಿಂದ ನಟಿ ಎಷ್ಟು ಪುಳಕಿತರಾಗಿದ್ದಾರೆ ಎಂದರೆ, ಇದುವರೆಗೆ ಆ ಕೈಯನ್ನು ತಾವು ತೊಳೆದುಕೊಂಡಿಲ್ಲ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಶಾರುಖ್ ಖಾನ್ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡಿರುವ ನಟಿ, ಇದು ನನ್ನ ಜೀವನದ ಅತ್ಯಂತ ವಿಶೇಷವಾದ "ಹ್ಯಾಂಡ್‌ಶೇಕ್" ಎಂದು ಉಲ್ಲೇಖಿಸಿದ್ದಾರೆ. ಅದರಲ್ಲಿ ಹೃದಯಸ್ಪರ್ಶಿ ಮಾತುಗಳನ್ನು ಬರೆದಿದ್ದಾರೆ.
ಸಂತಸಪಟ್ಟ ನಟಿ
"71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಕೇಂದ್ರ ಸಮಿತಿಯ ತೀರ್ಪುಗಾರರ ಭಾಗವಾಗಲು ನಾನು ಆಯ್ಕೆಯಾದಾಗ, @iamsrk ಸರ್ ಅವರಿಗೆ ಅವರ ಬಹುನಿರೀಕ್ಷಿತ ಮತ್ತು ಅರ್ಹವಾದ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಲು ಕಾರಣರಾದ ಹನ್ನೊಂದು ಸದಸ್ಯರಲ್ಲಿ ನಾನು ಒಬ್ಬನಾಗಿರುತ್ತೇನೆ ಎಂದು ನನಗೆ ತಿಳಿದಿರಲಿಲ್ಲ. ಈ ಐತಿಹಾಸಿಕ ಕ್ಷಣದ ಭಾಗವಾಗಿರುವುದರಿಂದ ನನಗೆ ಹೇಳಿಕೊಳ್ಳಲಾಗದಷ್ಟು ಖುಷಿಯಾಗಿದೆ ಎಂದಿದ್ದಾರೆ.
ವೈಯಕ್ತಿಕ ಗೆಲುವು
"ಈ ಗೆಲುವು ವೈಯಕ್ತಿಕವೆನಿಸುತ್ತದೆ ಏಕೆಂದರೆ ಇದು ಪ್ರತಿಯೊಬ್ಬ ಭಾರತೀಯ ಕಲಾವಿದರಿಗೂ ಆಶಿಸುವ, ಶ್ರಮಿಸುವ ಮತ್ತು ಗೆಲ್ಲುವ ಕನಸನ್ನು ನೀಡುತ್ತದೆ! ಶಾರುಖ್ ಸಾಬ್, ನಿಮ್ಮ ನಮ್ರತೆ, ಕಠಿಣ ಪರಿಶ್ರಮ ಮತ್ತು ದಯೆಯಿಂದ ನಮಗೆ ಸ್ಫೂರ್ತಿ ನೀಡಿದ್ದಕ್ಕಾಗಿ ಧನ್ಯವಾದಗಳು ಎಂದಿದ್ದಾರೆ ನಟಿ.
ಜವಾನ್ ಚಿತ್ರಕ್ಕೆ ಪ್ರಶಸ್ತಿ
ಜವಾನ್ ಚಿತ್ರದ ಅಭಿನಯಕ್ಕಾಗಿ ಶಾರುಖ್ ಖಾನ್ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು. ಇದು ಅವರ 33 ವರ್ಷಗಳ ವೃತ್ತಿಜೀವನದಲ್ಲಿ ಅವರ ಮೊದಲ ರಾಷ್ಟ್ರೀಯ ಪ್ರಶಸ್ತಿಯಾಗಿದೆ. ಅಟ್ಲೀ ನಿರ್ದೇಶನದ, ಜವಾನ್ ಭಾರತದ ಪ್ರಮುಖ ಸಮಸ್ಯೆಗಳಾದ ನಿರುದ್ಯೋಗ ಮತ್ತು ರೈತರ ಆತ್ಮಹತ್ಯೆಗಳನ್ನು ಮುಖ್ಯವಾಹಿನಿಯ ಮಸಾಲಾ ಮನರಂಜನಾ ರೂಪದಲ್ಲಿ ತಿಳಿಸುತ್ತದೆ.
71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ
71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ಮಂಗಳವಾರ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಿತು. ಶಾರುಖ್ ಖಾನ್ ಜೊತೆಗೆ, ರಾಣಿ ಮುಖರ್ಜಿ ಶ್ರೀಮತಿ ಚಟರ್ಜಿ Vs ನಾರ್ವೆ ಚಿತ್ರದ ಅಭಿನಯಕ್ಕಾಗಿ ತಮ್ಮ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದರು. 12 ನೇ ಫೇಲ್ ಚಿತ್ರದ ಪಾತ್ರಕ್ಕಾಗಿ ವಿಕ್ರಾಂತ್ ಮಾಸ್ಸಿ ಶಾರುಖ್ ಖಾನ್ ಅವರೊಂದಿಗೆ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿಯನ್ನು ಹಂಚಿಕೊಂಡರು. ಕರಣ್ ಜೋಹರ್ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರಕ್ಕಾಗಿ ಉತ್ತಮ ಮನರಂಜನೆಯನ್ನು ಒದಗಿಸುವ ಅತ್ಯುತ್ತಮ ಜನಪ್ರಿಯ ಚಿತ್ರಕ್ಕಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಮೋಹನ್ ಲಾಲ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ: ಕನ್ನಡದ 'ಕಂದೀಲು' ಸೇರಿ National Film Award ಪ್ರದಾನ: 30 ವರ್ಷ ಬಳಿಕ Shahrukh Khanಗೆ ಒಲಿದ ಪ್ರಶಸ್ತಿ