Zoho Mail : ಭಾರತದಲ್ಲಿ ಹೊಸ ಗಾಳಿ ಬೀಸ್ತಿದೆ. ಜನರು ಜಿ ಮೇಲ್ ಬದಲು ಜೊಹೊ ಮೇಲ್ ಗೆ ಶಿಫ್ಟ್ ಆಗ್ತಿದ್ದಾರೆ. ಅಮಿತ್ ಶಾ ಕೂಡ ಇದ್ರಲ್ಲಿ ಸೇರಿದ್ದು, ಜೊಹೊ ಮೇಲ್ ವಿಶೇಷತೆ ಏನು ಗೊತ್ತಾ?
ಈಗ ಜಿ ಮೇಲ್ ಬಳಕೆದಾರರ ಅತಿ ದೊಡ್ಡ ಸಮಸ್ಯೆ ಜಿ ಮೇಲ್ ಫುಲ್. ಅದೆಷ್ಟೇ ಫೋಟೋ ಡಿಲಿಟ್ ಮಾಡಿ, ಮೇಲ್ ಡಿಲಿಟ್ ಮಾಡಿ ಕೊನೆಯಲ್ಲಿ ಜಿ ಮೇಲ್ ಫುಲ್ ಮೆಸ್ಸೇಜ್ ಕಾಟ ತಪ್ತಿಲ್ಲ. ಫೋಟೋ ಸೇವ್ ಮಾಡೋಕೆ ಕೆಲವರು ಎರಡು ಮೂರು ಜಿ ಮೇಲ್ ಅಕೌಂಟ್ ತೆರೆದಿದ್ದಾರೆ. ಜಿ ಮೇಲ್ ನಲ್ಲಿರುವ ಎಲ್ಲ ಡಾಕ್ಯುಮೆಂಟ್, ಫೋಟೋ ಸೇವ್ ಆಗ್ಬೇಕು, ಫೋಟೋಗಳು ಬ್ಯಾಕ್ ಅಪ್ ಆಗ್ಬೇಕು ಅಂದ್ರೆ ನೀವು ಹಣ ಕೊಟ್ಟು ಜಿ ಮೇಲ್ ಸ್ಪೇಸ್ ಖರೀದಿ ಮಾಡ್ಬಹುದು. ಇದಕ್ಕೆ ಮನಸ್ಸು ಮಾಡದ ಜನ ಈಗ Gmail ನಿಂದ Zoho ಮೇಲ್ಗೆ ಬದಲಾಗ್ತಿದ್ದಾರೆ. ಭಾರತದ ಈ Zoho ಮೇಲ್ ಜನರಿಗೆ ಇಷ್ಟವಾಗ್ತಿದೆ. 5 ಮಿಲಿಯನ್ಗಿಂತಲೂ ಹೆಚ್ಚು ಡೌನ್ಲೋಡ್ ಆಗಿದ್ದು, ಗೂಗಲ್ ಪ್ಲೇ ಸ್ಟೋರ್ (Google Play Store) ನಲ್ಲಿ 4.9 ರೇಟಿಂಗ್ ಹೊಂದಿದೆ.
ಭಾರತದಲ್ಲಿ ಪ್ರಸಿದ್ಧವಾಗ್ತಿದೆ Zoho ಮೇಲ್ ? :
Zoho ಮೇಲ್ ಜಿ ಮೇಲ್ ನಲ್ಲಿರುವ ಅನೇಕ ವೈಶಿಷ್ಟ್ಯಗಳನ್ನು ನೀಡುತ್ತಿದೆ. ಇದ್ರ ಜೊತೆ ಕೆಲ ವಿಶೇಷ ವೈಶಿಷ್ಟ್ಯಗಳು ಇದ್ರಲ್ಲಿ ಲಭ್ಯವಿದೆ. ಒಂದು ಸ್ವಚ್ಛ, ಜಾಹೀರಾತು-ಮುಕ್ತ ಇನ್ಬಾಕ್ಸ್. Zoho ಮೇಲ್ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಸಂಚಲನ ಮೂಡಿಸಿದೆ. ಗೃಹ ಸಚಿವ ಅಮಿತ್ ಶಾ ಕೂಡ Zoho ಗೆ ಬದಲಾಗಿದ್ದಾರೆ. ಅದನ್ನು ಅವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದ್ರ ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದೆ.
ಮೊಬೈಲ್‌ನ ಇಎಂಐ ಕಟ್ಟದೇ ಇದ್ದರೆ ಇನ್ನು ಫೋನ್ ಲಾಕ್
ಎಕ್ಸ್ ಖಾತೆಯಲ್ಲಿ ಬಳಕೆದಾರರೊಬ್ಬರು Zoho ಮೇಲ್ ಗೆ ಸಲಹೆಯನ್ನು ನೀಡಿದ್ದಾರೆ. ಒಂದ್ವೇಳೆ Zoho ಮೇಲ್ , ಅವ್ರ ಸಲಹೆ ಸ್ವೀಕರಿಸಿ ಅದನ್ನು ಜಾರಿಗೆ ತಂದ್ರೆ, Zoho ಮೇಲ್ ಡೌನ್ಲೋಡ್ ಜಾಸ್ತಿಯಾಗೋದ್ರಲ್ಲಿ ಅನುಮಾನವಿಲ್ಲ. ಭಾರತದ ಬಹುತೇಕರು ಇದನ್ನು ಬಳಸುವ ಸಾಧ್ಯತೆ ದಟ್ಟವಾಗ್ತಿದೆ.
Zoho ಮೇಲ್ ಜಾರಿಗೆ ತರಬೇಕಾದ ಹೊಸ ವೈಶಿಷ್ಟ್ಯಗಳು ಏನು? :
@FI_InvestIndia X ನಲ್ಲಿ Zoho ಮೇಲ್ ತಂಡಕ್ಕೆ ಕೆಲ ಬದಲಾವಣೆ ಮಾಡುವಂತೆ ಕೇಳಲಾಗಿದೆ.
1.ಪ್ರತಿ ಇಮೇಲ್ಗೆ ಮೊಬೈಲ್ ಸಂಖ್ಯೆ ಮ್ಯಾಪಿಂಗ್ ತೆಗೆದುಹಾಕಬೇಕು.
2.ರೀಕವರಿ ಇಮೇಲ್ ವ್ಯವಸ್ಥೆ ನೀಡಬೇಕು.
3.ಇದಲ್ಲದೆ, ಪ್ರತಿ ಜೊಹೊ ಖಾತೆಗೆ (ಇಮೇಲ್, ಶೋ, ಶೀಟ್ಗಳು, ಡ್ರೈವ್ ಸೇರಿ 15GB ಉಚಿತ ಸೇವಿಂಗ್ ಸ್ಪೇಸ್ ಒದಗಿಸಬೇಕು.
ಒಂದ್ವೇಳೆ Zoho ಮೇಲ್ ತಂಡ ಬಳಕೆದಾರರ ಈ ಬೇಡಿಕೆಗಳನ್ನು ಪೂರೈಸಿದ್ರೆ ಬಳಕೆದಾರರಿಗೆ Zoho ಮೇಲ್ ಇನ್ನಷ್ಟು ಹತ್ತಿರವಾಗಲಿದೆ. ಮುಂದಿನ ವಾರದೊಳಗೆ ಭಾರತದಲ್ಲಿ ಗಮನಾರ್ಹ ಸಂಖ್ಯೆಯ ಜನರು ಜೊಹೊ ಮೇಲ್ಗೆ ಶಿಫ್ಟ್ ಆಗುವ ಸಾಧ್ಯತೆ ಹೆಚ್ಚಿದೆ.
Ad-Free Subscription: ಜಾಹೀರಾತಿಲ್ದೆ ಇನ್ಸ್ಟಾ, ಫೇಸ್ಬುಕ್ ವಿಡಿಯೋ ನೋಡೋದು ಹೇಗೆ?
Zoho ಮೇಲ್ ವಿಶೇಷತೆ ಏನು? :
Zoho ಮೇಲ್ ಸದ್ಯ 5GB ಉಚಿತ ಸ್ಟೋರೇಜ್ ನೀಡ್ತಿದೆ. ಒಂದು ಡೊಮೇನ್ಗೆ ಉಚಿತ ಇಮೇಲ್ ಹೋಸ್ಟಿಂಗ್ ನೀಡುತ್ತದೆ. ನೀವು 5 ಬಳಕೆದಾರರನ್ನು ಸೇರಿಸಬಹುದು. ಪ್ರತಿ ಬಳಕೆದಾರರು 5GB ಇಮೇಲ್ ಸ್ಟೋರೇಜ್ ಪಡೆಯುತ್ತಾರೆ. ಹಣವಿಲ್ಲದೆ ನೀವು ಉಚಿತವಾಗಿ ಮೇಲ್ ಕಳುಹಿಸಬಹುದು. ಆದ್ರೆ 5 ಜಿಬಿ ನಂತ್ರದ ಸ್ಟೋರೇಜ್ ಗೆ ನೀವು ಹಣ ನೀಡ್ಬೇಕು. 10GB ಸ್ಟೋರೇಜ್ ಬೆಲೆ 85 ರೂಪಾಯಿ. 25GB ಸ್ಟೋರೇಜ್ ಬೆಲೆ ವಾರ್ಷಿಕವಾಗಿ 212.50 ರೂಪಾಯಿ. 50GB ಸ್ಟೋರೇಜ್ ಬೆಲೆ 425 ರೂಪಾಯಿ. 100GB ಸ್ಟೋರೇಜ್ ಗೆ ನೀವು ವಾರ್ಷಿಕವಾಗಿ 850 ರೂಪಾಯಿ ಪಾವತಿ ಮಾಡ್ಬೇಕು. 5 ಜಿಬಿ ಅತ್ಯಂತ ಕಡಿಮೆಯಾಗಿದ್ದು, 15 ಜಿಬಿ ಉಚಿತವಾಗಿ ನೀಡಿ ಅಂತ ಬಳಕೆದಾರರು ಬೇಡಿಕೆ ಇಟ್ಟಿದ್ದಾರೆ. ನಿಮಗೆ ಜಿ ಮೇಲ್ ಕೂಡ 15 ಜಿಬಿ ಸ್ಟೋರೇಜ್ ಉಚಿತವಾಗಿ ನೀಡ್ತಿದೆ.
