ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಸ್ಕ್ರೋಲ್ ಮಾಡೋವಾಗ ಒಂದಿಷ್ಟು ಆಡ್ ನಮ್ಮನ್ನು ಡಿಸ್ಟರ್ಬ್ ಮಾಡುತ್ತೆ. ಅದು ಕಾಣಿಸ್ಬಾರದು ಅಂದ್ರೆ ಒಂದು ಉಪಾಯ ಇದೆ. ಮೀಟಾ ನಿಮಗೆ ಆಯ್ಕೆ ನೀಡುತ್ತಿದೆ. ಅದ್ಯಾವುದು ಗೊತ್ತಾ?
ಈಗ ಟೈಂ ಪಾಸ್ ಅಂದ್ರೆ ಅದು ಇನ್ಸ್ಟಾಗ್ರಾಮ್ (Instagram) ಮತ್ತು ಫೇಸ್ಬುಕ್ (Facebook). ಜನರು ಅರ್ಧ ದಿನ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ನಲ್ಲಿ ಮುಳುಗಿ ಹೋಗ್ತಾರೆ. ಇನ್ಸ್ಟಾಗ್ರಾಮ್ ಮತ್ತೆ ಫೇಸ್ಬುಕ್ ನಲ್ಲಿ ಯಾವ್ದೋ ಇಂಟರೆಸ್ಟಿಂಗ್ ವಿಡಿಯೋ ನೋಡ್ತಿರುವಾಗ ಮಧ್ಯದಲ್ಲಿ ಆಡ್ ಬಂದು ಡಿಸ್ಟರ್ಬ್ ಮಾಡೋದು ಸಾಮಾನ್ಯ. ಛೀ ಈಗ್ಲೇ ಬರ್ಬೇಕಾ ಅಂತ ಜನರು ಕಿರಿಕಿರಿಯಾಗ್ತಾರೆ. ಇನ್ಮುಂದೆ ಯುಟ್ಯೂಬ್ ನಂತೆ ಆಡ್ ಕಟ್ ಮಾಡುವ ಆಯ್ಕೆ ನಿಮಗೆ ಸಿಗಲಿದೆ. ನೀವು ಯಾವ್ದೆ ಆಡ್ ಇಲ್ದೆ ಆರಾಮವಾಗಿ ಇನ್ಸ್ಟಾ ಮತ್ತು ಫೇಸ್ಬುಕ್ ವಿಡಿಯೋ ನೋಡ್ಬಹುದು. ಆದ್ರೆ ಅದಕ್ಕೆ ನೀವು ಜೇಬು ಖಾಲಿ ಮಾಡ್ಬೇಕು.
ಜಾಹೀರಾತಿಲ್ದೆ ಇನ್ಸ್ಟಾ, ಫೇಸ್ಬುಕ್ ವಿಡಿಯೋ ಹೀಗೆ ನೋಡಿ? :
ಇನ್ಸ್ಟಾ ಮತ್ತು ಫೇಸ್ಬುಕ್ ಎರಡೂ ಮೆಟಾ ಪ್ಲಾಟ್ಫಾರ್ಮ್ಗಳು ಬಳಕೆದಾರರಿಗೆ ಹೊಸ ಆಯ್ಕೆ ನೀಡಲು ಪ್ಲಾನ್ ಮಾಡ್ತಿದೆ. ಶೀಘ್ರದಲ್ಲಿಯೇ ಸಬ್ಸ್ಕ್ರೈಬ್ ಆಯ್ಕೆಯನ್ನು ಈ ಎರಡೂ ಫ್ಲಾಟ್ ಫಾರ್ಮ್ ನಿಮಗೆ ನೀಡಲಿದೆ. ನೀವು ಯಾವುದೇ ಜಾಹೀರಾತುಗಳಿಲ್ಲದೆ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಸ್ಕ್ರೋಲ್ ಮಾಡ್ಬಹುದು. ಶೀಘ್ರವೇ ಯುಕೆಯಲ್ಲಿ ಇದು ಜಾರಿಗೆ ಬರಲಿದೆ. 18 ವರ್ಷ ಮೇಲ್ಪಟ್ಟ ಯುಕೆ ಬಳಕೆದಾರರು ಜಾಹೀರಾತುಗಳಿಲ್ಲದೆ ಎರಡೂ ಮೆಟಾ ಪ್ಲಾಟ್ಫಾರ್ಮ್ಗಳನ್ನು ಬಳಸಬಹುದು. ನೀವು ಇದಕ್ಕೆ ಮಾಸಿಕ ಶುಲ್ಕ ಪಾವತಿಸಬೇಕು. ನೀವು ಸಬ್ಸ್ಕ್ರೈಬ್ ಶುಲ್ಕ ಪಾವತಿ ಮಾಡೋಕೆ ಇಷ್ಟಪಟ್ಟಿಲ್ಲ ಅಂದ್ರೆ ಈಗಿರುವಂತೆ ಜಾಹೀರಾತು ನೋಡ್ತಾ ಇನ್ಸ್ಟಾ ಮತ್ತು ಫೇಸ್ಬುಕ್ ಸ್ಕ್ರೋಲ್ ಮಾಡ್ಬಹುದು.
ಮಹಿಳೆಗೆ 1.25 ಕೋಟಿ ಲಾಟರಿ ಗೆಲ್ಲಲು ಚಾಟ್‌ಜಿಪಿಟಿ ಹೆಲ್ಪ್ ಮಾಡಿದ್ಹೇಗೆ?
ಆಡ್ ಇಲ್ದೆ ಇನ್ಸ್ಟಾ ನೋಡೋಕೆ ಎಷ್ಟು ಹಣ ನೀಡ್ಬೇಕು? :
ಜಾಹೀರಾತು-ಮುಕ್ತ ವರ್ಜನ್ ಇಷ್ಟಪಟ್ಟಿದ್ರೆ ತಿಂಗಳ ಶುಲ್ಕವನ್ನು ಪಾವತಿಸಬೇಕು. ಇದರ ಶುಲ್ಕ ಮೊಬೈಲ್ ಗೆ 475 ರೂಪಾಯಿ ಆದ್ರೆ ವೆಬ್ನಲ್ಲಿ 355 ರೂಪಾಯಿ ಆಗಿರುತ್ತೆ. ಒಬ್ಬ ಬಳಕೆದಾರ ಒಂದೇ ಡಿವೈಸ್ ನಲ್ಲಿ ಒಂದಕ್ಕಿಂತ ಹೆಚ್ಚು ಅಕೌಂಟ್ ಬಳಸಿದ್ರೆ, ಪ್ರತ್ಯೇಕವಾಗಿ ಹಣ ಪಾವತಿಸಬೇಕಾಗುತ್ತದೆ. ಮೊಬೈಲ್ನಲ್ಲಿ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಬಳಸುವುದಕ್ಕೆ ಪ್ರತಿ ತಿಂಗಳು ಹೆಚ್ಚುವರಿಯಾಗಿ 357 ರೂಪಾಯಿ ಮತ್ತು ವೆಬ್ಗೆ ಹೆಚ್ಚುವರಿಯಾಗಿ 238 ರೂಪಾಯಿ ಪಾವತಿಸಬೇಕಾಗುತ್ತದೆ. ಜಾಹೀರಾತು ನೋಡ್ದೆ ವಿಡಿಯೋ ವೀಕ್ಷಣೆ ಮಾಡ್ಬೇಕು ಎನ್ನುವವರಿಗೆ ಮೀಟಾ ಈ ಆಯ್ಕೆ ನೀಡ್ತಿದೆ. ಇದು ನಿಮಗೆ ಕಡ್ಡಾಯವಲ್ಲ. ಜಾಹೀರಾತುಗಳು ಯುಕೆಯಲ್ಲಿ ಸಣ್ಣ ವ್ಯವಹಾರಗಳಿಗೆ ಸಹಾಯ ಮಾಡ್ತಿದೆ. ಇದರಿಂದಾಗಿ, 2024 ರ ವೇಳೆಗೆ 3 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ.
ಈ ಕ್ರಮ ಏಕೆ? :
ವೈಯಕ್ತಿಕಗೊಳಿಸಿದ ಜಾಹೀರಾತುಗಳನ್ನು ತೋರಿಸಲು ಬಳಕೆದಾರರ ವೈಯಕ್ತಿಕ ಡೇಟಾವನ್ನು ಬಳಸುತ್ತಿದೆ ಎಂದು ಆರೋಪ ಬಹಳ ಹಿಂದಿನಿಂದಲೂ ಕೇಳಿಬರುತ್ತಿದೆ. ಈ ಕಾರಣಕ್ಕಾಗಿ ಯುರೋಪಿಯನ್ ಒಕ್ಕೂಟವು ಮೆಟಾಗೆ 200 ಮಿಲಿಯನ್ ಯುರೋಗಳಷ್ಟು ದಂಡ ವಿಧಿಸಿದೆ. ಇದು ಮೆಟಾವನ್ನು ಜಾಹೀರಾತು-ಮುಕ್ತ ಆಯ್ಕೆಯನ್ನು ಪರಿಚಯಿಸಲು ಕಾರಣವಾಗಿದೆ.
ಹಬ್ಬದ ಸಂಭ್ರಮದಲ್ಲಿ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದ Xiaomi,ಶೇ.60ರಷ್ಟು ಉಳಿತಾಯ
ಯುಟ್ಯೂಬ್ ಶುಲ್ಕ :
ಯುಟ್ಯೂಬ್ ನಲ್ಲಿ ಈಗಾಗಲೇ ಈ ಆಯ್ಕೆ ಇದೆ. ಜನರು ವಿಡಿಯೋ ಮಧ್ಯೆ ಜಾಹೀರಾತು ನೋಡ್ಬಾರದು ಅಂದ್ರೆ ಸಬ್ಸ್ಕ್ರೈಬ್ ಆಯ್ಕೆ ಪಡೆಯಬಹುದು. ಅದಕ್ಕೆ ತಿಂಗಳಿಗೆ ಬೇರೆ ಬೇರೆ ಶುಲ್ಕ ಪಾವತಿಸಬೇಕು. ಸ್ಟುಡೆಂಟ್ಸ್ 89 ರೂಪಾಯಿ ಪಾವತಿಸಬೇಕು. ವೈಯಕ್ತಿಕ ಪಾವತಿ 149 ರೂಪಾಯಿ ಇದ್ರೆ ಫ್ಯಾಮಿಲಿ ಶುಲ್ಕ 299 ರೂಪಾಯಿ ಇರುತ್ತೆ.
