ವಿಜಯ ದಶಮಿ ಹಬ್ಬದ ಸಂಭ್ರಮ ಡಬಲ್ ಮಾಡಿದ ಚಿನ್ನದ ಬೆಲೆ; ನಾಗಾಲೋಟಕ್ಕೆ ಕೊನೆಗೂ ಬಿತ್ತು ಲಗಾಮು
Gold Price Drop: ಹಲವು ದಿನಗಳಿಂದ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಗೆ ಇಂದು ಕಡಿವಾಣ ಬಿದ್ದಿದೆ. ಈ ಲೇಖನವು 22 ಮತ್ತು 24 ಕ್ಯಾರಟ್ ಚಿನ್ನದ ಇಂದಿನ ದರ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಬೆಲೆ ವಿವರಗಳನ್ನು ನೀಡುತ್ತದೆ. ಜೊತೆಗೆ, ಬೆಳ್ಳಿ ದರದಲ್ಲಿನ ಬದಲಾವಣೆಯ ಮಾಹಿತಿಯನ್ನೂ ಒಳಗೊಂಡಿದೆ.

ಚಿನ್ನ ಖರೀದಿ
ಕಳೆದ ಎರಡ್ಮೂರು ದಿನಗಳಿಂದ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದ ಚಿನ್ನದ ನಾಗಲೋಟಕ್ಕೆ ಇಂದು ಬ್ರೇಕ್ ಬಿದ್ದಿದೆ. ಬೆಲೆ ಇಳಿಕೆಯಾಗಿರೋದರಿಂದ ಚಿನ್ನ ಖರೀದಿಗೆ ಪ್ಲಾನ್ ಮಾಡಿಕೊಂಡಿರುವ ಜನರ ಸಂತಸ ಇಮ್ಮಡಿಯಾಗಿದೆ. ಚಿನ್ನದ ನಾಗಾಲೋಟಕ್ಕೆ ಲಗಾಮು ಬಿದ್ದಿದೆ.
22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ
ಜಾಗತೀಕ ಮಾರುಕಟ್ಟೆಯಲ್ಲಿನ ಬದಲಾವಣೆಗಳು ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುತ್ತದೆ. ಇಂದು ದೇಶದ ಪ್ರಮುಖ ನಗರಗಳಲ್ಲಿ 22 ಮತ್ತು 24 ಕ್ಯಾರಟ್ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಾಗಿದೆ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 11,869 ರೂಪಾಯಿ
8 ಗ್ರಾಂ: 94, 952 ರೂಪಾಯಿ
10 ಗ್ರಾಂ: 1,18,690 ರೂಪಾಯಿ
100 ಗ್ರಾಂ: 11, 86,900 ರೂಪಾಯಿ
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 10,880 ರೂಪಾಯಿ
8 ಗ್ರಾಂ: 87,040 ರೂಪಾಯಿ
10 ಗ್ರಾಂ: 1,08,800 ರೂಪಾಯಿ
100 ಗ್ರಾಂ: 10,88,000 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 1,08,800 ರೂಪಾಯಿ, ಮುಂಬೈ: 1,08,800 ರೂಪಾಯಿ, ದೆಹಲಿ: 1,08,900 ರೂಪಾಯಿ, ಕೋಲ್ಕತ್ತಾ: 1,08,800 ರೂಪಾಯಿ, ಬೆಂಗಳೂರು: 1,08,800 ರೂಪಾಯಿ, ಹೈದರಾಬಾದ್:1,08,800 ರೂಪಾಯಿ, ವಡೋದರ: 1,08,850 ರೂಪಾಯಿ, ಅಹಮದಾಬಾದ್: 1,08,850 ರೂಪಾಯಿ
ಇದನ್ನೂ ಓದಿ: ನಿಮಗೆ ಅರಿವಿಲ್ಲದೇ Pan Cardಗೆ ಕನ್ನ! ಲಕ್ಷ ಲಕ್ಷ ಸಾಲ ಮಾಡ್ತಿದ್ದಾರೆ ಖದೀಮರು- ಹೀಗೆ ಮಾಡಿ ಸೇಫ್ ಆಗಿ
ದೇಶದಲ್ಲಿಂದು ಬೆಳ್ಳಿ ದರ
ಚಿನ್ನದ ಬೆಲೆ ಹೆಚ್ಚಳವಾದಂತೆ ಹೂಡಿಕೆದಾರರು ಬೆಳ್ಳಿಯತ್ತ ಮುಖ ಮಾಡಿದರು. ಈ ಹಿಂದೆ ಕೇವಲ ಆಭರಣ ಮತ್ತು ಪೂಜಾ ಸಾಮಾಗ್ರಿಗಳಿಗೆ ಸೀಮಿತವಾಗಿದ್ದ ಬೆಳ್ಳಿ ಇಂದು ಹೂಡಿಕೆ ಮೂಲವಾಗಿದೆ. ದೇಶದಲ್ಲಿಂದಿನ ಬೆಳ್ಳಿ ದರದ ಮಾಹಿತಿ ಈ ಕೆಳಗಿನಂತಿದೆ.
- 10 ಗ್ರಾಂ: 1,530 ರೂಪಾಯಿ
- 100 ಗ್ರಾಂ: 15,300 ರೂಪಾಯಿ
- 1000 ಗ್ರಾಂ: 1,53,000 ರೂಪಾಯಿ
ಎಷ್ಟು ದರ ಇಳಿಕೆ?
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 550 ರೂಪಾಯಿ ಕಡಿಮೆಯಾಗಿದೆ.
24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 500 ರೂಪಾಯಿ ಕಡಿಮೆಯಾಗಿದೆ.
1 ಕೆಜಿ ಬೆಳ್ಳಿ ದರದಲ್ಲಿ 2 ಸಾವಿರ ರೂ.ಗಳವರೆಗೆ ಹೆಚ್ಚಳವಾಗಿದೆ.
ಇದನ್ನೂ ಓದಿ: ಅ.1 ರಿಂದ ಹೊಸ ನಿಯಮ: ಇಂದಿನಿಂದ ರೈಲ್ವೆ, ಅಂಚೆ, ಬ್ಯಾಂಕಲ್ಲಿ ಹಲವು ಬದಲಾವಣೆ