ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ನಟಿ ನಿವೇತಾ ಪೆಥುರಾಜ್: ವರ ಯಾರು ಗೊತ್ತೇ?
ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿ ಖ್ಯಾತಿ ಪಡೆದ ನಟಿ ನಿವೇತಾ ಪೆಥುರಾಜ್ ತಮ್ಮ ಗೆಳೆಯನನ್ನು ಪರಿಚಯಿಸಿದ್ದಾರೆ.

ತಮಿಳು ಮಾತಾಡೋ ಹೀರೋಯಿನ್ಸ್‌ಗೆ ತಮಿಳು ಸಿನಿಮಾದಲ್ಲಿ ಡಿಮ್ಯಾಂಡ್ ಇರಲ್ಲ ಅನ್ನೋದಕ್ಕೆ ನಿವೇತಾ ಪೆಥುರಾಜ್ ಒಂದು ಉದಾಹರಣೆ. ನೆಲ್ಸನ್ ವೆಂಕಟೇಶನ್ ನಿರ್ದೇಶನದ 'ಒರು ನಾಲ್ ಕೂತು' ಚಿತ್ರದ ಮೂಲಕ ನಾಯಕಿಯಾಗಿ ಪರಿಚಯವಾದರು. ಆ ಚಿತ್ರದಲ್ಲಿ ನಟ ದಿನೇಶ್‌ಗೆ ಜೋಡಿಯಾಗಿದ್ದರು. ನಂತರ ವಿಜಯ್ ಸೇತುಪತಿ, ಉದಯನಿಧಿ ಸ್ಟಾಲಿನ್, ವಿಜಯ್ ಆಂಟನಿ ಜೊತೆ ನಟಿಸಿದರು. ಆದರೆ ಚಿತ್ರಗಳು ಹಿಟ್ ಆಗದ ಕಾರಣ ತಮಿಳು ಸಿನಿಮಾದಲ್ಲಿ ಹೆಚ್ಚು ಯಶಸ್ಸು ಸಿಗಲಿಲ್ಲ. ಆದರೂ ನಿವೇತಾ ಪ್ರಯತ್ನ ಮುಂದುವರೆಸಿದರು.
ತೆಲುಗಿನಲ್ಲಿ ಮಾತ್ರ ನಿವೇತಾ ಗೆಲುವಿನ ನಗೆ ಬೀರಿದರು. ಅಲ್ಲು ಅರ್ಜುನ್ ಜೊತೆ ನಟಿಸಿದ 'ಅಲ ವೈಕುಂಠಪುರಂ' ಸೂಪರ್ ಹಿಟ್ ಆಯ್ತು. ಹೀಗಾಗಿ ಟಾಲಿವುಡ್‌ನಲ್ಲೇ ನೆಲೆ ನಿಂತರು. ಕಳೆದ ಕೆಲವು ವರ್ಷಗಳಿಂದ ತಮಿಳು ಸಿನಿಮಾ ಕಡೆ ತಲೆ ಹಾಕಿಲ್ಲ. ಮಧುರೈ ಮೂಲದ ನಿವೇತಾ ಈಗ ಟಾಲಿವುಡ್‌ನಲ್ಲೇ ಬ್ಯುಸಿ. ಸಿನಿಮಾ ಜೊತೆಗೆ ಕಾರ್ ರೇಸ್‌ನಲ್ಲೂ ಆಸಕ್ತಿ. ಅಜಿತ್ ರೀತಿ ಕಾರ್ ರೇಸ್‌ನಲ್ಲೂ ಸೈ ಎನಿಸಿಕೊಂಡಿದ್ದಾರೆ.
ಸಿನಿಮಾ ನಟಿಯರು ಪ್ರೀತಿಸಿ ಮದುವೆಯಾಗೋದು ಹೊಸದೇನಲ್ಲ. ಈಗ ನಿವೇತಾ ಕೂಡ ಆ ಸಾಲಿಗೆ ಸೇರಿದ್ದಾರೆ. ತಮ್ಮ ಭಾವಿ ಪತಿಯನ್ನು ಪರಿಚಯಿಸಿದ್ದಾರೆ. ಅವರ ಹೆಸರು ರಾಜ್ ಹಿತ್ ಇಬ್ರಾನ್. ದುಬೈ ಮೂಲದ ಉದ್ಯಮಿ. ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದಾರಂತೆ. ಈ ವರ್ಷಾಂತ್ಯದಲ್ಲಿ ಮದುವೆ ನಿರೀಕ್ಷಿಸಲಾಗಿದೆ. ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ಮದುವೆ ಮಾಡಿಕೊಳ್ಳುವ ಪ್ಲ್ಯಾನ್ ಇದೆಯಂತೆ.
ನಿವೇತಾ ಭಾವಿ ಪತಿ ರಾಜ್ ಹಿತ್ ಇಬ್ರಾನ್ ದುಬೈನ ಉದ್ಯಮಿ. ಇಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗೆಳೆಯನನ್ನು ಅಪ್ಪಿಕೊಂಡಿರುವ ಫೋಟೋ ನೋಡಿ ಫ್ಯಾನ್ಸ್ ಶುಭ ಹಾರೈಸುತ್ತಿದ್ದಾರೆ. ಸಿನಿಮಾ ಸ್ನೇಹಿತರು ಕೂಡ ಕಂಗ್ರಾಟ್ಸ್ ಹೇಳುತ್ತಿದ್ದಾರೆ. ಆದರೆ ಕೆಲವು ಫ್ಯಾನ್ಸ್ ಮಾತ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮದುವೆ ದಿನಾಂಕವನ್ನು ನಿವೇತಾ ಶೀಘ್ರದಲ್ಲೇ ಘೋಷಿಸುವ ನಿರೀಕ್ಷೆ ಇದೆ.