ಕಾರ್ತಿಕ ಮಾಸದ ದೀಪೋತ್ಸವ: ದೀಪದಾನದಿಂದ ಧನಲಕ್ಷ್ಮೀ ಪೂಜೆಯವರೆಗೆ ಪಾವನ ಸಂಪ್ರದಾಯ
ಅಶ್ವಿನಿ ಹುಣ್ಣಿಮೆಯಿಂದ ಕಾರ್ತಿಕ ಮಾಸದ ದೀಪೋತ್ಸವ ಆರಂಭವಾಗಿ ದೀಪದಾನ, ಧನಲಕ್ಷ್ಮೀ ಪೂಜೆ, ಯಮದೀಪ, ನರಕ ಚತುರ್ದಶಿ ಮತ್ತು ಬಲಿಪಾಡ್ಯಮಿ ಆಚರಣೆಗಳ ಮೂಲಕ ಬೆಳಕು, ಭಕ್ತಿ ಹಾಗೂ ದಾನದ ಮಹತ್ವವನ್ನು ದೈವಜ್ಞ ಹರೀಶ್ ಕಶ್ಯಪ ಹೇಳಿದ್ದಾರೆ.

ಅಶ್ವಿನಿ ಮಾಸ
ಅಶ್ವಿನಿ ಮಾಸದ ಹುಣ್ಣಿಮೆಯಿಂದ ಕಾರ್ತಿಕ ಮಾಸದ ದೀಪಗಳ ಉತ್ಸವ, ದೀಪದಾನ, ದೀಪಾಲಂಕಾರ ಆರಂಭ ವಾಗುತ್ತದೆ. ವೈಶಾಖ, ಮಾಘಮಾಸಗಳಂತೆ ಕಾರ್ತಿಕ ಮಾಸ ತೀರ್ಥ ಸ್ನಾನವೂ ಮಹಾ ಪುಣ್ಯಕರವೆಂದು ಶಾಸ್ತ್ರಗಳು ಸಾರಿದೆ. ಸೂರ್ಯನ ತುಲಾ, ವೃಶ್ಚಿಕ ಸಂಚಾರವು ಇದ್ದ ಭೂಮಿಗೆ ಬೆಳಕು ಕಮ್ಮಿ ಯಾಗಿ ಶೀತ ಕಾಲ ಆವರಿಸುವುದರಿಂದ, ಸೂರ್ಯ ನಾರಾಯಣನಿಗೆ ಕೃತಜ್ಞತೆ ಸಲ್ಲಿಸುವ ಮಾಸವೇ ದೀಪಗಳ ಅಲಂಕಾರ ಮಾಸವೆನಿಸಿದೆ.
ದಾನ
ದಾನದಿಂದ ತೃಪ್ತಿ ಫಲ, ಅನ್ನದಾನದಿಂದ ಅಕ್ಷಯವಾದ ಸುಖ ಪ್ರಾಪ್ತಿ.ತಿಲದಾನದಿಂದ ಸಂತಾನ ಪ್ರಾಪ್ತಿ, ದೀಪದಾನದಿಂದ ತೇಜೊವಂತ ಕಣ್ಣುಗಳು ದೊರೆಯುವುದು ಎಂದು ಪದ್ಮ ಪುರಾಣ ಹೇಳುತ್ತದೆ. ಜೋಡಿ ದೀಪ, ತೈಲ, ತುಪ್ಪಗಳ ದಾನ ಮಾಡುವುದು ಪುಣ್ಯಕರ, ಹೀಗಾಗಿ ಕಾರ್ತಿಕ ಮಾಸದಲ್ಲಿ ದೀಪದಾನಕ್ಕೆ ವಿಶೇಷ ಮಹತ್ವವಿದೆ.
ಅಶ್ವಿನಿ ಬಹುಳ ತ್ರಯೋದಶಿ
ಅಶ್ವಿನಿ ಬಹುಳ ತ್ರಯೋದಶಿ- ಧನಲಕ್ಷ್ಮೀ ಪೂಜೆ, ನೀರು ತುಂಬುವ ಹಬ್ಬ, ಸಂಜೆಯ ವೇಳೆ ಮನೆಯ ದಕ್ಷಿಣಕ್ಕೆ ಎರಡು ದೀಪಗಳ ಇಟ್ಟು ಯಮದೀಪದಾನ ಮಾಡುವುದು, ಯಮನು ನಮಗೆ ಧರ್ಮ ಮಾರ್ಗವನ್ನು ತೋರಲಿ ಎಂದು ಶ್ರೀ ಗಂಗಾಜನಕ ವಿಷ್ಣುವನ್ನು ಪೂಜಿಸುವುದು.
ನರಕ ಚತುರ್ದಶಿ
ಮೂರನೆ ದಿನ ನರಕ ಚತುರ್ದಶಿ, ಧನಲಕ್ಷ್ಮೀ ಪೂಜೆ, ವಾಹನ ಪೂಜೆ ನಡೆಸಿ, ಸಂಜೆ ದೀಪಾಲಂಕಾರ ಮಾಡಿ ಲಕ್ಷ್ಮೀ ನಾರಾಯಣ ಪೂಜೆ ಮಾಡುವುದು. ನಂತರ ನರಕಾಸುರನ ಸಂಹಾರ ಕಥನ ಓದಿ, ಶ್ರೀ ಕೃಷ್ಣನಿಗೆ ತುಳಸಿ ಸಹಿತ ಪೂಜಿಸಿ ನಮಿಸುವುದು. ಇದೇ ದಿನ ಬೆಳಗ್ಗೆ ಎಣ್ಣೆ ಹಚ್ಚಿ ಅಬ್ಯಂಗ ಸ್ನಾನ ಮಾಡುವುದು,
ದೀಪಾವಳಿ ಅಮವಾಸ್ಯೆ
ಮೂರನೇ ದಿನ ದೀಪಾವಳಿ ಅಮವಾಸ್ಯೆ, ಅಂದು ಯಮತರ್ಪಣ, ಪಿತೃ ತರ್ಪಣ ಆಚರಣೆ ಉಂಟು. ಕುಲದಲ್ಲಿ ನಾನಾ ಬಗೆಯ ಅಪಮೃತ್ಯುಗಳಿಂದ ತೀರಿಕೊಂಡವರಿಗೆ ಸದ್ಗತಿಯಾಗಲೂ ಯಮತರ್ಪಣ ವಿಧಿ ಹೇಳಲಾಗಿದೆ. ಅಂದು ಸಂಜೆ ಬಲೀಂದ್ರ ಪೂಜಾ ಆರಂಭವಾಗಿ ಮಾರನೆಯ ದಿನ ಬಲಿಪಾಡ್ಯಮಿ ಹಬ್ಬ ಎರ್ಪಡುವುದು.
ಶ್ರೀ ರಾಮನ ರೂಪಿ ಮಹಾವಿಷ್ಣುವಿನ ಅವತಾರ ದಿನವೇ ಬಲಿಂದ್ರ ಪೂಜೆ, ಇದರ ಕಥನವನ್ನು ಓದಿ. ಮಹಾಭಕ್ತ ಪ್ರಹ್ಲಾದನ ವಂಶ ದೀಪಕನಾದ ಬಲಿರಾಜನೇ ಭವಿಷ್ಯದ ಇಂದ್ರನಾಗುವನು. ಈಗಿನಿಂದಲೇ ಬಲಿಪಾಡ್ಯಗಳಿಂದ ಶ್ರೀ ಹರಿಯ ಪೂಜಿಸುತ್ತಾ ನಮ್ಮ ಭವಿಷ್ಯದ ಹುಟ್ಟುಗಳಲ್ಲಿ ಹರಿ ಭಕ್ತ ನಮಗೆ ಉಂಟಾಗಲಿ ಎಂದೇ ಬಲಿರಾಜನಲ್ಲಿ ಪ್ರಾರ್ಥಿಸುವುದು ಬಲಿಪೂಜೆಯ ಹಿನ್ನೆಲೆ.