- Home
- Entertainment
- Cine World
- ಸೂಪರ್ ಸ್ಟಾರ್ ಸಿನಿಮಾದ ದೇವಯಾನಿ ಎಲ್ಲಿ ಹೋದ್ರು? ನಟನೊಂದಿಗೆ ಮದುವೆ, ಡಿವೋರ್ಸ್ ಕಥೆ ಇಲ್ಲಿದೆ
ಸೂಪರ್ ಸ್ಟಾರ್ ಸಿನಿಮಾದ ದೇವಯಾನಿ ಎಲ್ಲಿ ಹೋದ್ರು? ನಟನೊಂದಿಗೆ ಮದುವೆ, ಡಿವೋರ್ಸ್ ಕಥೆ ಇಲ್ಲಿದೆ
Actress Keerthy Reddy: 1996 ರಿಂದ 2000ದ ದಶಕದವರೆಗೆ ತೆಲುಗು, ತಮಿಳು, ಹಿಂದಿ ಮತ್ತು ಕನ್ನಡ ಚಿತ್ರರಂಗಗಳಲ್ಲಿ ಸಕ್ರಿಯರಾಗಿದ್ದ ನಟಿ ಕೀರ್ತಿ ರೆಡ್ಡಿ ಅವರ ಸಿನಿ ಜೀವನ ಮತ್ತು ವೈಯಕ್ತಿಕ ಜೀವನದ ಬಗ್ಗೆ ಒಂದು ನೋಟ.

2002ರಲ್ಲಿ ಬಿಡುಗಡೆಯಾದ ಸೂಪರ್ ಸ್ಟಾರ್ ಸಿನಿಮಾದಲ್ಲಿ ನಟಿಯಾಗಿ ಕಾಣಿಸಿಕೊಂಡ ಚೆಲುವೆ ಹೆಸರು ಕೀರ್ತಿ ರೆಡ್ಡಿ. ಆಂಧ್ರ ಪ್ರದೇಶ ಮೂಲದ ಕೀರ್ತಿ ರೆಡ್ಡಿ ಓದಿದ್ದು ಕರ್ನಾಟಕದಲ್ಲಿ. ತೆಲಗು ಮತ್ತು ತಮಿಳು ಸಿನಿಮಾಗಳಲ್ಲಿ ಮಿಂಚುತಿದ್ದ ಕೀರ್ತಿ ರೆಡ್ಡಿ ಬಣ್ಣದ ಲೋಕದಿಂದ ದೂರವಾಗಿದ್ದಾರೆ.
1996ರ ಗನ್‌ಶಾಟ್ ಚಿತ್ರದ ಮೂಲಕ ಕೀರ್ತಿ ರೆಡ್ಡಿ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟರು. 1998ರಲ್ಲಿ ಪವನ್ ಕಲ್ಯಾಣ್‌ಗೆ ನಾಯಕಿಯಾಗಿ 'ಥೋಲಿ ಪ್ರೇಮಾ' ಸಿನಿಮಾದಲ್ಲಿ ನಟಿಸಿದರು. 2000ನೇ ಇಸವಿಯಲ್ಲಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಕೀರ್ತಿ ರೆಡ್ಡಿ Tera Jadoo Chal Gayaa ಮತ್ತು Pyaar Ishq Aur Mohabbat ಸಿನಿಮಾಗಳಲ್ಲಿ ನಟಿಸಿದರು. ನಂತರ ಅನಿಲ್ ಕಪೂರ್ ಅವರ Badhaai Ho Badhaai ಸಿನಿಮಾದಲ್ಲಿಯೂ ಕೀರ್ತಿ ರೆಡ್ಡಿ ಕಾಣಿಸಿಕೊಂಡಿದ್ದರು.
ಕನ್ನಡಕ್ಕೂ ಬಂದ ಕೀರ್ತಿ ರೆಡ್ಡಿ
ನಾಗತೀಹಳ್ಳಿ ಚಂದ್ರಶೇಖರ್ ನಿರ್ದೇಶನದ ಸೂಪರ್‌ಸ್ಟಾರ್ ಸಿನಿಮಾಗೆ ಕೀರ್ತಿ ರೆಡ್ಡಿ ಚಂದನವನಕ್ಕೂ ಎಂಟ್ರಿ ನೀಡಿದರು. ಕನ್ನಡಿಗರು ನಟಿಯನ್ನು ದೇವಯಾನಿ ಎಂದೇ ಗುರುತಿಸುತ್ತಾರೆ. ಉಪೇಂದ್ರ ಮತ್ತು ಕೀರ್ತಿ ರೆಡ್ಡಿ ಕೆಮಿಸ್ಟ್ರಿ ಬೆಳ್ಳಿ ಪರದೆ ಮೇಲೆ ಸಂಚಲನವನ್ನು ಸೃಷ್ಟಿಸಿತ್ತು.
ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೇ ನಟಿ ಕೀರ್ತಿ ರೆಡ್ಡಿ, ನಾಗಾರ್ಜುನ್ ಅಕ್ಕಿನೇನಿ ಸಂಬಂಧಿ ನಟ ಸುಮಂತ್ ಅವರನ್ನು ಮದುವೆಯಾಗುತ್ತಾರೆ. ಆದರೆ ಇಬ್ಬರ ಮದುವೆ ಕೆಲವೇ ವರ್ಷಗಳಲ್ಲಿ ಡಿವೋರ್ಸ್‌ನಲ್ಲಿ ಅಂತ್ಯವಾಯ್ತು. ನಂತರ ಮತ್ತೊಂದು ಮದುವೆಯಾದ ಕೀರ್ತಿ ರೆಡ್ಡಿ ಸಿಂಗಾಪುರದಲ್ಲಿ ನೆಲೆಸಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ ಎಂಬ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿದೆ.
ಕೊನೆಯದಾಗಿ ತೆಲುಗಿನ ಅರ್ಜುನ್ ಸಿನಿಮಾದಲ್ಲಿ ಕೀರ್ತಿ ರೆಡ್ಡಿ ಕಾಣಿಸಿಕೊಂಡಿದ್ದರು. ನಟ ಸುಮಂತ್ ಸಂದರ್ಶನವೊಂದರಲ್ಲಿ ಡಿವೋರ್ಸ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದರು. ದೇವತೈ, ನಂದಿನಿ, ಜಾಲಿ, ನಾನಿವಿರುಕ್ಕಮ್ ವರೈ, ಪ್ರೇಮಿಂಚೆ ಮನಸು, ತೇರಾ ಜಾದು ಚಲ್ ಗಯಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕೀರ್ತಿ ರೆಡ್ಡಿ ನಟಿಸಿದ್ದಾರೆ.